ಎಸ್ಐಟಿ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ, ಅವರ ತನಿಖೆ ವೈಜ್ಞಾನಿಕವಾಗಿದೆ: ಗಿರೀಶ್ ಮಟ್ಟಣ್ಣನವರ್
ನನ್ನನ್ನೊಬ್ಬ ಕ್ರಿಮಿನಲ್ ಅಂತ ಎಸ್ಐಟಿಯವರು ವಿಚಾರಣೆಗೆ ಕರೆಸಿರಲಿಲ್ಲ, ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನಲ್ಲಿ ಒಂದಿಷ್ಟು ಮಾಹಿತಿ ಇದೆ, ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತೇನೆ ಅಂತ ಎಸ್ಐಟಿಗೆ ಪತ್ರ ಬರೆದಿದ್ದೆ, ಅದೇ ಕಾರಣಕ್ಕೆ ಅವರು ಕರೆಸಿದ್ದರು ಎಂದು ಮಟ್ಟಣ್ಣನವರ್ ಹೇಳಿದರು. ಎಸ್ಐಟಿ ಕಚೇರಿ ಮೆಟ್ಟಿಲು ಹತ್ತುವಾಗ ಎದೆ ಡವಡವ ಹೊಡೆದುಕೊಳ್ಳಲಾರಂಭಿಸಿತು ಅಂತ ಅವರು ಯಾಕೆ ಹೇಳಿದರೆಂದು ಗೊತ್ತಾಗಲಿಲ್ಲ.
ದಕ್ಷಿಣ ಕನ್ನಡ, ಆಗಸ್ಟ್ 29: ಜಿಲ್ಲೆಯ ಬೆಳ್ತಂಗಡಿಯಲ್ಲಿ ಎಸ್ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದ ಗಿರೀಶ್ ಮಟ್ಟಣ್ಣನವರ್ ಮಾಧ್ಯಮಗಳೊಂದಿಗೆ ಮಾತಾಡುತ್ತ, ಕಳೆದ ಎರಡು ತಿಂಗಳಿಂದ ಮಾಧ್ಯಮದವರು ಬಿಸಲು ಮಳೆ ಎನ್ನದೆ ಕೆಲಸ ಮಾಡುತ್ತಿದ್ದಾರೆ, ಅವರು ಪಡುತ್ತಿರುವ ಕಷ್ಟ ಅರ್ಥವಾಗುತ್ತದೆ, ಎಲ್ಲರೂ ವಾಸ್ತವಾಂಶಗಳನ್ನು ಆಧರಿಸಿ ವರದಿ ಮಾಡಲಿ, ನಮ್ಮ ವಿರುದ್ಧ ಪಿತೂರಿ, ಕುತಂತ್ರದ ಅರೋಪ ಬೇಡ, ಧರ್ಮಸ್ಥಳದ ಹೆಸರು ಹಾಳು ಮಾಡಲು ಮುಸ್ಲಿಂ ರಾಷ್ಟ್ರಗಳಿಂದ (Muslim countries) ಹಣ ಬರುತ್ತಿದೆ ಎಂದು ವರದಿಯಾಗುತ್ತಿದೆ, ವಾಸ್ತವ ಏನು ಅನ್ನೋದನ್ನು ಮಾಧ್ಯಮಗಳು ವರದಿ ಮಾಡಲಿ ಎಂದು ಹೇಳಿದರು. ಎಸ್ಐಟಿಯವರು ಸರಿಯಾದ ನಿಟ್ಟಿನಲ್ಲಿ ತನಿಖೆ ಮಾಡುತ್ತಿದ್ದಾರೆ, ಅವರ ತನಿಖೆ ವೈಜ್ಞಾನಿಕವಾಗಿದೆ, ಅವರು ಕೇಳಿದ ಪ್ರಶ್ನೆಗಳಿಗೆಲ್ಲ ಉತ್ತರ ಮತ್ತು ಸ್ಪಷ್ಟನೆಗಳನ್ನು ಕೊಟ್ಟಿದ್ದೇನೆ, ಮೊಬೈಲ್ ಜಮಾನಾದಲ್ಲಿ ಸುಳ್ಳು ಹೇಳಲಾಗುವುದಿಲ್ಲ ಎಂದು ಮಟ್ಟಣ್ಣನವರ್ ಹೇಳಿದರು.
ಇದನ್ನೂ ಓದಿ: ಸರ್ಕಾರದ ಇಂಧನ ಖರ್ಚಾಗುವುದು ಬೇಡ ಅಂತ ಅರೆಸ್ಟ್ ಆಗಲು ನಾವೇ ಠಾಣೆಗೆ ಬಂದಿದ್ದೇವೆ: ಗಿರೀಶ್ ಮಟ್ಟಣ್ಣನವರ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

