ದರ್ಶನ್ ಜೈಲಿಗೆ ಹೋಗಿರುವುದು ಕರ್ನಾಟಕಕ್ಕೆ ದೊಡ್ಡ ನಷ್ಟ: ರಜತ್
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿ ದರ್ಶನ್ ಈಗ ಜೈಲಿನಲ್ಲಿ ಇದ್ದಾರೆ. ಅವರ ಅಭಿಮಾನಿಗಳಿಗೆ ಈ ಬಗ್ಗೆ ನೋವಿದೆ. ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ಕೂಡ ದರ್ಶನ್ ಅವರ ಅಭಿಮಾನಿ. ಅವರು ದರ್ಶನ್ ಬಗ್ಗೆ ಟಿವಿ9 ಜೊತೆ ಮಾತನಾಡಿದ್ದಾರೆ. ‘ದರ್ಶನ್ ಅವರು ಮತ್ತೆ ಜೈಲಿಗೆ ಹೋಗಿರುವುದು ಚಿತ್ರರಂಗಕ್ಕೆ, ಕರ್ನಾಟಕಕ್ಕೆ ದೊಡ್ಡ ನಷ್ಟ’ ಎಂದು ರಜತ್ ಹೇಳಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿ ದರ್ಶನ್ (Darshan) ಈಗ ಜೈಲಿನಲ್ಲಿ ಇದ್ದಾರೆ. ಅವರ ಅಭಿಮಾನಿಗಳಿಗೆ ಈ ಬಗ್ಗೆ ನೋವಿದೆ. ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ (Rajath) ಕೂಡ ದರ್ಶನ್ ಅವರ ಅಭಿಮಾನಿ. ಅವರು ದರ್ಶನ್ ಬಗ್ಗೆ ಟಿವಿ9 ಜೊತೆ ಮಾತನಾಡಿದ್ದಾರೆ. ‘ದರ್ಶನ್ ಅವರು ಮತ್ತೆ ಜೈಲಿಗೆ ಹೋಗಿರುವುದು ಚಿತ್ರರಂಗಕ್ಕೆ, ಕರ್ನಾಟಕಕ್ಕೆ ದೊಡ್ಡ ನಷ್ಟ. ನಮ್ಮ ಚಿತ್ರರಂಗದಲ್ಲಿ ಇರುವುದು ಕೆಲವೇ ಸ್ಟಾರ್ ನಟರು. ಅದರಲ್ಲಿ ದರ್ಶನ್ ಕೂಡ ಒಬ್ಬರು. ಅವರು ಮತ್ತೆ ಹೊರಗೆ ಬಂದು ಒಳ್ಳೆಯ ಸಿನಿಮಾಗಳಿಂದ ನಮ್ಮನ್ನು ಮನರಂಜಿಸಲಿ’ ಎಂದು ರಜತ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
