ಕಮಲ್ ಹಾಸನ್ ಕ್ಷಮೆ ಕೇಳದಿದ್ರೆ ಕರ್ನಾಟಕ ಬಂದ್ಗೆ ಕರೆ ಕೊಡ್ತಿವಿ: ವಾಟಾಳ್
ಕಮಲ್ ಹಾಸನ್ ಕ್ಷಮೆಯಾಚಿಸದಿದ್ದರೆ ಕರ್ನಾಟಕ ಬಂದ್ ಗೆ ಕರೆ ನೀಡಬೇಕಾಗುತ್ತದೆ ಎಂದು ವಾಟಾಳ್ ನಾಗರಾಜ್ ಅವರು ಎಚ್ಚರಿಕೆ ನೀಡಿದ್ದಾರೆ. ರಾಜ್ಯ ಸರ್ಕಾರ ತುರ್ತು ಅಧಿವೇಶನ ಕರೆದು ಕನ್ನಡದ ಭವ್ಯ ಇತಿಹಾಸದ ಬಗ್ಗೆ ಚರ್ಚಿಸಬೇಕೆಂದು ಆಗ್ರಹಿಸಿದ್ದಾರೆ. ಕಮಲ್ ಹಾಸನ್ ಅವರ ಚಿತ್ರ ಬಿಡುಗಡೆಯಾದರೆ ರಾಜ್ಯದಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆಯುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಚಿಕ್ಕಬಳ್ಳಾಪುರ, ಮೇ 01: ಕಮಲ್ ಹಾಸನ್ ಅವರು ಕ್ಷಮೆ ಕೇಳದಿದ್ರೆ ಕರ್ನಾಟಕ ಬಂದ್ಗೆ ಕರೆ ಕೊಡಬೇಕಾಗುತ್ತದೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ. ಎಲ್ಲ ಸಂಘಟನೆಗಳ ಜೊತೆ ಮಾತಾಡಿ ಬೆಂಬಲ ಕೇಳುತ್ತೇವೆ. ರಾಜ್ಯ ಸರ್ಕಾರ ತುರ್ತಾಗಿ ವಿಶೇಷ ಅಧಿವೇಶ ಕರೆಯಬೇಕು. ಕನ್ನಡಕ್ಕಿರುವ ಭವ್ಯ ಇತಿಹಾಸ ಬಗ್ಗೆ ಚರ್ಚಿಸಬೇಕು. ಸರ್ವ ಪಕ್ಷಗಳು ಒಕ್ಕೂರಲಿನ ಸಂದೇಶ ಸಾರಬೇಕು ಎಂದರು.
ಕಮಲ್ ಹಾಸನ್ ಅವರ ಚಿತ್ರ ಬಿಡುಗಡೆ ಆದ್ರೆ ಕರ್ನಾಟಕ ರಣರಂಗ ಆಗುತ್ತೆ. ಜಿಲ್ಲೆ, ತಾಲೂಕುಗಳಲ್ಲಿ ಹೋರಾಟಗಾರರು ಸಜ್ಜಾಗಬೇಕಾಗುತ್ತೆ. ಜೈಲಿಗೆ ಹೋಗಲು ಎಲ್ಲ ಹೋರಾಟಗಾರರು ಸಜ್ಜಾಗಬೇಕಾಗುತ್ತೆ. ನಟ ಕಮಲ್ ಹಾಸನ್ ಒಬ್ಬ ಅವಿವೇಕಿ, ಅಯೋಗ್ಯ, ಮೂರ್ಖ ಎಂದು ವಾಗ್ದಾಳಿ ಮಾಡಿದರು.