Rukmini Vasanth
ಕನ್ನಡದ ಜನಪ್ರಿಯ ನಟಿಯರಲ್ಲಿ ರುಕ್ಮಿಣಿ ವಸಂತ್ ಕೂಡ ಇದ್ದಾರೆ. 2019ರ ‘ಬೀರ್ಬಲ್’ ಸಿನಿಮಾ ಮೂಲಕ ಬಣ್ಣದ ಬದುಕು ಆರಂಭಿಸಿದರು ರುಕ್ಮಿಣಿ. ಈ ಸಿನಿಮಾ ಗೆಲುವು ಕಂಡಿತು. ಆದರೆ, ರುಕ್ಮಿಣಿಗೆ ಅಷ್ಟಾಗಿ ಜನಪ್ರಿಯತೆ ಸಿಕ್ಕಿರಲಿಲ್ಲ. ರಕ್ಷಿತ್ ಶೆಟ್ಟಿ ನಟನೆಯ, ಹೇಮಂತ್ ನಿರ್ದೇಶನದ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಮೂಲಕ ಅವರ ಖ್ಯಾತಿ ಹೆಚ್ಚಿತು. ಅವರು ಸ್ಯಾಂಡಲ್ವುಡ್ನಲ್ಲಿ ಈ ಸಿನಿಮಾ ಮೂಲಕ ಗಮನ ಸೆಳೆದರು. ಅವರು ಮಾಡಿದ ಪ್ರಿಯಾ ಪಾತ್ರ ಭರ್ಜರಿ ಮನ್ನಣೆ ಪಡೆಯಿತು. ಆ ಬಳಿಕ ‘ಬಾನದಾರಿಯಲ್ಲಿ’, ‘ಬಘೀರ’, ‘ಭೈರತಿ ರಣಗಲ್’ ಸಿನಿಮಾದಲ್ಲಿ ಅವರು ನಟಿಸಿದ್ದಾರೆ. ಈ ಎಲ್ಲಾ ಸಿನಿಮಾಗಳಲ್ಲಿ ಅವರು ಹೀರೋಗೆ ಸಿಗೋದಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ವಿಚಾರ. ಈಗ ರುಕ್ಮಿಣಿ ತಮಿಳು ಸಿನಿಮಾ ರಂಗದಲ್ಲಿ ಬ್ಯುಸಿ ಆಗಿದ್ದಾರೆ
ಭಾರತದ ಅತ್ಯಂತ ಜನಪ್ರಿಯ ತಾರೆಯರ ಪಟ್ಟಿಯಲ್ಲಿ ಕನ್ನಡದ ಮೂವರಿಗೆ ಸ್ಥಾನ
IMDb 2025ರ ಭಾರತದ ಅತ್ಯಂತ ಜನಪ್ರಿಯ ತಾರೆಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಬಾರಿ ಶಾರುಖ್, ಸಲ್ಮಾನ್ ಸ್ಥಾನ ಪಡೆದಿಲ್ಲ. ಟಾಪ್ 10ರಲ್ಲಿ ಬಹುತೇಕ ಹೊಸ ಮುಖಗಳಿದ್ದು, ಮೂವರು ಕನ್ನಡದ ಕಲಾವಿದರಾದ ರಶ್ಮಿಕಾ ಮಂದಣ್ಣ (6), ರುಕ್ಮಿಣಿ ವಸಂತ್ (9), ರಿಷಬ್ ಶೆಟ್ಟಿ (10) ಸ್ಥಾನ ಗಳಿಸಿದ್ದಾರೆ.
- Rajesh Duggumane
- Updated on: Dec 4, 2025
- 10:58 am
ಥಿಯೇಟರ್ನಲ್ಲಿ 50 ದಿನ ಪೂರೈಸಿದ ‘ಕಾಂತಾರ: ಚಾಪ್ಟರ್ 1’; ಸಿಕ್ಕಿರೋ ಶೋಗಳೆಷ್ಟು?
'ಕಾಂತಾರ: ಚಾಪ್ಟರ್ 1' ಸಿನಿಮಾ 50 ದಿನ ಪೂರೈಸಿದ್ದು, ರಿಷಬ್ ಶೆಟ್ಟಿ ನಿರ್ದೇಶನದ ಈ ಚಿತ್ರ 900 ಕೋಟಿ ರೂ. ಗಳಿಸಿದೆ. ಒಟಿಟಿಗೆ ಬಂದರೂ ಬೆಂಗಳೂರಿನಲ್ಲಿ ಇಂದಿಗೂ 11 ಶೋಗಳೊಂದಿಗೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಪ್ರೀಕ್ವೆಲ್, ಥಿಯೇಟರ್‌ಗಳಲ್ಲಿ ತನ್ನ ಅಧಿಪತ್ಯವನ್ನು ಮುಂದುವರೆಸಿದೆ.
- Shreelaxmi H
- Updated on: Nov 21, 2025
- 8:08 am
ರುಕ್ಮಿಣಿ ವಸಂತ್ ಹೆಸರಲ್ಲಿ ಮೋಸ; ಎಚ್ಚರಿಸಿದ ‘ಕಾಂತಾರ’ದ ಕನಕವತಿ
'ಕಾಂತಾರ' ಖ್ಯಾತಿಯ ರುಕ್ಮಿಣಿ ವಸಂತ್ ಹೆಸರಲ್ಲಿ ಸೈಬರ್ ವಂಚನೆ ನಡೆಯುತ್ತಿದೆ. ಅಪರಿಚಿತ ವ್ಯಕ್ತಿಯೊಬ್ಬರು ಅವರ ಹೆಸರಿನಲ್ಲಿ ಜನರಿಗೆ ಕರೆ ಮಾಡಿ ಮೋಸ ಮಾಡುತ್ತಿದ್ದು, ರುಕ್ಮಿಣಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಆ ನಂಬರ್ ತನಗೆ ಸೇರಿದ್ದಲ್ಲ, ಯಾವುದೇ ಕರೆ ಅಥವಾ ಮೆಸೇಜ್‌ಗಳಿಗೆ ಸ್ಪಂದಿಸಬೇಡಿ, ಆನ್‌ಲೈನ್‌ನಲ್ಲಿ ಜಾಗರೂಕರಾಗಿರಿ ಎಂದು ಅವರು ಮನವಿ ಮಾಡಿದ್ದಾರೆ.
- Rajesh Duggumane
- Updated on: Nov 8, 2025
- 10:11 am
ರಸ್ತೆಗೆ ಟಾರ್ ಹಾಕೋ ಟ್ರೋಲ್ ಬಗ್ಗೆ ಕೊನೆಗೂ ಪ್ರತಿಕ್ರಿಯಿಸಿದ ರುಕ್ಮಿಣಿ ವಸಂತ್
ನಟಿ ರುಕ್ಮಿಣಿ ವಸಂತ್ ‘ಕಾಂತಾರ: ಚಾಪ್ಟರ್ 1’ ಮೂಲಕ ದೊಡ್ಡ ಯಶಸ್ಸು ಕಂಡಿದ್ದಾರೆ. ಈ ಸಿನಿಮಾ ಅವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಖ್ಯಾತಿ ತಂದುಕೊಟ್ಟಿದೆ. ಚಿತ್ರದ ಟ್ರೇಲರ್ ಬಿಡುಗಡೆಯಾದಾಗ, ರುಕ್ಮಿಣಿ ವಸಂತ್ ಕುರಿತ ಕೆಲವು ಟ್ರೋಲ್‌ಗಳು ವೈರಲ್ ಆಗಿದ್ದವು. ಆದರೆ, ಅವರು ಈ ಟ್ರೋಲ್‌ಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿದ್ದಾರೆ.
- Shreelaxmi H
- Updated on: Oct 11, 2025
- 10:30 am
ಭಯೋತ್ಪಾದಕರ ವಿರುದ್ಧ ಹೋರಾಡಿ ವೀರ ಮರಣ; ರುಕ್ಮಿಣಿ ವಸಂತ್ ತಂದೆ ಯಾರು?
ರುಕ್ಮಿಣಿ ವಸಂತ್ ಅವರ ತಂದೆ ಕರ್ನಲ್ ವಸಂತ್ ವೇಣುಗೋಪಾಲ್ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದರು. ಪಠಾಣ್‌ಕೋಟ್, ಸಿಕ್ಕಿಂ, ರಾಂಚಿ, ಜಮ್ಮು ಮತ್ತು ಕಾಶ್ಮೀರ ಮತ್ತು ಇತರ ಸ್ಥಳಗಳಲ್ಲಿ ಅವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದರು. ರುಕ್ಮಿಣಿ ಕೇವಲ ಏಳು ವರ್ಷದವಳಿದ್ದಾಗ ಅವರು ವೀರ ಮರಣ ಹೊಂದಿದರು.
- Shreelaxmi H
- Updated on: Oct 9, 2025
- 6:30 am
ಮಹಾನ್ ಯೋಧನ ಪುತ್ರಿ ರುಕ್ಮಿಣಿ ವಸಂತ್, ಇಲ್ಲಿವೆ ನಟಿಯ ತಂದೆಯ ಚಿತ್ರಗಳು
Colonel Vasanth Venugopal: ನಟಿ ರುಕ್ಮಿಣಿ ವಸಂತ್ ಕನ್ನಡ ಮಾತ್ರವಲ್ಲದೆ ಹಲವು ಭಾಷೆಗಳಲ್ಲಿ ತಮ್ಮ ನಟನಾ ಪ್ರತಿಭೆ ಮತ್ತು ಅದ್ಭುತ ಸೌಂದರ್ಯದಿಂದಾಗಿ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ರುಕ್ಮಿಣಿ ವಸಂತ್ ಈಗ ಪ್ಯಾನ್ ಇಂಡಿಯಾ ನಟಿ ಆಗಿದ್ದಾರೆ. ಆದರೆ ಅವರ ತಂದೆ ಇಡೀ ದೇಶವೇ ಹೆಮ್ಮೆ ಪಡುವ ಭಾರತೀಯ ಸೈನ್ಯದ ಮಹಾನ್ ಯೋಧ ಎಂಬುದು ಹೆಚ್ಚು ಜನರಿಗೆ ತಿಳಿದಿಲ್ಲ. ಇಲ್ಲಿವೆ ಅವರ ತಂದೆಯ ಚಿತ್ರಗಳು.
- Manjunatha C
- Updated on: Oct 5, 2025
- 2:52 pm
‘ಕಾಂತಾರ: ಚಾಪ್ಟರ್ 1’ ವಿಶೇಷ ಶೋ ಝಲಕ್; ಮಿಂಚಿದ ರಿಷಬ್, ರುಕ್ಮಿಣಿ
‘ಕಾಂತಾರ: ಚಾಪ್ಟರ್ 1’ ಸಿನಿಮಾಗೆ ಅದ್ದೂರಿಯಾಗಿ ಶೋ ಒಂದನ್ನು ಆಯೋಜನೆ ಮಾಡಲಾಗಿತ್ತು. ಈ ಶೋಗೆ ರಿಷಬ್, ರುಕ್ಮಿಣಿ ವಸಂತ್ ಹಾಗೂ ಕುಟುಂಬದವರು ಹಾಜರಿ ಹಾಕಿದ್ದರು. ಈ ಶೋ ಸಾಕಷ್ಟು ಗಮನ ಸೆಳೆದಿದೆ. ಅದರ ವಿಡಿಯೋನ ‘ಕಾಂತಾರ: ಚಾಪ್ಟರ್ 1’ ತಂಡ ಹಂಚಿಕೊಂಡಿದೆ.
- Rajesh Duggumane
- Updated on: Oct 2, 2025
- 1:51 pm
ಛೇ.. ರುಕ್ಕುಗೆ ಈ ರೀತಿ ಆಗಬಾರದಿತ್ತು; ಎಐ ಫೋಟೋಗಳು ವೈರಲ್
Rukmini Vasanth: ‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿ ರುಕ್ಮಿಣಿ ಅವರು ಯುವರಾಣಿಯಾಗಿ ಕಾಣಿಸಿಕೊಂಡಿದ್ದಾರೆ. ಕನಕವಲ್ಲಿ ಅವರ ಪಾತ್ರದ ಹೆಸರು. ಅವರು ಕತ್ತಿ ಹಿಡಿದು ಯೋಧೆಯಂತೆ ಹೋರಾಡುತ್ತಾರೆ. ಈ ರೀತಿ ಕತ್ತಿ ಹಿಡಿದ ಒಂದು ದೃಶ್ಯವನ್ನು ಕೆಲವರು ತಿರುಚಿದ್ದಾರೆ. ಈ ಫೋಟೋಗಳು ವೈರಲ್ ಆಗಿವೆ.
- Rajesh Duggumane
- Updated on: Sep 26, 2025
- 11:50 am
‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ರಿಷಬ್ಗೆ ಜೊತೆಯಾದ ರುಕ್ಮಿಣಿ ವಸಂತ್; ಕನಕವತಿ ಪೋಸ್ಟರ್ ರಿಲೀಸ್
Rukmini Vasanth In Kantara: ‘ಕಾಂತಾರ’ ಚಿತ್ರದ ಪ್ರೀಕ್ವೆಲ್ ಆಗಿರುವ 'ಕಾಂತಾರ: ಚಾಪ್ಟರ್ 1' ಚಿತ್ರದ ನಾಯಕಿಯಾಗಿ ರುಕ್ಮಿಣಿ ವಸಂತ್ ಅಭಿನಯಿಸುತ್ತಿದ್ದಾರೆ. ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಅವರ ಪಾತ್ರದ ಪೋಸ್ಟರ್ ಬಿಡುಗಡೆಯಾಗಿದೆ. ಈ ಸುದ್ದಿಯಿಂದ ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಾಗಿದೆ. ರುಕ್ಮಿಣಿ ವಸಂತ್ ಅವರ ಪಾತ್ರದ ಬಗ್ಗೆ ಕುತೂಹಲ ಹೆಚ್ಚಿದೆ.
- Rajesh Duggumane
- Updated on: Aug 8, 2025
- 11:18 am