AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಸ್ತೆಗೆ ಟಾರ್ ಹಾಕೋ ಟ್ರೋಲ್ ಬಗ್ಗೆ ಕೊನೆಗೂ ಪ್ರತಿಕ್ರಿಯಿಸಿದ ರುಕ್ಮಿಣಿ ವಸಂತ್

ನಟಿ ರುಕ್ಮಿಣಿ ವಸಂತ್ ‘ಕಾಂತಾರ: ಚಾಪ್ಟರ್ 1’ ಮೂಲಕ ದೊಡ್ಡ ಯಶಸ್ಸು ಕಂಡಿದ್ದಾರೆ. ಈ ಸಿನಿಮಾ ಅವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಖ್ಯಾತಿ ತಂದುಕೊಟ್ಟಿದೆ. ಚಿತ್ರದ ಟ್ರೇಲರ್ ಬಿಡುಗಡೆಯಾದಾಗ, ರುಕ್ಮಿಣಿ ವಸಂತ್ ಕುರಿತ ಕೆಲವು ಟ್ರೋಲ್‌ಗಳು ವೈರಲ್ ಆಗಿದ್ದವು. ಆದರೆ, ಅವರು ಈ ಟ್ರೋಲ್‌ಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿದ್ದಾರೆ.

ರಸ್ತೆಗೆ ಟಾರ್ ಹಾಕೋ ಟ್ರೋಲ್ ಬಗ್ಗೆ ಕೊನೆಗೂ ಪ್ರತಿಕ್ರಿಯಿಸಿದ ರುಕ್ಮಿಣಿ ವಸಂತ್
ರುಕ್ಮಿಣಿ
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Oct 11, 2025 | 10:30 AM

Share

ನಟಿ ರುಕ್ಮಿಣಿ ವಸಂತ್ (Rukmini Vasanth) ಅವರು ‘ಕಾಂತಾರ: ಚಾಪ್ಟರ್ 1’ ಸಿನಿಮಾ ಮೂಲಕ ತಮ್ಮ ವೃತ್ತಿ ಜೀವನದಲ್ಲೇ ಅತಿ ದೊಡ್ಡ ಗೆಲುವು ಕಂಡರೂ ಎಂದರೂ ಅದು ತಪ್ಪಾಗಲಾರದು. ವೃತ್ತಿ ಜೀವನದಲ್ಲಿ ಸಾಕಷ್ಟು ಏಳ್ಗೆಯನ್ನೇ ಕಾಣುತ್ತಿದ್ದ ಅವರು, ಈಗ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಮೂಲಕ ಅತಿ ದೊಡ್ಡ ಗೆಲುವು ಸಾಧಿಸಿದ್ದಾರೆ. ಅವರು ಕನ್ನಡ ಮಾತ್ರವಲ್ಲ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅವರ ಬಗ್ಗೆಯೂ ಕೆಲವು ಟ್ರೋಲ್​ಗಳು ಹರಿದಾಡಿದ್ದವು. ಆದರೆ, ಈ ಬಗ್ಗೆ ಅವರಿಗೆ ಬೇಸರ ಇಲ್ಲವಂತೆ.

ರುಕ್ಮಿಣಿ ವಸಂತ್ ಅವರು ವೃತ್ತಿ ಜೀವನ ಆರಂಭಿಸಿದ್ದು ತುಂಬಾನೇ ಹಿಂದೆಯೇ. ನಂತರ ಅವರು ಒಂದು ಸಣ್ಣ ಗ್ಯಾಪ್ ಕೂಡ ಪಡೆದರು. ಆ ಬಳಿಕ ರಕ್ಷಿತ್ ಶೆಟ್ಟಿ ಅವರ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಅವರ ವೃತ್ತಿ ಜೀವನವನ್ನು ಬದಲಿಸಿತು. ಆ ಬಳಿಕ ಹಲವು ಸಿನಿಮಾಗಳಲ್ಲಿ ನಟಿಸಿದರು. ಈಗ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಮೂಲಕ ಗೆಲುವಿನ ನಗೆ ಬೀರಿದರು.

‘ಕಾಂತಾರ: ಚಾಪ್ಟರ್ 1’ ಸಿನಿಮಾದ ಟ್ರೇಲರ್ ರಿಲೀಸ್ ಆದ ಬಳಿಕ ಒಂದು ಟ್ರೋಲ್ ಹರಿದಾಡಿತ್ತು. ಈ ಟ್ರೋಲ್​ನಲ್ಲಿ ರುಕ್ಮಿಣಿ ವಸಂತ್ ಅವರ ‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ಖಡ್ಗ ಹಿಡಿದು ನಿಂತ ಕೆಲವು ದೃಶ್ಯಗಳು ಇವೆ. ಈ ದೃಶ್ಯಗಳನ್ನು ಅವರು ನೂಡುಲ್ಸ್ ಮಾಡುವಂತೆಯೂ, ಟಾರ್ ಹಾಕಿದಂತೆಯೂ ತೋರಿಸಲಾಗಿತ್ತು. ಈ ಬಗ್ಗೆ ಸಂದರ್ಶನದಲ್ಲಿ ಪ್ರಶ್ನೆ ಮಾಡಲಾಗಿದೆ. ಇದಕ್ಕೆ ಅವರು ಯಾವುದೇ ಹಿಂಜರಿಕೆ ಇಲ್ಲದೆ ಉತ್ತರಿಸಿದ್ದಾರೆ.

ಇದನ್ನೂ ಓದಿ
Image
ವಿದೇಶದಲ್ಲೂ ಆಸ್ತಿ ಹೊಂದಿದ್ದಾರೆ ಅಮಿತಾಭ್ ಬಚ್ಚನ್; ಇಲ್ಲಿದೆ ವಿವರ
Image
ಒಂದಲ್ಲ, ಎರಡಲ್ಲ ಆರು ಗಂಟೆ ಸ್ನಾನ ಮಾಡಿದ ಸತೀಶ್; ಒಡೆಯಿತು ತಾಳ್ಮೆಯ ಕಟ್ಟೆ
Image
‘ಕಾಂತಾರ: ಚಾಪ್ಟರ್ 1’; ಕರ್ನಾಟಕದ ಗಳಿಕೆ ಹಿಂದಿಕ್ಕಿದ ಉತ್ತರದ ಮಂದಿ
Image
‘ಅಮೃತಧಾರೆ’ ಧಾರಾವಾಹಿಯಲ್ಲಿ ರೋಚಕ ತಿರುವು; ಮಗಳು ಗೌತಮ್​ಗೆ ಸಿಕ್ಕೇ ಬಿಟ್ಳು

ಇದನ್ನೂ ಓದಿ: ಭಯೋತ್ಪಾದಕರ ವಿರುದ್ಧ ಹೋರಾಡಿ ವೀರ ಮರಣ; ರುಕ್ಮಿಣಿ ವಸಂತ್ ತಂದೆ ಯಾರು?

‘ಟ್ರೋಲ್ ಮಾಡೋದು ನೋಡಿ ಇಷ್ಟ ಆಯ್ತು. ಅದರಲ್ಲೂ ಸಾಕಷ್ಟು ವೇರಿಯೇಶನ್ ಇದೆ. ಕನ್​ಸ್ಟ್ರಕ್ಷನ್ ಮಾಡ್ತಾ ಇರೋದು ನೋಡಿದೆ. ನಾನು ರಸ್ತೆಗೆ ಟಾರ್ ಹಾಕುತ್ತಾ ಇದೆ. ಈ ರೀತಿಯಲ್ಲೂ ಕಾಂತಾರ ಪುಶ್ ಆಗ್ತಾ ಇದೆ ಎಂಬ ಸಂತೋಷ ಇದೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ರುಕ್ಮಿಣಿ ವಸಂತ್. ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೆಲವರು ಟ್ರೋಲ್​ನ ನೆಗೆಟಿವ್ ಆಗಿ ತೆಗೆದುಕೊಳ್ಳುತ್ತಾರೆ. ಆದರೆ, ಇವರು ಪಾಸಿಟಿವ್ ಆಗಿ ತೆಗೆದುಕೊಂಡಿದ್ದಾರೆ ಅನ್ನೋದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.