AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಹಸ್ಯ ಕಾಡಿನ ಕತೆಯ ‘ಗ್ರೀನ್’ ಸಿನಿಮಾಕ್ಕೆ ಶಿವಣ್ಣ ಸಾಥ್

Green Kannada Movie: ಗ್ರೀನ್ ಹೆಸರಿನ ಭಿನ್ನ ಕತೆಯುಳ್ಳ ಸಿನಿಮಾ ಒಂದು ಬಿಡುಗಡೆಗೆ ರೆಡಿಯಾಗಿದೆ. ಸಿನಿಮಾದ ಟ್ರೈಲರ್ ಅನ್ನು ನಟ ಶಿವರಾಜ್ ಕುಮಾರ್ ಅವರು ಇತ್ತೀಚೆಗಷ್ಟೆ ಬಿಡುಗಡೆ ಮಾಡಿದ್ದಾರೆ. ‘ಗ್ರೀನ್’ ಸಿನಿಮಾ ಕುತೂಹಲಕಾರಿ ಕಾಡೊಂದರ ಕತೆಯನ್ನು ಒಳಗೊಂಡಿದೆ. ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ.

ರಹಸ್ಯ ಕಾಡಿನ ಕತೆಯ ‘ಗ್ರೀನ್’ ಸಿನಿಮಾಕ್ಕೆ ಶಿವಣ್ಣ ಸಾಥ್
Green Kannada Movie
ಮಂಜುನಾಥ ಸಿ.
|

Updated on:Oct 11, 2025 | 7:14 PM

Share

ಹಲವಾರು ಹೊಸ ತಂಡಗಳು, ಹೊಸ ಹೊಸ ರೀತಿಯ ಕನ್ನಡ ಸಿನಿಮಾಗಳನ್ನು (Kannada Cinema) ನೀಡುತ್ತಿವೆ. ಇತ್ತೀಚೆಗೆ ಕೆಲ ಹೊಸ ತಂಡಗಳು ಕೆಲ ಭಿನ್ನ ಸಿನಿಮಾಗಳನ್ನು ನೀಡಿವೆ. ಕೆಲವು ಯಶಸ್ವಿ ಸಹ ಆಗಿವೆ. ಅದರಲ್ಲೂ ಹೊಸ ತಂಡಗಳು ಥ್ರಿಲ್ಲರ್ ರೀತಿಯ ಸಿನಿಮಾಗಳನ್ನು ಹೊತ್ತು ತರುವುದೇ ಹೆಚ್ಚು. ಇದೀಗ ಅದೇ ರೀತಿ ಹೊಸ ತಂಡವೊಂದು ‘ಗ್ರೀನ್’ ಹೆಸರಿನ ಬಲು ವಿಭಿನ್ನ ಕತೆಯುಳ್ಳ ಸಿನಿಮಾ ಅನ್ನು ತೆರೆಗೆ ತರಲು ಸಜ್ಜಾಗಿದ್ದು, ನಟ ಶಿವರಾಜ್ ಕುಮಾರ್ ಅವರು ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಬೆಂಬಲ ನೀಡಿದ್ದಾರೆ.

ರಾಜ್ ವಿಜಯ್ ಹಾಗೂ ಬಿ.ಎನ್. ಸ್ವಾಮಿ ನಿರ್ಮಾಣ ಮಾಡಿ ರಾಜ್ ವಿಜಯ್ ನಿರ್ದೇಶನ ಮಾಡಿರುವ ‘ಗ್ರೀನ್’ ಸಿನಿಮಾನಲ್ಲಿ ಬಾಲಾಜಿ ಮನೋಹರ್, ಗೋಪಾಲಕೃಷ್ಣ ದೇಶಪಾಂಡೆ, ಆರ್.ಜೆ.ವಿಕ್ಕಿ ಇನ್ನೂ ಕೆಲವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ‘ಗ್ರೀನ್’ ಸಿನಿಮಾದ ಟ್ರೇಲರ್ ಅನ್ನು ಶಿವರಾಜಕುಮಾರ್ ಇತ್ತೀಚೆಗಷ್ಟೆ ಬಿಡುಗಡೆ ಮಾಡಿ ಸಿನಿಮಾಕ್ಕೆ ಯಶಸ್ಸು ಸಿಗಲೆಂದು ಹಾರೈಸಿದರು.

ಟ್ರೈಲರ್ ಲಾಂಚ್ ಇವೆಂಟ್​​ನಲ್ಲಿ ಮಾತನಾಡಿದ, ನಿರ್ದೇಶಕ ಹಾಗೂ ನಿರ್ಮಾಪಕ ರಾಜ್ ವಿಜಯ್, ‘ಕನ್ನಡದ ಕೆಲವು ನಿರ್ದೇಶಕರ ಬಳಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಸ್ವತಂತ್ರ್ಯ ನಿರ್ದೇಶಕನಾಗಿ ಇದು ನನಗೆ ಮೊದಲ ಸಿನಿಮಾ. ‘ಗ್ರೀನ್’ ಕನ್ನಡದ ಅಪರೂಪ ಎನ್ನಬಹುದಾದ ಸೈಕಾಲಜಿಕಲ್ ಮೈಂಡ್ ಬೆಂಡಿಂಗ್ ಥ್ರಿಲ್ಲರ್ ಕತೆಯನ್ನು ಹೊಂದಿದೆ. ಕಾಡಿನಲ್ಲಿ ನಡೆಯುವ ಕಥೆಯನ್ನು ಒಳಗೊಂಡಿರುವ ಸಿನಿಮಾ ಆಗಿದೆ. ಊಟಿ ಬಳಿಯಲ್ಲಿ ಹೆಚ್ಚಿನ ಚಿತ್ರೀಕರಣ ಮಾಡಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ರಶ್ಮಿಕಾ ಮಂದಣ್ಣ ನಟನೆಯ ಹೊಸ ಹಿಂದಿ ಸಿನಿಮಾ ಟ್ರೈಲರ್ ಬಿಡುಗಡೆ

‘ಕೆಲವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ “ಗ್ರೀನ್” ಸಿನಿಮಾ ಪ್ರದರ್ಶನವಾಗಿದ್ದು 21 ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ವಿದೇಶಿಗರು ಮೆಚ್ಚಿಕೊಂಡಿರುವ ನಮ್ಮ ನೆಲದ ಚಿತ್ರವನ್ನು ಸ್ವದೇಶಿಗರು, ಅದರಲ್ಲೂ ಕನ್ನಡಿಗರು ಮೆಚ್ಚಿಕೊಳ್ಳುವ ಭರವಸೆ ಇದೆ. ಅಕ್ಟೋಬರ್ 23ರಂದು ನಮ್ಮ ಚಿತ್ರ ಕರ್ನಾಟಕದಾದ್ಯಂತ ಬಿಡುಗಡೆಯಾಗುತ್ತಿದೆ’ ಎಂದಿದ್ದಾರೆ ನಿರ್ದೇಶಕ.

ಗುನಾದ್ಯ ಪ್ರೊಡಕ್ಷನ್ಸ್ ವತಿಯಿಂದ ನಿಶಾಂತ್ ನಮ್ಮ ಚಿತ್ರವನ್ನು ಅರ್ಪಿಸುತ್ತಿದ್ದಾರೆ. ರವಿ ಫಿಲಂಸ್ ನ ಮನೋಜ್ ಈ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡಲಿದ್ದಾರೆ. ಗುನಾದ್ಯ ಪ್ರೊಡಕ್ಷನ್ಸ್​​ನ ನಿಶಾಂತ್ ಮಾತನಾಡಿ, ‘ಸಿನಿಮಾ ನನಗೆ ಬಹಳ ಇಷ್ಟವಾಯ್ತು. ಅದರಲ್ಲೂ ಕೊನೆಯ ಹದಿನೈದು ನಿಮಿಷ ಯಾರೂ ಊಹಿಸದ ಕ್ಲೈಮ್ಯಾಕ್ಸ್ ಅದ್ಭುತವಾಗಿದೆ‌. ಹಾಗಾಗಿ ನಾನು ಈ ಚಿತ್ರತಂಡದ ಜೊತೆ ನಿಂತಿದ್ದೇನೆ’ ಎಂದರು.

ಇದೀಗ ಬಿಡುಗಡೆ ಆಗಿರುವ ಸಿನಿಮಾದ ಟ್ರೈಲರ್ ಬಲು ಭಿನ್ನವಾಗಿದೆ. ಕಾಡಿನ ರಹಸ್ಯ, ವಿಜ್ಞಾನಿಯೊಬ್ಬ ರಾಕ್ಷಸನಾಗಿ ಬದಲಾಗುವ ಕತೆ, ರೂಪ ಬದಲಿಸುವ ಕಾಡು ಹೀಗೆ ಹಲವು ಕುತೂಹಲಕಾರಿ ಅಂಶಗಳು ಟ್ರೈಲರ್​​ನಲ್ಲಿವೆ. ಸಿನಿಮಾ ಅಕ್ಟೋಬರ್ 23ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:03 pm, Sat, 11 October 25

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?