ವಿಲನ್ ಪಾತ್ರ ಮಾಡಿದರೂ ಜನರು ಒಪ್ಪಿಕೊಂಡರು; ಖುಷಿ ಹೊರಹಾಕಿದ ರುಕ್ಮಿಣಿ ವಸಂತ್
ರುಕ್ಮಿಣಿ ವಸಂತ್ 'ಕಾಂತಾರ ಚಾಪ್ಟರ್ 1' ಚಿತ್ರದಲ್ಲಿ ನೆಗೆಟಿವ್ ಪಾತ್ರ ನಿರ್ವಹಿಸಿದ್ದರೂ, ಅಭಿಮಾನಿಗಳು ಅವರನ್ನು ಒಪ್ಪಿಕೊಂಡಿದ್ದಾರೆ. ವೃತ್ತಿಜೀವನದ ಆರಂಭದಲ್ಲಿ ಇಂತಹ ಪಾತ್ರ ಮಾಡುವುದು ಅಪಾಯಕಾರಿ ಎಂದಿದ್ದರೂ, ಜನರಿಂದ ದ್ವೇಷ ಬಾರದಿರುವುದು ಅವರಿಗೆ ಸಂತಸ ತಂದಿದೆ. ಆ ಬಗ್ಗೆ ಇಲ್ಲಿದೆ ವಿವರ .

ನಟಿ ರುಕ್ಮಿಣಿ ವಸಂತ್ (Rukmini Vasanth) ಅವರನ್ನು ಜನರು ಒಪ್ಪಿಕೊಂಡಿದ್ದಾರೆ. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ನೆಗೆಟಿವ್ ಪಾತ್ರ ಮಾಡಿದ್ದರು. ಈ ಪಾತ್ರ ಗಮನ ಸೆಳೆದಿದೆ. ಈ ಸಿನಿಮಾ ಬಳಿಕವೂ ಅವರನ್ನು ಯಾರೂ ಹೇಟ್ ಮಾಡಿಲ್ಲ. ಇದಕ್ಕೆ ಅವರು ಸಂತಸ ಹೊರಹಾಕಿದರು. ಬಾಲಿವುಡ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ನಟಿಯರು ಕ್ಯೂಟ್ ಕ್ಯೂಟ್ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬುದು ಫ್ಯಾನ್ಸ್ ಕೋರಿಕೆ. ಆದರೆ, ಹಾಗೆ ಕಾಣಿಸಿಕೊಂಡಿಲ್ಲ ಎಂದಾಗ ಕೆಲವೊಮ್ಮೆ ಫ್ಯಾನ್ಸ್ಗೆ ಬೇಸರ ಆಗೋದನ್ನು ನೀವ ಕಾಣಬಹುದು. ಅದರಲ್ಲೂ ವಿಲನ್ ಪಾತ್ರಗಳಲ್ಲಿ ಕಾಣಿಸಿಕೊಂಡರೆ ಫ್ಯಾನ್ಸ್ ಸಹಿಸುವುದೇ ಇಲ್ಲ. ಆದರೆ, ರುಕ್ಮಿಣಿ ವಿಷಯದಲ್ಲಿ ಆ ರೀತಿ ಆಗಿಲ್ಲ. ಈ ವಿಷಯದಲ್ಲಿ ಅವರಿಗೆ ಖುಷಿ ಇದೆ. ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಹಾಲಿವುಡ್ ರಿಪೋರ್ಟರ್ ರೌಂಡ್ಟೇಬಲ್ನಲ್ಲಿ ಕನ್ನಡತಿ ರುಕ್ಮಿಣಿ ವಸಂತ್
‘ಕಾಂತಾರ ಚಾಪ್ಟರ್ 1’ ಚಿತ್ರದಲ್ಲಿ ವಿಲನ್ ಪಾತ್ರ ಮಾಡಿದೆ. ಈ ರೀತಿಯ ಪಾತ್ರ ಪ್ರಯೋಗವನ್ನು ವೃತ್ತಿಜೀವನದ ಆರಂಭದಲ್ಲಿ ಮಾಡುವುದು ಅಪಾಯಕಾರಿ. ಜನರು ನಾನು ನೆಗೆಟಿವ್ ಪಾತ್ರ ಮಾಡಿದರೂ ನನ್ನನ್ನು ಪ್ರೀತಿಸಿದ್ದಾರೆ. ಅವರು ದ್ವೇಷಿಸಲಿಲ್ಲ. ನನ್ನ ಪಾತ್ರ ವಿಲನ್ ಆಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ’ ಎಂದು ರುಕ್ಮಿಣಿ ಖುಷಿಯಿಂದ ಹೇಳಿಕೊಂಡಿದ್ದಾರೆ.
“Playing the Antagonist character in #KantaraChapter1 is dangerous to experiment in early of career🤞. People are saying that they loved me playing an evil role, they didn’t hate🫶. Nobody guessed that i will turn out as Antagonist🫰❤️🔥” – #RukminiVasanthpic.twitter.com/TlnSskjVdB
— AmuthaBharathi (@CinemaWithAB) December 17, 2025
ರುಕ್ಮಿಣಿ ವಸಂತ್ ಅವರು ತಮ್ಮ ವೃತ್ತಿ ಜೀವನದ ಉದ್ದಕ್ಕೂ ನಿರ್ವಹಿಸಿ ಪಾತ್ರಗಳಲ್ಲಿ ಒಂದು ಪ್ಯಾಟರ್ನ್ ಇದೆ. ಅವರು ಯಾವುದೇ ಸಿನಿಮಾ ಮಾಡಿದರೂ ಕಥಾ ನಾಯಕ ಅವರಿಗೆ ಸಿಗೋದಿಲ್ಲ. ಈ ಹಿಂದಿನ ಹಲವು ಸಿನಿಮಾಗಳಲ್ಲಿ ಅವರು ನಡೆದಿವೆ. ‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲೂ ಹಾಗೆಯೇ ಆಗಿದೆ. ಇದರಲ್ಲಿ ಕಥಾ ನಾಯಕನೇ ರುಕ್ಮಿಣಿಯನ್ನು ಸಾಯಿಸುತ್ತಾನೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



