AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today 25 August : ಇಂದು ಈ ರಾಶಿಯವರು ಕೆಟ್ಟದ್ದನ್ನು ಪದೇ ಪದೇ ನೋಡಿ, ದುಃಖಿಸುವರು

ನಿತ್ಯ ಭವಿಷ್ಯ: 25 ಆಗಸ್ಟ್ 2026ರ ಇಂದಿನ ರಾಶಿ ಭವಿಷ್ಯದ ಪ್ರಕಾರ, ಕೆಲವು ರಾಶಿಗಳಿಗೆ ಹಣಕಾಸಿನ ಸಮಸ್ಯೆ, ಅಪಮಾನ, ಸಾಲದ ಚಿಂತೆ ಎದುರಾಗಬಹುದು. ಅತಿಯಾದ ವಿಶ್ವಾಸ, ಆಲಸ್ಯದಿಂದ ನಷ್ಟ ಸಾಧ್ಯತೆ ಇದೆ. ಮತ್ತೊಂದೆಡೆ, ಕೆಲವು ರಾಶಿಗಳಿಗೆ ಶುಭ ವಾರ್ತೆ, ಹೊಸ ಅವಕಾಶಗಳು, ಕುಟುಂಬದ ಬೆಂಬಲ ಲಭಿಸಲಿದೆ. ಪ್ರತಿ ರಾಶಿಯವರು ತಮ್ಮ ಆರ್ಥಿಕ, ಸಂಬಂಧ, ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು.

Horoscope Today 25 August : ಇಂದು ಈ ರಾಶಿಯವರು ಕೆಟ್ಟದ್ದನ್ನು ಪದೇ ಪದೇ ನೋಡಿ, ದುಃಖಿಸುವರು
ಸಾಂದರ್ಭಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Aug 25, 2026 | 3:36 AM

Share

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಶ್ರಾವಣ ಮಾಸದ ಶುಕ್ಲ ಪಕ್ಷದ ತ್ರಯೋದಶೀ ತಿಥಿಯ ಮಂಗಳವಾರದಂದು ವಸ್ತುನಷ್ಟದಿಂದ ಬೇಸರ, ನಿರಂತರ ದುಡಿಮೆ, ಅಪಮಾನ, ಪರೋಕ್ಷದಾನ, ಆಮದಿನಲ್ಲಿ ಸಮಸ್ಯೆ, ಮಾತಿನ ನಿರ್ಲಕ್ಷ್ಯ, ಪತ್ರವ್ಯವಹಾರ, ಸಾಲದಿಂದ‌ ಚಿಂತೆ ಇವೆಲ್ಲ ಈ‌ ದಿನದ ವಿಶೇಷ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಶ್ರಾವಣ, ಸೌರ ಮಾಸ : ಸಿಂಹ, ಮಹಾನಕ್ಷತ್ರ : ಮಘಾ, ವಾರ : ಮಂಗಳ, ಪಕ್ಷ : ಶುಕ್ಲ, ತಿಥಿ : ತ್ರಯೋದಶೀ, ನಿತ್ಯನಕ್ಷತ್ರ : ಶ್ರವಣ, ಯೋಗ : ಪ್ರೀತಿ, ಕರಣ : ಭದ್ರ, ಸೂರ್ಯೋದಯ – 06 – 09 am, ಸೂರ್ಯಾಸ್ತ – 06 – 33 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:28 – 17:01, ಯಮಗಂಡ ಕಾಲ 09:15 – 10:49, ಗುಳಿಕ ಕಾಲ 12:22 – 13:55

ಮೇಷ ರಾಶಿ :

ಅತಿಯಾದ ಪ್ರಶಂಸೆಯಿಂದ ನಿಮಗೆ ಮುಜುಗರವಾಗುವುದು. ವ್ಯಾಪಾರಸ್ಥರು ಪ್ರಾಮಾಣಿಕತೆಯಿಂದಲೂ ಸೋಲುವರು. ನಿಮ್ಮ ಜವಾಬ್ದಾರಿಯನ್ನು ಸರಿಯಾಗಿ ಸಮಯಕ್ಕೆ ಪೂರೈಸುವಿರಿ. ತಾಯಿಯ ಕಡೆಯ ಬಂಧುಗಳು ನಿಮಗೆ ಆಪ್ತರಾಗುವರು. ಇಂದು ನೀವು ಸುಳ್ಳು ಹೇಳಿ ಸಿಕ್ಕಿಬೀಳುವ ಸಾಧ್ಯತೆ ಇದೆ.‌ ಪ್ರೀತಿಯಲ್ಲಿ ನಿಮಗೆ ಬಯಸಿದ್ದು ಸಿಗದೇಹೋಗಬಹುದು. ಸುಲಭವಾದ ಕಾರ್ಯವನ್ನು ಮೊದಲು ಮಾಡಿ ಮುಗಿಸಿ.

ವೃಷಭ ರಾಶಿ :

ಇಂದು ಕಾಯುತ್ತಿರುವ ನಿಮಗೆ ಒಳ್ಳೆಯ ವಾರ್ತೆ ಸಿಗಬಹುದು. ನಿಮ್ಮ ವೈಯಕ್ತಿಕ ಯೋಜನೆಗಳಿಗೆ ಯಾರೂ ಅಡ್ಡಿ ಮಾಡಲಾರರು. ಲಾಭ‌ವನ್ನು ಪಡೆಯಲು ಹೊಸ ಮಾರ್ಗಗಳು ಗೊತ್ತಾಗಬಹುದು. ಆಮಿಷಕ್ಕೆ ಒಳಗಾಗಿ ಕೆಟ್ಟದ್ದನ್ನು ಮಾಡಬಹುದು. ಸೋಲಿನ ಯೋಚನೆ ಇಲ್ಲದೇ ನಿರಾತಂಕದಿಂದ ಇರುವಿರಿ. ಫಲಾಪೇಕ್ಷೆ ಇಲ್ಲದೇ ನಿಮಗೆ ಕಾರ್ಯವನ್ನು ಮಾಡಲುಬಾರದು. ಆರಂಭಿಸುವ ಕೆಲಸದ ಬಗ್ಗೆ ಪೂರ್ಣ ಮಾಹಿತಿ ಇರಲಿ. ಮಕ್ಕಳಿಗೆ ಬೇಕಾದ ವಸ್ತುಗಳನ್ನು ಕೊಡಿಸುವಿರಿ.

ಮಿಥುನ ರಾಶಿ :

ಅವಿವಾಹಿತರ ನಿರೀಕ್ಷೆ ಅಧಿಕವಾಗಿರುವುದು. ಬಹಳ ದಿನಗಳ ಅನಂತರ ಕುಟುಂಬದ ಸಂಬಂಧಗಳು ಬಲಗೊಳ್ಳುವುದು. ನೀವು ಯಶಸ್ಸನ್ನು ಸಾಧಿಸಲು ಹಂಬಲಿಸುವಿರಿ. ಒಂದೇ ವಿಚಾರವನ್ನು ಮತ್ತೆ ಮತ್ತೆ ಹೇಳಿ ಇತರರಿಂದ ದೂರಾಗಬಹುದು. ಬೇಕಾದಷ್ಟನ್ನು ಪಡೆದರೆ ಕೊಟ್ಟವರಿಗೂ ಪಡೆದವರಿಗೂ ಒಳ್ಳೆಯದು. ಯಾವ ಕಾರಣಕ್ಕೂ ಸಾಲವನ್ನು ಮಾಡಲು ಹೋಗುವುದು ಬೇಡ. ನೀವು ಕಾರ್ಯದಲ್ಲಿ ಮಗ್ನರಾಗಿದ್ದು ಯಾವ ವಿಷಯಕ್ಕೂ ಭಾಗಿಯಾಗಲಾರಿರಿ.

ಕರ್ಕಾಟಕ ರಾಶಿ :

ಇಂದು ಹಣವು ನಿಮ್ಮ ತುರ್ತು ಅವಶ್ಯಕತೆಯಾದ ಕಾರಣ ಅದನ್ನು ಗಳಿಸುವ ವಿಧಾನವನ್ನು ಯೋಚಿಸುವಿರಿ. ಇಂದಿನ‌ ನಿಮ್ಮ ಅಭಿಪ್ರಾಯವನ್ನು ಕುಟುಂಬ ಗೌರವಿಸುವುದು. ಕಳೆದುಹೋದ ವಸ್ತುವಿನ ಬಗ್ಗೆ ನಿಮಗೆ ಅತಿಯಾದ ಮೋಹ ಉಂಟಾಗುವ ಸಾಧ್ಯತೆ ಇದೆ. ಕುಟುಂಬ ಕಾರಣದಿಂದ ನಿಮಗೆ ಗೌರವ ಸಿಗಬಹುದು. ಮಾತನ್ನು ಮಿತವಾಗಿ ಆಡಿ. ನಿಮ್ಮ ಭಾವವನ್ನು ಬಂಧಿಸಿಟ್ಟರೂ ಅದು ಗೊತ್ತಾಗುವುದು.

ಸಿಂಹ ರಾಶಿ :

ನಿಮಗೆ ನೀವೇ ಉತ್ತೇಜನವನ್ನು ಕೊಟ್ಟುಕೊಳ್ಳಬೇಕಾಗುವುದು. ಇನ್ನೊಬ್ಬರಿಗೆ ಸಾಲವಾಗಿ ನೀಡಿದ ಹಣವನ್ನು ಸ್ವೀಕರಿಸಬಹುದು. ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ ಸಂಪತ್ತನ್ನು ಉಳಿಸಿಕೊಳ್ಳಿ. ಅತಿಯಾದ ವಿಶ್ವಾಸವು ನಿಮಗೆ ಹಿನ್ನಡೆಯನ್ನು ತಂದೀತು. ನೀವಂದುಕೊಂಡಂತೆ ಇಂದಿನ‌ ಕೆಲಸವು ಸಾಗದು. ಬೇಡವೆನಿಸಿದ್ದನ್ನು ಒತ್ತಾಯಪೂರ್ವಕ ಪಡೆಯುವುದು ಬೇಡ. ಇಂದು ಸ್ವಲ್ಪ ಆಲಸ್ಯವೂ ಇರಬಹುದು. ಆರೋಗ್ಯವನ್ನು ದೈವಾನುಗ್ರಹದಿಂದಲೂ ಸರಿಮಾಡಿಕೊಳ್ಳಬಹುದು‌.

ಕನ್ಯಾ ರಾಶಿ :

ನಿಮಗೆ ಹಿರಿಯರಿಂದ ಪ್ರಶಂಸೆ ಸಿಗುವುದು. ಹಿರಿಯರ ಜೊತೆ ಸಮಯವನ್ನು ಕಳೆಯಲು ಅವಕಾಶ ಸಿಗಲಿದೆ. ಯಾವುದನ್ನೂ ಗೊತ್ತಿಲ್ಲ ಎಂದು ಹೇಳುವುದನ್ನು ಬಿಡಬೇಕು. ಆರ್ಥಿಕ‌ ವ್ಯವಹಾರಗಳನ್ನು ಇಂದು ಸರಿಯಾಗಿ‌ ತಿಳಿದುಕೊಳ್ಳುವಿರಿ. ಅಶ್ಲೀಷಪದಗಳನ್ನು ಬಳಸಿ ಹಿರಿಯರಿಂದ ನಿಂದನೆಯಾಗಲಿದೆ. ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯುವುದು ಉಚಿತ. ಆಪ್ತರ ಜೊತೆ ಹರಟೆ ಹೊಡೆಯುವಿರಿ. ಸಾಹಿತ್ಯ ಕ್ಷೇತ್ರದವರು ಸಾಧಿಸಲು ಮಾರ್ಗಗಳು ಗೊತ್ತಾಗಲಿವೆ.

ತುಲಾ ರಾಶಿ :

ಹರಿತವಾದ ಕತ್ತಿ ಇದೆ ಎಂದು ಮೂಗನ್ನು ಕತ್ತರಿಸಲಾಗದು. ಅದರ ಉಪಯೋಗವನ್ನು ತಿಳಿದಿಕೊಂಡು ಅದನ್ನು ಮಾಡಬೇಕು. ಜನರ ಜೊತೆ ಬೆರೆಯುವ ಮನಸ್ಸಾಗುವುದು. ದೂರದಲ್ಲಿ‌ ಇರುವವರು ಮನೆಗೆ ಹೋಗಲಿದ್ದಾರೆ. ಹಳೆಯ ಪದ್ಧತಿಗಳ ಅನುಷ್ಠಾನಕ್ಕೆ ಒತ್ತುಕೊಡುವಿರಿ. ಸಂಗಾತಿಯೂ ನಿಮ್ಮ ಜೊತೆ ಸರಿಯಾಗಿ ಮಾತನಾಡುವುದಿಲ್ಲ. ಏಕಾಂತವಾಗಿ ಒಂದು‌ಕಡೆ ಕುಳಿತು ಚಿಂತಾಮಗ್ನರಾಗುವಿರಿ. ದೂರದ ಊರಿಗೆ ಹೋಗಬೇಕಾಗುವುದು.

ವೃಶ್ಚಿಕ ರಾಶಿ :

ಕ್ರೀಡೆಯಲ್ಲಿ ಹೆಚ್ಚು ಆಸಕ್ತಿಯಿಂದ ಭಾಗವಿಸುವಿರಿ. ಸ್ನೇಹಪರವಾಗಿ ಇದ್ದಷ್ಟು ನಿಮಗೆ ಅನುಕೂಲತೆಗಳು ಜಾಸ್ತಿ. ಇಂದು ನೀವು ಇನ್ನೊಬ್ಬರ ಶ್ರೇಯಸ್ಸಿಗೆ ಕೆಲಸವನ್ನು ಮಾಡಲು ಇಚ್ಛಿಸುವಿರಿ. ಸಾಮಾಜಿಕ ಕೆಲಸವು ನಿಮಗೆ ಪ್ರಿಯವಾದುದಾಗಿದೆ. ನಿಮ್ಮ ಮಾತು ತಪ್ಪಾಗಿ ಅರ್ಥವಾಗಬಹುದು. ಹೆಚ್ಚಿನ ದುಡಿಮೆಗೆ ಪ್ರತ್ನಿಸುವಿರಿ. ಅನ್ಯರನ್ನು ಅನುಸರಿಸಲು ನಿಮಗೆ ಇಷ್ಟವಾಗದು. ನಿಮ್ಮದೇ ಚಿಂತನೆಯನ್ನು ಬೆಳೆಸಿಕೊಳ್ಳಲು ಬಯಸುವಿರಿ. ನಿಮ್ಮದಲ್ಲದ ವಸ್ತುಗಳನ್ನು ಜೋಪಾನ ಮಾಡುವುದು ಅನಿವಾರ್ಯ.

ಧನು ರಾಶಿ :

ಎಲ್ಲವನ್ನೂ ಮರೆತು ಕುಳಿತುಕೊಳ್ಳಲು ಕಷ್ಟವಾಗುವುದು. ಇಂದು ನಿಮ್ಮ ಕೌಶಲದ ಬಗ್ಗೆ ಹಂಚಿಕೊಳ್ಳಿ. ನಿಮಗೆ ಮುಂದಿನ ಜೀವನೋಪಾಯಕ್ಕೆ ದಾರಿಯಾದೀತು. ಆರ್ಥಿಕವಾಗಿ ಸಬಲರಾಗುವ ಹಂಬಲವಿದ್ದರೂ ಆಲಸ್ಯದಿಂದ ಹೊರಬರದೇ ಇದು ಸಾಧ್ಯವಿಲ್ಲ. ಸ್ತ್ರೀಯರ ಕುರಿತ ನಿಮ್ಮ ಕಾಳಜಿ ಅತಿಯಾದೀತು. ಕೆಲಸವಿಲ್ಲದೇ ಮನೆಯಲ್ಲಿ ಕುಳಿತಿರುವುದು ಹಿಂಸೆಯಾದೀತು. ಕಾನೂನಿಗೆ ವಿರುದ್ಧವಾದ ನಡೆಯು ನಿಮಗೆ ಅಪಾಯಕಾರಿ.

ಮಕರ ರಾಶಿ :

ನೀವು ತೊಂದರೆಗೆ ಸಿಲುಕದಂತೆ ದಾಟಲು ನಿಮಗೆ ಯಾರಿಂದಲಾದರೂ ಸೂಚನೆ ಬರಬಹುದು. ಯಾವುದಾದರೂ ಜವಾಬ್ದಾರಿಯನ್ನು ಪಡೆದರೆ ಮುಂದಾಗುವ ಎಲ್ಲದೂ ನಿಮ್ಮ ಮೇಲೆ ಬರಬಲಿದೆ. ಆತ್ಮೀಯರಾದರೂ ಅವರ ಹಣಕಾಸಿನ ವಿಚಾರ ನಿಮಗೆ ಬೇಡದ್ದು. ಕಛೇರಿಯಲ್ಲಿ ಕೆಲಸ ಮಾಡುವವರು ಒತ್ತಡದಿಂದ ಬೇಯಲಿದ್ದೀರಿ. ನಿರ್ಲಕ್ಷ್ಯದ‌ ಮನೋಭಾವವು ನಿಮಗೆ ಹಿಡಿಸಿದ್ದಲ್ಲ. ಎಲ್ಲ ಸುದ್ದಿಗಳನ್ನೂ ಕೇಳುವ ಮನಃಸ್ಥಿತಿಯನ್ನು ಬಿಡಿಬೇಕಾದೀತು.

ಕುಂಭ ರಾಶಿ :

ಆತುರದಲ್ಲಿ ಏನಾದರೂ ನಿರ್ಧಾರವನ್ನು ತೆಗದುಕೊಳ್ಳಬೇಡಿ. ಸಾಲವು ನಿಮ್ಮ ಆತ್ಮೀಯತೆಯನ್ನು ಹಾಳುಮಾಡುವುದು. ಇಂದು ನೀವು ಸಣ್ಣ ವಿಷಯಗಳಿಗೂ ಕೋಪ ಮಾಡಿಕೊಳ್ಳುವಿರಿ. ನಿಮ್ಮದೇ ತೀರ್ಮನದಿಂದ‌ ಹೊರಬರಲು ಪ್ರಯತ್ನಿಸಿ. ಸಹೋದರರ ಜೊತೆ ವಾಗ್ವಾದವು ಹೆಚ್ಚಾಗಲಿದೆ. ಒಂದು‌ ವಿಷಯಕ್ಕೆ ಅನೇಕ ಮುಖಗಳು ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕಾಗಿದೆ. ಗ್ರಾಹಕರನ್ನು ಚನ್ನಾಗಿ ಇಟ್ಟುಕೊಂಡು ವ್ಯಾಪಾರದಲ್ಲಿ ಲಾಭವನ್ನು ಪಡೆಯಿರಿ. ಆರ್ಥಿಕ ಸಂಕಷ್ಟದಿಂದ ಬುದ್ಧಿಗೆ ಏನೂ ಸೂಚಿಸದೇ ಇರಬಹುದು.

ಮೀನ ರಾಶಿ :

ಹಿರಿಯರ ಬೇಸರವೇ ನಿಮಗೆ ಶಾಪದಂತೆ ಆಗಬಹುದು. ಇದು ನಿಮ್ಮ ಮನಸ್ಸಿಗೆ ಇಂದು‌ ನೀವು ಶುಭದಿನದ ನಿರೀಕ್ಷೆಯಲ್ಲಿ ಇರುವಿರಿ. ನಿಮ್ಮ ಸಾಮರ್ಥ್ಯ ಅನಾವರಣಕ್ಕೆ ಇಂದು ಶುಭದಿನವಾಗಲಿದೆ. ಪ್ರೀತಿಯಲ್ಲಿ ಬಿದ್ದು ನೀವು ಒದ್ದಾಡುವ ಸ್ಥಿತಿ ಎದುರಾಗಬಹುದು. ಕೆಲವೊಮ್ಮೆ ಸಹನೆ ಕಳೆದುಕೊಂಡು ಉಗ್ರವಾಗುವಿರಿ. ಸಂಗಾತಿಗೆ ಅನಿರೀಕ್ಷಿತ ಉಡುಗೊರೆಯನ್ನು ನೀಡಿ. ಒಳ್ಳೆಯ ಭೋಜನವನ್ನು ಸ್ವೀಕರಿಸುವಿರಿ. ಮಾತನಾಡುವ ಇಚ್ಛೆ ಇಂದು‌ ಕಡಿಮೆ ಇರಲಿದೆ.

– ಲೋಹಿತ್ ಹೆಬ್ಬಾರ್ – 8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ದೆಹಲಿಯಲ್ಲಿ ಧಾರಾಕಾರ ಮಳೆ; ಜಲಾವೃತಗೊಂಡ ರಸ್ತೆಗಳಲ್ಲಿ ಈಜಾಡಿದ ಮಕ್ಕಳು
ದೆಹಲಿಯಲ್ಲಿ ಧಾರಾಕಾರ ಮಳೆ; ಜಲಾವೃತಗೊಂಡ ರಸ್ತೆಗಳಲ್ಲಿ ಈಜಾಡಿದ ಮಕ್ಕಳು
ಕಾಶ್ಮೀರಿ ಪಂಡಿತರಿಗಿರುವ ಬೆದರಿಕೆ​ಗೆ ಕಳವಳ ವ್ಯಕ್ತಪಡಿಸಿದ ಒಮರ್ ಅಬ್ದುಲ್ಲಾ
ಕಾಶ್ಮೀರಿ ಪಂಡಿತರಿಗಿರುವ ಬೆದರಿಕೆ​ಗೆ ಕಳವಳ ವ್ಯಕ್ತಪಡಿಸಿದ ಒಮರ್ ಅಬ್ದುಲ್ಲಾ
‘ಅಪ್ಪು ಸರ್ ನೆನಪಿನಲ್ಲಿ ಗಡ್ಡ ಬಿಟ್ಟೆ’: ಭಾವುಕವಾಗಿ ಮಾತನಾಡಿದ ಎಂ.ಕೆ. ಮಠ
‘ಅಪ್ಪು ಸರ್ ನೆನಪಿನಲ್ಲಿ ಗಡ್ಡ ಬಿಟ್ಟೆ’: ಭಾವುಕವಾಗಿ ಮಾತನಾಡಿದ ಎಂ.ಕೆ. ಮಠ
‘ಟಾಕ್ಸಿಕ್’ ಸಿನಿಮಾಗೆ ಭರ್ಜರಿ ಬುಕಿಂಗ್; ಲೆಕ್ಕ ನೀಡಿದ ಪ್ರದರ್ಶಕ ಜಗದೀಶ್
‘ಟಾಕ್ಸಿಕ್’ ಸಿನಿಮಾಗೆ ಭರ್ಜರಿ ಬುಕಿಂಗ್; ಲೆಕ್ಕ ನೀಡಿದ ಪ್ರದರ್ಶಕ ಜಗದೀಶ್
9 ಗಂಟೆಗಳ ಶೋಧ: ಪ್ಲ್ಯಾನ್ ಮಾಡಿಯೇ ಎಸ್ಕೇಪ್ ಆದ್ರಾ ಜ್ಞಾನೇಂದ್ರ ಕುಮಾರ್?
9 ಗಂಟೆಗಳ ಶೋಧ: ಪ್ಲ್ಯಾನ್ ಮಾಡಿಯೇ ಎಸ್ಕೇಪ್ ಆದ್ರಾ ಜ್ಞಾನೇಂದ್ರ ಕುಮಾರ್?
ಸಿಎಂ ಡಿಕೆಶಿಗೆ ಶಾಸಕ ಸುನಿಲ್ ಕುಮಾರ್ ಸವಾಲು
ಸಿಎಂ ಡಿಕೆಶಿಗೆ ಶಾಸಕ ಸುನಿಲ್ ಕುಮಾರ್ ಸವಾಲು
ಮತ್ತೊಂದು ಸುತ್ತಿನ ಹೋರಾಟಕ್ಕೆ ಸಜ್ಜಾದ ಅಕ್ಸಾ
ಮತ್ತೊಂದು ಸುತ್ತಿನ ಹೋರಾಟಕ್ಕೆ ಸಜ್ಜಾದ ಅಕ್ಸಾ
ಟಿಪ್ಪು ಕಟೌಟ್‌ಗೆ ಪಾಕಿಸ್ತಾನ ಪರ ಹಾಡು ಬಳಸಿ ಪೋಸ್ಟ್​: ಓರ್ವನ ಬಂಧನ
ಟಿಪ್ಪು ಕಟೌಟ್‌ಗೆ ಪಾಕಿಸ್ತಾನ ಪರ ಹಾಡು ಬಳಸಿ ಪೋಸ್ಟ್​: ಓರ್ವನ ಬಂಧನ
H1N1 ಫ್ಲೂ ಆತಂಕ: ಪೋಷಕರು, ಶಾಲೆಗಳಿಗೆ ಆರೋಗ್ಯ ಸಚಿವರಿಂದ ಮಹತ್ವದ ಮಾಹಿತಿ
H1N1 ಫ್ಲೂ ಆತಂಕ: ಪೋಷಕರು, ಶಾಲೆಗಳಿಗೆ ಆರೋಗ್ಯ ಸಚಿವರಿಂದ ಮಹತ್ವದ ಮಾಹಿತಿ
ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಸುದ್ದಿಗೋಷ್ಠಿ
ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಸುದ್ದಿಗೋಷ್ಠಿ