AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Financial Rule Change: ಎಲ್​ಪಿಜಿ ದರದಿಂದ ಹಿಡಿದು ಯುಪಿಐವರೆಗೆ, ಆಗಸ್ಟ್ 1ರಿಂದ ಪ್ರಮುಖ ನಿಯಮ ಬದಲಾವಣೆಗಳು

Financial Rules Changes from August 1st: ಆಗಸ್ಟ್ 1ರಿಂದ ಸಾಮಾನ್ಯ ಜನರ ಹಣಕಾಸು ಪರಿಸ್ಥಿತಿ ಮೇಲೆ ಪರಿಣಾಮ ಬೀರುವಂತಹ ಕೆಲ ನಿಯಮ ಬದಲಾವಣೆಗಳಿವೆ. ಎಲ್​ಪಿಜಿ ಹಾಗೂ ಇತರ ಇಂಧನ ದರಗಳ ಬದಲಾವಣೆ, ಅಮೆರಿಕದ ಟ್ಯಾರಿಫ್ ಹೇರಿಕೆ ಆಗಸ್ಟ್ 1ರಿಂದ ಜಾರಿಗೆ ಬರುತ್ತದೆ. ಯುಪಿಐ ನಿಯಮ ಬದಲಾವಣೆ, ಆರ್​ಬಿಐ ಬಡ್ಡಿದರ ಪರಿಷ್ಕರಣೆ ಇತ್ಯಾದಿ ಬೆಳವಣಿಗೆಗಳೂ ಈ ತಿಂಗಳಲ್ಲಿ ಇದೆ.

Financial Rule Change: ಎಲ್​ಪಿಜಿ ದರದಿಂದ ಹಿಡಿದು ಯುಪಿಐವರೆಗೆ, ಆಗಸ್ಟ್ 1ರಿಂದ ಪ್ರಮುಖ ನಿಯಮ ಬದಲಾವಣೆಗಳು
ಹಣ
ಸುಗ್ಗನಹಳ್ಳಿ ವಿಜಯಸಾರಥಿ
| Updated By: Ganapathi Sharma|

Updated on: Aug 01, 2025 | 7:09 AM

Share

ಆಗಸ್ಟ್ 1 ಮತ್ತು ಮೊದಲ ವಾರದಿಂದ ಜನಸಾಮಾನ್ಯರು ಹಾಗು ಉದ್ಯಮ ವಲಯದ ಹಣಕಾಸು ಪರಿಸ್ಥಿತಿಯನ್ನು ಪ್ರಭಾವಿಸುವಂತಹ ಕೆಲ ನಿಯಮ ಬದಲಾವಣೆಗಳಿವೆ. ಎಲ್​ಪಿಜಿ ದರ (LPG) ಪರಿಷ್ಕರಣೆ, ಸಿಎನ್​ಜಿ ದರ ಪರಿಷ್ಕರಣೆ, ಅಮೆರಿಕ ಟ್ಯಾರಿಫ್ ಹೇರಿಕೆ, ಯುಪಿಐ ನಿಯಮ ಬದಲಾವಣೆ ಇತ್ಯಾದಿ ಬೆಳವಣಿಗೆ ಆಗಸ್ಟ್ 1ರಿಂದ ಇದೆ. ಹಾಗೆಯೇ, ಆರ್​ಬಿಐನ ಮಾನಿಟರಿ ಪಾಲಿಸಿ ಕಮಿಟಿ ಸಭೆಯೂ ಇದ್ದು ಬಡ್ಡಿದರ ಪರಿಷ್ಕರಣೆಯೂ ಆಗುವ ಸಾಧ್ಯತೆ ಇದೆ. ಆಗಸ್ಟ್​ನಲ್ಲಿ ಹಣಕಾಸು ಪ್ರಭಾವಿಸುವ ಯಾವೆಲ್ಲಾ ಬದಲಾವಣೆಗಳಿವೆ ಎನ್ನುವ ವಿವರ ಇಲ್ಲಿದೆ.

ಅಮೆರಿಕದ ಟ್ಯಾರಿಫ್ ಹೇರಿಕೆ

ಡೊನಾಲ್ಡ್ ಟ್ರಂಪ್ ಅವರು ಭಾರತದ ಸರಕುಗಳಿಗೆ ಶೇ. 25ರಷ್ಟು ಆಮದು ಸುಂಕ ಹಾಗು ಹೆಚ್ಚುವರಿ ಪೆನಾಲ್ಟಿ ಘೋಷಿಸಿದ್ದಾರೆ. ಇದು ಆಗಸ್ಟ್ 1ರಿಂದ ಜಾರಿಯಾಗುತ್ತದೆ. ಭಾರತದ ಔಷಧ, ಎಲೆಕ್ಟ್ರಾನಿಕ್ಸ್, ಜವಳಿ ಮತ್ತಿತರ ಉದ್ಯಮಗಳಿಗೆ ಹಿನ್ನಡೆಯಾಗಬಹುದು.

ಎಲ್​ಪಿಜಿ ದರ ಪರಿಷ್ಕರಣೆ

ತೈಲ ಮಾರುಕಟ್ಟೆ ಕಂಪನಿಗಳು ಪ್ರತೀ ತಿಂಗಳ ಮೊದಲ ದಿನದಂದು ಎಲ್​ಪಿಜಿ, ಸಿಎನ್​ಜಿ, ಪಿಎನ್​ಜಿ ಮತ್ತು ಟರ್ಬೈನ್ ಇಂಧನಗಳ ಬೆಲೆಗಳನ್ನು ಪರಿಷ್ಕರಿಸುತ್ತವೆ. ಇತ್ತೀಚೆಗೆ, 19 ಕಿಲೋ ವಾಣಿಜ್ಯ ಎಲ್​ಪಿಜಿ ಸಿಲಿಂಡರ್ ಬೆಲೆಯನ್ನು 60 ರೂ ಇಳಿಸಲಾಗಿತ್ತು. ಈ ಬಾರಿಯೂ ಪರಿಷ್ಕರಣೆ ಮಾಡಲಾಗಿದ್ದು, ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ 33.50 ರೂ. ಇಳಿಕೆ ಮಾಡಲಾಗಿದೆ.

ಇದನ್ನೂ ಓದಿ: ಭಾರತದಲ್ಲಿ ನಿವೃತ್ತಿ ಬದುಕು ನಡೆಸಲು ಎಷ್ಟು ಹಣ ಇರಬೇಕು ಗೊತ್ತಾ? ಎಚ್​ಎಸ್​ಬಿಸಿ ವರದಿಯಲ್ಲಿದೆ ಅಚ್ಚರಿ ಅಂಶ

ಸಿಎನ್​ಜಿ, ಪಿಎನ್​ಜಿ ಮತ್ತು ಏವಿಯೇಶನ್ ಟರ್ಬೈನ್ ಇಂಧನದ ಬೆಲೆಗಳೂ ಆಗಸ್ಟ್ 1ರಂದು ಏರಿಕೆ ಆಗುವ ಸಾಧ್ಯತೆ ಇದೆ.

ಆರ್​ಬಿಐನಿಂದ ಟ್ರೇಡಿಂಗ್ ಅವಧಿ ವಿಸ್ತರಣೆ

ಕಾಲ್ ಮನಿ, ಮಾರ್ಕೆಟ್ ರಿಪೋ, ಟ್ರೈಪಾರ್ಟಿ ರಿಪೋ ಮಾರುಕಟ್ಟೆಗಳಲ್ಲಿ ಟ್ರೇಡಿಂಗ್ ಅವಧಿಯಲ್ಲಿ ವಿಸ್ತರಣೆ ಮಾಡಲಾಗಿದೆ. ಕಾಲ್ ಮನಿ ಮಾರುಕಟ್ಟೆಯು ಬೆಳಗ್ಗೆ 9ರಿಂದ ಸಂಜೆ 7ರವರೆಗೆ ಇರಲಿದೆ. ಮಾರ್ಕೆಟ್ ರಿಪೋಗೆ ಟ್ರೇಡಿಂಗ್ ಅವಧಿ ಬೆಳಗ್ಗೆ 9ರಿಂದ ಸಂಜೆ 4ರವರೆಗೆ ನಿಗದಿ ಮಾಡಲಾಗಿದೆ. ಆಗಸ್ಟ್ 1ರಿಂದ ಈ ಬದಲಾವಣೆ ಜಾರಿಗೆ ಬರುತ್ತದೆ.

ಯುಪಿಐ ನಿಯಮಗಳಲ್ಲಿ ಬದಲಾವಣೆ

ಯುಪಿಐ ಆ್ಯಪ್​ವೊಂದರಲ್ಲಿ ಬ್ಯಾಂಕ್ ಅಕೌಂಟ್​ನಲ್ಲಿ ದಿನಕ್ಕೆ 50 ಬಾರಿ ಮಾತ್ರ ಬ್ಯಾಲನ್ಸ್ ಪರಿಶೀಲಿಸಬಹುದು. ಮೊಬೈಲ್ ನಂಬರ್​ಗೆ ಲಿಂಕ್ ಆಗಿರುವ ಬ್ಯಾಂಕ್ ಅಕೌಂಟ್​ಗಳನ್ನು ದಿನಕ್ಕೆ 25ಕ್ಕಿಂತ ಹೆಚ್ಚು ಬಾರಿ ನೋಡುವಂತಿಲ್ಲ. ಆಟೊಪೇ ಅನ್ನು ಪೀಕ್ ಗಳಿಗೆಯಲ್ಲಿ ಪ್ರೋಸಸ್ ಮಾಡಲಾಗುವುದಿಲ್ಲ. ಯುಪಿಐ ಪೇಮೆಂಟ್ ಮಾಡುವಾಗ ಸ್ವೀಕೃತರ ಹೆಸರು ಕಾಣಿಸುತ್ತದೆ. ಆಗಸ್ಟ್ 1ರಿಂದ ಜಾರಿಗೆ ಬರುವ ಪ್ರಮುಖ ಯುಪಿಐ ನಿಯಮ ಬದಲಾವಣೆ ಇವು.

ಇದನ್ನೂ ಓದಿ: 1 ಲಕ್ಷ ರೂ, 30 ವರ್ಷ ಹೂಡಿಕೆ, ಕೋಟಿ ರೂಗೂ ಅಧಿಕ ರಿಟರ್ನ್; ಇದು ಈ ಐದು ಫಂಡ್​ಗಳ ಮ್ಯಾಜಿಕ್

ಆರ್​ಬಿಐ ಮಾನಿಟರಿ ಪಾಲಿಸಿ ಕಮಿಟಿ ಸಭೆ

ಭಾರತೀಯ ರಿಸರ್ವ್ ಬ್ಯಾಂಕ್​ನ ದ್ವೈಮಾಸಿಕ ಎಂಪಿಸಿ ಸಭೆ ಆಗಸ್ಟ್ ಮೊದಲ ವಾರದಲ್ಲಿ ಇದೆ. ಆಗಸ್ಟ್ 4ರಿಂದ 6ರವರೆಗೆ ನಡೆಯುತ್ತದೆ. ಕಳೆದ ಮೂರು ಸಭೆಗಳಲ್ಲಿ ಸತತವಾಗಿ ಬಡ್ಡಿದರ ಇಳಿಸಲಾಗಿದೆ. ಶೇ. 6.50 ಇದ್ದ ರಿಪೋ ದರ ಈಗ ಶೇ. 5.50ಕ್ಕೆ ಇಳಿದಿದೆ. ಈ ಬಾರಿಯೂ ಬಡ್ಡಿದರ ಇಳಿಯುವ ಸಾಧ್ಯತೆ ಇಲ್ಲವೆನ್ನುವಂತಿಲ್ಲ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ