AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ನಿವೃತ್ತಿ ಬದುಕು ನಡೆಸಲು ಎಷ್ಟು ಹಣ ಇರಬೇಕು ಗೊತ್ತಾ? ಎಚ್​ಎಸ್​ಬಿಸಿ ವರದಿಯಲ್ಲಿದೆ ಅಚ್ಚರಿ ಅಂಶ

HSBC report on amount needed for retirement life: ಭಾರತದಲ್ಲಿ ನಿವೃತ್ತಿಯಾಗಿ ನೆಮ್ಮದಿಯಿಂದ ಇರಲು ಮೂರೂವರೆ ಕೋಟಿ ರೂ ಸೇವಿಂಗ್ಸ್ ಇರಬೇಕು ಎಂದು ಎಚ್​ಎಸ್​ಬಿಸಿ ವರದಿಯೊಂದರಲ್ಲಿ ಹೇಳಲಾಗಿದೆ. ಬೇರೆ ಬೇರೆ ದೇಶಗಳಲ್ಲಿ ಆಯಾ ಜೀವನವೆಚ್ಚ ಮತ್ತು ಜೀವನಶೈಲಿಗೆ ಅನುಗುಣವಾಗಿ ಸೇವಿಂಗ್ಸ್ ಅವಶ್ಯಕತೆ ಬದಲಾಗುತ್ತದೆ. ಅಮೆರಿಕದಲ್ಲಿ 15 ಲಕ್ಷ ಡಾಲರ್, ಚೀನಾದಲ್ಲಿ 10 ಲಕ್ಷ ಡಾಲರ್ ಇದ್ದರೆ ನಿವೃತ್ತರಾಗಿ ನೆಮ್ಮದಿಯಾಗಿರಬಹುದು.

ಭಾರತದಲ್ಲಿ ನಿವೃತ್ತಿ ಬದುಕು ನಡೆಸಲು ಎಷ್ಟು ಹಣ ಇರಬೇಕು ಗೊತ್ತಾ? ಎಚ್​ಎಸ್​ಬಿಸಿ ವರದಿಯಲ್ಲಿದೆ ಅಚ್ಚರಿ ಅಂಶ
ಹಣ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 30, 2025 | 5:42 PM

Share

ನವದೆಹಲಿ, ಜುಲೈ 30: ಭಾರತದಲ್ಲಿ ದುರ್ದೈವವಶಾತ್ ಹೆಚ್ಚಿನ ಜನರ ನಿವೃತ್ತಿ ಕಾಲದ ಬಗ್ಗೆ ಮುಂದಾಲೋಚನೆಯೇ ಮಾಡಿರುವುದಿಲ್ಲ. 50-55 ವರ್ಷ ಗಡಿ ದಾಟಿದ ಬಳಿಕ ರಿಟೈರ್ಮೆಂಟ್ ಲೈಫ್ (retirement life) ಬಗ್ಗೆ ಯೋಚಿಸುವುದುಂಟು. ವೃತ್ತಿ ಜೀವನದ ಆರಂಭದಿಂದಲೇ ಒಂದಷ್ಟು ಸೇವಿಂಗ್ಸ್ (savings) ಅನ್ನು ನಿವೃತ್ತಿಗೆಂದು ತೆಗೆದಿರಿಸಬಹುದಿತ್ತಲ್ಲಾ ಎಂದು ಕೊರಗಬಹುದು. ಅಷ್ಟಕ್ಕೂ ನಿವೃತ್ತಿಯಾದಾಗ ಎಷ್ಟು ಹಣ ಹೊಂದಿರಬೇಕು ಎನ್ನುವ ಸಹಜ ಜಿಜ್ಞಾಸೆ ಪ್ರತಿಯೊಬ್ಬರಿಗೂ ಬರುತ್ತದೆ. ಹಾಗಾದರೆ, ಆರಾಮವಾಗಿ ರಿಟೈರ್ಡ್ ಲೈಫ್ ಕಳೆಯಲು ಎಷ್ಟು ಹಣ ಬೇಕು? ಎಚ್​ಎಸ್​ಬಿಸಿ ವರದಿಯೊಂದರ ಪ್ರಕಾರ ಭಾರತದಲ್ಲಿ ಪ್ರಸಕ್ತ ಸುರಕ್ಷಿತ ನಿವೃತ್ತಿಗೆ 3.5 ಕೋಟಿ ರೂ ಬೇಕಂತೆ.

ಮೂರೂವರೆ ಕೋಟಿ ರೂ ಅಂದರೆ ಸುಮಾರು 4 ಲಕ್ಷ ಡಾಲರ್. ಇದು ಭಾರತೀಯರಿಗೆ ನಿವೃತ್ತಿ ನಂತರ ಬದುಕಲು ಬೇಕಾಗಬಹುದಾದ ಹಣ. ಹಣದುಬ್ಬರ, ಅಧಿಕ ಆಯಸ್ಸು ಇತ್ಯಾದಿ ವಿವಿಧ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಈ ಅಂಕಿಯನ್ನು ನೀಡಲಾಗಿದೆ. ಇದು ಸರಾಸರಿ ಮೊತ್ತ. ವ್ಯಕ್ತಿಯ ಜೀವನಶೈಲಿ ಹಾಗೂ ನಿರ್ದಿಷ್ಟ ಪ್ರದೇಶದ ಜೀವನವೆಚ್ಚಕ್ಕೆ ಅನುಗುಣವಾಗಿ ತುಸು ಏರುಪೇರಾಗಬಹುದು.

ಇದನ್ನೂ ಓದಿ: 1 ಲಕ್ಷ ರೂ, 30 ವರ್ಷ ಹೂಡಿಕೆ, ಕೋಟಿ ರೂಗೂ ಅಧಿಕ ರಿಟರ್ನ್; ಇದು ಈ ಐದು ಫಂಡ್​ಗಳ ಮ್ಯಾಜಿಕ್

ಹಾಗಾದರೆ, ಬೇರೆ ದೇಶಗಳಲ್ಲಿ ರಿಟೈರ್ಮೆಂಟ್ ಲೈಫ್​ಗೆ ಎಷ್ಟು ಬೇಕಾಗುತ್ತದೆ? ಎಚ್​ಎಸ್​ಬಿಸಿ ವರದಿ ಪ್ರಕಾರ ಸಿಂಗಾಪುರದಲ್ಲಿ ಜನರು ರಿಟೈರ್ ಆದ ಬಳಿಕ ಆರಾಮವಾಗಿ ಬದುಕಲು 1.39 ಮಿಲಿಯನ್ ಡಾಲರ್ ಬೇಕಾಗುತ್ತದೆ. ಹಾಂಕಾಂಗ್​ನಲ್ಲಾದರೆ 1.1 ಮಿಲಿಯನ್ ಡಾಲರ್, ಅಮೆರಿಕದಲ್ಲಾದರೆ 1.57 ಮಿಲಿಯನ್ ಡಾಲರ್, ಚೀನಾದಲ್ಲಾದರೆ 1.09 ಮಿಲಿಯನ್ ಡಾಲರ್ ಬೇಕಾಗುತ್ತದೆ ಎಂದು ಹೇಳಲಾಗಿದೆ.

ಭಾರತೀಯರು ಮೂರೂವರೆ ಕೋಟಿ ರೂ ಹೊಂದಿಸಲು ಕಷ್ಟವಾ?

ಎಚ್​ಎಸ್​ಬಿಸಿ ವರದಿ ಕೆಲ ಕುತೂಹಲಕಾರಿ ಅಂಶಗಳನ್ನು ಎತ್ತಿತೋರಿಸಿದೆ. ಭಾರತೀಯರು ರಿಟೈರ್ಮೆಂಟ್​ಗಾಗಿ ದೂರಾಲೋಚನೆ ಮಾಡುವುದು ಬಹಳ ಕಡಿಮೆ. ಪ್ರವಾಸ, ಶಿಕ್ಷಣ, ಮನೆ, ಜಮೀನು, ಮದುವೆ ಇತ್ಯಾದಿ ಕಾರ್ಯಗಳಿಗೆ ಎಲ್ಲಾ ಸೇವಿಂಗ್ಸ್ ಬಳಸುತ್ತಾರೆ. ರಿಟೈರ್ಮೆಂಟ್ ಬಗ್ಗೆ ಯೋಚಿಸುವುದಿಲ್ಲ.

ಇದನ್ನೂ ಓದಿ: ಪೋಸ್ಟ್ ಆಫೀಸ್​ನ SCSS ಸ್ಕೀಮ್; ತಿಂಗಳಿಗೆ 20,500 ರೂವರೆಗೆ ಆದಾಯ ಗಳಿಸಿ

ಮೂವತ್ತರ ವಯಸ್ಸಿನಿಂದಲೇ ರಿಟೈರ್ಮೆಂಟ್ ಪ್ಲಾನಿಂಗ್ ಮಾಡುತ್ತಿರುವವರು ಮತ್ತು ಆ ನಿಟ್ಟಿನಲ್ಲಿ ಹೂಡಿಕೆ ಮತ್ತು ಸೇವಿಂಗ್ಸ್ ಮಾಡುತ್ತಿರುವವರು ತಮ್ಮ ಗುರಿಯಲ್ಲಿ ಸಫಲರಾಗುವ ಸಾಧ್ಯತೆ ಇದೆ. ತಡವಾಗಿ ರಿಟೈರ್ಮೆಂಟ್ ಪ್ಲಾನ್ ಮಾಡುತ್ತಿರುವವರಿಗೆ ಗುರಿ ಮುಟ್ಟುವುದು ಕಷ್ಟವಾಗಬಹುದು. ಅದರ ಪರಿಣಾಮವಾಗಿ, ನಿವೃತ್ತಿ ನಂತರದ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಮನೆಯಲ್ಲಿ ಆಲೋವೆರಾ ಇದ್ದರೆ ಏನೆಲ್ಲಾ ಲಾಭ?
ಮನೆಯಲ್ಲಿ ಆಲೋವೆರಾ ಇದ್ದರೆ ಏನೆಲ್ಲಾ ಲಾಭ?