AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Investment: 20-35 ವರ್ಷ ವಯಸ್ಸಿನಲ್ಲಿ ಜನರು ಮಾಡುವ ಪ್ರಮುಖ ಹಣಕಾಸು ತಪ್ಪುಗಳಿವು…

Investing Mistakes People Make In Their 20s And 30s: ವೃತ್ತಿ ಬದುಕು ಆರಂಭದಿಂದ ಹಿಡಿದು ಮಧ್ಯಮ ಹಂತದವರೆಗಿನ ವಯಸ್ಸಿನಲ್ಲಿ ಜನರು ಹೂಡಿಕೆ ಬಗ್ಗೆ ಗಂಭೀರವಾಗಿರುವುದಿಲ್ಲ. ಜೀವನದ ಇತರ ಅಗತ್ಯಗಳನ್ನು ಪೂರೈಸಲಷ್ಟೇ ಗುರಿ ಇರುತ್ತದೆ. ಈ 20ರಿಂದ 40 ವರ್ಷದವರೆಗಿನ ವಯಸ್ಸಿನಲ್ಲಿ ತಪ್ಪು ಹಣಕಾಸು ನಿರ್ಧಾರಗಳು ದೀರ್ಘಾವಧಿ ಬಾಧಿಸಬಹುದು.

Investment: 20-35 ವರ್ಷ ವಯಸ್ಸಿನಲ್ಲಿ ಜನರು ಮಾಡುವ ಪ್ರಮುಖ ಹಣಕಾಸು ತಪ್ಪುಗಳಿವು...
ಹೂಡಿಕೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 07, 2025 | 2:10 PM

Share

ಹೊಸದಾಗಿ ಕೆಲಸಕ್ಕೆ ಸೇರಿದಾಗಿನಿಂದ ಹಿಡಿದು ಮೊದಲಿನ 15-20 ವರ್ಷ ಬಹಳ ಮುಖ್ಯ. ವೃತ್ತಿಜೀವನದ ಗತಿ ಹೇಗೆ ಸಾಗುತ್ತದೆ ಎಂದು ನಿರ್ಧಾರವಾಗುವ ಕಾಲಘಟ್ಟ ಅದು. ನಿಮ್ಮ ಹೂಡಿಕೆ ವಿಚಾರಕ್ಕೂ ಇದು ಅನ್ವಯ ಆಗುತ್ತದೆ. ನೀವು ಎಷ್ಟು ಬೇಗ ಹೂಡಿಕೆ ಆರಂಭಿಸುತ್ತೀರೋ ಅಷ್ಟು ನಿಮ್ಮ ಹಣಕಾಸು ಜೀವನದ ಗತಿ ಉತ್ತಮ ಲಯದಲ್ಲಿರುತ್ತದೆ. ಆದರೆ, ಈ ವಯಸ್ಸಿನಲ್ಲಿ ತಪ್ಪು ಮಾಡುವುದು ಬಹಳ ಸಹಜ. ಹಣಕಾಸು ಜಾಗೃತಿ ಇಲ್ಲದೇ ಹೋದರೆ ಈ ತಪ್ಪುಗಳು (investment mistakes) ಹೊಸ ಪ್ರಮಾದಗಳಿಗೆ ಎಡೆ ಮಾಡಿಕೊಡಬಹುದು. ನಿಮಗೆ ತಪ್ಪಿನ ಅರಿವಾಗುವಷ್ಟರಲ್ಲಿ ಕಾಲ ಮಿಂಚಿರುತ್ತದೆ.

ಟೈಮ್ ಇದೆ, ಮಾಡಿದರಾಯಿತು ಎನ್ನಬೇಡಿ

ಹೊಸದಾಗಿ ಕೆಲಸಕ್ಕೆ ಸೇರುತ್ತಿರುವವರಲ್ಲಿ ಸಾಮಾನ್ಯವಾಗಿ ವಿದ್ಯಾರ್ಥಿ ಸಾಲ, ಪ್ರವಾಸ ವೆಚ್ಚ, ಮದುವೆ ವೆಚ್ಚ ಇತ್ಯಾದಿ ಖರ್ಚುಗಳು ಹೆಚ್ಚಿರುತ್ತವೆ. ಈ ಮಧ್ಯೆ ಹೂಡಿಕೆ ಬಗ್ಗೆ ಆಲೋಚನೆ ಮಾಡುವವರು ತೀರಾ ಕಡಿಮೆ. ಆದರೆ, ನೀವು ಎಷ್ಟು ಬೇಗ ಇನ್ವೆಸ್ಟ್​​ಮೆಂಟ್ ಆರಂಭಿಸುತ್ತೀರೋ ಅಷ್ಟು ಒಳ್ಳೆಯದು. ನಿಮ್ಮ ಗಳಿಕೆಯಲ್ಲಿ ಸಣ್ಣ ಮೊತ್ತದ್ದಾದರೂ ಸರಿ, ಎಷ್ಟು ಸಾಧ್ಯವೋ ಅಷ್ಟು ಹಣವನ್ನು ಉಳಿಸಿ ಅದನ್ನು ಹೂಡಿಕೆ ಮಾಡುವ ಪ್ರವೃತ್ತಿ ರೂಢಿಸಿಕೊಳ್ಳಬೇಕು. ತಿಂಗಳಿಗೆ 500ರಿಂದ ಹಿಡಿದು 5,000 ರೂವರೆಗಿನ ಯಾವುದಾದರೂ ಎಸ್​​ಐಪಿ ಮೂಲಕ ಮ್ಯುಚುವಲ್ ಫಂಡ್​​ನಲ್ಲಿ ಹೂಡಿಕೆ ಮಾಡಿರಿ.

ಇದನ್ನೂ ಓದಿ: 6 ತಿಂಗಳಿಂದ 1 ವರ್ಷದವರೆಗೆ ಹೂಡಿಕೆ ಮಾಡಲು ಯಾವ ಪ್ಲಾನ್​​ಗಳು ಬೆಸ್ಟ್?

ಇದನ್ನೂ ಓದಿ
Image
ಅಲ್ಪಾವಧಿಗೆ ಹೂಡಿಕೆ ಮಾಡುವ ಆಯ್ಕೆಗಳ್ಯಾವುವು?
Image
ಷೇರುಪೇಟೆಯಲ್ಲಿ ನಿಮ್ಮ ಹೂಡಿಕೆ ಗೆಲ್ಲಬೇಕಾ? ಈ ಅಂಶ ಗಮನಿಸಿ
Image
ಸ್ಮಾಲ್ ಸೇವಿಂಗ್ಸ್ ಸ್ಕೀಮ್; ಬಡ್ಡಿದರದಲ್ಲಿ ಇಳಿಕೆ ಇಲ್ಲ
Image
ಮ್ಯುಚುವಲ್ ಫಂಡ್ ಎನ್​​ಎವಿ ಮೌಲ್ಯ ಬದಲಾಗೋದು ಹೇಗೆ?

ರಿಸ್ಕ್ ತೆಗೆದುಕೊಳ್ಳುವ ವಯಸ್ಸೆಂದು ಬಂಡೆಗೆ ತಲೆಚೆಚ್ಚಬೇಡಿ…

ಹೂಡಿಕೆ ಮಾಡುವುದು ಒಂದು ಕಲೆ. ಬಹಳ ಜನ ಯುವಕರು ತಮ್ಮೆಲ್ಲಾ ಹೂಡಿಕೆಯನ್ನು ಒಂದೇ ಸ್ಥಳಕ್ಕೆ ಹಾಕಿಬಿಡುತ್ತಾರೆ. ಎಲ್ಲವನ್ನೂ ಷೇರುಗಳಿಗೆ ಹಾಕುವುದು, ಅಥವಾ ರಿಯಲ್ ಎಸ್ಟೇಟ್​​ಗೆ ಹಾಕುವುದು, ಅಥವಾ ಕ್ರಿಪ್ಟೋಗೆ ಹಾಕುವುದು, ಹೀಗೆ ಒಂದು ಅಸೆಟ್ ಕ್ಲಾಸ್​ನಲ್ಲೇ ಎಲ್ಲ ಹಣ ಹಾಕುವುದು ತಪ್ಪು. ಷೇರು, ಡೆಟ್, ಚಿನ್ನ, ರಿಯಲ್ ಎಸ್ಟೇಟ್ ಇತ್ಯಾದಿ ಬೇರೆ ಬೇರೆ ಅಸೆಟ್​ಗಳಲ್ಲಿ ನಿಮ್ಮ ಹೂಡಿಕೆ ಹರಡಿರಬೇಕು. ಹೀಗಿದ್ದಾಗ ನಿಮ್ಮ ಹೂಡಿಕೆಯು ಸಮತೋಲನದ ರಿಟರ್ನ್ಸ್ ನೀಡಬಲ್ಲುದು.

ಉದ್ದೇಶ ಇಲ್ಲದ ಹೂಡಿಕೆ…

ಹೂಡಿಕೆ ಮೊತ್ತ ಹೆಚ್ಚಿದಂತೆ ನೀವು ಯಾವ ಉದ್ದೇಶಕ್ಕೆ ಹೂಡಿಕೆ ಮಾಡಲಾಗುತ್ತದೆ ಎಂದು ವರ್ಗೀಕರಿಸಬೇಕು. ಕಿರು ಅವಧಿ, ಮಧ್ಯಮ ಅವಧಿ ಮತ್ತು ದೀರ್ಘಾವಧಿ ಹೂಡಿಕೆ ಎಂದು ವರ್ಗೀಕರಿಸಿ, ಅದಕ್ಕೆ ತಕ್ಕದಾಗಿ ಪ್ರತ್ಯೇಕವಾಗಿ ಹೂಡಿಕೆಗಳನ್ನು ಮಾಡುವುದನ್ನು ರೂಢಿಸಿಕೊಳ್ಳಿ.

ಎಮರ್ಜೆನ್ಸಿ ಫಂಡ್ ಇಲ್ಲದೇ ಇರುವುದು…

ಬಹಳ ಜನರು ಎಮರ್ಜೆನ್ಸಿ ಫಂಡ್ ಅಥವಾ ಬ್ಯಾಕಪ್ ಫಂಡ್ ಇಲ್ಲದೇ ಅಗ್ರೆಸಿವ್ ಆಗಿ ಹೂಡಿಕೆ ಮಾಡುತ್ತಾರೆ. ಇದು ತಪ್ಪು. ಯಾವುದಾದರೂ ತುರ್ತು ಸಂದರ್ಭ ಬಂದಾಗ ವೆಚ್ಚಕ್ಕಾಗಿ ಹೂಡಿಕೆಯ ಹಣವನ್ನು ತೆಗೆಯುವುದು ಸಮಂಜಸ ಅಲ್ಲ. ಅದರ ಬದಲು ತುರ್ತು ವೆಚ್ಚಕ್ಕೆಂದು ಪ್ರತ್ಯೇಕವಾಗಿ ಎತ್ತಿ ಇಟ್ಟಿರಬೇಕು. ಹೂಡಿಕೆ, ದೈನಂದಿನ ವೆಚ್ಚ ಇತ್ಯಾದಿ ನಿಮ್ಮ ಮಾಸಿಕ ವೆಚ್ಚದ ಆರು ಪಟ್ಟು ಹಣವನ್ನು ಲಿಕ್ವಿಡ್ ಫಂಡ್ ಅಥವಾ ಎಫ್​​ಡಿಗಳಲ್ಲಿ ಇಡುವುದು ಉತ್ತಮ.

ಇದನ್ನೂ ಓದಿ: ಷೇರುಗಳಲ್ಲಿ ಹೆಚ್ಚು ವರ್ಷ ಹಣ ಇಟ್ಟರೆ ಹೆಚ್ಚು ಫಲವಾ? ಇದೆಲ್ಲಾ ಮಿಥ್ ಎನ್ನುತ್ತಾರೆ ಸಮೀರ್ ಅರೋರಾ

ತುಂಬಾ ತಡವಾಯ್ತು ಎಂದು ಹೂಡಿಕೆ ಮಾಡದೇ ಇರಬೇಡಿ…

ಹಲವರು ಮದುವೆಯಾಗಿ ಮಕ್ಕಳಾದ ಬಳಿಕ ಹೂಡಿಕೆ ಬಗ್ಗೆ ಆಲೋಚಿಸುವುದುಂಟು. ಇಷ್ಟು ತಡವಾಯಿತು, ಹೇಗೆ ಹೂಡಿಕೆ ಮಾಡುವುದು ಎಂದನಿಸುವ ವಯಸ್ಸು ಅದು. ನೀವು ಬಹಳ ಮುಂಚೆಯೇ ಹೂಡಿಕೆ ಮಾಡಬೇಕಿತ್ತು ಎಂಬುದು ಹೌದು. ಆದರೆ, ತಡವಾಯಿತು ಎಂದು ಹೂಡಿಕೆ ಆರಂಭಿಸುವುದನ್ನು ನಿಲ್ಲಿಸುವುದು ತಪ್ಪು. ಈಗಿಂದೀಗಲೇ ಪ್ಲಾನ್ ಮಾಡಿ ಹೂಡಿಕೆ ಶುರು ಮಾಡಿ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ