Investment: 6 ತಿಂಗಳಿಂದ 1 ವರ್ಷದವರೆಗೆ ಹೂಡಿಕೆ ಮಾಡಲು ಯಾವ ಪ್ಲಾನ್ಗಳು ಬೆಸ್ಟ್?
Short term investment options: ಮಕ್ಕಳ ಫೀಸ್, ಇನ್ಷೂರೆನ್ಸ್ ಪ್ರೀಮಿಯಮ್ ಇತ್ಯಾದಿ ಅಗತ್ಯಗಳಿಗೆ ಬೇಕಾದ ಹಣಕ್ಕಾಗಿ ಅಲ್ಪಾವಧಿ ಹೂಡಿಕೆ ಸೂಕ್ತ. ಇಂಥ ಅಲ್ಪಾವಧಿ ಹೂಡಿಕೆ ಆಯ್ಕೆಗಳು ಹಲವಿವೆ. ಆರ್ಡಿಯಿಂದ ಹಿಡಿದು ಸ್ಮಾಲ್ ಸೇವಿಂಗ್ಸ್ ಬ್ಯಾಂಕುಗಳಲ್ಲಿ ಉಳಿತಾಯ ಖಾತೆಯವರೆಗೂ ನಿಮಗೆ ಹೂಡಿಕೆ ಆಯ್ಕೆಗಳುಂಟು.

ಇವತ್ತು ಹಣ ಕೂಡಿಡುವುದು ಬಹಳ ಅಗತ್ಯ. ಕೂಡಿಟ್ಟ ಹಣವನ್ನು ಎಲ್ಲಾದರೂ ಹೂಡಿಕೆ ಮಾಡಿ ಬೆಳೆಸುವುದೂ ಕೂಡ ಮುಖ್ಯ. ನೀವು ದೀರ್ಘಾವಧಿ ದೃಷ್ಟಿಯಿಂದ ಹೂಡಿಕೆ ಮಾಡುವುದು ಒಳ್ಳೆಯ ಯೋಜನೆ. ಆದರೆ, ದಿಢೀರ್ ಎಮರ್ಜೆನ್ಸಿ ವೆಚ್ಚದ ಪರಿಸ್ಥಿತಿ ಬಂದು ಬಿಡಬಹುದು. ವರ್ಷದ ಇನ್ಷೂರೆನ್ಸ್ ಪ್ರೀಮಿಯಮ್ಗಳನ್ನು ಕಟ್ಟಬೇಕಾಗಬಹುದು. ಮಕ್ಕಳ ಶಾಲೆಯ ಫೀಸ್ ಕಟ್ಟಬೇಕಾಗಬಹುದು. ಹೀಗೆ ಒಂದು ವರ್ಷಕ್ಕೊಮ್ಮೆಯೋ ಅಥವಾ 6 ತಿಂಗಳಿಗೊಮ್ಮೆಯೋ ವೆಚ್ಚ ಬರಬಹುದು. ನೀವು ದೀರ್ಘಾವಧಿಗೆಂದು ಮಾಡಿದ ಹೂಡಿಕೆಯನ್ನು ಇಂಥ ಅಗತ್ಯಗಳಿಗೆ ಹಿಂಪಡೆಯುವುದು ಸೂಕ್ತ ಎನಿಸುವುದಿಲ್ಲ. ಹೀಗಾಗಿ, ಅಲ್ಪಾವಧಿಗೆ ಸೂಕ್ತವಾಗಿರುವ ಯೋಜನೆಗಳಲ್ಲಿ (short term investment plan) ನಿರ್ದಿಷ್ಟ ಹೂಡಿಕೆಗಳನ್ನು ಮಾಡಬಹುದು. ಅಂಥ ಕೆಲ ಪ್ಲಾನ್ಗಳ ವಿವರ ಇಲ್ಲಿದೆ…
ಫಿಕ್ಸೆಡ್ ಡೆಪಾಸಿಟ್ನಲ್ಲಿ ಹೂಡಿಕೆ
ಇದು ಬಹಳ ಸಾಮಾನ್ಯವಾಗಿ ಬಳಕೆಯಲ್ಲಿರುವ ಠೇವಣಿ ಸ್ಕೀಮ್. ಒಂದು ವಾರದಿಂದ ಆರಂಭವಾಗಿ 10 ವರ್ಷಗಳವರೆಗೆ ವಿವಿಧ ಅವಧಿಗಳಿಗೆ ಠೇವಣಿ ಇಡಲು ಆಯ್ಕೆಗಳಿವೆ. ನಿಶ್ಚಿತ ಠೇವಣಿ ಪ್ಲಾನ್ಗಳಲ್ಲಿ ಬಡ್ಡಿದರ ಶೇ. 5ರಿಂದ 9ರವರೆಗೂ ಇರುತ್ತದೆ.
ಇದನ್ನೂ ಓದಿ: ಷೇರುಗಳಲ್ಲಿ ಹೆಚ್ಚು ವರ್ಷ ಹಣ ಇಟ್ಟರೆ ಹೆಚ್ಚು ಫಲವಾ? ಇದೆಲ್ಲಾ ಮಿಥ್ ಎನ್ನುತ್ತಾರೆ ಸಮೀರ್ ಅರೋರಾ
ರೆಕರಿಂಗ್ ಡೆಪಾಸಿಟ್ನಲ್ಲಿ ಹೂಡಿಕೆ
ನಿಮ್ಮ ಉಳಿತಾಯ ಹಣವನ್ನು ಹೂಡಿಕೆ ಮಾಡಲು ರೆಕರಿಂಗ್ ಡೆಪಾಸಿಟ್ ಬಹಳ ಒಳ್ಳೆಯ ಆಯ್ಕೆ. ಎಸ್ಐಪಿ ರೀತಿಯಲ್ಲಿ ನೀವು ಪ್ರತೀ ತಿಂಗಳು ಹಣ ತುಂಬಿಸುತ್ತಾ ಹೋಗಬಹುದು. ಇದೂ ಕೂಡ 6 ತಿಂಗಳಿಂದ ಹಿಡಿದು 2 ವರ್ಷದವರೆಗಿನ ಅವಧಿಗಳಿಗೆ ಪ್ಲಾನ್ಗಳನ್ನು ಹೊಂದಿರುತ್ತದೆ. ಇದಕ್ಕೆ ಸಿಗುವ ಬಡ್ಡಿದರ ಶೇ. 5.5ರಿಂದ 7ರವರೆಗೂ ಇದೆ.
ಲಿಕ್ವಿಡ್ ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ
ಮ್ಯೂಚುವಲ್ ಫಂಡ್ಗಳಲ್ಲಿ ನೀವು ನಿಗದಿ ಅವಧಿಗೆ ಮುಂಚೆ ವಿತ್ಡ್ರಾ ಮಾಡಿದರೆ ಎಕ್ಸಿಡ್ ಲೋಡ್ ಆಗಿ ನಿರ್ದಿಷ್ಟ ಶುಲ್ಕ ತೆರಬೇಕಾಗುತ್ತದೆ. ಅದೆ ನೀವು ಲಿಕ್ವಿಡ್ ಮ್ಯುಚುವಲ್ ಫಂಡ್ಗಳನ್ನು ಆಯ್ಕೆ ಮಾಡಿಕೊಂಡರೆ ಎಕ್ಸಿಡ್ ಲೋಡ್ ಇರುವುದಿಲ್ಲ. ಯಾವಾಗ ಬೇಕಾದರೂ ನೀವು ಹಣ ಹಿಂಪಡೆಯಬಹುದು. ಇಂಥ ಫಂಡ್ಗಳು ಟ್ರೆಷರಿ ಬಿಲ್, ಬಾಂಡ್ಗಳ ಮೇಲೆ ಹೂಡಿಕೆ ಮಾಡುತ್ತವೆ. ವರ್ಷಕ್ಕೆ ಸುಮಾರು ಶೇ. 6ರಿಂದ 7ರಷ್ಟು ರಿಟರ್ನ್ ನಿರೀಕ್ಷಿಸಬಹುದು.
ಇದನ್ನೂ ಓದಿ: ಪೋಸ್ಟ್ ಆಫೀಸ್ ಅಪ್ಡೇಟ್; ಆರ್ಬಿಐ ದರ ಇಳಿಸಿದರೂ ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿಯಲ್ಲಿ ಇಲ್ಲ ಇಳಿಕೆ
ಕಾರ್ಪೊರೇಟ್ ಬಾಂಡ್, ಸರ್ಕಾರಿ ಬಾಂಡ್ಗಳಲ್ಲಿ ಹೂಡಿಕೆ ಮಾಡಬಹುದು. ಇವೂ ಕೂಡ ಒಂದು ವರ್ಷದ ಮೆಚ್ಯುರಿಟಿ ಆಯ್ಕೆಗಳಿರುತ್ತವೆ. ಕೆಲ ಸ್ಮಾಲ್ ಫೈನಾನ್ಸ್ ಬ್ಯಾಂಕುಗಳಲ್ಲಿ ನೀವು ಎಸ್ಬಿ ಖಾತೆ ತೆರೆದು ಅದರಲ್ಲಿ ಹಾಗೇ ಹಣ ಬಿಟ್ಟರೂ ಎಫ್ಡಿಗೆ ಸಿಗುವಷ್ಟು ಬಡ್ಡಿ ಸಿಗುತ್ತದೆ. ಪೋಸ್ಟ್ ಬ್ಯಾಂಕ್ನ ಆರ್ಡಿ, ಟರ್ಮ್ ಡೆಪಾಸಿಟ್ ಪ್ಲಾನ್ಗಳೂ ಲಭ್ಯ ಉಂಟು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




