ಪೋಸ್ಟ್ ಆಫೀಸ್ ಅಪ್ಡೇಟ್; ಆರ್ಬಿಐ ದರ ಇಳಿಸಿದರೂ ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿಯಲ್ಲಿ ಇಲ್ಲ ಇಳಿಕೆ
2025-26 July-September quarter, Small savings scheme interest rates: ಜುಲೈನಿಂದ ಸೆಪ್ಟೆಂಬರ್ವರೆಗಿನ ಕ್ವಾರ್ಟರ್ಗೆ ಹಣಕಾಸು ಸಚಿವಾಲಯವು ಸ್ಮಾಲ್ ಸೇವಿಂಗ್ಸ್ ಯೋಜನೆಗಳಿಗೆ ಬಡ್ಡಿದರ ಪ್ರಕಟಿಸಿದೆ. ಹಿಂದಿನ ತ್ರೈಮಾಸಿಕದಲ್ಲಿ ಇದ್ದ ದರಗಳನ್ನೇ ಮುಂದುವರಿಸಲು ನಿರ್ಧರಿಸಲಾಗಿದೆ. ಸುಕನ್ಯ ಸಮೃದ್ಧಿ ಯೋಜನೆಗೆ ಶೇ. 8.2ರ ಬಡ್ಡಿಯೇ ಮುಂದುವರಿಯಲಿದೆ. ಪಿಪಿಎಫ್ಗೆ ಶೇ. 7.1ರಷ್ಟು ಬಡ್ಡಿ ಇರುತ್ತದೆ.

ನವದೆಹಲಿ, ಜೂನ್ 30: ಸರ್ಕಾರದಿಂದ ನಡೆಸಲಾಗುವ ಸಣ್ಣ ಉಳಿತಾಯ ಯೋಜನೆಗಳಿಗೆ (Small Savings schemes) ಮುಂಬರುವ ಕ್ವಾರ್ಟರ್ನಲ್ಲಿ ಈಗಿರುವ ಬಡ್ಡಿಯೇ ಮುಂದುವರಿಯಲಿದೆ. ಈ ಹಣಕಾಸು ವರ್ಷದ ಎರಡನೇ ಕ್ವಾರ್ಟರ್ಗೆ (ಜುಲೈನಿಂದ ಸೆಪ್ಟೆಂಬರ್) ಸರ್ಕಾರ ಬಡ್ಡಿದರ ಪ್ರಕಟಿಸಿದೆ. ಮೊದಲ ಕ್ವಾರ್ಟರ್ನಲ್ಲಿ ಇದ್ದ ದರವನ್ನೇ ಮುಂದುವರಿಸಲು ನಿರ್ಧರಿಸಿದೆ.
ಆರ್ಬಿಐ ರಿಪೋ ದರ (RBI interest rates) ಇಳಿಕೆ ಆದ ಬೆನ್ನಲ್ಲೇ ಬಹುತೇಕ ಬ್ಯಾಂಕುಗಳು ಬಡ್ಡಿದರ ಇಳಿಸಿವೆ. ಪಿಪಿಎಫ್, ಸುಕನ್ಯ ಸಮೃದ್ಧಿ ಯೋಜನೆ ಇತ್ಯಾದಿ ಸ್ಮಾಲ್ ಸೇವಿಂಗ್ಸ್ ಸ್ಕೀಮ್ಗಳಿಗೂ ಬಡ್ಡಿ ದರ ಇಳಿಯಬಹುದು ಎನ್ನುವ ಸುದ್ದಿಗಳು ದಟ್ಟವಾಗಿ ಹಬ್ಬಿದ್ದವು. ಈ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದವರಲ್ಲಿ ಕುತೂಹಲ ಇತ್ತು. ಆದರೆ, ಹಿಂದಿನ ಬಡ್ಡಿದರವನ್ನೇ ಮುಂದುವರಿಸಲು ನಿರ್ಧರಿಸಿರುವುದು ಈ ಹೂಡಿಕೆದಾರರಿಗೆ ನಿರಾಳ ತಂದಿದೆ.
ಇದನ್ನೂ ಓದಿ: ಜುಲೈನಲ್ಲಿ ಆಧಾರ್, ಪ್ಯಾನ್, ಎಟಿಎಂ, ಕ್ರೆಡಿಟ್ ಕಾರ್ಡ್ ಇತ್ಯಾದಿಯಲ್ಲಿ ನಿಯಮ ಬದಲಾವಣೆಗಳಿವೆ, ಗಮನಿಸಿ
ಕಳೆದ ಐದು ತಿಂಗಳಲ್ಲಿ ಆರ್ಬಿಐ 100 ಮೂಲಾಂಕಗಳಷ್ಟು ಬಡ್ಡಿದರ ಇಳಿಸಿದೆ. ಹಲವು ಬ್ಯಾಂಕುಗಳು ಸಾಲದ ದರ ಹಾಗೂ ಠೇವಣಿ ದರಗಳನ್ನು ಇಳಿಸಿವೆ.
2025ರ ಜುಲೈ ಸೆಪ್ಟೆಂಬರ್ ಕ್ವಾರ್ಟರ್ಗೆ ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರ
- ಸುಕನ್ಯ ಸಮೃದ್ಧಿ ಯೋಜನೆ (ಎಸ್ಎಸ್ವೈ ಅಕೌಂಟ್): ಶೇ. 8.2ರ ವಾರ್ಷಿಕ ಬಡ್ಡಿ
- ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್): ಶೇ. 7.1 ಬಡ್ಡಿ
- ಕಿಸಾನ್ ವಿಕಾಸ್ ಪತ್ರ (ಕೆವಿಸಿ): ಶೇ. 7.5 ಬಡ್ಡಿ
- ರಾಷ್ಟ್ರೀಯ ಉಳಿತಾಯ ಪತ್ರ (ಎನ್ಎಸ್ಸಿ): ಶೇ. 7.7 ಬಡ್ಡಿ
- ಮಾಸಿಕ ಆದಾಯ ಯೋಜನೆ: ಶೇ. 7.4 ಬಡ್ಡಿ
- ಮಾಸಿಕ ಆದಾಯ ಯೋಜನೆ: ಶೇ. 7.4 ಬಡ್ಡಿ
- ಪೋಸ್ಟ್ ಆಫೀಸ್ 3 ವರ್ಷದ ಠೇವಣಿ: ಶೇ. 7.1 ಬಡ್ಡಿ
- ಪೋಸ್ಟ್ ಆಫೀಸ್ ಸೇವಿಂಗ್ಸ್ ಡೆಪಾಸಿಟ್: ಶೇ. 4 ಬಡ್ಡಿ
ಇದನ್ನೂ ಓದಿ: ಫಿಕ್ಸೆಡ್ ಡೆಪಾಸಿಟ್ಗೆ ಟಿಡಿಎಸ್ ಕಡಿತ ಇರುತ್ತಾ? ಅದನ್ನು ತಪ್ಪಿಸಲು ಏನು ಮಾಡಬೇಕು? ಇಲ್ಲಿದೆ ಡೀಟೇಲ್ಸ್
ಈ ಮೇಲಿನ ಎಲ್ಲಾ ಸ್ಕೀಮ್ಗಳು ಅಂಚೆ ಕಚೇರಿಯಲ್ಲಿ ಲಭ್ಯ ಇವೆ. ಪಿಪಿಎಫ್, ಎಸ್ಎಸ್ವೈ ಯೋಜನೆಗಳನ್ನು ನಿಯೋಜಿತ ಬ್ಯಾಂಕುಗಳಲ್ಲಿ ಮಾಡಿಸಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




