AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮ್ಯೂಚುವಲ್ ಫಂಡ್ ಹೂಡಿಕೆದಾರರೆ ಗಮನಿಸಿ… ಅದರ ಎನ್​ಎವಿ ಎಂದರೇನು? ಲೆಕ್ಕಾಚಾರ ಹೇಗೆ? ಇಲ್ಲಿದೆ ಮಾಹಿತಿ

Explainer on Mutual Fund NAV price: ಮ್ಯುಚುವಲ್ ಫಂಡ್​ನ ಒಂದು ಯುನಿಟ್​ನ ಬೆಲೆಯನ್ನು ಎನ್​​​ಎವಿ ಎಂದು ಕರೆಯಲಾಗುವುದು. ಎನ್​​ಎವಿ ಎಂದರೆ ನೆಟ್ ಅಸೆಟ್ ವ್ಯಾಲ್ಯೂ. ಫಂಡ್​​ನ ಹೂಡಿಕೆ ಮೌಲ್ಯ ಅದು. ಮ್ಯೂಚುವಲ್ ಫಂಡ್​​ನ ಒಟ್ಟಾರೆ ಹೂಡಿಕೆಯ ಒಟ್ಟು ಮೌಲ್ಯ, ಫಂಡ್ ವೆಚ್ಚ, ಶುಲ್ಕ ಇತ್ಯಾದಿ ಖರ್ಚು, ಒಟ್ಟು ಯುನಿಟ್ ಈ ಮೂರು ಅಂಶಗಳಿರುವ ಸೂತ್ರ ಬಳಸಿ ಎನ್​​ಎವಿ ನಿರ್ಧರಿಸಲಾಗುತ್ತದೆ. ಇದು ಪ್ರತಿ ಟ್ರೇಡಿಂಗ್ ದಿನಾಂತ್ಯದಲ್ಲಿ ನಿರ್ಧಾರ ಆಗುತ್ತದೆ.

ಮ್ಯೂಚುವಲ್ ಫಂಡ್ ಹೂಡಿಕೆದಾರರೆ ಗಮನಿಸಿ... ಅದರ ಎನ್​ಎವಿ ಎಂದರೇನು? ಲೆಕ್ಕಾಚಾರ ಹೇಗೆ? ಇಲ್ಲಿದೆ ಮಾಹಿತಿ
ಮ್ಯೂಚುವಲ್ ಫಂಡ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 30, 2025 | 4:44 PM

Share

ಮ್ಯುಚುವಲ್ ಫಂಡ್​ಗಳಲ್ಲಿ ಹೂಡಿಕೆ ಮಾಡುವಾಗ ನೀವು ಫಂಡ್​​ನ ಎನ್​​ಎವಿಯನ್ನು (Mutual Fund NAV) ಗಮನಿಸಿರಬಹುದು. ಈ ಎನ್​​ಎವಿ ಎಂಬುದು ಫಂಡ್​​ನ ಒಂದು ಯುನಿಟ್​​ನ ಬೆಲೆ. ಯುನಿಟ್​​ಗಳ ಪ್ರಮಾಣದಲ್ಲಿ ನೀವು ಫಂಡ್​ಗಳಲ್ಲಿ ಹೂಡಿಕೆ ಮಾಡುತ್ತೀರಿ. ಬಹಳಷ್ಟು ಜನರು ಮ್ಯೂಚುವಲ್ ಫಂಡ್​​ನ ಎನ್​​ಎವಿಯನ್ನು ಷೇರುಬೆಲೆಗೆ ಹೋಲಿಸುವುದುಂಟು. ಆದರೆ, ಇದು ಅರ್ಧ ಸತ್ಯ ಮಾತ್ರ. ಹೆಚ್ಚು ಬೆಲೆಯ ಎನ್​​ಎವಿ ಇರುವ ಮ್ಯುಚುವಲ್ ಫಂಡ್ ಬಹಳ ದುಬಾರಿ ಎಂದು ಕೆಲವರು ತಪ್ಪಾಗಿ ಭಾವಿಸಬಹುದು.

ಮ್ಯೂಚುವಲ್ ಫಂಡ್ ಎನ್​ಎವಿ ಎಂದರೇನು? ಅದರ ಲೆಕ್ಕಾಚಾರ ಹೇಗೆ?

ಎನ್​​ಎವಿ ಎಂದರೆ ನೆಟ್ ಅಸೆಟ್ ವ್ಯಾಲ್ಯೂ. ಮ್ಯುಚುವಲ್ ಫಂಡ್​​ನ ಒಂದು ಯುನಿಟ್​​ನ ಮೌಲ್ಯ ಅಥವಾ ಬೆಲೆ ಇದು. ಮ್ಯುಚುವಲ್ ಫಂಡ್​​ನ ಎನ್​ಎವಿ ಆ ಫಂಡ್​​ನ ಕಾರ್ಯಸಾಧನೆಯನ್ನು ಪ್ರತಿಬಿಂಬಿಸುತ್ತದೆ. ಎನ್​​ಎವಿ ಎಷ್ಟು ಎಂದು ನಿರ್ಧರಿಸಲು ಒಂದು ಸೂತ್ರ ಇದೆ.

ಮ್ಯುಚುವಲ್ ಫಂಡ್​​ನ ಒಟ್ಟು ಹೂಡಿಕೆ ಮೌಲ್ಯ, ಅದರ ಒಟ್ಟು ವೆಚ್ಚ ಹಾಗು ಹೂಡಿಕೆಯಾಗಿರುವ ಒಟ್ಟು ಯುನಿಟ್​​ಗಳು, ಇವನ್ನು ಇಟ್ಟುಕೊಂಡು ಎನ್​​ಎವಿಯನ್ನು ಲೆಕ್ಕ ಮಾಡಲಾಗುತ್ತದೆ. ಅದರ ಸೂತ್ರ ಈ ಕೆಳಕಂಡಂತೆ ಇದೆ:

ಎನ್​​ಎವಿ = ಒಟ್ಟು ಅಸೆಟ್ – ಒಟ್ಟು ಬಾಧ್ಯತೆ / ಒಟ್ಟು ಯುನಿಟ್​​ಗಳು

ಇದನ್ನೂ ಓದಿ: ಹತ್ತಾರು ಮ್ಯೂಚುವಲ್ ಫಂಡ್​​ಗಳಿಗೆ ಹಣ ಹಾಕಿ ಗೆಲ್ಲುತ್ತೇನೆ ಎನ್ನಲು ಸಾಧ್ಯವಾ? ಅಲ್ಲ ಅಂತಾರೆ ತಜ್ಞರು; ಇಲ್ಲಿದೆ ಹೂಡಿಕೆ ಟ್ರಿಕ್ಸ್

ಇಲ್ಲಿ ಒಟ್ಟು ಮೌಲ್ಯ ಎಂದರೆ ಫಂಡ್ ಮಾಡಿರುವ ವಿವಿಧ ಹೂಡಿಕೆಗಳ ಈಗಿನ ಮಾರುಕಟ್ಟೆ ಮೌಲ್ಯ ಹಾಗೂ ಹೂಡಿಕೆ ಆಗದೇ ಉಳಿದಿರುವ ಹಣ, ಜೊತೆಗೆ ಡಿವಿಡೆಂಡ್, ಬಡ್ಡಿ ಇತ್ಯಾದಿ ಆದಾಯ ಇವೆಲ್ಲವುಗಳ ಒಟ್ಟು ಮೊತ್ತವೇ ಒಟ್ಟಾರೆ ಅಸೆಟ್ಸ್ ಎನಿಸುತ್ತದೆ.

ಬಾಧ್ಯತೆಗಳಲ್ಲಿ, ಫಂಡ್ ನಿರ್ವಹಿಸಲು ಆಗುವ ವೆಚ್ಚ, ಶುಲ್ಕ ಮತ್ತಿತರ ಪಾವತಿಗಳು ಒಳಗೊಂಡಿರುತ್ತವೆ.

ಉದಾಹರಣೆ ನೋಡುವುದಾದರೆ, ಒಂದು ಮ್ಯುಚುವಲ್ ಫಂಡ್ 5 ಕೋಟಿ ಯುನಿಟ್​​ಗಳನ್ನು ಬಿಡುಗಡೆ ಮಾಡಿದೆ ಎಂದಿಟ್ಟುಕೊಳ್ಳಿ. ಈ ಫಂಡ್ ಒಟ್ಟಾರೆ 200 ಕೋಟಿ ರೂನಷ್ಟು ಷೇರು, ಬಾಂಡ್ ಇತ್ಯಾದಿ ಕಡೆ ಹೂಡಿಕೆ ಮಾಡಿದೆ ಎಂದು ಭಾವಿಸೋಣ. ಈ ಫಂಡ್​​ನ ವೆಚ್ಚ 10 ಕೋಟಿ ರೂ ಎಂದಿಟ್ಟುಕೊಂಡರೆ, ಫಂಡ್​​ನ ಎನ್​​ಎವಿ ಎಷ್ಟೆಂದು ತಿಳಿಯಲು ಮೇಲಿನ ಸೂತ್ರ ಅನ್ವಯಿಸಬಹುದು.

ಎನ್​​ಎವಿ = (200 ಕೋಟಿ ರು – 10 ಕೋಟಿ ರೂ) / 5 ಕೋಟಿ ರೂ

= 190/5 = 38

ಮೇಲಿನ ನಿದರ್ಶನದಲ್ಲಿ ಮ್ಯುಚುವಲ್ ಫಂಡ್​​ನ ಒಂದು ಎನ್​​ಎವಿ ಮೌಲ್ಯ 38 ರೂ ಆಗುತ್ತದೆ. ಟ್ರೇಡಿಂಗ್ ದಿನದ ಕೊನೆಯಲ್ಲಿ ಎನ್​​ಎವಿ ಅಪ್​ಡೇಟ್ ಆಗುತ್ತದೆ.

ಇದನ್ನೂ ಓದಿ: Credit Score: ಸಂಬಳ ಹೆಚ್ಚಿದರೆ ಕ್ರೆಡಿಟ್ ಸ್ಕೋರ್ ಹೆಚ್ಚುತ್ತಾ? ಅಂಕ ನಿರ್ಧಾರ ಆಗೋದು ಹೇಗೆ?

ನೀವು ಮ್ಯುಚುವಲ್ ಫಂಡ್​​ನಲ್ಲಿ 10,000 ರೂ ಹೂಡಿಕೆ ಮಾಡಿದಾಗ ಎಷ್ಟು ಯುನಿಟ್ ಸಿಗುತ್ತದೆ?

ಮೇಲಿನ ನಿದರ್ಶನ ನೋಡುವುದಾದರೆ, ಆ ಮ್ಯುಚುವಲ್ ಫಂಡ್​​ನ ಎನ್​​ಎವಿ 38 ರೂ ಇದೆ. ಅಂದರೆ, ಇದು ಒಂದು ಯುನಿಟ್​​ನ ಬೆಲೆಯಾಗಿದೆ. ನೀವು ಆ ಫಂಡ್​​ನಲ್ಲಿ 10,000 ರೂ ಹೂಡಿಕೆ ಮಾಡಿದಾಗ 10,000/38 = 263.1579 ಯುನಿಟ್​​ಗಳು ನಿಮಗೆ ಸಿಗುತ್ತದೆ. ನೀವು ಮಾರುವಾಗ ಆ ಎನ್​​ಎವಿ ಮೌಲ್ಯ ಎಷ್ಟು ವ್ಯತ್ಯಾಸ ಪಡೆಯುತ್ತದೆ ಎನ್ನುವುದರ ಮೇಲೆ ನಿಮಗೆ ರಿಟರ್ನ್ ಸಿಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ