AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಷೇರುಗಳಲ್ಲಿ ಹೆಚ್ಚು ವರ್ಷ ಹಣ ಇಟ್ಟರೆ ಹೆಚ್ಚು ಫಲವಾ? ಇದೆಲ್ಲಾ ಮಿಥ್ ಎನ್ನುತ್ತಾರೆ ಸಮೀರ್ ಅರೋರಾ

Finding shares that grow long term is very difficult: ಈಕ್ವಿಟಿ ಮಾರುಕಟ್ಟೆಯಲ್ಲಿ ಯಾವುದೋ ಷೇರು ಖರೀದಿಸಿ ಹಲವು ವರ್ಷ ಹಾಗೇ ಬಿಟ್ಟರೆ ಅದಕ್ಕೆ ಚಿನ್ನದ ಬೆಲೆ ಸಿಗುತ್ತೆ ಎಂದು ಹೇಳುವುದನ್ನು ಕೇಳಿರುತ್ತೇವೆ. ಈ ಅಭಿಪ್ರಾಯ ತಪ್ಪು ಎನ್ನುತ್ತಾರೆ ಹೀಲಿಯೋಸ್ ಕ್ಯಾಪಿಟಲ್ ಸಂಸ್ಥಾಪಕ ಸಮೀರ್ ಅರೋರಾ. ಸಾವಿರಾರು ಷೇರುಗಳಲ್ಲಿ ದೀರ್ಘಾವಧಿಗೆ ಸೂಕ್ತವೆನಿಸುವ ಷೇರುಗಳು ಶೇ. 5ಕ್ಕಿಂತಲೂ ಕಡಿಮೆ. ಅವುಗಳನ್ನು ಪತ್ತೆ ಮಾಡುವುದು ಕಷ್ಟಕರ ಎನ್ನುತ್ತಾರೆ ಸಮೀರ್.

ಷೇರುಗಳಲ್ಲಿ ಹೆಚ್ಚು ವರ್ಷ ಹಣ ಇಟ್ಟರೆ ಹೆಚ್ಚು ಫಲವಾ? ಇದೆಲ್ಲಾ ಮಿಥ್ ಎನ್ನುತ್ತಾರೆ ಸಮೀರ್ ಅರೋರಾ
ಷೇರು ಮಾರುಕಟ್ಟೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 03, 2025 | 12:18 PM

Share

ಅಪ್ಪ ಅಥವಾ ತಾತ ಅದೆಷ್ಟೋ ವರ್ಷಗಳ ಹಿಂದೆ ತೆಗೆದು ಮರೆತು ಬಿಟ್ಟ ಷೇರುಗಳ ಮೌಲ್ಯ ಇವತ್ತು ಲಕ್ಷಾಂತರ, ಕೋಟ್ಯಂತರ ರುಪಾಯಿ ಆಗಿದೆ ಎನ್ನುವಂತಹ ಸುದ್ದಿಗಳು ಆಗಾಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾಗುವುದನ್ನು ನೀವು ಗಮನಿಸಬಹುದು. ಹೂಡಿಕೆಯನ್ನು ದೀರ್ಘಾವಧಿ (long term investment in stocks) ಉಳಿಸಿದ್ದಕ್ಕೆ ಇಷ್ಟು ಮೌಲ್ಯ ಪಡೆಯಲು ಸಾಧ್ಯವಾಯಿತು ಎಂದು ಕೆಲ ತಜ್ಞರು ಹೇಳುವುದೂ ಇದೆ. ಆದರೆ, ಹೀಲಿಯೋಸ್ ಕ್ಯಾಪಿಟಲ್ ಸಂಸ್ಥಾಪಕ ಹಾಗೂ ಫಂಡ್ ಮ್ಯಾನೇಜರ್ ಸಮೀರ್ ಅರೋರಾ (Samir Arora) ಈ ವಾದವನ್ನು ತಳ್ಳಿಹಾಕುತ್ತಾರೆ.

ತನ್ನ ಹಲವು ಸ್ನೇಹಿತರು ಮತ್ತು ಬಂಧುಗಳು ಎಂಬತ್ತು, ತೊಂಬತ್ತರ ದಶಕಗಳಲ್ಲಿ ಷೇರುಗಳನ್ನು ಖರೀದಿಸಿ 35 ವರ್ಷ ಕಾಲ ಇಟ್ಟುಕೊಂಡಿರುವುದುಂಟು. ಇವತ್ತು ಆ ಷೇರುಗಳ ಮೌಲ್ಯ ಬಹುತೇಕ ಶೂನ್ಯ. ಈಕ್ವಿಟಿ ಸೆಕ್ಟರ್​​ನಲ್ಲಿ ಇರುವ ದೊಡ್ಡ ಕಗ್ಗಂಟು ಇದು ಎಂದು ಸಮೀರ್ ಅರೋರಾ ಎಚ್ಚರಿಸುತ್ತಾರೆ.

ಇದನ್ನೂ ಓದಿ: ಮ್ಯೂಚುವಲ್ ಫಂಡ್ ಹೂಡಿಕೆದಾರರೆ ಗಮನಿಸಿ… ಅದರ ಎನ್​ಎವಿ ಎಂದರೇನು? ಲೆಕ್ಕಾಚಾರ ಹೇಗೆ? ಇಲ್ಲಿದೆ ಮಾಹಿತಿ

ದೀರ್ಘಾವಧಿ ಅಲ್ಲ, ಯಾವುದರಲ್ಲಿ ಹೂಡಿಕೆ ಮಾಡುತ್ತೀರಿ ಎಂಬುದು ಮುಖ್ಯ…

ಸಮೀರ್ ಅರೋರಾ ಪ್ರಕಾರ ನೀವು ಯಾವುದೋ ಷೇರುಗಳನ್ನು ಖರೀದಿಸಿ ದೀರ್ಘಾವಧಿ ಹಾಗೇ ಬಿಟ್ಟರೆ ಉಪಯೋಗ ಇಲ್ಲ. ಸರಿಯಾದ ಷೇರುಗಳನ್ನು ಗುರುತಿಸಿ ಅದರಲ್ಲಿ ಹೂಡಿಕೆ ಮಾಡುವುದು ಸರಿಯಾದ ಕ್ರಮ ಎಂದೆನ್ನುತ್ತಾರೆ.

ಶೇ. 5 ಷೇರುಗಳಷ್ಟೇ ದೀರ್ಘಾವಧಿ ಹೂಡಿಕೆಗೆ ಅರ್ಹ

ಷೇರು ಮಾರುಕಟ್ಟೆಯಲ್ಲಿ ಸಾವಿರಾರು ಕಂಪನಿಗಳ ಷೇರುಗಳಿವೆ. ಅದರಲ್ಲಿ ದೀರ್ಘಾವಧಿಗೆ ಸೂಕ್ತ ಎನಿಸಬಲ್ಲ ಷೇರುಗಳು ಶೇ. 5ಕ್ಕಿಂತಲೂ ಕಡಿಮೆ. ಇಂಥ ಷೇರುಗಳನ್ನು ಗುರುತಿಸುವ ಕೆಲಸ ಬಹಳ ಸವಾಲಿನದ್ದು ಎಂದು ಹೀಲಿಯೋಸ್ ಕ್ಯಾಪಿಟಲ್​​ನ ಸಂಸ್ಥಾಪಕರು ಅಭಿಪ್ರಾಯಪಡುತ್ತಾರೆ.

ಇದನ್ನೂ ಓದಿ: Money Matter: ಮುಂದೊಂದು ದಿನ ರಿಟೈರ್ ಆಗ್ಲೇಬೇಕು; ಆ ದಿನ ನಿಮ್ಮ ಸೇವಿಂಗ್ಸ್ ಎಷ್ಟಿರಬೇಕು?

ದೀರ್ಘಾವಧಿ ಹೂಡಿಕೆಗೆ ಒಂದು ಷೇರು ಸೂಕ್ತ ಎನಿಸಬೇಕಾದರೆ, ಅ ಕಂಪನಿ ದೀರ್ಘಾವಧಿ ಬೆಳೆಯುತ್ತಲೇ ಇರಬೇಕಾಗುತ್ತದೆ. ಆ ಕಂಪನಿಯ ಬ್ಯುಸಿನೆಸ್ ಇರುವ ಕ್ಷೇತ್ರ, ಅದರ ಮ್ಯಾನೇಜ್ಮೆಂಟ್ ಇತ್ಯಾದಿ ಅಂಶಗಳನ್ನು ಗಮನಿಸಬೇಕಾಗುತ್ತದೆ. ಸಮೀರ್ ಅರೋರಾ ಪ್ರಕಾರ, ಕಂಪನಿಯ ಆಡಳಿತ ನಿಭಾಯಿಸುವ ಮ್ಯಾನೇಜ್ಮೆಂಟ್ ತಂಡಕ್ಕೆಯೇ ತಮ್ಮ ಕಂಪನಿ ಮುಂದಕ್ಕೆ ಹೇಗೆ ಬೆಳೆಯುತ್ತದೆ ಎಂದು ಗೊತ್ತಿರುವುದಿಲ್ಲ. ಹೀಗಿದ್ದಾಗ ದೀರ್ಘಾವಧಿಯಲ್ಲಿ ಷೇರು ನಿಶ್ಚಿತವಾಗಿ ಬೆಳೆಯುತ್ತದೆ ಎಂದು ನಿಖರವಾಗಿ ಅಂದಾಜು ಮಾಡಲಾಗುವುದಿಲ್ಲ ಎಂಬುದು ಫಂಡ್ ಮ್ಯಾನೇಜರ್ ಕೂಡ ಆಗಿರುವ ಸಮೀರ್ ಅರೋರಾ ಸಲಹೆ ನೀಡುತ್ತಾರೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ