Money Matter: ಮುಂದೊಂದು ದಿನ ರಿಟೈರ್ ಆಗ್ಲೇಬೇಕು; ಆ ದಿನ ನಿಮ್ಮ ಸೇವಿಂಗ್ಸ್ ಎಷ್ಟಿರಬೇಕು?
Retirement age and financial situation: ನೀವು 60 ವರ್ಷಕ್ಕೆ ನಿವೃತ್ತರಾದಾಗ ಆ ವರ್ಷದ ವೆಚ್ಚ ಎಷ್ಟಿದೆಯೋ ಅದರ 25-30 ಪಟ್ಟು ಹಣ ನಿಮ್ಮ ಬಳಿ ಇರಬೇಕು. ಅಥವಾ, ನಿವೃತ್ತರಾಗುವ ವರ್ಷದಲ್ಲಿ ನಿಮ್ಮ ಆದಾಯ ಎಷ್ಟಿದೆಯೋ ಅದರ 10-12 ಪಟ್ಟು ಹಣ ನಿಮ್ಮ ಬಳಿ ಇರಬೇಕು ಎನ್ನುವ ಸೂತ್ರವೂ ಇದೆ. ಇದರ ಜೊತೆಗೆ, ಸಾಲ ಮುಕ್ತರಾಗಿರಬೇಕು, ಇನ್ಷೂರೆನ್ಸ್ ಹೊಂದಿರಬೇಕು, ಸ್ವಂತ ಮನೆ ಹೊಂದಿರಬೇಕು. ಇವು ನಿಮಗೆ ಆದ್ಯತೆಯಾಗಿರಲಿ.

ಹುಟ್ಟಿದ ಮನುಷ್ಯ ಸಾಯಲೇಬೇಕು. ಹಾಗೆಯೇ, ದುಡಿಯುವ ಮನುಷ್ಯ ನಿವೃತ್ತನಾಗಲೇಬೇಕು. ರಿಟೈರ್ ಆಗುವಾಗ ಎಷ್ಟು ಸಂಪಾದನೆ ಮತ್ತು ಆದಾಯ ಹೊಂದಿರಬೇಕು ಎನ್ನುವುದು ಪ್ರಶ್ನೆ. ಸರ್ಕಾರಿ ನೌಕರರಾದರೆ ಪಿಂಚಣಿ ಸಿಗುತ್ತಾ ಹೋಗುತ್ತದೆ. ಅದರಿಂದ ಸಾಯುವವರೆಗೂ ಹೇಗೋ ಜೀವನ ನಿಭಾಯಿಸಬಹುದು. ಆದರೆ, ಖಾಸಗಿ ಸೆಕ್ಟರ್ನಲ್ಲಿ ಕೆಲಸ ಮಾಡುತ್ತಿರುವವರು ನಿವೃತ್ತರಾದರೆ (retirement) ಮುಂದೇನು ಎನ್ನುವ ಪ್ರಶ್ನೆ.
ರಿಟೈರ್ ಆಗುವಾಗ ನಿಮ್ಮ ಬಳಿ ಎಷ್ಟು ಹಣ ಇರಬೇಕು?
ಈಗ 60 ವರ್ಷ ರಿಟೈರ್ಮೆಂಟ್ ವಯಸ್ಸು. ಆದರೆ, ಪ್ರೈವೇಟ್ ಕೆಲಸದಲ್ಲಿ ಈಗ ಜಾಬ್ ಸೆಕ್ಯೂರಿಟಿ ಇರೋದಿಲ್ಲ. ಹೀಗಾಗಿ, ಬೇಗನೇ ಕೆಲಸದಿಂದ ಹೊರಬೀಳುವವರ ಸಂಖ್ಯೆ ಹೆಚ್ಚಿರಬಹುದು. ನೀವು 60 ವರ್ಷಕ್ಕೆ ನಿವೃತ್ತರಾಗಿ, ಅಥವಾ 50 ವರ್ಷಕ್ಕೇ ನಿವೃತ್ತರಾಗಿ, ಬದುಕಿರುವವರೆಗೂ ದಿನ ದೂಡಲು ಅಗತ್ಯ ಸೇವಿಂಗ್ಸ್ ಇರಲೇಬೇಕು.
ಇದನ್ನೂ ಓದಿ: ಯಾವ್ಯಾವ ವಯಸ್ಸಲ್ಲಿ ನಿಮ್ಮ ಸೇವಿಂಗ್ಸ್ ಕನಿಷ್ಠ ಎಷ್ಟಿರಬೇಕು? ಇಲ್ಲಿದೆ ಕುತೂಹಲಕಾರಿ ಉತ್ತರ
ಒಬ್ಬ ವ್ಯಕ್ತಿಯ ಆಯಸ್ಸು ಸರಾಸರಿಯಾಗಿ 80 ವರ್ಷ ಎಂದಿಟ್ಟುಕೊಳ್ಳಬಹುದು. ಅಷ್ಟು ವರ್ಷಕ್ಕೆ ಹಣದುಬ್ಬರವನ್ನು ಗಣಿಸಿ ಎಷ್ಟು ಹಣ ಇಟ್ಟು ಕೊಳ್ಳಬಹುದು? ಅದಕ್ಕೆ ಒಂದು ಸೂತ್ರ ಇದೆ. ನೀವು ನಿವೃತ್ತರಾಗುವಾಗ ವಾರ್ಷಿಕ ವೆಚ್ಚ ಎಷ್ಟು ಇದೆಯೋ ಅದರ 25ರಿಂದ 30 ಪಟ್ಟು ಹಣವನ್ನು ನೀವು ಹೊಂದಿರಬೇಕು. ಇದು 60 ವರ್ಷಕ್ಕೆ ನಿವೃತ್ತರಾಗುತ್ತಿದ್ದರೆ ಮಾತ್ರ ಅನ್ವಯಿಸುವ ಹಣ. ಇನ್ನೂ ಬೇಗನೇ ನಿವೃತ್ತರಾಗುತ್ತಿದ್ದರೆ ಇನ್ನೂ ಹೆಚ್ಚು ಹಣ ಬೇಕಾಗುತ್ತದೆ.
ಉದಾಹರಣೆಗೆ, ನೀವು 60 ವರ್ಷ ವಯಸ್ಸು ತಲುಪಿದಾಗ ನಿಮ್ಮ ವಾರ್ಷಿಕ ವೆಚ್ಚವು 60,000 ರೂ ಎಂದಿಟ್ಟುಕೊಳ್ಳಿ. ಇದರ 30 ಪಟ್ಟು ಹಣ ಎಂದರೆ 18 ಲಕ್ಷ ರೂನಷ್ಟು ಹಣ ಹೊಂದಿರಬೇಕು.
ಗಮನಿಸಿ, ವಯಸ್ಸಾದ ಬಳಿಕ ಅನಾರೋಗ್ಯ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ನೀವು ಸಣ್ಣ ವಯಸ್ಸಿನಲ್ಲಿದ್ದಾಗಲೇ ಹೆಲ್ತ್ ಇನ್ಷೂರೆನ್ಸ್ ಮಾಡಿಸುವುದು ಉತ್ತಮ. ವೈದ್ಯಕೀಯ ವೆಚ್ಚ ಕಡಿಮೆ ಮಾಡಲು ಸಹಕಾರಿಯಾಗುತ್ತದೆ.
ಇದನ್ನೂ ಓದಿ: Credit Score: ಸಂಬಳ ಹೆಚ್ಚಿದರೆ ಕ್ರೆಡಿಟ್ ಸ್ಕೋರ್ ಹೆಚ್ಚುತ್ತಾ? ಅಂಕ ನಿರ್ಧಾರ ಆಗೋದು ಹೇಗೆ?
ಇನ್ಷೂರೆನ್ಸ್ ಹೊಂದಿರುವುದರ ಜೊತೆಗೆ, ನಿವೃತ್ತರಾಗುವ ಮುನ್ನ ಸಾಲದಿಂದ ಪೂರ್ಣವಾಗಿ ಮುಕ್ತರಾಗಿರಬೇಕು. ಸ್ವಂತ ಮನೆ ಮಾಡಿಕೊಂಡಿರಬೇಕು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




