ಯಾವ್ಯಾವ ವಯಸ್ಸಲ್ಲಿ ನಿಮ್ಮ ಸೇವಿಂಗ್ಸ್ ಕನಿಷ್ಠ ಎಷ್ಟಿರಬೇಕು? ಇಲ್ಲಿದೆ ಕುತೂಹಲಕಾರಿ ಉತ್ತರ
Net Asset value according to age: ಇಪ್ಪತ್ತರ ವಯಸ್ಸಲ್ಲಿ ನೀವು 5 ಲಕ್ಷ ರೂ ಮೌಲ್ಯದ ಆಸ್ತಿ ಕೂಡಿ ಹಾಕಿದ್ದರೆ ಇತರ ಹೆಚ್ಚಿನ ಜನರಿಗಿಂತ ಉತ್ತಮ ಸ್ಥಿತಿಯಲ್ಲಿರುತ್ತೀರಿ. ಹಾಗೆಯೇ, 30ರ ವಯಸ್ಸು, 40ರ ವಯಸ್ಸು, 50ರ ವಯಸ್ಸು, 60ರ ವಯಸ್ಸಿನಲ್ಲಿ ಎಷ್ಟು ಹಣ ಇರಬೇಕು? ನೀವು ನಿವೃತ್ತರಾಗುವ ವೇಳೆ ಕನಿಷ್ಠ 75 ಲಕ್ಷ ರೂ ಆದರೂ ಹಣ ಹೊಂದಿರಬೇಕು ಎನ್ನುತ್ತಾರೆ ತಜ್ಞರು.

ಎಲ್ಲರೂ ಹಣ ಸಂಪಾದನೆ ಮಾಡುತ್ತಾರೆ. ಆದರೆ ಹಲವರಲ್ಲಿ ಸಂಪಾದನೆಗೆ ತಕ್ಕಂತೆ ಹಣಕಾಸು ಸ್ಥಿತಿ (financial situation) ಇರುವುದಿಲ್ಲ. ತಿಂಗಳಿಗೆ 30,000 ರೂ ದುಡಿಯುವ ವ್ಯಕ್ತಿ 40 ವರ್ಷ ವಯಸ್ಸಿಗೆ ಮನೆ ಕಟ್ಟಿರಬಹುದು, ಕಾರು ತೆಗೆದುಕೊಂಡಿರಬಹುದು. ತಿಂಗಳಿಗೆ 80,000 ರೂ ದುಡಿಯುವ ವ್ಯಕ್ತಿ 40 ವರ್ಷ ವಯಸ್ಸಿನಲ್ಲಿ ಸಾಲದ ಸೋಲಕ್ಕೆ ಸಿಲುಕಿರಬಹುದು. ಹೀಗಾಗಿ, ಹಣ ಗಳಿಕೆಗೂ ಹಣಕಾಸು ಸ್ಥಿತಿಗೂ ಗಾಢ ನಂಟೇನೂ ಇರುವುದಿಲ್ಲ.
ಹಾಗಿದ್ದರೆ ನಮ್ಮ ಬಳಿ ಎಷ್ಟು ಹಣ ಇರಬೇಕು? ಯೌವ್ವನದಲ್ಲಿ ಎಷ್ಟು ಹಣ ಇದ್ದಿರಬೇಕು, ಮಧ್ಯಪ್ರಾಯ ಮತ್ತು ನಿವೃತ್ತಿ ವಯಸ್ಸಿನಲ್ಲಿ ಎಷ್ಟು ಹಣ ಇರಬೇಕು? ಈ ಬಗ್ಗೆ ಸುಮ್ಮನೆ ಒಂದು ಅಂದಾಜು.
20-30 ವರ್ಷ ವಯಸ್ಸಿನಲ್ಲಿ 5 ಲಕ್ಷ ರೂ
20-30 ವರ್ಷ ವಯೋಮಾನದವರು ಭಾರತದಲ್ಲಿ ಸರಾಸರಿಯಾಗಿ 2.5 ಲಕ್ಷ ರೂ ಹೊಂದಿರುತ್ತಾರೆ. ಇದು ಸಾಲ ಕಳೆದು ಉಳಿಯುವ ಸಂಪತ್ತಿನ ಮೌಲ್ಯ. ನೀವು ಈ ವಯೋಮಾನದವರಾಗಿದ್ದು 5 ಲಕ್ಷ ರೂ ನಿವ್ವಳ ಆಸ್ತಿಮೌಲ್ಯ ಹೊಂದಿದ್ದರೆ ನಿಜಕ್ಕೂ ಉತ್ತಮ ಸ್ಥಿತಿ.
ಇದನ್ನೂ ಓದಿ: ಕೇಂದ್ರದಿಂದ ‘ಸಹಕಾರ ಟ್ಯಾಕ್ಸಿ’; ಚಾಲಕರಿಗೆ ಡಬಲ್ ಧಮಾಕ; ಆದಾಯದಲ್ಲಿ ಸಿಂಹಪಾಲು ಜೊತೆಗೆ ಷೇರುಪಾಲು
ಈ ವಯಸ್ಸಲ್ಲಿ ಜೀವನ ವೆಚ್ಚ ಕಡಿಮೆ ಮಾಡಬೇಕು. ಮುಂದಾಲೋಚನೆಯಲ್ಲಿ ಎಮರ್ಜೆನ್ಸಿ ಫಂಡ್ ಹೊಂದಿರಬೇಕು. ಎಸ್ಐಪಿ, ಅಂದರೆ ನಿಯಮಿತ ಹೂಡಿಕೆ ಮೊದಲುಗೊಂಡಿರಬೇಕು.
30ರ ಹರೆಯದಲ್ಲಿ 30-45 ಲಕ್ಷ ರೂ ಆಸ್ತಿವಂತರು…
ನೀವು 30-40ರ ವಯಸ್ಸಿನರಾಗಿದ್ದರೆ ಸಂಬಳ ಹೆಚ್ಚಿರುತ್ತದೆ. ವೆಚ್ಚವೂ ಹೆಚ್ಚಿರುತ್ತದೆ. ಎಲ್ಲವನ್ನೂ ಸರಿಯಾಗಿ ನಿಭಾಯಿಸಿ ನಿಮ್ಮ ನಿವ್ವಳ ಆಸ್ತಿ ಮೌಲ್ಯ 20-30 ಲಕ್ಷ ರೂನಷ್ಟಾದರೂ ಇರಬೇಕು. 45 ಲಕ್ಷ ರೂಗಿಂತ ಅಧಿಕ ಇದ್ದರಂತೂ ಇನ್ನೂ ಸೂಪರ್.
40ರ ಹರೆಯಲ್ಲಿ 85 ಲಕ್ಷ ರೂ ಸ್ಥಿತಿವಂತರು…
40-50 ವರ್ಷ ವಯಸ್ಸಿನಲ್ಲಿ ನೀವು ಬಹಳ ಮಾಗಿರುತ್ತೀರಿ. ವೃತ್ತಿ ಬದುಕು ಸ್ಥಿರತೆ ಹೊಂದಿರುತ್ತದೆ. ಹೂಡಿಕೆಗಳು ಹೆಚ್ಚಿರುತ್ತವೆ. ನಿಮ್ಮ ಆಸ್ತಿ ಮೌಲ್ಯವು 50 ಲಕ್ಷ ರೂ ದಾಟಿದ್ದರೆ ಉತ್ತಮ ಹಣಕಾಸು ಸ್ಥಿತಿಯಲ್ಲಿದ್ದೀರಿ ಎಂದು ಭಾವಿಸಬಹುದು.
50ರ ವಯಸ್ಸಲ್ಲಿ ಕೋಟಿ ಕುಳ
ನೀವು 50ರ ವಯಸ್ಸು ದಾಟಿದ್ದು 75 ಲಕ್ಷ ರೂನಿಂದ 1.2 ಕೋಟಿ ರೂವರೆಗೆ ಆಸ್ತಿ ಮೌಲ್ಯ ಹೊಂದಿದ್ದರೆ ನಿವೃತ್ತಿಯನ್ನು ರಿಸ್ಕ್ ಇಲ್ಲದೆ ಪಡೆಯಲು ಅಣಿಗೊಂಡಿರುತ್ತೀರಿ. ಈ ವಯಸ್ಸಲ್ಲಿ ನಿಮ್ಮ ಹೂಡಿಕೆಯು ಈಕ್ವಿಟಿ ಬದಲು ಕಡಿಮೆ ರಿಸ್ಕ್ ಇರುವೆಡೆ ಇದ್ದರೆ ಒಳ್ಳೆಯದು.
ಇದನ್ನೂ ಓದಿ: ಒಬ್ಬ ವ್ಯಕ್ತಿ ಎಷ್ಟು ಸಾಲ ಮಾಡಬಹುದು? ಮಿತಿ ಎಷ್ಟಿರಬೇಕು?
60ರ ವಯಸ್ಸಿನಲ್ಲಿ 1.6 ಕೋಟಿ ರೂ ಆದರೂ ಹೊಂದಿರಬೇಕು
ನೀವು 60 ವರ್ಷ ವಯಸ್ಸು ದಾಟುತ್ತಿದ್ದರೆ ಕನಿಷ್ಠ 90 ಲಕ್ಷ ರೂವಾದರೂ ನಿಮ್ಮ ಬಳಿ ಇರಬೇಕು. ಒಂದೂವರೆ ಕೋಟಿ ರೂ ಇದ್ದರೆ ನಿಶ್ಚಿತಂತೆಯಿಂದ ನಿವೃತ್ತಿ ಪ್ಲಾನ್ ಮಾಡಬಹುದು. ಆರಾಮವಾಗಿ ರಿಟೈರ್ಮೆಂಟ್ ಲೈಫ್ ನಡೆಸಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




