AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ ಡೀಲ್​​ನಿಂದ ಅಸಮಾಧಾನಗೊಂಡ ‘ಟೈಟಾನಿಕ್’ ನಿರ್ದೇಶಕ; ಹಾಲಿವುಡ್​​ಗೆ ಎಚ್ಚರಿಕೆ ಕೊಟ್ಟ ಜೇಮ್ಸ್ ಕ್ಯಾಮೆರಾನ್

ಜೇಮ್ಸ್ ಕ್ಯಾಮೆರಾನ್ ಅವರು ನೆಟ್‌ಫ್ಲಿಕ್ಸ್ ವಾರ್ನರ್ ಬ್ರದರ್ಸ್ ಖರೀದಿಸುವ ಪ್ರಸ್ತಾಪದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಈ ಡೀಲ್ ಸಿನಿಮಾ ಉದ್ಯಮಕ್ಕೆ, ವಿಶೇಷವಾಗಿ ಚಿತ್ರಮಂದಿರಗಳಿಗೆ ದೊಡ್ಡ ಹಾನಿ ಮಾಡಲಿದೆ ಎಂದು ಅವರು ಎಚ್ಚರಿಸಿದ್ದಾರೆ. ಒಟಿಟಿ ಕೇಂದ್ರೀಕೃತ ನಿರ್ಮಾಣಗಳಿಂದಾಗಿ ಚಿತ್ರ ನಿರ್ಮಾಣಗಳು ಕುಸಿಯಬಹುದು, ಉದ್ಯೋಗ ನಷ್ಟವಾಗಬಹುದು ಮತ್ತು ಸಾಂಪ್ರದಾಯಿಕ ಚಿತ್ರಮಂದಿರಗಳು ಮುಚ್ಚಬಹುದು ಎಂಬುದು ಅವರ ಪ್ರಮುಖ ಕಾಳಜಿ.

ಆ ಡೀಲ್​​ನಿಂದ ಅಸಮಾಧಾನಗೊಂಡ ‘ಟೈಟಾನಿಕ್’ ನಿರ್ದೇಶಕ; ಹಾಲಿವುಡ್​​ಗೆ ಎಚ್ಚರಿಕೆ ಕೊಟ್ಟ ಜೇಮ್ಸ್ ಕ್ಯಾಮೆರಾನ್
ಜೇಮ್ಸ್
ರಾಜೇಶ್ ದುಗ್ಗುಮನೆ
|

Updated on: Feb 21, 2026 | 5:18 PM

Share

ಹಾಲಿವುಡ್​​ನಲ್ಲಿ ‘ಟೈಟಾನಿಕ್’, ‘ಅವತಾರ್’ ರೀತಿಯ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಜೇಮ್ಸ್ ಕ್ಯಾಮೆರಾನ್ ಅವರಿಗೆ ಇದೆ. ಅವರು ಸಿನಿಮಾ ರಂಗದ ಬಗ್ಗೆ ಕಾಳಜಿ ವಹಿಸುತ್ತಾರೆ. ಈಗ ಮುಂದಿನ ದಿನಗಳಲ್ಲಿ ಹಾಲಿವುಡ್​ಗೆ ಬರಬಹುದಾದ ತೊಂದರೆ ಬಗ್ಗೆ ಅವರು ಎಚ್ಚರಿಕೆ ನೀಡಿದ್ದಾರೆ. ಈ ಎಚ್ಚರಿಕೆ ನೀಡಲು ಕಾರಣ ಆಗಿದ್ದು, ಆ ಒಂದು ಡೀಲ್. ಅಷ್ಟಕ್ಕೂ ಜೇಮ್ಸ್ ಕ್ಯಾಮೆರಾನ್ (James Cameron) ಮಾತನಾಡಿದ್ದು, ಯಾವ ವಿಷಯದ ಬಗ್ಗೆ? ಇಲ್ಲಿದೆ ವಿವರ.

ಇತ್ತೀಚೆಗೆ ನೆಟ್​ಫ್ಲಿಕ್ಸ್ ಸಂಸ್ಥೆ ದೊಡ್ಡ ಮೊತ್ತ ನೀಡಿ ವಾರ್ನರ್ ಬ್ರೋಸ್​​ನ ಖರೀದಿ ಮಾಡಿತ್ತು. ಈ ಡೀಲ್​​ನಿಂದ ನೆಟ್​ಫ್ಲಿಕ್ಸ್ ದೊಡ್ಡ ಲಾಭ ಕಾಣುತ್ತಿದೆ. ಅತಿ ದೊಡ್ಡ ಸ್ಟುಡಿಯೋನ ತನ್ನ ತೆಕ್ಕೆಗೆ ತೆಗೆದುಕೊಂಡ ಖುಷಿ ನೆಟ್​ಫ್ಲಿಕ್ಸ್​ಗೆ ಇದೆ. ಆದರೆ, ಈ ಸಂಸ್ಥೆ ಒಟಿಟಿ ಚಿತ್ರಗಳನ್ನು ನಿರ್ಮಿಸುತ್ತದೆ. ಹೀಗಾಗಿ, ಆ ನಿಟ್ಟಿನಲ್ಲಿ ಮಾತ್ರ ಯೋಚಿಸುತ್ತದೆ ಎಂಬ ಭಯ ಜೆಮ್ಸ್ ಕ್ಯಾಮೆರೂನ್ ಅವರದ್ದು.

‘ವಾರ್ನರ್ ಬ್ರದರ್ಸ್ ಡಿಸ್ಕವರಿಯನ್ನು ನೆಟ್‌ಫ್ಲಿಕ್ಸ್‌ಗೆ ಮಾರಾಟ ಮಾಡುವ ಪ್ರಸ್ತಾಪವು ಸಿನಿಮಾ ರಂಗಕ್ಕೆ ಹಾನಿ ತರುವಂಥದ್ದು. ನಾನು ಚಿತ್ರರಂಗ ಹಾಗೂ ರಂಗಭೂಮಿಗೆ ನನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದೇನೆ. ನನ್ನ ಎಲ್ಲಾ ಸಿನಿಮಾಗಳು ಕೆಳಮಟ್ಟದ ವಿಡಯೋ ಮಾರುಕಟ್ಟೆಗಳಲ್ಲಿಯೂ ಪ್ರದರ್ಶನಗೊಳ್ಳುತ್ತವೆ ಅನ್ನೋದು ನನಗೆ ಗೊತ್ತು. ಆದರೆ ನನ್ನ ಮೊದಲ ಪ್ರೀತಿ ಸಿನಿಮಾ’ ಎಂದು ಜೇಮ್ಸ್ ಕ್ಯಾಮೆರಾನ್ ಅಮೇರಿಕನ್ ಸೆನೆಟರ್ ಮೈಕ್ ಲೀಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.

ಇಂತಹ ಒಪ್ಪಂದ ಜಾರಿಗೆ ಬಂದರೆ ಚಿತ್ರಮಂದಿರಗಳು ಮುಚ್ಚಲ್ಪಡುತ್ತವೆ ಎಂದು ಜೇಮ್ಸ್ ಕ್ಯಾಮೆರಾನ್ ಆತಂಕ ಹೊರಹಾಕಿದ್ದಾರೆ. ಈ ಡೀಲ್​​ನಿಂದ ಕೆಲವೇ ಸಿನಿಮಾಗಳು ನಿರ್ಮಾಣ ಆಗುತ್ತವಂತೆ. ಸಾಕಷ್ಟು ಜನರಿಗೆ ಕೆಲಸ ಕೊಟ್ಟ ಚಿತ್ರರಂಗಕ್ಕೆ ಇದರಿಂದ ನಷ್ಟ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಹಾಲಿವುಡ್ ಫೇಮಸ್ ಸ್ಟುಡಿಯೋನ 74 ಲಕ್ಷ ಕೋಟಿ ರೂಪಾಯಿಗೆ ಖರೀದಿಸಿದ ನೆಟ್​ಫ್ಲಿಕ್ಸ್

‘ಉಳಿದಿರುವ ಕೆಲವೇ ಚಲನಚಿತ್ರ ನಿರ್ಮಾಣ ಸ್ಟುಡಿಯೋಗಳಲ್ಲಿ ವಾರ್ನರ್ ಬ್ರದರ್ಸ್ ಒಂದಾಗಿದೆ. ಅದು ಕೂಡ ಪಥವನ್ನು ಬದಲಾಯಿಸಿದರೆ ಚಿತ್ರರಂಗ ಸಾಕಷ್ಟು ನಷ್ಟ ಅನುಭವಿಸಲಿದೆ’ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮತ್ತೆ ಮುನ್ನೆಲೆಗೆ ಬಂದ ನೈಸ್ ರಸ್ತೆ ಟೋಲ್:ಸಿಡಿದೆದ್ದ ಪ್ರತಿಪಕ್ಷಗಳು
ಮತ್ತೆ ಮುನ್ನೆಲೆಗೆ ಬಂದ ನೈಸ್ ರಸ್ತೆ ಟೋಲ್:ಸಿಡಿದೆದ್ದ ಪ್ರತಿಪಕ್ಷಗಳು
ಹಾನೂರು ಶೂಟೌಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹೇಳಿದ್ದಿಷ್ಟು
ಹಾನೂರು ಶೂಟೌಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹೇಳಿದ್ದಿಷ್ಟು
ತಿಪಟೂರು​ ಶಾಸಕನಿಂದ ಪ್ರತ್ಯೇಕ ಜಿಲ್ಲೆಯ ಕೂಗು!
ತಿಪಟೂರು​ ಶಾಸಕನಿಂದ ಪ್ರತ್ಯೇಕ ಜಿಲ್ಲೆಯ ಕೂಗು!
ಮೊಳಕಾಲ್ಮೂರು ಕ್ಷೇತ್ರವನ್ನು ಆಂಧ್ರಕ್ಕೆ ಸೇರಿಸಿ: ಎನ್​.ವೈ. ಗೋಪಾಲಕೃಷ್ಣ
ಮೊಳಕಾಲ್ಮೂರು ಕ್ಷೇತ್ರವನ್ನು ಆಂಧ್ರಕ್ಕೆ ಸೇರಿಸಿ: ಎನ್​.ವೈ. ಗೋಪಾಲಕೃಷ್ಣ
ಮಹಿಳೆ ಜೊತೆ ಅಸಭ್ಯ ವರ್ತನೆ; ತಮ್ಮೇನಹಳ್ಳಿ ಸ್ವಾಮೀಜಿಗೆ ಜನರಿಂದ ಗೂಸಾ!
ಮಹಿಳೆ ಜೊತೆ ಅಸಭ್ಯ ವರ್ತನೆ; ತಮ್ಮೇನಹಳ್ಳಿ ಸ್ವಾಮೀಜಿಗೆ ಜನರಿಂದ ಗೂಸಾ!
ಬೆಳೆ ವಿಮೆ ವಿಚಾರಕ್ಕೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿವಲಿಂಗೇಗೌಡ ಗರಂ
ಬೆಳೆ ವಿಮೆ ವಿಚಾರಕ್ಕೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿವಲಿಂಗೇಗೌಡ ಗರಂ
ಆಗಸ್ಟ್ 17ರಿಂದ 23ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿ ತಿಳಿದುಕೊಳ್ಳಿ
ಆಗಸ್ಟ್ 17ರಿಂದ 23ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿ ತಿಳಿದುಕೊಳ್ಳಿ
ರವಿಚಂದ್ರನ್ ಮನೆ ಮಾರಿದ್ದು ನಿಜವೇ? ಅಸಲಿ ವಿಷಯ ತೆರೆದಿಟ್ಟ ದಿಲ್ ಸೇ ದಿಲೀಪ್
ರವಿಚಂದ್ರನ್ ಮನೆ ಮಾರಿದ್ದು ನಿಜವೇ? ಅಸಲಿ ವಿಷಯ ತೆರೆದಿಟ್ಟ ದಿಲ್ ಸೇ ದಿಲೀಪ್
ಅರಣ್ಯ ಸಿಬ್ಬಂದಿ ವಿರುದ್ಧ ಕೊಲೆ ಪ್ರಕರಣ; ಯಾರ ಹೆಸರೂ ಉಲ್ಲೇಖವಿಲ್ಲ!
ಅರಣ್ಯ ಸಿಬ್ಬಂದಿ ವಿರುದ್ಧ ಕೊಲೆ ಪ್ರಕರಣ; ಯಾರ ಹೆಸರೂ ಉಲ್ಲೇಖವಿಲ್ಲ!
ಇಂದು ವಿನಾಯಕಿ ಚತುರ್ಥಿ; ಆಸೆ ಆಕಾಂಕ್ಷೆಗಳ ಸಿದ್ಧಿಗಾಗಿ ವಿಶೇಷ ವ್ರತದ ದಿನ
ಇಂದು ವಿನಾಯಕಿ ಚತುರ್ಥಿ; ಆಸೆ ಆಕಾಂಕ್ಷೆಗಳ ಸಿದ್ಧಿಗಾಗಿ ವಿಶೇಷ ವ್ರತದ ದಿನ