AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಲಿವುಡ್ ಫೇಮಸ್ ಸ್ಟುಡಿಯೋನ 74 ಲಕ್ಷ ಕೋಟಿ ರೂಪಾಯಿಗೆ ಖರೀದಿಸಿದ ನೆಟ್​ಫ್ಲಿಕ್ಸ್

ನೆಟ್‌ಫ್ಲಿಕ್ಸ್ ಹಾಲಿವುಡ್‌ನ ಪ್ರಸಿದ್ಧ ವಾರ್ನರ್ ಬ್ರೋಸ್ ಸ್ಟುಡಿಯೋವನ್ನು ಬರೋಬ್ಬರಿ ₹74 ಲಕ್ಷ ಕೋಟಿ ರೂಪಾಯಿಗೆ ಖರೀದಿಸಿದೆ. ಈ ಬೃಹತ್ ಒಪ್ಪಂದದಿಂದ 'ಹ್ಯಾರಿ ಪಾಟರ್', 'ಬ್ಯಾಟ್‌ಮ್ಯಾನ್' ಸೇರಿದಂತೆ ವಾರ್ನರ್ ಬ್ರೋಸ್‌ನ ಎಲ್ಲಾ ಜನಪ್ರಿಯ ಸರಣಿಗಳು ಈಗ ನೆಟ್‌ಫ್ಲಿಕ್ಸ್ ಲೈಬ್ರರಿಯ ಭಾಗವಾಗಿವೆ. ಇದು ನೆಟ್‌ಫ್ಲಿಕ್ಸ್‌ನ ಕಂಟೆಂಟ್ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಹಾಲಿವುಡ್ ಫೇಮಸ್ ಸ್ಟುಡಿಯೋನ 74 ಲಕ್ಷ ಕೋಟಿ ರೂಪಾಯಿಗೆ ಖರೀದಿಸಿದ ನೆಟ್​ಫ್ಲಿಕ್ಸ್
Netflix
ರಾಜೇಶ್ ದುಗ್ಗುಮನೆ
|

Updated on:Dec 06, 2025 | 3:02 PM

Share

ನೆಟ್​ಫ್ಲಿಕ್ಸ್ ತನ್ನದೇ ಅನೇಕ ಒರಿಜಿನಲ್ ಸೀರಿಸ್​ಗಳನ್ನು ನಿರ್ಮಾಣ ಮಾಡಿದೆ. ಅಲ್ಲದೆ, ದೇಶ-ವಿದೇಶಗಳಿಂದ ಹಲವು ಸಿನಿಮಾ ಹಾಗೂ ಸೀರಿಸ್​ಗಳನ್ನು ಖರೀದಿ ಮಾಡಿ ಪ್ರಸಾರ ಮಾಡುತ್ತಿದೆ. ಈಗ ನೆಟ್​ಫ್ಲಿಕ್ಸ್ ಒಂದು ದೊಡ್ಡ ನಿರ್ಧಾರಕ್ಕೆ ಬಂದಿದೆ. ಹಾಲಿವುಡ್​ನ ಫೇಮಸ್ ಸ್ಟುಡಿಯೋ ವಾರ್ನರ್ ಬ್ರೋಸ್ ಫಿಲ್ಮ್ ಮತ್ತು ಟಿವಿ ಸ್ಟುಡಿಯೋನ ಬರೋಬ್ಬರಿ 74 ಲಕ್ಷ ಕೋಟಿ ರೂಪಾಯಿ ಕೊಟ್ಟು ನೆಟ್​ಫ್ಲಿಕ್ಸ್ ಖರೀದಿ ಮಾಡಿದೆ. ಈ ಮೂಲಕ ನೆಟ್​ಫ್ಲಿಕ್ಸ್ ಲೈಬ್ರರಿ ಹಿರಿದಾಗಿದೆ.

ಹ್ಯಾರಿ ಪಾಟರ್, ಸೂಪರ್ ಮ್ಯಾನ್, ಬ್ಯಾಟ್​ಮ್ಯಾನ್, ಗೇಮ್ ಆಫ್ ಥ್ರೋನ್ಸ್, ಫ್ರೆಂಡ್ಸ್ ರೀತಿಯ ಪ್ರಾಜೆಕ್ಟ್​ಗಳನ್ನು ‘ವಾರ್ನರ್ ಬ್ರೋಸ್ ನಿರ್ಮಾಣ ಮಾಡಿದೆ. ಇವೆಲ್ಲವೂ ಈಗ ನೆಟ್​ಫ್ಲಿಕ್ಸ್ ತೆಕ್ಕೆಗೆ ಸಿಕ್ಕಿವೆ. ವಾರ್ನರ್ ಬ್ರೋಸ್ ಡಿಸ್ಕವರಿ ಕಂಪನಿಯ ಮೌಲ್ಯ 82 ಬಿಲಿಯನ್ ಡಾಲರ್. ಇದರಲ್ಲಿ 72 ಬಿಲಿಯನ್ ಡಾಲರ್ ಇದರ ಷೇರುಗಳಿಂದಲೇ ಬರುತ್ತಿದೆ. 2026 ಮಾರ್ಚ್ ವೇಳೆಗೆ ಈ ಡೀಲ್ ಅಂತಿಮಗೊಳ್ಳುವ ನಿರೀಕ್ಷೆ ಇದೆ.

ವಾರ್ನರ್ ಬ್ರೋಸ್ ಬಳಿ ಸಾಕಷ್ಟು ಸಿನಿಮಾ ಹಾಗೂ ಸೀರಿಸ್​ಗಳಿವೆ. ಇವುಗಳ ಮೇಲೆ ನೆಟ್​ಫ್ಲಿಕ್ಸ್ ಕಣ್ಣಿಟ್ಟಿತ್ತು. ಇದನ್ನು ಈಗ ನೆಟ್​ಫ್ಲಿಕ್ಸ್ ಖರೀದಿ ಮಾಡುವ ಮೂಲಕ ತನ್ನ ಲೈಬ್ರರಿ ದೊಡ್ಡದಾಗಿಸಿದೆ. ಇದರಿಂದ ನೆಟ್​ಫ್ಲಿಕ್ಸ್ ಸಬ್​ಸ್ಕ್ರೈಬರ್​ಗಳಿಗೆ ಹೆಚ್ಚು ಸರಣಿ ಹಾಗೂ ಸಿನಿಮಾಗಳು ವೀಕ್ಷಣೆಗೆ ಲಭ್ಯವಾಗಲಿದೆ.

ಇನ್ನು ದೊಡ್ಡ ಸ್ಟುಡಿಯೋ ಒಂದು ಇವರ ಕೈ ಸೇರಿರುವುದರಿಂದ ಮುಂದಿನ ದಿನಗಳಲ್ಲಿ ದೊಡ್ಡ ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡಲು, ಸರಣಿಗಳನ್ನು ನಿರ್ಮಿಸಲು ಈ ಒಪ್ಪಂದ ಸಹಕಾರಿ ಆಗಲಿದೆ. ಇದು ನೆಟ್​ಫ್ಲಿಕ್ಸ್ ಬಳಕೆದಾರರ ಖುಷಿ ಹೆಚ್ಚಿದೆ.

ಇದನ್ನೂ ಓದಿ: ಅಜಿತ್ ನಟನೆಯ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ತೆಗೆದುಹಾಕಿದ ನೆಟ್​ಫ್ಲಿಕ್ಸ್

ಕಳೆದ ಕೆಲವು ದಿನಗಳಿಂದ ವಾರ್ನರ್ ಬ್ರೋಸ್ ಡಿಸ್ಕವರಿ ಮಾರಾಟದ ಬಗ್ಗೆ ಚರ್ಚೆ ನಡೆದಿತ್ತು. Paramount ಸಂಸ್ಥೆ ವಾರ್ನರ್ ಬ್ರೋಸ್ ಖರೀದಿ ಮಾಡಲಿದೆ ಎಂದು ಹೇಳಲಾಗಿತ್ತು. ಆದರೆ, ನೆಟ್​ಫ್ಲಿಕ್ಸ್ ಇವರನ್ನು ಹಿಂದಿಕ್ಕಿ ಡೀಲ್​ನ ತನ್ನದಾಗಿಸಿಕೊಂಡಿದೆ.

ಹಾಟ್​​ಸ್ಟಾರ್​ಗೆ ಹೊಡೆತ?

ಸದ್ಯ ಜಿಯೋ ಹಾಟ್​ಸ್ಟಾರ್ ಅಲ್ಲಿ ಹಲವು ಎಚ್​ಬಿಒ ಶೋಗಳು ವೀಕ್ಷಣೆಗೆ ಲಭ್ಯವಿದೆ. ಇವೆಲ್ಲವೂ ಈಗ ನೆಟ್ಫ್ಲಿಕ್ಸ್ ಪಾಲಾಗಿರುವುದರಿಂದ ಹಾಟ್​​ಸ್ಟಾರ್​ಗೆ ಹೊಡೆತ ಉಂಟಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:54 pm, Sat, 6 December 25