AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sahkari Taxi: ಕೇಂದ್ರದಿಂದ ‘ಸಹಕಾರ ಟ್ಯಾಕ್ಸಿ’; ಚಾಲಕರಿಗೆ ಡಬಲ್ ಧಮಾಕ; ಆದಾಯದಲ್ಲಿ ಸಿಂಹಪಾಲು ಜೊತೆಗೆ ಷೇರುಪಾಲು

Sahakari taxi service in India: ಕೇಂದ್ರ ಸರ್ಕಾರವು ಸಹಕಾರ ತತ್ವದಲ್ಲಿ ಟ್ಯಾಕ್ಸಿ ಸೇವೆ ಆರಂಭಿಸುತ್ತಿದೆ. ದೆಹಲಿ, ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಡಿಸೆಂಬರ್ ತಿಂಗಳಲ್ಲಿ ಇದು ಮೊದಲು ಶುರುವಾಗಬಹುದು. ಓಲಾ, ಊಬರ್​ಗಿಂತ ಭಿನ್ನವಾದ ಪ್ರಯೋಗ ಇದಾಗಿದ್ದು, ಪ್ರಯಾಣಿಕರಿಗೆ ಹೊರೆಯಾಗದಂತೆ ದರ ರೂಪಿಸಬಹುದು. ಚಾಲಕರಿಗೂ ಅನುಕೂಲವಾಗುತ್ತದೆ.

Sahkari Taxi: ಕೇಂದ್ರದಿಂದ ‘ಸಹಕಾರ ಟ್ಯಾಕ್ಸಿ’; ಚಾಲಕರಿಗೆ ಡಬಲ್ ಧಮಾಕ; ಆದಾಯದಲ್ಲಿ ಸಿಂಹಪಾಲು ಜೊತೆಗೆ ಷೇರುಪಾಲು
ಟ್ಯಾಕ್ಸಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 22, 2025 | 5:18 PM

Share

ನವದೆಹಲಿ, ಜೂನ್ 22: ಸಹಕಾರಿ ತತ್ವದಲ್ಲಿ ಟ್ಯಾಕ್ಸಿ ಸೇವೆಯನ್ನು (Sahakar Taxi) ಆರಂಭಿಸಲಾಗುತ್ತಿದೆ. ವಿವಿಧ ರಾಜ್ಯಗಳ ಸಹಕಾರಿ ಸಂಸ್ಥೆಗಳ ನಡುವಿನ ಸಮನ್ವತೆಯಲ್ಲಿ ಈ ಆ್ಯಪ್ ಆಧಾರಿತ ಟ್ಯಾಕ್ಸ್ ಸೇವೆಯ ಪ್ರಯೋಗ ಭಾರತದಲ್ಲಿ ಇದೇ ಮೊದಲು. ಓಲಾ, ಊಬರ್​​ನ ಪ್ರಾಬಲ್ಯಕ್ಕೆ ಸವಾಲೊಡ್ಡುವ ನಿರೀಕ್ಷೆ ಇದೆ. ‘ಸಹಕಾರ್ ಟ್ಯಾಕ್ಸಿ ಕೋಆಪರೇಟಿವ್’ (Sahakar Taxi Co-operative) ಅನ್ನು ಬಹು ರಾಜ್ಯ ಸಹಕಾರಿ ಸಂಸ್ಥೆ ಕಾಯ್ದೆ (Multi-state cooperative societies act) ಅಡಿ ನೊಂದಾಯಿಸಲಾಗಿದೆ.

ಎಂಟು ಪ್ರಮುಖ ಸಹಕಾರಿ ಸಂಸ್ಥೆಗಳಿಂದ ಬೆಂಬಲ

ಎನ್​​ಸಿಡಿಸಿ, ಅಮುಲ್, ನಬಾರ್ಡ್, ಇಫ್​​ಕೋ, ಎನ್​​ಡಿಡಿಬಿ ಇತ್ಯಾದಿ ದೇಶದ ಎಂಟು ಪ್ರಮುಖ ಸಹಕಾರಿ ಸಂಸ್ಥೆಗಳು ಈ ಸಹಕಾರಿ ಟ್ಯಾಕ್ಸಿ ಸೇವೆ ಯೋಜನೆಯನ್ನು ಬೆಂಬಲಿಸಿವೆ. ಆರಂಭಿಕ ಹಂತದಲ್ಲಿ ಈ ಪ್ರತಿಯೊಂದು ಸಹಕಾರಿ ಸಂಸ್ಥೆಯೂ ತಲಾ 10 ಕೋಟಿ ರೂ ಹೂಡಿಕೆಗೆ ಬದ್ಧವಾಗಿವೆ.

ಇದನ್ನೂ ಓದಿ: ಬಾಂಗ್ಲಾದೇಶದ ಬಹುದೊಡ್ಡ ಉದ್ಯಮಕ್ಕೆ ಹಿನ್ನಡೆ; ಭಾರತಕ್ಕೆ ವರ್ಗಾವಣೆ ಆಗುತ್ತಿರುವ ಜವಳಿ ಸರಬರಾಜು ಸರಪಳಿ

ಚಾಲಕ ಮತ್ತು ಪ್ರಯಾಣಿಕ ಇಬ್ಬರಿಗೂ ಲಾಭ ಕೊಡುವ ಸಹಕಾರಿ ಟ್ಯಾಕ್ಸ್

ಸಹಕಾರಿ ಟ್ಯಾಕ್ಸಿ ಸೇವೆಯು ಲಾಭದ ಉದ್ದೇಶಕ್ಕೆ ನಡೆಯುತ್ತಿಲ್ಲ. ಸಹಕಾರಿ ತತ್ವಗಳಲ್ಲಿ ನಡೆಯುವ ಈ ಟ್ಯಾಕ್ಸಿ ಸರ್ವಿಸ್​ನಲ್ಲಿ ಪ್ರಯಾಣಿಕರಿಗೆ ಹೊರೆಯಾಗುವಷ್ಟು ದುಬಾರಿ ದರ ಇರುವುದಿಲ್ಲ. ಓಲಾ, ಊಬರ್ ರೀತಿಯಲ್ಲಿ ಪ್ಲಾಟ್​ಫಾರ್ಮ್ ಫೀ ಪಡೆಯಲಾಗುವುದಿಲ್ಲ. ಪೀಕ್ ಅವರ್ ಹೆಸರಲ್ಲಿ ಹೆಚ್ಚಿನ ದರ ವಸೂಲಿ ಮಾಡಲಾಗುವುದಿಲ್ಲ. ಪ್ರಯಾಣದಿಂದ ಬರುವ ಬಹುತೇಕ ಆದಾಯವು ಚಾಲಕರಿಗೆ ಸಂದಾಯವಾಗುತ್ತದೆ.

ಚಾಲಕರಿಗೆ ಆದಾಯದಲ್ಲಿ ಸಿಂಹಪಾಲು ಸಿಕ್ಕಂತೆ ಸಹಕಾರಿ ಸಂಸ್ಥೆಯಲ್ಲಿ ಷೇರುಪಾಲು ಕೂಡ ಸಿಗುವ ಅವಕಾಶ ಇರುತ್ತದೆ. ಈ ಟ್ಯಾಕ್ಸಿ ಸರ್ವಿಸ್​​ನಲ್ಲಿ ಆರು ತಿಂಗಳು ಕೆಲಸ ಮಾಡಿದ ಬಳಿಕ ಚಾಲಕರು ಈ ಸಂಸ್ಥೆಯ ಸದಸ್ಯತ್ವ ಪಡೆಯಲು ಅವಕಾಶ ಇರುತ್ತದೆ. 100 ರೂ ಬೆಲೆಯಂತೆ ಐದು ಷೇರುಗಳನ್ನು ಖರೀದಿಸಿ ಸದಸ್ಯತ್ವ ಪಡೆಯಬಹುದು. ಚಾಲಕರಿಗೆ ಮತ್ತೊಂದು ಅನುಕೂಲವೆಂದರೆ, ಸೋಷಿಯಲ್ ಸೆಕ್ಯೂರಿಟಿ ಸ್ಕೀಮ್​​ಗಳ ಮೂಲಕ ಹಣಕಾಸು ಭದ್ರತೆ ಸಿಗುತ್ತದೆ.

ಇದನ್ನೂ ಓದಿ: ಡಿಆರ್​​​ಡಿಒ ಅಭಿವೃದ್ಧಿಪಡಿಸುತ್ತಿರುವ ಶಸ್ತ್ರಾಸ್ತ್ರಗಳು ಮತ್ತವುಗಳ ಸಾಮರ್ಥ್ಯ; ಇಲ್ಲಿದೆ ಪಟ್ಟಿ

ದೆಹಲಿ, ಗುಜರಾತ್, ಮಹಾರಾಷ್ಟ್ರದಲ್ಲಿ ಮೊದಲು ಶುರು

ಸಹಕಾರಿ ಟ್ಯಾಕ್ಸಿ ಸೇವೆ ಇದೇ ಡಿಸೆಂಬರ್ ತಿಂಗಳಲ್ಲಿ ದೆಹಲಿ, ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಮೊದಲಿಗೆ ಆರಂಭವಾಗಬಹುದು. ಆ ಬಳಿಕ ದೇಶಾದ್ಯಂತ ಇದನ್ನು ವಿಸ್ತರಿಸುವ ಗುರಿ ಇದೆ. ಆರಂಭಿಕ ಹಂತದಲ್ಲಿ 400-500 ಚಾಲಕರು ಇದರಲ್ಲಿ ಜೋಡಿಸಿಕೊಳ್ಳುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!