AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Post Office plans: ಪೋಸ್ಟ್ ಆಫೀಸ್​ನ SCSS ಸ್ಕೀಮ್; ತಿಂಗಳಿಗೆ 20,500 ರೂವರೆಗೆ ಆದಾಯ ಗಳಿಸಿ

Post Office Senior Citizen Savings Scheme: ಅಂಚೆ ಕಚೇರಿಯ ಎಸ್​ಸಿಎಸ್​ಎಸ್ ಯೋಜನೆಯಲ್ಲಿ ತಿಂಗಳಿಗೆ 20,500 ರೂವರೆಗೂ ಮಾಸಿಕ ಆದಾಯ ಪಡೆಯುವ ಅವಕಾಶ ಇದೆ. ಅಂಚೆ ಕಚೇರಿ ಸ್ಕೀಮ್​ಗಳ ಪೈಕಿ ಗರಿಷ್ಠ ಬಡ್ಡಿ ಸಿಗುವ ಈ ಯೋಜನೆಯಲ್ಲಿ ಲಂಪ್ಸಮ್ ಆಗಿ 30 ಲಕ್ಷ ರೂವರೆಗೂ ಹೂಡಿಕೆ ಮಾಡಬಹುದು. 60 ವರ್ಷ ಮೇಲ್ಪಟ್ಟ ಸಾಮಾನ್ಯ ಹಿರಿಯ ನಾಗರಿಕರು ಈ ಸ್ಕೀಮ್ ಪಡೆಯಲು ಅರ್ಹರಾಗಿರುತ್ತಾರೆ.

Post Office plans: ಪೋಸ್ಟ್ ಆಫೀಸ್​ನ SCSS ಸ್ಕೀಮ್; ತಿಂಗಳಿಗೆ 20,500 ರೂವರೆಗೆ ಆದಾಯ ಗಳಿಸಿ
ಪೋಸ್ಟ್ ಆಫೀಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 20, 2025 | 4:11 PM

Share

ಅಂಚೆ ಕಚೇರಿಯಲ್ಲಿ (Post office) ಹಲವು ಸಣ್ಣ ಉಳಿತಾಯ ಯೋಜನೆಗಳ ಆಯ್ಕೆಗಳಿವೆ. ರಿಕರಿಂಗ್ ಡೆಪಾಸಿಟ್​ನಿಂದ ಹಿಡಿದು ಸುಕನ್ಯ ಸಮೃದ್ದಿವರೆಗೆ ವಿವಿಧ ರೀತಿಯ ಸ್ಕೀಮ್​ಗಳಿವೆ. ಅದರಲ್ಲಿ ಎಸ್​ಸಿಎಸ್​ಎಸ್, ಅಥವಾ ಹಿರಿಯ ನಾಗರಿಕರ ಉಳಿತಾಯ ಯೋಜನೆಯೂ (SCSS- Senior Citizen Savings Scheme) ಒಂದು. ಪೋಸ್ಟ್ ಆಫೀಸ್ ಸ್ಕೀಮ್​ಗಳ ಪೈಕಿ ಅತಿಹೆಚ್ಚು ರಿಟರ್ನ್ ತರುವ ಯೋಜನೆಗಳಲ್ಲಿ ಇದೂ ಒಂದು. ಹಿರಿಯ ನಾಗರಿಕರಿಗೆಂದು ರೂಪಿಸಲಾಗಿರುವ ಕೆಲವೇ ಸ್ಕೀಮ್​ಗಳ ಪೈಕಿ ಇದು ಇದೆ.

ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್ ಮಾಸಿಕ ಆದಾಯ ತರುವ ಒಂದು ಪ್ಲಾನ್. ಸದ್ಯ ಇದಕ್ಕೆ ಸರ್ಕಾರ ಶೇ. 8.25ರಷ್ಟು ಬಡ್ಡಿ ನೀಡುತ್ತಿದೆ. ಐಟಿ ಸೆಕ್ಷನ್ 80 ಸಿ ಅಡಿಯಲ್ಲಿ ವರ್ಷಕ್ಕೆ ಒಂದೂವರೆ ಲಕ್ಷ ರೂವರೆಗಿನ ಹೂಡಿಕೆಗೆ ಟ್ಯಾಕ್ಸ್ ಡಿಡಕ್ಷನ್ ಅವಕಾಶ ಸಿಗುತ್ತದೆ.

ಇದನ್ನೂ ಓದಿ: ಸಾಲ ತೀರಿಸಿದ ಬಳಿಕ ಕ್ರೆಡಿಟ್ ಸ್ಕೋರ್ ಅಪ್​ಡೇಟ್ ಆಗಬೇಕು; ಇಲ್ಲದಿದ್ದರೆ ಹೀಗೆ ಮಾಡಿ

ಹಿರಿಯ ನಾಗರಿಕರ ಉಳಿತಾಯ ಯೋಜನೆ ವಿವರ…

ನಿವೃತ್ತರಾದವರಿಗೆಂದು ಇರುವ ಈ ಯೋಜನೆಯು 60 ವರ್ಷ ಮೇಲ್ಪಟ್ಟ ಮಂದಿಗೆ ಸೀಮಿತವಾಗಿದೆ. ವಾಲಂಟರಿ ರಿಟೈರ್ಮೆಂಟ್ ಆಗಿದ್ದರೆ 55 ವರ್ಷ ವಯಸ್ಸಿನವರಿಗೂ ಇದು ಲಭ್ಯ ಇರುತ್ತದೆ. ಸೇನೆಯಲ್ಲಿದ್ದು ರಿಟೈರ್ ಆಗಿದ್ದರೆ ಕನಿಷ್ಠ ವಯಸ್ಸು 50 ವರ್ಷ ಇದೆ.

ಐದು ವರ್ಷದವರೆಗೆ ಮಾಸಿಕ ಆದಾಯ

ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್​ನಲ್ಲಿ ಕನಿಷ್ಠ ಹೂಡಿಕೆ 1,000 ರೂ ಇದೆ. ಗರಿಷ್ಠ ಹೂಡಿಕೆ 30,000 ರೂ ಇದೆ. ಐದು ವರ್ಷದವರೆಗಿನ ಯೋಜನೆ ಇದು. ಅವಧಿಗೆ ಮುನ್ನ ಹೂಡಿಕೆ ಹಿಂಪಡೆದರೆ ದಂಡ ಅನ್ವಯ ಆಗುತ್ತದೆ. ಒಂದು ವರ್ಷದೊಳಗೆ ನಿರ್ಗಮಿಸಿದರೆ ಯಾವ ಬಡ್ಡಿ ಆದಾಯವೂ ಸಿಗುವುದಿಲ್ಲ. ಎರಡು ವರ್ಷದ ಬಳಿಕ ಅಕೌಂಟ್ ನಿಲ್ಲಿಸಿದರೆ ಬಡ್ಡಿಯಲ್ಲಿ ಒಂದು ಪರ್ಸೆಂಟ್ ಅಷ್ಟು ಮೊತ್ತವನ್ನು ದಂಡವಾಗಿ ಪಡೆಯಲಾಗುತ್ತದೆ.

ಇದನ್ನೂ ಓದಿ: ಪೋಸ್ಟ್ ಆಫೀಸ್ ಸ್ಕೀಮ್; ಮಾಸಿಕ 10,000 ರೂ ಹೂಡಿಕೆ; 5 ವರ್ಷಕ್ಕೆ 7 ಲಕ್ಷ ರೂ

ತಿಂಗಳಿಗೆ 20,000 ರೂ ಮಾಸಿಕ ಆದಾಯ

ಈ ಸ್ಕೀಮ್​ನಲ್ಲಿ ನೀವು ಲಂಪ್ಸಮ್ ಆಗಿ ಹೂಡಿಕೆ ಮಾಡಬಹುದು. ಜಂಟಿ ಅಕೌಂಟ್ ತೆರೆಯಬಹುದು. ಸಿಂಗಲ್ ಅಕೌಂಟ್ ಆದರೆ 30,00,000 ರೂನಷ್ಟು ಲಂಪ್ಸಮ್ ಇಡಲು ಅವಕಾಶ ಇದೆ. ಗರಿಷ್ಠ ಮೊತ್ತ ಠೇವಣಿ ಇರಿಸಿದರೆ ವರ್ಷಕ್ಕೆ 2.46 ಲಕ್ಷ ರೂ ಸಿಗುತ್ತದೆ. ತಿಂಗಳಿಗೆ ಸುಮಾರು 20,500 ರೂ ಬಡ್ಡಿ ಆದಾಯ ಸಿಗುತ್ತಾ ಹೋಗುತ್ತದೆ.

ನಿಮಗೆ ಮಾಸಿಕವಾಗಿ ಹಣ ಸಿಗುವುದಿಲ್ಲ. ಬದಲಾಗಿ ಮೂರು ತಿಂಗಳಿಗೊಮ್ಮೆ ಬಡ್ಡಿಯನ್ನು ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ