ಪೋಸ್ಟ್ ಆಫೀಸ್ ಸ್ಕೀಮ್; ಮಾಸಿಕ 10,000 ರೂ ಹೂಡಿಕೆ; 5 ವರ್ಷಕ್ಕೆ 7 ಲಕ್ಷ ರೂ
Post Office recurring deposit scheme: ಪೋಸ್ಟ್ ಆಫೀಸ್ನಲ್ಲಿ ಟರ್ಮ್ ಟೆಪಾಸಿಟ್ನಿಂದ ಹಿಡಿದು ಕಿಸಾನ್ ವಿಕಾಸ್ ಪತ್ರದವರೆಗೆ ನಾನಾ ರೀತಿಯ ಸೇವಿಂಗ್ಸ್ ಸ್ಕೀಮ್ಗಳು ಲಭ್ಯ ಇವೆ. ಎಸ್ಐಪಿ ರೀತಿಯಲ್ಲಿ ಮಾಸಿಕವಾಗಿ ಹೂಡಿಕೆ ಮಾಡಲು ಅವಕಾಶ ಇರುವ ಪೋಸ್ಟ್ ಆಫೀಸ್ ರೆಕರಿಂಗ್ ಡೆಪಾಸಿಟ್ ಯೋಜನೆಯೂ ಇದೆ. ಈ ಪಿಒ ಆರ್ಡಿ ಸ್ಕೀಮ್ನಲ್ಲಿ ನೀವು ತಿಂಗಳಿಗೆ 10,000 ರೂ ಹೂಡಿಕೆ ಮಾಡಿದರೆ ಐದು ವರ್ಷಕ್ಕೆ ಏಳು ಲಕ್ಷಕ್ಕೂ ಹೆಚ್ಚು ಮೊತ್ತದ ಲಂಪ್ಸಮ್ ಸಿಗುತ್ತದೆ.

ಸಣ್ಣ ಉಳಿತಾಯ ಹಣದ ಹೂಡಿಕೆಗೆ ಪೋಸ್ಟ್ ಆಫೀಸ್ ಯೋಜನೆಗಳು (Post office scheme) ಬಹಳ ಸೂಕ್ತವಾಗಿವೆ. ಷೇರು, ಮ್ಯುಚುವಲ್ ಫಂಡ್ಗಳಲ್ಲಿ ಇರುವ ರಿಸ್ಕ್ ಅಂಶವು ಅಂಚೆ ಕಚೇರಿ ಯೋಜನೆಗಳಲ್ಲಿ ಇರುವುದಿಲ್ಲ. ಸರ್ಕಾರದಿಂದ ನಿರ್ವಹಿಸಲ್ಪಡಲಾಗುವುದರಿಂದ ಹಣಕ್ಕೆ ಖಾತ್ರಿ ಇರುತ್ತದೆ. ಪೋಸ್ಟ್ ಆಫೀಸ್ ವತಿಯಿಂದ ಹತ್ತಾರು ಸ್ಮಾಲ್ ಸೇವಿಂಗ್ಸ್ ಸ್ಕೀಮ್ಗಳನ್ನು ನಡೆಸಲಾಗುತ್ತಿದೆ. ಅದರಲ್ಲಿ ಪೋಸ್ಟ್ ಆಫೀಸ್ ರೆಕರಿಂಗ್ ಡೆಪಾಸಿಟ್ ಸ್ಕೀಮ್ (Post office Recurring Deposit) ಒಂದು. ಇದು ಬ್ಯಾಂಕುಗಳಲ್ಲಿನ ಆರ್ಡಿ ರೀತಿಯಂಥದ್ದು.
ಪೋಸ್ಟ್ ಆಫೀಸ್ ರೆಕರಿಂಗ್ ಡೆಪಾಸಿಟ್ ಸ್ಕೀಮ್
ರೆಕರಿಂಗ್ ಡೆಪಾಸಿಟ್ ಅಕೌಂಟ್ನಲ್ಲಿ ನೀವು ಪ್ರತೀ ತಿಂಗಳು ನಿಗದಿತ ಹಣವನ್ನು ಠೇವಣಿ ಇರಿಸುತ್ತಾ ಹೋಗಬಹುದು. ಪೋಸ್ಟ್ ಆಫೀಸ್ನ ಆರ್ಡಿ ಸ್ಕೀಮ್ 60 ತಿಂಗಳ (ಐದು ವರ್ಷ) ಅವಧಿಯದ್ದಾಗಿರುತ್ತದೆ. ನೀವು 60 ತಿಂಗಳು ಹಣ ಪಾವತಿಸಿದರೆ ಒಟ್ಟಿಗೆ ಲಂಪ್ಸಮ್ ಆಗಿ ರಿಟರ್ನ್ ಪಡೆಯಬಹುದು. ಇದರಲ್ಲಿ ವರ್ಷಕ್ಕೆ ಶೇ. 6.7ರ ಬಡ್ಡಿದರ ಸದ್ಯ ನಿಗದಿಯಾಗಿದೆ. ಪ್ರತೀ ಕ್ವಾರ್ಟರ್ಗೆ ಸರ್ಕಾರವು ಬಡ್ಡಿದರ ಪರಿಷ್ಕರಿಸುತ್ತಿರುತ್ತದೆ.
ಇದನ್ನೂ ಓದಿ: ಪೋಸ್ಟ್ ಆಫೀಸ್ ಅಪ್ಡೇಟ್; ಆರ್ಬಿಐ ದರ ಇಳಿಸಿದರೂ ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿಯಲ್ಲಿ ಇಲ್ಲ ಇಳಿಕೆ
ಈ ಸ್ಕೀಮ್ನಲ್ಲಿ ತಿಂಗಳಿಗೆ ಕನಿಷ್ಠ 100 ರೂ ಹೂಡಿಕೆ ಮಾಡಬಹುದು. ಗರಿಷ್ಠ ಹೂಡಿಕೆಗೆ ಮಿತಿ ಇರುವುದಿಲ್ಲ. ನೀವು ಪೋಸ್ಟ್ ಆಫೀಸ್ನಲ್ಲಿ ಆರ್ಡಿ ಅಕೌಂಟ್ ತೆರೆದು ತಿಂಗಳಿಗೆ 10,000 ರೂನಂತೆ ಹೂಡಿಕೆ ಮಾಡಿದರೆ ಐದು ವರ್ಷದಲ್ಲಿ ನಿಮಗೆ 7,13,659 ರೂ ರಿಟರ್ನ್ ಸಿಗುತ್ತದೆ.
ನೀವು ಈ 60 ತಿಂಗಳಲ್ಲಿ ಆರ್ಡಿ ಅಕೌಂಟ್ಗೆ 6,00,000 ರೂ ಹೂಡಿಕೆ ಮಾಡಿರುತ್ತೀರಿ. ಐದು ವರ್ಷದಲ್ಲಿ ನಿಮಗೆ ಸಿಗುವ ಬಡ್ಡಿ ಆದಾಯ 1,13,659 ರೂ ಆಗುತ್ತದೆ.
ನೀವು ಹೂಡಿಕೆಯ ಹಣವನ್ನು ದ್ವಿಗುಣಗೊಳಿಸಿದರೆ, ಅಂದರೆ ತಿಂಗಳಿಗೆ 20,000 ರೂನಂತೆ ಹೂಡಿಕೆ ಮಾಡಿದರೆ ಐದು ವರ್ಷದಲ್ಲಿ ನಿಮ್ಮ ಹೂಡಿಕೆ ಮೌಲ್ಯ 14,27,315 ರೂ ಆಗುತ್ತದೆ.
ಇದನ್ನೂ ಓದಿ: ಸಂಬಳ ಪಡೆಯುವವರಿಗೆ ಸೂಕ್ತವಾಗುವ ಉತ್ತಮ ಎಲ್ಐಸಿ ಪ್ಲಾನ್ಗಳಿವು…
ಈ ಸ್ಕೀಮ್ನಲ್ಲಿ ತೆರೆಯಲಾಗುವ ಅಕೌಂಟ್ ಐದು ವರ್ಷಕ್ಕೆ ಮೆಚ್ಯೂರ್ ಆಗುತ್ತದೆ. ಆ ನಂತರ ನೀವು ಅದನ್ನು ಮತ್ತೂ ಐದು ವರ್ಷ ವಿಸ್ತರಿಸಲು ಅವಕಾಶ ಇದೆ. ನೀವು ತಿಂಗಳಿಗೆ 10,000 ರೂ ಹೂಡಿಕೆಯನ್ನು 10 ವರ್ಷ ಮುಂದುವರಿಸಿಕೊಂಡು ಹೋದರೆ ಅದು 17 ಲಕ್ಷ ರೂ ಆಗುತ್ತದೆ. 20,000 ರೂ ಹೂಡಿಕೆಯಾದರೆ 34 ಲಕ್ಷ ರೂ ಅಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ