AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

October 2025 New Rules: ಅಕ್ಟೋಬರ್​ನಲ್ಲಿ ಹೊಸ ನಿಯಮಗಳು; ಯುಪಿಐ, ಎಲ್​ಪಿಜಿ, ಬಡ್ಡಿಯಲ್ಲಿ ಬದಲಾವಣೆ?

New rules from 2025 October 1st: ಅಕ್ಟೋಬರ್ 1 ರಂದು ಪ್ರಮುಖ ಬದಲಾವಣೆಗಳನ್ನು ನಿರೀಕ್ಷಿಸಬಹುದು. ಜನಸಾಮಾನ್ಯರ ಜೇಬಿತನ ಮೇಲೆ ಇವು ನೇರ ಪರಿಣಾಮ ಬೀರಲಿವೆ. ರೈಲ್ವೆ ಟಿಕೆಟ್ ಬುಕಿಂಗ್, ಯುಪಿಐ ಪಾವತಿ, ಆರ್​ಬಿಐ ರಿಪೋ ದರ, ಎಲ್​ಪಿಜಿ ದರ ಪರಿಷ್ಕರಣೆ ಮೊದಲಾದವು ಇವೆ. ಈ ನಿಯಮ ಬದಲಾವಣೆಗಳು ಏನು, ಅವುಗಳಿಂದ ಪರಿಣಾಮವೇನು ಎನ್ನುವ ಮಾಹಿತಿ ಇಲ್ಲಿದೆ.

October 2025 New Rules: ಅಕ್ಟೋಬರ್​ನಲ್ಲಿ ಹೊಸ ನಿಯಮಗಳು; ಯುಪಿಐ, ಎಲ್​ಪಿಜಿ, ಬಡ್ಡಿಯಲ್ಲಿ ಬದಲಾವಣೆ?
ಹಣ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Sep 26, 2025 | 12:19 PM

Share

ನವದೆಹಲಿ, ಸೆಪ್ಟೆಂಬರ್ 26: ಮುಂದಿನ ತಿಂಗಳು ಅಕ್ಟೋಬರ್ 1 ರಿಂದ ಕೆಲ ಮಹತ್ವದ ಬದಲಾವಣೆಗಳು ನಡೆಯಲಿವೆ. ಈ ಬದಲಾವಣೆಗಳು ಸಾಮಾನ್ಯ ಜನರ ಜೇಬಿನ ಮೇಲೆ ಪರಿಣಾಮ ಬೀರಬಲ್ಲಂಥವು. ಉದಾಹರಣೆಗೆ, ಪ್ರತಿ ತಿಂಗಳ ಮೊದಲ ತಾರೀಖಿನಂದು ಎಲ್‌ಪಿಜಿ (LPG) ಸಿಲಿಂಡರ್ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಇದರ ಬೆಲೆ ಏರಿಳಿತವು ಜನಜೀವನದ ಮೇಲೆ ಬಹಳ ಸಾಮಾನ್ಯ ಪರಿಣಾಮ ಬೀರುತ್ತದೆ. ರೈಲು ಟಿಕೆಟ್​ಗಳಿಂದ ಹಿಡಿದು ಯುಪಿಐವರೆಗೆ ಇನ್ನೂ ಕೆಲ ನಿಯಮ ಬದಲಾವಣೆಗಳು ಅಕ್ಟೋಬರ್​ನಲ್ಲಿವೆ. ಇವೆಲ್ಲವೂ ಕೂಡ ಜನಸಾಮಾನ್ಯರ ಹಣಕಾಸು ಸ್ಥಿತಿಯ ಮೇಲೆ ಪರಿಣಾಮ ಬೀರುವಂಥವು.

2025ರ ಅಕ್ಟೋಬರ್​ನಲ್ಲಿ ಆಗಲಿರುವ ಪ್ರಮುಖ ಹಣಕಾಸು ಬೆಳವಣಿಗೆಗಳು

ಆರ್‌ಬಿಐ ರೆಪೊ ದರ ಪರಿಷ್ಕರಣೆ

ಭಾರತೀಯ ರಿಸರ್ವ್ ಬ್ಯಾಂಕ್​ನ ಮಾನಿಟರಿ ಪಾಲಿಸಿ ಕಮಿಟಿ ಸಾಮಾನ್ಯವಾಗಿ ಎರಡು ತಿಂಗಳಿಗೊಮ್ಮೆ ಸಭೆ ನಡೆಸಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುತ್ತದೆ. ಆಗಸ್ಟ್​ನಲ್ಲಿ ಎಂಪಿಸಿ ಸಭೆ ನಡೆದಿತ್ತು. ಈಗ ಸೆಪ್ಟೆಂಬರ್ 29ರಂದು ಆರಂಭಗೊಂಡು ಮೂರು ದಿನ ಸಭೆ ನಡೆಯಲಿದ್ದು, ಅಕ್ಟೋಬರ್ 1ರಂದು ಸಭೆಯ ನಿರ್ಧಾರಗಳನ್ನು ಪ್ರಕಟಿಸಲಾಗುತ್ತದೆ.

ಇದನ್ನೂ ಓದಿ: ಟ್ಯಾಕ್ಸ್ ಆಡಿಟ್ ರಿಪೋರ್ಟ್ ಸಲ್ಲಿಸಲು ಗಡುವು ಅಕ್ಟೋಬರ್ 31ರವರೆಗೂ ವಿಸ್ತರಣೆ

ರೆಪೋ ದರ ಸೇರಿದಂತೆ ವಿವಿಧ ನೀತಿ ನಿರ್ಧಾರಗಳನ್ನು ಸಭೆಯಲ್ಲಿ ತೆಗೆದುಕೊಳ್ಳಲಾಗುತ್ತದೆ. ಫೆಬ್ರುವರಿಯಿಂದ ಸತತವಾಗಿ ರಿಪೋ ದರ ಇಳಿಕೆ ಆಗುತ್ತಿದ್ದ, ಇದು ಅಕ್ಟೋಬರ್​ನಲ್ಲೂ ಮುಂದುವರಿಯುತ್ತದಾ ಎಂಬುದು ಒಂದನೇ ತಾರೀಖು ಗೊತ್ತಾಗುತ್ತದೆ. ಎಸ್​ಬಿಐ ರಿಸರ್ಚ್ ತಂಡವು ಈ ಬಾರಿ 25 ಮೂಲಾಂಕಗಳಷ್ಟು ದರ ಕಡಿತ ಮಾಡಬಹುದು ಎಂದು ಅಂದಾಜು ಮಾಡಿದೆ. ಇನ್ನೂ ಕೆಲ ಆರ್ಥಿಕ ತಜ್ಞರು ಈ ಬಾರಿ ದರ ಕಡಿತ ಮಾಡುವ ಸಾಧ್ಯತೆ ಕಡಿಮೆ ಎನ್ನುವ ತರ್ಕವನ್ನೂ ಮಾಡಿದ್ದಾರೆ. ಅದೇನೇ ಆದರೂ ರಿಪೋ ದರ ಅಥವಾ ಬಡ್ಡಿದರ ಹೆಚ್ಚಳ ಸಾಧ್ಯತೆಯಂತೂ ಸದ್ಯಕ್ಕೆ ಇಲ್ಲ.

UPI ನಲ್ಲಿ ದೊಡ್ಡ ಬದಲಾವಣೆ

ಭಾರತದಲ್ಲಿ ಅತಿಹೆಚ್ಚು ಬಳಕೆಯಾಗುತ್ತಿರುವ ಪೇಮೆಂಟ್ ವಿಧಾನವಾದ ಯುಪಿಐನಲ್ಲಿ ಒಂದು ಪ್ರಮುಖ ನಿಯಮ ಬದಲಾವಣೆ ಅಕ್ಟೋಬರ್​ನಲ್ಲಿ ಆಗಲಿದೆ ಎಂದು ಹೇಳಲಾಗುತ್ತಿದೆ. ಇದು ಯುಪಿಐ ಪಿ2ಪಿ ಸೇವೆಗೆ ಸಂಬಂಧಿಸಿದ್ದಾಗಿದ್ದು, ‘ಕಲೆಕ್ಟ್ ರಿಕ್ವೆಸ್ಟ್’ ಫೀಚರ್ ಅನ್ನು ನಿಲ್ಲಿಸಬಹುದು. ಒಬ್ಬ ಯುಪಿಐ ಬಳಕೆದಾರ ಮತ್ತೊಮ್ಮೆ ಬಳಕೆದಾರರಿಗೆ ಹಣಕ್ಕಾಗಿ ಮನವಿ ಸಲ್ಲಿಸುವ ಕ್ರಮವು ಕಲೆಕ್ಟ್ ರಿಕ್​ವೆಸ್ಟ್. ಈ ವಿಧಾನದ ಮೂಲಕ ಕೆಲವರು ವಂಚನೆ ಎಸಗುತ್ತಿದ್ದರು. ಇದನ್ನು ತಪ್ಪಿಸಲು ಎನ್​ಪಿಸಿಐ ಕಲೆಕ್ಟ್ ರಿಕ್ವೆಸ್ಟ್ ಫೀಚರ್ ಅನ್ನೇ ತೆಗೆದುಹಾಕುತ್ತಿದೆ.

ರೈಲು ಟಿಕೆಟ್ ಬುಕಿಂಗ್‌ನಲ್ಲಿ ಬದಲಾವಣೆಗಳು

ಅಕ್ಟೋಬರ್ 1 ರಿಂದ, ಆಧಾರ್ ದೃಢೀಕರಿಸಿದ ಪ್ರಯಾಣಿಕರಿಗೆ ರೈಲ್ವೆ ಆದ್ಯತೆ ನೀಡಲಿದೆ. ಅಂತಹ ಪ್ರಯಾಣಿಕರಿಗೆ ರೈಲ್ವೆ ಟಿಕೆಟ್ ಬುಕಿಂಗ್ ಪ್ರಾರಂಭವಾಗುವ 15 ನಿಮಿಷಗಳ ಮೊದಲು ಆದ್ಯತೆಯ ಪ್ರವೇಶವನ್ನು ನೀಡಲಾಗುವುದು. ಇದರರ್ಥ ಅವರು, ಟಿಕೆಟ್ ಬುಕಿಂಗ್ ಆರಂಭವಾಗಿ ಮೊದಲ 15 ನಿಮಿಷಗಳ ಮುಂಚಿತವಾಗಿ ಟಿಕೆಟ್ ಬುಕ್ ಮಾಡಲು ಸಾಧ್ಯವಾಗುತ್ತದೆ. ಬೇರೆಯವರು 15 ನಿಮಿಷಗಳ ನಂತರ ಬುಕಿಂಗ್ ಮಾಡಬಹುದು.

ಇದನ್ನೂ ಓದಿ: ಬ್ಯಾಂಕ್​ನಲ್ಲಿವೆ RTGS, NEFT, IMPS, ECS ACH ಪೇಮೆಂಟ್ ಸಿಸ್ಟಂಗಳು; ಯಾವುದಕ್ಕೆ ಎಷ್ಟಿದೆ ಶುಲ್ಕ? ಇಲ್ಲಿದೆ ಮಾಹಿತಿ

ಎಲ್‌ಪಿಜಿ ಬೆಲೆಗಳಲ್ಲಿ ಬದಲಾವಣೆ

ಪ್ರತಿ ತಿಂಗಳ ಮೊದಲ ದಿನದಂದು ಗ್ಯಾಸ್ ಏಜೆನ್ಸಿಗಳು ಎಲ್‌ಪಿಜಿ ದರಗಳನ್ನು ಪರಿಷ್ಕರಿಸುತ್ತವೆ. ಗ್ಯಾಸ್ ಏಜೆನ್ಸಿಗಳು ಪ್ರತಿ ತಿಂಗಳು ಗೃಹಬಳಕೆ ಮತ್ತು ಕಮರ್ಷಿಯಲ್ ಎಲ್​ಪಿಜಿ ಸಿಲಿಂಡರ್​ಗಳ ಬೆಲೆಗಳನ್ನು ಪರಿಷ್ಕರಿಸುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:39 am, Fri, 26 September 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ