AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭರ್ಜರಿ ಏರಿಕೆಯಾಗಲಿದೆ ಪತಂಜಲಿ ಷೇರುಬೆಲೆ; 695 ರೂ ಟಾರ್ಗೆಟ್ ಪ್ರೈಸ್ ಇಟ್ಟ ಜೆಫರೀಸ್

Jefferies give buy rating for Patanjali Foods shares: ಜಾಗತಿಕ ಬ್ರೋಕರೇಜ್ ಸಂಸ್ಥೆಯಾದ ಜೆಫರೀಸ್ ಭಾರತದ ಪತಂಜಲಿ ಫುಡ್ಸ್ ಷೇರಿಗೆ Buy ರೇಟಿಂಗ್ ಕೊಟ್ಟಿದೆ. ಜೆಫರೀಸ್ ಪ್ರಕಾರ ಪತಂಜಲಿ ಸಂಸ್ಥೆಯ ಬ್ಯುಸಿನೆಸ್ ಶೇ. 9ರ ಸಿಎಜಿಆರ್​ನಲ್ಲಿ ಬೆಳೆಯಬಹುದು. 589 ರೂ ಇರುವ ಅದರ ಷೇರುಬೆಲೆ 695 ರೂಗೆ ಏರಬಹುದು ಎಂದು ಪ್ರೈಸ್ ಟಾರ್ಗೆಟ್ ಅಂದಾಜು ಮಾಡಿದೆ.

ಭರ್ಜರಿ ಏರಿಕೆಯಾಗಲಿದೆ ಪತಂಜಲಿ ಷೇರುಬೆಲೆ; 695 ರೂ ಟಾರ್ಗೆಟ್ ಪ್ರೈಸ್ ಇಟ್ಟ ಜೆಫರೀಸ್
ಬಾಬಾ ರಾಮದೇವ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 26, 2025 | 3:53 PM

Share

ನವದೆಹಲಿ, ಸೆಪ್ಟೆಂಬರ್ 26: ಭಾರತದ ಪ್ರಮುಖ ಎಫ್​ಎಂಸಿಜಿ ಕಂಪನಿಗಳಲ್ಲಿ ಒಂದೆನಿಸಿರುವ ಪತಂಜಲಿ ಫೂಡ್ಸ್ (Patanjali Foods) ಕಳೆದ ಕ್ವಾರ್ಟರ್​ನಲ್ಲಿ ತುಸು ನಿರಾಸೆಯ ರಿಪೋರ್ಟ್ (Q1 report) ಬಂದಿದೆಯಾದರೂ, ಮುಂಬರುವ ದಿನಗಳಲ್ಲಿ ಅದರ ಬ್ಯುಸಿನೆಸ್ ಹೆಚ್ಚುವ ಸಾಧ್ಯತೆ ದಟ್ಟವಾಗಿದೆ. ಜಾಗತಿಕ ಬ್ರೋಕರೇಜ್ ಸಂಸ್ಥೆಯಾದ ಜೆಫರೀಸ್ (Jefferies) ಇದೀಗ ಪತಂಜಲಿ ಫೂಡ್ಸ್​ಗೆ ‘Buy’ ರೇಟಿಂಗ್ ಕೊಟ್ಟಿದೆ. ಜೆಫರೀಸ್ Buy ರೇಟಿಂಗ್ ಕೊಟ್ಟಿರುವ ಎಂಟು ಕಂಪನಿಗಳಲ್ಲಿ ಪತಂಜಲಿಯೂ ಒಂದು.

ಜೆಫರೀಸ್ ಸಂಸ್ಥೆಯು ಪತಂಜಲಿ ಷೇರಿಗೆ ಪ್ರೈಸ್ ಟಾರ್ಗೆಟ್ ಅನ್ನು 695 ರೂಗೆ ಏರಿಸಿದೆ. ಅದರ ಅಡುಗೆ ತೈಲದ ಮಾರಾಟ ಹೆಚ್ಚುತ್ತಿರುವುದು, ಹಬ್ಬದ ಸೀಸನ್​ನಲ್ಲಿ ಸಾಮಾನ್ಯವಾಗಿ ಮಾರಾಟ ಏರುವುದು, ಪ್ರಮುಖ ಬ್ಯುಸಿನೆಸ್ ವಿಭಾಗಗಳಲ್ಲಿ ಪತಂಜಲಿಯ ಲಾಭ ಹೆಚ್ಚುತ್ತಿರುವುದು ಇವುಗಳನ್ನು ಗಣಿಸಿ ಜೆಫರೀಸ್ ಟಾರ್ಗೆಟ್ ಪ್ರೈಸ್ ಅನ್ನು ಹೆಚ್ಚಿಸಿರುವುದು ತಿಳಿದುಬಂದಿದೆ.

ಇದನ್ನೂ ಓದಿ: ಸರ್ವೈಕಲ್ ಸ್ಪಾಂಡಿಲೈಟಿಸ್, ಗರ್ಭಕಂಠದ ನೋವು ನಿವಾರಿಸಲು ಉಪಯುಕ್ತ ಯೋಗಾಸನಗಳು: ಬಾಬಾ ರಾಮದೇವ್ ಸಲಹೆ

ಪತಂಜಲಿ ಷೇರು ಬೆಳವಣಿಗೆ ಬಗ್ಗೆ ಮೂರು ಸಾಧ್ಯತೆ ಅಂದಾಜಿಸಿದ ಜೆಫರೀಸ್

ಬ್ರೋಕರೇಜ್ ಸಂಸ್ಥೆಯಾದ ಜೆಫರೀಸ್ ಪತಂಜಲಿ ಫುಡ್ಸ್ ಷೇರು ಮತ್ತು ಬ್ಯುಸಿನೆಸ್​ಗಳ ಮುಂದಿನ ಓಟ ಹೇಗಿರಬಹುದು ಎಂದು ಮೂರು ಸಾಧ್ಯತೆಗಳನ್ನು ಅಂದಾಜಿಸಿದೆ. ಅದರ ಮುಖ್ಯ ಅಂದಾಜು ಪ್ರಕಾರ ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ನೇತೃತ್ವದ ಪತಂಜಲಿ ಫುಡ್ಸ್ 2025ರಿಂದ 2028ರ ವರ್ಷದವರೆಗೆ ಶೇ. 9ರ ಸಿಎಜಿಆರ್​ನಲ್ಲಿ ಆದಾಯ ಹೆಚ್ಚಿಸಿಕೊಳ್ಳಬಹುದು. ಹೀಗಾದರಲ್ಲಿ ಪತಂಜಲಿಯ ಇಪಿಎಸ್ ಶೇ. 19ರಷ್ಟು ಬೆಳೆಯುತ್ತದೆ. ಅದರ ಷೇರುಬೆಲೆ 695 ರೂ ಆಗಬಹುದು ಎಂಬುದು ಜೆಫರೀಸ್​ನ ಮೊದಲ ಅಂದಾಜು.

ಎರಡನೇ ಅಂದಾಜು ಪ್ರಕಾರ, ಪತಂಜಲಿ ಫುಡ್ಸ್​ನ ಆದಾಯವು ಈ ಮೂರು ವರ್ಷ ಶೇ. 10ರ ಸಿಎಜಿಆರ್​ನಲ್ಲಿ ಹೆಚ್ಚಬಹುದು. ಹೀಗಾದಲ್ಲಿ ಷೇರುಬೆಲೆ 760 ರೂಗೆ ಹೋಗುವ ಸಾಧ್ಯತೆ ಇರುತ್ತದೆ.

ಇನ್ನು, ಪತಂಜಲಿ ಫೂಡ್ಸ್ ಅದೃಷ್ಟ ಕೈಕೊಟ್ಟರೆ ಅದರ ಆದಾಯವು ಶೇ. 5ರ ಸಿಎಜಿಆರ್​ನಲ್ಲಿ ಮಾತ್ರವೇ ಬೆಳೆಯಬಹುದು. ಹೀಗಾದಲ್ಲಿ ಷೇರುಬೆಲೆ 480 ರೂಗೆ ಇಳಿಯಬಹುದು ಎಂಬುದು ಜೆಫರೀಸ್​ನ ಮೂರನೇ ಅಂದಾಜು.

ಇದನ್ನೂ ಓದಿ: ಜಿಎಸ್​ಟಿ ದರ ಕಡಿತ: ಬಿಸ್ಕತ್​ನಿಂದ ಹಿಡಿದು ತುಪ್ಪದವರೆಗೆ, ಪತಂಜಲಿಯ ವಿವಿಧ ಉತ್ಪನ್ನಗಳ ಬೆಲೆ ಇಳಿಕೆ

760 ರೂಗೆ ಷೇರುಬೆಲೆ ಏರಿದರೆ ಹೂಡಿಕೆದಾರರಿಗೆ ಎಷ್ಟು ಲಾಭ?

ಜೆಫರೀಸ್ ಸಂಸ್ಥೆ ಪತಂಜಲಿ ಫುಡ್ಸ್​ಗೆ 695 ರೂ ಮತ್ತು 760 ರೂ ಪ್ರೈಸ್ ಟಾರ್ಗೆಟ್ ಕೊಟ್ಟಿದೆ. ಇವತ್ತು ಶುಕ್ರವಾರ (ಸೆ. 26) ಅದರ ಷೇರುಬೆಲೆ 589 ರೂ ಇದೆ. 695 ಪ್ರೈಸ್ ಟಾರ್ಗೆಟ್ ಈಡೇರಿದಲ್ಲಿ ಷೇರು ಬೆಲೆ ಶೇ. 18ರಷ್ಟು ಏರಿದಂತಾಗುತ್ತದೆ. ಬೆಲೆ 760 ರೂಗೆ ಏರಿದಲ್ಲಿ ಶೇ. 29ರಷ್ಟು ಲಾಭ ಹೆಚ್ಚಳವನ್ನು ಹೂಡಿಕೆದಾರರು ನಿರೀಕ್ಷಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ