AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಎಸ್​ಟಿ ದರ ಕಡಿತ: ಬಿಸ್ಕತ್​ನಿಂದ ಹಿಡಿದು ತುಪ್ಪದವರೆಗೆ, ಪತಂಜಲಿಯ ವಿವಿಧ ಉತ್ಪನ್ನಗಳ ಬೆಲೆ ಇಳಿಕೆ

Patanjali reduces its products prices: ಸೆಪ್ಟೆಂಬರ್ 22ರಿಂದ ಹೆಚ್ಚಿನ ಸರಕುಗಳಿಗೆ ಜಿಎಸ್​ಟಿ ಇಳಿಸಲಾಗಿದೆ. ಪತಂಜಲಿ ಸಂಸ್ಥೆ ಕೂಡ ಈ ಬೆಲೆ ಇಳಿಕೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಿದೆ. ಅದರ ಹಲವು ಉತ್ಪನ್ನಗಳ ಬೆಲೆ ಇಳಿಕೆ ಮಾಡಲಾಗಿದೆ. ದಂತ ಕಾಂತಿ, ಕೇಶ್ ಕಾಂತಿ, ತುಪ್ಪ, ಬಿಸ್ಕತ್, ಜ್ಯೂಸ್ ಇತ್ಯಾದಿ ಹಲವು ಪತಂಜಲಿ ಸರಕುಗಳ ಬೆಲೆ ಕಡಿಮೆಗೊಂಡಿದೆ.

ಜಿಎಸ್​ಟಿ ದರ ಕಡಿತ: ಬಿಸ್ಕತ್​ನಿಂದ ಹಿಡಿದು ತುಪ್ಪದವರೆಗೆ, ಪತಂಜಲಿಯ ವಿವಿಧ ಉತ್ಪನ್ನಗಳ ಬೆಲೆ ಇಳಿಕೆ
ಪತಂಜಲಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Sep 22, 2025 | 4:26 PM

Share

ನವದೆಹಲಿ, ಸೆಪ್ಟೆಂಬರ್ 22: ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರ ನೇತೃತ್ವದ ಪತಂಜಲಿಗೆ (Patanjali) ಸೇರಿದ ವಿವಿಧ ಉತ್ಪನ್ನಗಳ ಬೆಲೆ ಇಂದಿನಿಂದ ಕಡಿಮೆಗೊಂಡಿವೆ. ಜಿಎಸ್​ಟಿ ದರ ಇಳಿಕೆಯ ಪರಿಣಾಮವಾಗಿ ಪತಂಜಲಿಯ ಎಲ್ಲಾ ಉತ್ಪನ್ನಗಳ ಬೆಲೆಯನ್ನು ಕಡಿಮೆಗೊಳಿಸಲಾಗಿದೆ. ಆಹಾರವಸ್ತುಗಳು, ಪರ್ಸನಲ್ ಕೇರ್ ವಸ್ತುಗಳು, ಆಯುರ್ವೇದ ಉತ್ಪನ್ನಗಳು ಮೊದಲಾದವುಗಳ ಬೆಲೆ ತಗ್ಗಿದೆ. ಇಂದು ಸೆಪ್ಟೆಂಬರ್ 22ರಿಂದ ಹೊಸ ಬೆಲೆಗಳು ಜಾರಿಗೆ ಬರಲಿವೆ.

ಪತಂಜಲಿ ನೂಟ್ರೆಲಾ ಸೋಯಾ ಉತ್ಪನ್ನಗಳು

  • ನೂಟ್ರೆಲಾ ಚಂಕ್ಸ್, 1 ಕಿಲೋ ಪ್ಯಾಕ್: 210 ರೂನಿಂದ 190 ರೂಗೆ ಇಳಿಕೆ
  • ನೂಟ್ರೆಲಾ ಚಂಕ್ಸ್, 200 ಗ್ರಾಂ ಪ್ಯಾಕ್: 50 ರೂನಿಂದ 47 ರೂಗೆ ಇಳಿಕೆ
  • ಸೋಯುಮ್ ಚಂಕ್ಸ್, 1 ಕಿಲೋ ಪ್ಯಾಕ್: 150 ರೂನಿಂದ 140 ರೂಗೆ ಇಳಿಕೆ
  • ಸೋಯುಮ್ 200 ಗ್ರಾಮ್ ಪ್ಯಾಕ್: 60 ರೂನಿಂದ 57 ರೂಗೆ ಇಳಿಕೆ

45 ಗ್ರಾಮ್ ಮತ್ತು 80 ಗ್ರಾಮ್​ಗಳ ಟ್ರಯಲ್ ಪ್ಯಾಕ್​ಗಳ ಬೆಲೆಯಲ್ಲಿ ವ್ಯತ್ಯಯವಾಗಿಲ್ಲ. ಆದರೆ, ಪ್ಯಾಕ್​ನ ತೂಕ ಹೆಚ್ಚಿಸಲಾಗಿದೆ.

ಇದನ್ನೂ ಓದಿ: ದಿವ್ಯ ಕಾಯಕಲ್ಪ ತೈಲದ ಪ್ರಯೋಜನ, ಬಳಕೆ ವಿಧಾನ, ಮುನ್ನೆಚ್ಚರಿಕೆ ಕ್ರಮ ತಿಳಿಯಿರಿ

ಪತಂಜಲಿ ಬಿಸ್ಕತ್ ಮತ್ತು ಕುಕೀಸ್ ಪರಿಷ್ಕೃತ ಬೆಲೆ

  • ದೂದ್ ಬಿಸ್ಕತ್ 35 ಗ್ರಾಮ್: 5 ರೂನಿಂದ 4.50 ರೂಗೆ ಇಳಿಕೆ
  • ದೂಧ್ ಬಿಸ್ಕತ್ 70 ಗ್ರಾಮ್: 10 ರೂನಿಂದ 9 ರೂಗೆ ಇಳಿಕೆ
  • ಕ್ರಂಚಿ ಕೋಕೋನಟ್ ಕುಕೀಸ್, 40 ಗ್ರಾಮ್: 5 ರೂನಿಂದ 4.50 ರೂಗೆ ಇಳಿಕೆ
  • ಆರೋಗ್ಯ ಬಿಸ್ಕತ್ 75 ಗ್ರಾಮ್: 10 ರೂನಿಂದ 9 ರೂಗೆ ಇಳಿಕೆ
  • ಕ್ರೀಮ್​ಫೀಸ್ಟ್ ಚಾಕೋ ಬಿಸ್ಕತ್ 35 ಗ್ರಾಮ್: 5 ರೂನಿಂದ 4.50 ರೂಗೆ ಇಳಿಕೆ
  • ಬಟರ್ ಕುಕೀಸ್ 35 ಗ್ರಾಮ್: 5 ರೂನಿಂದ 4.50 ರೂಗೆ ಇಳಿಕೆ
  • ಮಾರೀ ಬಿಸ್ಕತ್ 225 ಗ್ರಾಮ್: 30 ರೂನಿಂದ 27 ರೂಗೆ ಇಳಿಕೆ
  • ಮಾರೀ ಬಿಸ್ಕತ್ 70 ಗ್ರಾಮ್: 10 ರೂನಿಂದ 9 ರೂಗೆ ಇಳಿಕೆ
  • ನಾರಿಯಲ್ ಬಿಸ್ಕತ್, 68 ಗ್ರಾಮ್: 10 ರೂನಿಂದ 9 ರೂಗೆ ಇಳಿಕೆ.

ಪತಂಜಲಿ ನೂಡಲ್ಸ್ ಪರಿಷ್ಕೃತ ದರ

  • ಪತಂಜಲಿ ಟ್ವಿಸ್ಟಿ ಟೇಸ್ಟಿ ನೂಡಲ್ಸ್, 50 ಗ್ರಾಮ್: 10 ರೂನಿಂದ 9.35 ರೂಗೆ ಇಳಿಕೆ
  • ಆಟ್ಟಾ ನೂಡಲ್ಸ್ ಚಟ್​ಪಟ, 60 ಗ್ರಾಮ್: 12 ರೂನಿಂದ 11.25 ರೂಗೆ ಇಳಿಕೆ

ಪತಂಜಲಿ ದಂತ್ ಕಾಂತಿ ಓರಲ್ ಕೇರ್

  • ದಂತ ಕಾಂತಿ ನ್ಯಾಚುರಲ್ ಟೂತ್​ಪೇಸ್ಟ್ 200 ಗ್ರಾಮ್: 120 ರೂನಿಂದ 106 ರೂಗೆ ಇಳಿಕೆ
  • ದಂತಕಾಂತಿ ಡಿ.ಸಿ. ಅಡ್ವಾನ್ಸ್ 100 ಗ್ರಾಮ್: 90 ರೂನಿಂದ 80 ರೂಗೆ ಇಳಿಕೆ
  • ದಂತ ಕಾಂತಿ ಮೆಡಿಕೇಟೆಡ್ ಓರಲ್ ಜಲ್ 100 ಗ್ರಾಮ್: 45 ರೂನಿಂದ 40 ರೂಗೆ ಇಳಿಕೆ

ಪತಂಜಲಿ ಕೇಶ್ ಕಾಂತಿ ಪರಿಷ್ಕೃತ ಬೆಲೆ

  • ಕೇಶ್ ಕಾಂತಿ ಆಮ್ಲ ಹೇರ್ ಆಯಿಲ್ 100 ಎಂಎಲ್: 48 ರೂನಿಂದ 42 ರೂಗೆ ಇಳಿಕೆ
  • ಕೇಶ್ ಕಾಂತಿ ಹೇರ್ ಕ್ಲೀನ್ಸರ್: 120 ರೂನಿಂದ 106 ರೂಗೆ ಇಳಿಕೆ
  • ಕೇಶ್ ಕಾಂತಿ ಹೇರ್ ಕ್ಲೀನ್ಸರ್ ನ್ಯಾಚುರಲ್ 180 ಎಂಎಲ್: 100 ರೂನಿಂದ 89 ರೂಗೆ ಇಳಿಕೆ

ಇದನ್ನೂ ಓದಿ: ಅಮೆರಿಕಕ್ಕೆ ಹೋಗಲು ಎಚ್​1ಬಿ ಸೇರಿ ಹಲವು ವಿಧದ ವೀಸಾಗಳು; ಇಲ್ಲಿದೆ ಸಂಪೂರ್ಣ ಮಾಹಿತಿ

ಪತಂಜಲಿ ಹೆಲ್ತ್ ಮತ್ತು ವೆಲ್ನೆಸ್ ಉತ್ಪನ್ನಗಳ ಪರಿಷ್ಕೃತ ದರ

  • ಆಮ್ಲಾ ಜ್ಯೂಸ್ ಒಂದು ಲೀಟರ್: 150 ರೂನಿಂದ 140 ರೂಗೆ ಇಳಿಕೆ
  • ಗಿಲೋಯ್ ಜ್ಯೂಸ್ 500 ಎಂಎಲ್: 90 ರೂನಿಂದ 84 ರೂಗೆ ಇಳಿಕೆ
  • ಕರೇಲ ಜಾಮುನ್ ಜ್ಯೂಸ್ 500 ಎಂಎಲ್: 150 ರೂನಿಂದ 140 ರೂಗೆ ಇಳಿಕೆ
  • ಬಾದಾಮ್ ಪಾಕ್ 500 ಗ್ರಾಮ್: 275 ರೂನಿಂದ 257 ರೂಗೆ ಇಳಿಕೆ
  • ವಿಶೇಷ ಚ್ಯವನಪ್ರಾಶ್ 1 ಕಿಲೋ: 360 ರೂನಿಂದ 337 ರೂಗೆ ಇಳಿಕೆ

ಪತಂಜಲಿ ತುಪ್ಪದ ಪರಿಷ್ಕೃತ ಬೆಲೆಗಳು

  • ಹಸುವಿನ ತುಪ್ಪ 900 ಎಂಎಲ್: 780 ರೂನಿಂದ 731 ರೂಗೆ ಇಳಿಕೆ
  • ಹಸುವಿನ ತುಪ್ಪ 450 ಎಂಎಲ್: 420 ರೂನಿಂದ 393 ರೂಗೆ ಇಳಿಕೆ
  • ಪತಂಜಲಿ ಬಾಡಿ ಕ್ಲೀನ್ಸರ್​ಗಳ ಪರಿಷ್ಕೃತ ಬೆಲೆ
  • ನೀಮ್ ಕಾಂತಿ ಬಾಡಿ ಕ್ಲೀನ್ಸರ್ 75 ಗ್ರಾಮ್: 25 ರೂನಿಂದ 22 ರೂಗೆ ಇಳಿಕೆ.
  • ಆಲೋವೆರಾ, ನೀಮ್, ಹಲ್ದಿ ಬಾಡಿ ಕ್ಲೀನ್ಸರ್ಸ್ 45 ಗ್ರಾಮ್: 10 ರೂನಿಂದ 9 ರೂಗೆ ಇಳಿಕೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:26 pm, Mon, 22 September 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ