ಅಕೌಂಟ್ನಲ್ಲಿ ಹೆಚ್ಚುವರಿ ಹಣಕ್ಕೆ ಶೇ. 6.5 ಬಡ್ಡಿ; ಇದು ಜಿಯೋ ಪೇಮೆಂಟ್ಸ್ ಬ್ಯಾಂಕ್ನ ಆಫರ್
Jio Payments Bank's Savings Pro scheme: ಜಿಯೋ ಪೇಮೆಂಟ್ಸ್ ಬ್ಯಾಂಕ್ ಇದೀಗ ಸೇವಿಂಗ್ಸ್ ಪ್ರೋ ಎನ್ನುವ ಹೊಸ ಸ್ಕೀಮ್ ಪರಿಚಯಿಸಿದೆ. ಇದರಲ್ಲಿ ಜಿಯೋ ಬ್ಯಾಂಕ್ ಗ್ರಾಹಕರು ಈ ಸ್ಕೀಮ್ ಆಯ್ದುಕೊಂಡರೆ, ಅವರ ಖಾತೆಯಲ್ಲಿನ ಹೆಚ್ಚುವರಿ ಹಣಕ್ಕೆ ಒಳ್ಳೆಯ ರಿಟರ್ನ್ಸ್ ಸಿಗುತ್ತದೆ. ಪೇಮೆಂಟ್ಸ್ ಬ್ಯಾಂಕ್ ತನ್ನ ಗ್ರಾಹಕರ ಹಣವನ್ನು ಓವರ್ನೈಟ್ ಫಂಡ್ಗಳಲ್ಲಿ ಹೂಡಿಕೆ ಮಾಡುತ್ತದೆ. ಯಾವಾಗ ಬೇಕಾದರೂ ಗ್ರಾಹಕರು ಹಣ ಹಿಂಪಡೆಯಬಹುದು.

ಮುಂಬೈ, ಸೆಪ್ಟೆಂಬರ್ 22: ರಿಲಾಯನ್ಸ್ ಇಂಡಸ್ಟ್ರೀಸ್ಗೆ ಸೇರಿದ ಜಿಯೋ ಫೈನಾನ್ಷಿಯಲ್ ಸರ್ವಿಸಸ್ನ ಅಂಗಸಂಸ್ಥೆಯಾದ ಜಿಯೋ ಪೇಮೆಂಟ್ಸ್ ಬ್ಯಾಂಕ್ (Jio Payments Bank) ತನ್ನ ಗ್ರಾಹಕರಿಗೆ ಆಕರ್ಷಕ ಆಫರ್ ಮುಂದಿಟ್ಟಿದೆ. ಗ್ರಾಹಕರು ತಮ್ಮ ಖಾತೆಯಲ್ಲಿರುವ ಹೆಚ್ಚುವರಿ ಹಣವನ್ನು ವ್ಯರ್ಥವಾಗಲು ಬಿಡದೆ ಹೆಚ್ಚಿನ ಬಡ್ಡಿ ಗಳಿಸಲು ಅವಕಾಶ ಕೊಡಲಾಗಿದೆ. ಈ ನಿಟ್ಟಿನಲ್ಲಿ ‘ಸೇವಿಂಗ್ಸ್ ಪ್ರೋ’ ಎನ್ನುವ ಹೊಸ ಫೀಚರ್ ಅನ್ನು ಜಿಯೋ ಪೇಮೆಂಟ್ಸ್ ಬ್ಯಾಂಕ್ ಪರಿಚಯಿಸಿದೆ.
ಸದ್ಯ ಹೆಚ್ಚಿನ ಬ್ಯಾಂಕುಗಳಲ್ಲಿ ಸೇವಿಂಗ್ಸ್ ಅಕೌಂಟ್ಗಳಲ್ಲಿರುವ ಹಣಕ್ಕೆ ಶೇ. 2.5ರಷ್ಟು ಬಡ್ಡಿ ಸಿಗುತ್ತದೆ. ಆದರೆ, ಜಿಯೋ ಪೇಮೆಂಟ್ಸ್ ಬ್ಯಾಂಕ್ನ ‘ಸೇವಿಂಗ್ಸ್ ಪ್ರೋ’ ಫೀಚರ್ನಲ್ಲಿ ಗ್ರಾಹಕರು ತಮ್ಮ ಅನುತ್ಪಾದಕ ಹಣಕ್ಕೆ ಶೇ. 6.5ರಷ್ಟು ಬಡ್ಡಿ ಪಡೆಯಬಹುದು.
ಹೆಚ್ಚಿನ ಬಡ್ಡಿ ಕೊಡಲು ಜಿಯೋ ಬ್ಯಾಂಕ್ ಏನು ಮಾಡುತ್ತೆ?
ಜಿಯೋ ಪೇಮೆಂಟ್ಸ್ ಬ್ಯಾಂಕ್ ಓವರ್ನೈಟ್ ಮ್ಯೂಚುವಲ್ ಫಂಡ್ಗಳ ಗ್ರೋತ್ ಪ್ಲಾನ್ಗಳ ಮೇಲೆ ಹೂಡಿಕೆ ಮಾಡುತ್ತದೆ. ಈ ಫಂಡ್ಗಳು 15 ದಿನಗಳವರೆಗೆ ಹೂಡಿಕೆಗೆ ಅವಕಾಶ ಕೊಡುತ್ತವೆ. ಇಂಥ ಫಂಡ್ಗಳು ಹೆಚ್ಚಿನ ರಿಸ್ಕ್ ಹೊಂದಿರುವುದಿಲ್ಲ.
ಇದನ್ನೂ ಓದಿ: ಗ್ರಾಚುಟಿ ನಿಯಮ ಏನಿದೆ? ಎಷ್ಟು ವರ್ಷದ ಸರ್ವಿಸ್ ಮಾಡಿದ್ರೆ ಎಷ್ಟು ಹಣ ಸಿಗುತ್ತೆ? ಇಲ್ಲಿದೆ ಲೆಕ್ಕಾಚಾರ
ಜಿಯೋ ಬ್ಯಾಂಕ್ ಗ್ರಾಹಕರು ನಿರ್ದಿಷ್ಟ ಥ್ರಿಶೋಲ್ಡ್ ಮೊತ್ತ ನಿಗದಿ ಮಾಡಬೇಕು. ಈ ಥ್ರಿಶೋಲ್ಡ್ ಮೊತ್ತ 5,000 ರೂನಿಂದ ಆರಂಭವಾಗುತ್ತದೆ. ನೀವು 5,000 ರೂ ಅನ್ನು ಥ್ರಿಶೋಲ್ಡ್ ಮೊತ್ತವಾಗಿ ಆಯ್ಕೆ ಮಾಡಿದಲ್ಲಿ, ಬ್ಯಾಂಕು ನಿಮ್ಮ ಖಾತೆಯಿಂದ 5,000 ರೂಗೆ ಹೆಚ್ಚುವರಿಯಾಗಿ ಇರುವ ಮೊತ್ತವನ್ನು ಓವರ್ನೈಟ್ ಮ್ಯುಚುವಲ್ ಫಂಡ್ಗಳ ಮೇಲೆ ಹೂಡಿಕೆ ಮಾಡುತ್ತದೆ.
ದಿನಕ್ಕೆ ಒಂದೂವರೆ ಲಕ್ಷ ರೂ ಮಿತಿ
ಗ್ರಾಹಕರು ತಮ್ಮ ಜಿಯೋ ಬ್ಯಾಂಕ್ ಖಾತೆಯಿಂದ ಈ ರೀತಿಯಲ್ಲಿ ದಿನಕ್ಕೆ ಒಂದೂವರೆ ಲಕ್ಷ ರೂವರೆಗೆ ಹೂಡಿಕೆ ಮಾಡಲು ಅವಕಾಶ ಇರುತ್ತದೆ. ನೀವು ಯಾವಾಗ ಬೇಕಾದರೂ ಹಣವನ್ನು ಹಿಂಪಡೆಯಬಹುದು. ಆದರೆ, ಪೂರ್ಣ ಮೊತ್ತ ಹಿಂಪಡೆಯಲಾಗುವುದಿಲ್ಲ. ಶೇ. 90ರಷ್ಟು ಹೂಡಿಕೆಯನ್ನು ವಿತ್ಡ್ರಾ ಮಾಡಬಹುದು.
ನೀವು ಒಮ್ಮೆಗೇ ಅಷ್ಟೂ ಹಣ ಪಡೆಯಲು ಆಗುವುದಿಲ್ಲ. ಮೊದಲಿಗೆ 50,000 ರೂವರೆಗೆ ಹಣವನ್ನು ತತ್ಕ್ಷಣಕ್ಕೆ ಪಡೆಯಬಹುದು. ಇನ್ನುಳಿದ ಮೊತ್ತವನ್ನು 1-2 ಕಾರ್ಯದಿನಗಳಲ್ಲಿ ರಿಡೀಮ್ ಮಾಡಬಹುದು.
ಇದನ್ನೂ ಓದಿ: ಐದು ವರ್ಷ ಪ್ರೀಮಿಯಮ್ ಕಟ್ಟಿ, ಜೀವನ ಪೂರ್ತಿ ಆದಾಯ ಗಳಿಸಿ; ಇದು ಎಲ್ಐಸಿಯ ಜೀವನ್ ಉತ್ಸವ್ ಪಾಲಿಸಿ
ನೀವು ಹೂಡಿಕೆ ಮಾಡಲು ಎಂಟ್ರಿ ಶುಲ್ಕವಾಗಲೀ, ಹೂಡಿಕೆ ಹಿಂಪಡೆಯಲು ಎಕ್ಸಿಟ್ ಶುಲ್ಕವಾಗಲೀ ಇರುವುದಿಲ್ಲ. ಯಾವುದೇ ಹಿಡ್ಡನ್ ಚಾರ್ಜ್, ಲಾಕಿನ್ ಪೀರಿಯಡ್ ಇತ್ಯಾದಿ ಇರುವುದಿಲ್ಲ.
ಬೇರೆ ಬ್ಯಾಂಕುಗಳಲ್ಲಿ ಹೇಗೆ ವ್ಯವಸ್ಥೆ?
ಸಾಮಾನ್ಯವಾಗಿ ಬ್ಯಾಂಕುಗಳಲ್ಲಿ ಸೇವಿಂಗ್ಸ್ ಅಕೌಂಟ್ನಲ್ಲಿರುವ ಹಣಕ್ಕೆ ಶೇ. 2.5ರಿಂದ ಶೇ. 4.5ರವರೆಗೂ ಬಡ್ಡಿ ಸಿಗುತ್ತದೆ. ಕೆಲ ಬ್ಯಾಂಕುಗಳು ಹೆಚ್ಚುವರಿ ಬಡ್ಡಿ ಆಫರ್ ಮಾಡಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




