45ನೇ ವಯಸ್ಸಿಗೆ 4.7 ಕೋಟಿ ರೂ; ಬ್ಯುಸಿನೆಸ್ ಇಲ್ಲ, ಷೇರು ಇಲ್ಲ, ಆದರೂ ಸಂಪಾದಿಸಿದ್ದು ಹೇಗೆ?
Tips to get high net-worth from salary income: ಸಂಪತ್ತು ಗಳಿಸಬೇಕಾದರೆ ಬಹಳ ದೊಡ್ಡ ಆದಾಯ ಪಡೆಯಬೇಕೆಂದೇನಿಲ್ಲ. 45ರ ವಯಸ್ಸಿಗೆ ವ್ಯಕ್ತಿಯೊಬ್ಬ 4.7 ಕೋಟಿ ರೂ ಸಂಪಾದಿಸಿದ್ದಾರೆ. ಇವರು ಬ್ಯುಸಿನೆಸ್ ಮಾಡೋದಿಲ್ಲ, ಸೈಡ್ ಇನ್ಕಮ್ ಇಲ್ಲ. ಆದರೂ ಇಷ್ಟು ಹಣ ಸಂಪಾದನೆ ಹೇಗೆ ಸಾಧ್ಯ? ಇವರದ್ದು ಎರಡು ಮೂಲ ಮಂತ್ರ. ಒಂದು ಸರಳಿ ಜೀವನ, ಇನ್ನೊಂದು, ನಿರಂತರ ಹೂಡಿಕೆ.

ಲಕ್ಷಕ್ಕೂ ಹೆಚ್ಚು ಸಂಬಳ ಪಡೆಯುತ್ತಿರುವವರು 50 ವರ್ಷ ವಯಸ್ಸಾದರೂ 10 ಲಕ್ಷ ರೂ ಮೌಲ್ಯದ ಆಸ್ತಿ ಇಟ್ಟುಕೊಂಡಿರುವುದಿಲ್ಲ. ಅಂಥವರ ಸಂಖ್ಯೆ ಬಹಳ ಹೆಚ್ಚು. ಕೆಲವರು ಕಡಿಮೆ ಸಂಬಳ ಹೊಂದಿದರೂ ಸೈಟು, ಮನೆ, ಬ್ಯಾಂಕ್ ಬ್ಯಾಲನ್ಸ್ ಎಲ್ಲಾ ಹೊಂದಿ ನೆಮ್ಮದಿಯಿಂದ ಇರುತ್ತಾರೆ. ಇತ್ತೀಚೆಗೆ ರೆಡ್ಡಿಟ್ನಲ್ಲಿ ಒಬ್ಬ ವ್ಯಕ್ತಿ ಹಾಕಿದ ಪೋಸ್ಟ್ ಗಮನ ಸೆಳೆದಿತ್ತು. ತಮ್ಮ ಅಂಕಲ್ವೊಬ್ಬರು 45 ವರ್ಷಕ್ಕೆ ರಿಟೈರ್ ಆದರು. ಅವರ ಬಳಿ 4.7 ಕೋಟಿ ರೂ ಬ್ಯಾಂಕ್ ಬ್ಯಾಲನ್ಸ್ ಇತ್ತು. ಕೇವಲ ಸಂಬಳದ ಕೆಲಸ ಮಾಡಿಕೊಂಡು ಅವರು ಇಷ್ಟು ಸಂಪಾದನೆ ಮಾಡಿದ್ದು ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.
45 ವರ್ಷಕ್ಕೆ ರಿಟೈರ್ ಆದ ಆ ವ್ಯಕ್ತಿ ಬಹಳ ಸರಳ ಹೂಡಿಕೆ ಮಂತ್ರ ಪಾಲಿಸಿದ್ದರು. ‘ಸಂಪಾದನೆ ಹೆಚ್ಚಿರುವುದಕ್ಕಿಂತ, ಉಳಿತಾಯ ಹೆಚ್ಚಿರಬೇಕು’ ಎನ್ನುವುದು ಇವರ ಮೂಲ ಮಂತ್ರ. ಇನ್ನೂ ಅಚ್ಚರಿ ಎಂದರೆ, ಆ ವ್ಯಕ್ತಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಹಣ ಬೆಳೆಸಲಿಲ್ಲ ಎಂಬುದು.
ಇದನ್ನೂ ಓದಿ: ಆರ್ಸಿಬಿ ಮಿಸ್ಟರ್ ನಾಗ್ಸ್ ಅವರ ಮನಿ ಸೀಕ್ರೆಟ್; ಅಮ್ಮ ಹೇಳಿಕೊಟ್ಟ ಪಾಠ ಸ್ಮರಿಸಿದ ಸೇಠ್
ಹೆಚ್ಚುವರಿ ಆದಾಯ ಇಲ್ಲ. ಸೈಡ್ ಬ್ಯುಸಿನೆಸ್ ಇಲ್ಲ, ಯಾವುದೂ ಇಲ್ಲ. ಆದರೂ ಎರಡು ದಶಕದಲ್ಲಿ 4.7 ಕೋಟಿ ರೂ ಸಂಪಾದನೆ ಮಾಡಿದ್ದು ದೊಡ್ಡ ಸಂಗತಿ. ಅವರ ಸೀಕ್ರೆಟ್ ಸಂಗತಿಗಳು ಮುಂದಿವೆ ನೋಡಿ…
ಸರಳ ಜೀವನ ಶೈಲಿ…
‘ಅವರು 30 ವರ್ಷಗಳಿಂದಲೂ ಅದೇ 2 ಬೆಡ್ರೂಮ್ ಮನೆಯಲ್ಲೇ ವಾಸ ಇದ್ದಾರೆ. ಅದೇ ಸ್ಕೂಟರ್ ಓಡಿಸುತ್ತಿದ್ದಾರೆ. ಪ್ರವಾಸ ಹೋಗಿದ್ದ ಒಮ್ಮೆ ಮಾತ್ರ. ಅದೂ ಕೇರಳಕ್ಕೆ’ ಎಂದು ರೆಡ್ಡಿಟ್ ಪೋಸ್ಟ್ನಲ್ಲಿ ಹೇಳಲಾಗಿದೆ.
ಮ್ಯೂಚುವಲ್ ಫಂಡ್ಗಳಲ್ಲಿ ಶಿಸ್ತುಬದ್ಧ ಹೂಡಿಕೆ
ಇವರು 1998ರಲ್ಲೇ ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಮಾಡಲು ಆರಂಭಿಸಿದರು. ಆಗ ಮ್ಯೂಚುವಲ್ ಫಂಡ್ ಎಂದರೆ ಏನೆಂದೇ ಅನೇಕರಿಗೆ ಗೊತ್ತಿರದ ಕಾಲ. ಮೊದಲಿಗೆ 10,000 ರೂ ಅನ್ನು ಹೂಡಿಕೆ ಮಾಡಿದ್ದಾರೆ. ಕೆಲ ವರ್ಷಗಳ ಬಳಿಕ 500 ರೂನ ಎಸ್ಐಪಿ ಆರಂಭಿಸಿದ್ದಾರೆ.
ಇದನ್ನೂ ಓದಿ: ಪೋಸ್ಟ್ ಆಫೀಸ್ನ ಈ ಸ್ಕೀಮ್ನಿಂದ ತಿಂಗಳಿಗೆ 9,250 ರೂವರೆಗೂ ನಿಯಮಿತ ಆದಾಯ ಸೃಷ್ಟಿಸಿ
ತಮ್ಮ ಸಂಬಳ ಹೆಚ್ಚಿದಂತೆಲ್ಲಾ ಎಸ್ಐಪಿಯನ್ನು ಹೆಚ್ಚಿಸುತ್ತಾ ಹೋಗಿದ್ದಾರೆ. 500 ರೂ ಇದ್ದದ್ದು 1,000 ರೂ ಆಯಿತು, 2,000 ರೂ ಆಯಿತು, ನಂತರ 5,000 ರೂ ಆಯಿತು. 12 ವರ್ಷಗಳ ನಂತರ ತಿಂಗಳಿಗೆ 20,000 ರೂ ಅನ್ನು ಹೂಡಿಕೆ ಮಾಡತೊಡಗಿದ್ದರು. ಅದು ನಿಲ್ಲಲೇ ಇಲ್ಲ. 45 ವರ್ಷ ವಯಸ್ಸಿಗೆ ಅವರ ಬಳಿ ಇದ್ದ ಆಸ್ತಿಮೌಲ್ಯ 4.7 ಕೋಟಿ ರೂ ಅಂತೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




