ಪೋಸ್ಟ್ ಆಫೀಸ್ನ ಈ ಸ್ಕೀಮ್ನಿಂದ ತಿಂಗಳಿಗೆ 9,250 ರೂವರೆಗೂ ನಿಯಮಿತ ಆದಾಯ ಸೃಷ್ಟಿಸಿ
Post Office MIS Monthly Income Scheme: ಪೋಸ್ಟ್ ಆಫೀಸ್ನ ಮಂತ್ಲಿ ಇನ್ಕಮ್ ಸ್ಕೀಮ್ನಲ್ಲಿ ಶೇ. 7.40ರಷ್ಟು ಬಡ್ಡಿ ಸಿಗುತ್ತದೆ. ಸಿಂಗಲ್ ಅಕೌಂಟ್ನಲ್ಲಿ 9 ಲಕ್ಷ ರೂ ಠೇವಣಿ ಇಡಬಹುದು. ಐದು ವರ್ಷ ಕಾಲ ನಿಯಮಿತವಾಗಿ ಆದಾಯ ಸಿಗುತ್ತದೆ. ಜಾಯಿಂಟ್ ಅಕೌಂಟ್ನಲ್ಲಿ 15 ಲಕ್ಷ ರೂ ಠೇವಣಿ ಇಡಬಹುದು. ಇದರಿಂದ ತಿಂಗಳಿಗೆ 9,250 ರೂ ಆದಾಯ ಸಿಗುತ್ತದೆ.

ಪೋಸ್ಟ್ ಆಫೀಸ್ನಲ್ಲಿ (Post Office) ಲಭ್ಯ ಇರುವ ಕೆಲ ಪ್ರಮುಖ ಸೇವಿಂಗ್ಸ್ ಸ್ಕೀಮ್ಗಳಲ್ಲಿ ಮಂತ್ಲಿ ಇನ್ಕಮ್ ಸ್ಕೀಮ್ ಒಂದು. ಅತಿಹೆಚ್ಚು ಬಡ್ಡಿ ಕೊಡುವ ಸ್ಕೀಮ್ಗಳಲ್ಲಿ ಇದೂ ಒಂದು. ಒಮ್ಮೆ ಹೂಡಿಕೆ ಮಾಡಿದರೆ ತಿಂಗಳಿಗೆ ನಿಗದಿತ ಆದಾಯ ಸಿಗುತ್ತಾ ಹೋಗುತ್ತದೆ. ಒಂದು ರೆಗ್ಯುಲರ್ ಇನ್ಕಮ್ ಬಯಸುತ್ತಿರುವವರು ಈ ಯೋಜನೆಯನ್ನು ಪಡೆಯಬಹುದು. ಈ ಸ್ಕೀಮ್ ಯಾವುದೇ ರಿಸ್ಕ್ ಹೊಂದಿರುವುದಿಲ್ಲ. ಟ್ಯಾಕ್ಸ್ ಭಯವೂ ಇರುವುದಿಲ್ಲ. ಮಾರುಕಟ್ಟೆಯ ರಿಸ್ಕ್ ಇರುವುದಿಲ್ಲ.
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ ಎಷ್ಟು ಹೂಡಿಕೆ?
ಪೋಸ್ಟ್ ಆಫೀಸ್ ಮಂತ್ಲಿ ಇನ್ಕಮ್ ಸ್ಕೀಮ್ನಲ್ಲಿ ಒಬ್ಬ ವ್ಯಕ್ತಿ 1,000 ರೂನಿಂದ ಹಿಡಿದು 9,00,000 ರೂವರೆಗೆ ಹೂಡಿಕೆ ಮಾಡಬಹುದು. ಜಂಟಿ ಖಾತೆಯಾದರೆ 15 ಲಕ್ಷ ರೂವರೆಗೆ ಹೂಡಿಕೆ ಮಾಡಲು ಸಾಧ್ಯ.
ಇದನ್ನೂ ಓದಿ: ಚಿನ್ನವನ್ನೂ ಮೀರಿಸಿದ ಬೆಳ್ಳಿ; ಒಂದು ವರ್ಷದಲ್ಲಿ ವಿವಿಧ ಹೂಡಿಕೆಗಳು ತಂದ ಲಾಭ ಎಷ್ಟು ಗೊತ್ತಾ?
ಈ ಸ್ಕೀಮ್ನಲ್ಲಿ 5 ವರ್ಷದ್ದಿರುತ್ತದೆ. ಈ ಅವಧಿಯು ಲಾಕಿನ್ ಪೀರಿಯಡ್ ಕೂಡ ಆಗಿರುತ್ತದೆ. ಹೂಡಿಕೆದಾರರಿಗೆ ಈ ಐದು ವರ್ಷಾದ್ಯಂತ ತಿಂಗಳಿಗೆ ಬಡ್ಡಿ ಆದಾಯ ಸಿಗುತ್ತಾ ಹೋಗುತ್ತದೆ. ಈ ಠೇವಣಿಗೆ ಸದ್ಯ ಶೇ. 7.40ರಷ್ಟು ವಾರ್ಷಿಕ ದರದಲ್ಲಿ ಬಡ್ಡಿ ನೀಡಲಾಗುತ್ತದೆ.
ಎಷ್ಟು ಮಾಸಿಕ ಆದಾಯ ಸಿಗುತ್ತದೆ?
ಸಿಂಗಲ್ ಅಕೌಂಟ್ ಆದರೆ 9 ಲಕ್ಷ ರೂವರೆಗೆ ಹೂಡಿಕೆ ಮಾಡಬಹುದು. ನೀವು ಇಷ್ಟು ಮೊತ್ತದ ಠೇವಣಿ ಇಟ್ಟರೆ ತಿಂಗಳಿಗೆ 5,550 ರೂ ಸಿಗುತ್ತದೆ.
ಜಾಯಿಂಟ್ ಅಕೌಂಟ್ ಆದರೆ 15 ಲಕ್ಷ ರೂವರೆಗೆ ಠೇವಣಿ ಇಡಬಹುದು. ಇಷ್ಟು ಮೊತ್ತಕ್ಕೆ ತಿಂಗಳಿಗೆ 9,250 ರೂ ಹಣ ಸಿಗುತ್ತಾ ಹೋಗುತ್ತದೆ.
ಇದನ್ನೂ ಓದಿ: ಪೋಸ್ಟ್ ಆಫೀಸ್ನ ಈ ಸ್ಕೀಮ್ನಲ್ಲಿ 25 ವರ್ಷಕ್ಕೆ 1 ಕೋಟಿ ರೂ ಗಳಿಕೆಗೆ ಅವಕಾಶ
ಒಬ್ಬ ವ್ಯಕ್ತಿಯಾದರೆ ಸಿಂಗಲ್ ಅಕೌಂಟ್ ತೆರೆಯಬಹುದು. ಜಾಯಿಂಟ್ ಅಕೌಂಟ್ ಅನ್ನು ಇಬ್ಬರು ಅಥವಾ ಮೂವರು ಸೇರಿ ತೆರೆಯಬಹುದು. ಬೇರೆ ಬೇರೆ ಪೋಸ್ಟ್ ಆಫೀಸ್ಗಳಲ್ಲಿ ಒಂದಕ್ಕಿಂತ ಹೆಚ್ಚು ಎಂಐಎಸ್ ಅಕೌಂಟ್ಗಳನ್ನು ತೆರೆಯಬಹುದಾದರೂ ಎಲ್ಲವುಗಳಿಂದ ಸೇರಿ ಒಟ್ಟು ಠೇವಣಿ 9 ಲಕ್ಷ ರೂ ಅಥವಾ 15 ಲಕ್ಷ ರೂ ಮೀರುವಂತಿಲ್ಲ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




