AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿನ್ನವನ್ನೂ ಮೀರಿಸಿದ ಬೆಳ್ಳಿ; ಒಂದು ವರ್ಷದಲ್ಲಿ ವಿವಿಧ ಹೂಡಿಕೆಗಳು ತಂದ ಲಾಭ ಎಷ್ಟು ಗೊತ್ತಾ?

Past 1 year returns of Gold, silver, nifty, sensex: ಕಳೆದ ಒಂದು ವರ್ಷದ ಪೈಪೋಟಿಯಲ್ಲಿ ಷೇರು ಮಾರುಕಟ್ಟೆಯನ್ನು ಬಹಳ ಅಂತರದಿಂದ ಚಿನ್ನ ಮತ್ತು ಬೆಳ್ಳಿಗಳು ಮೀರಿಸಿವೆ. ನಿಫ್ಟಿ ಮತ್ತು ಸೆನ್ಸೆಕ್ಸ್ ಕಳೆದ 1 ವರ್ಷದಲ್ಲಿ ಹೂಡಿಕೆದಾರರಿಗೆ ನಷ್ಟ ತಂದಿವೆ. ಚಿನ್ನ ಮತ್ತು ಬೆಳ್ಳಿಯು ಹೂಡಿಕೆದಾರರಿಗೆ 1 ವರ್ಷದಲ್ಲಿ ಶೇ. 50ರ ಆಸುಪಾಸಿನಲ್ಲಿ ಲಾಭ ತಂದಿವೆ.

ಚಿನ್ನವನ್ನೂ ಮೀರಿಸಿದ ಬೆಳ್ಳಿ; ಒಂದು ವರ್ಷದಲ್ಲಿ ವಿವಿಧ ಹೂಡಿಕೆಗಳು ತಂದ ಲಾಭ ಎಷ್ಟು ಗೊತ್ತಾ?
ಬೆಳ್ಳಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 22, 2025 | 7:23 PM

Share

ಬೆಂಗಳೂರು, ಸೆಪ್ಟೆಂಬರ್ 22: ಚಿನ್ನ ಮತ್ತು ಬೆಳ್ಳಿ ಬೆಲೆಗಳ ಮಧ್ಯೆ ಬೆಲೆ ಏರಿಕೆ ಪೈಪೋಟಿ ನಡೆದಿದೆ. ಕಳೆದ ಒಂದು ವರ್ಷದಲ್ಲಿ ಈ ಎರಡು ಅಮೂಲ್ಯ ಲೋಹಗಳ ಮೇಲೆ ಹೂಡಿಕೆ ಮಾಡಿದವರಿಗೆ ಭರಪೂರ ಲಾಭ ಸಿಕ್ಕಿದೆ. ಇದೇ ವೇಳೆ ಷೇರು ಮಾರುಕಟ್ಟೆ ಸೊರಗಿದೆ. ಒಂದು ವರ್ಷದಲ್ಲಿ ನಿಫ್ಟಿ ಮತ್ತು ಸೆನ್ಸೆಕ್ಸ್ ನೆಗಟಿವ್ ರಿಟರ್ನ್ ನೀಡಿದರೆ, ಚಿನ್ನ ಮತ್ತು ಬೆಳ್ಳಿಗಳು (silver) ಸಿಕ್ಕಾಪಟ್ಟೆ ಲಾಭ ತಂದುಕೊಟ್ಟಿವೆ. ಕಳೆದ ಒಂದು ವರ್ಷದಲ್ಲಿ ಹಾಗೂ ಈ ವರ್ಷದಲ್ಲಿ ಚಿನ್ನ, ಬೆಳ್ಳಿ ಮತ್ತು ಸೆನ್ಸೆಕ್ಸ್, ನಿಫ್ಟಿ ಎಷ್ಟು ರಿಟರ್ನ್ಸ್ ಕೊಟ್ಟಿವೆ ಎನ್ನುವ ವಿವರ ಇಲ್ಲಿದೆ.

ಒಂದು ವರ್ಷದ ರಿಟರ್ನ್ಸ್ (2024ರ ಸೆ. 22ರಿಂದ 2025ರ ಸೆ. 22ರವರೆಗೆ)

  • ಚಿನ್ನ: ಗ್ರಾಮ್​ಗೆ 7,593 ರೂನಿಂದ 11,258 ರೂ (ಶೇ. 48.26 ಹೆಚ್ಚಳ)
  • ಬೆಳ್ಳಿ: ಗ್ರಾಮ್​ಗೆ 85 ರೂನಿಂದ 135 ರೂಗೆ ಏರಿಕೆ (ಶೇ. 58.82 ಹೆಚ್ಚಳ)
  • ನಿಫ್ಟಿ50: -2.84%
  • ಸೆನ್ಸೆಕ್ಸ್: -3.26%

ಈ ವರ್ಷದ ರಿಟರ್ನ್ಸ್ (2025ರ ಜನವರಿ 1ರಿಂದ ಸೆ. 22ರವರೆಗೆ)

  • ಚಿನ್ನ: 44.33%
  • ಬೆಳ್ಳಿ: 49.17%
  • ನಿಫ್ಟಿ50: 6.15%
  • ಸೆನ್ಸೆಕ್ಸ್: 4.65%

ಇದನ್ನೂ ಓದಿ: ಗ್ರಾಚುಟಿ ನಿಯಮ ಏನಿದೆ? ಎಷ್ಟು ವರ್ಷದ ಸರ್ವಿಸ್ ಮಾಡಿದ್ರೆ ಎಷ್ಟು ಹಣ ಸಿಗುತ್ತೆ? ಇಲ್ಲಿದೆ ಲೆಕ್ಕಾಚಾರ

ಚಿನ್ನ ಮತ್ತು ಬೆಳ್ಳಿ ಬೆಲೆಗಳ ಏರಿಕೆಗೆ ಏನು ಕಾರಣ?

ಜಾಗತಿಕವಾಗಿ ಅನಿಶ್ಚಿತ ಮತ್ತು ಬಿಕ್ಕಟ್ಟು ಸಂದರ್ಭಗಳು ಎದುರಾದಾಗ ಷೇರು ಮಾರುಕಟ್ಟೆ ಕುಸಿಯುತ್ತದೆ. ಚಿನ್ನ, ಬೆಳ್ಳಿಗಳಂತಹ ಅಮೂಲ್ಯ ಸರಕುಗಳಿಗೆ ಬೇಡಿಕೆ ಹೆಚ್ಚುತ್ತದೆ. ಹೂಡಿಕೆದಾರರು ಇವುಗಳ ಮೇಲೆ ಹೂಡಿಕೆ ಮಾಡಲು ಆದ್ಯತೆ ಕೊಡುತ್ತಾರೆ. ಹೀಗಾಗಿ, ಷೇರುಪೇಟೆ ಬಿದ್ದಾಗ ಚಿನ್ನ, ಬೆಳ್ಳಿ ಬೆಲೆಗಳ ಏರಿಕೆ ಹೆಚ್ಚಿರುತ್ತದೆ. ಷೇರು ಮಾರುಕಟ್ಟೆ ಎದ್ದಾಗ ಇವಕ್ಕೆ ಬೇಡಿಕೆ ಸ್ವಲ್ಪ ತಗ್ಗುತ್ತದೆ.

ಚಿನ್ನವನ್ನು ಬೆಳ್ಳಿ ಮೀರಿಸಲು ಏನು ಕಾರಣ?

ಐತಿಹಾಸಿಕವಾಗಿ ಬೆಳ್ಳಿ ಲೋಹವು ಚಿನ್ನಕ್ಕಿಂತ ಹೆಚ್ಚು ಬೇಡಿಕೆ ಪಡೆದಿದ್ದು ಇದೇ ಮೊದಲಾಗಿರಬಹುದು. ಕಳೆದ ಒಂದು ವರ್ಷದಲ್ಲಿ ಬಹಳಷ್ಟು ಸಾಂಸ್ಥಿಕ ಹೂಡಿಕೆದಾರರು ಈ ಬಿಳಿ ಲೋಹವನ್ನು ಖರೀದಿ ಮಾಡಿದ್ದಾರೆ. ಕೈಗಾರಿಕೆಗಳಲ್ಲಿ ಬೆಳ್ಳಿಯ ಬಳಕೆ ಹೆಚ್ಚಾಗುತ್ತಿದೆ. ಇದೇ ಕಾರಣಕ್ಕೆ ಬೆಳ್ಳಿಗೆ ಬೇಡಿಕೆ ಬಹಳಷ್ಟು ಹೆಚ್ಚಿದೆ.

ಇದನ್ನೂ ಓದಿ: ಕಷ್ಟಕಾಲಕ್ಕೆ ಚಿನ್ನ ಬೇಕು; ಆದರೆ ಒಡವೆ ಖರೀದಿಸಿದರೆ ಲಾಭ ಸಿಗಲು ಹಲವು ವರ್ಷಗಳೇ ಬೇಕು

ಮುಂದಿನ ದಿನಗಳಲ್ಲೂ ಚಿನ್ನ ಮತ್ತು ಬೆಳ್ಳಿಗೆ ಬೇಡಿಕೆ ಇದ್ದೇ ಇರುತ್ತದೆ. ಕಳೆದ ಒಂದು ವರ್ಷದಲ್ಲಿ ಆದಷ್ಟು ಏರಿಕೆಯನ್ನು ಮುಂದಿನ ಒಂದು ವರ್ಷದಲ್ಲಿ ನಿರೀಕ್ಷಿಸಲು ಆಗುವುದಿಲ್ಲವಾದರೂ ಸಾಮಾನ್ಯಕ್ಕಿಂತ ಹೆಚ್ಚಿನ ಏರಿಕೆ ನಿರೀಕ್ಷಿಸಬಹುದು. ಐತಿಹಾಸಿಕವಾಗಿ ಚಿನ್ನವು ವರ್ಷಕ್ಕೆ ಶೇ. 12ರಷ್ಟು ಏರಿಕೆ ಕಾಣುತ್ತದೆ. ಬೆಳ್ಳಿ ಶೇ. 10ರಷ್ಟು ರಿಟರ್ನ್ ಕೊಟ್ಟಿದ್ದಿದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ