ಸಿಮ್ ವೆರಿಫಿಕೇಶನ್ನಿಂದ ಹಿಡಿದು ಕ್ರೆಡಿಟ್ ಸ್ಕೋರ್ವರೆಗೆ ಜನವರಿ 1ರಿಂದ ಆಗಲಿರುವ ಪ್ರಮುಖ ಹಣಕಾಸು ನಿಯಮ ಬದಲಾವಣೆಗಳು
Financial rules change from 2026 January: ಡಿಸೆಂಬರ್ ಮುಗಿದು ಜನವರಿ ಬರುತ್ತಿದೆ. 2025 ಮುಗಿದು 2026 ಬರುತ್ತಿದೆ. ಕೆಲ ಹೊಸ ಹಣಕಾಸು ನಿಯಮಗಳು ಜಾರಿಗೆ ಬರಲಿವೆ. ಬ್ಯಾಂಕುಗಳ ಬಡ್ಡಿದರ ಕಡಿಮೆ ಆಗಲಿದೆ. ಕ್ರೆಡಿಟ್ ಸ್ಕೋರ್ ಬೇಗ ಅಪ್ಡೇಟ್ ಆಗಲಿದೆ. ವಾಟ್ಸಾಪ್ನಂತಹ ಮೆಸೇಜಿಂಗ್ ಆ್ಯಪ್ಗಳಿಗೆ ಸರ್ಕಾರ ಬಿಗಿ ನಿಯಮ ಹಾಕಿದೆ. ಮಕ್ಕಳ ಸೋಷಿಯಲ್ ಮೀಡಿಯಾ ಬಳಕೆ ಮೇಲೆ ನಿರ್ಬಂಧ ಹಾಗೂ ಇನ್ನೂ ಕೆಲ ಪ್ರಮುಖ ಬದಲಾವಣೆಗಳನ್ನು ನಿರೀಕ್ಷಿಸಬಹುದು.

ಹಣ
ಡಿಸೆಂಬರ್ ತಿಂಗಳು ಮುಗಿಯುತ್ತಾ ಬರುತ್ತಿದ್ದು ಜನವರಿ ಜೊತೆಗೆ ಹೊಸ ವರ್ಷವೂ ಶುರುವಾಗುತ್ತದೆ. 2026ರ ಜನವರಿ 1ರಿಂದ, ಹಣಕಾಸು ಸ್ಥಿತಿ (Financial rules) ಬದಲಿಸುವಂತಹ ಕೆಲ ಬದಲಾವಣೆಗಳಾಗಲಿವೆ. ಬ್ಯಾಂಕ್, ವೇತನ, ರೈತರು, ಇಂಧನ ಬೆಲೆ ಇತ್ಯಾದಿಯಲ್ಲಿ ಬದಲಾವಣೆ ನಿರೀಕ್ಷಿಸಬಹುದು. ಸೋಷಿಯಲ್ ಮೀಡಿಯಾ ನಿರ್ಬಂಧಗಳು, ಯುಪಿಐ ಹಣ ಪಾವತಿ ನಿಯಮಗಳು ಹೀಗೆ ಮುಂದಿನ ತಿಂಗಳಿಂದ ಆಗಬಹುದಾದ ಪ್ರಮುಖ ಬದಲಾವಣೆಗಳ ಮಾಹಿತಿ ಇಲ್ಲಿದೆ.
- ಕ್ರೆಡಿಟ್ ಸ್ಕೋರ್ಗಳು ಬೇಗ ಅಪ್ಡೇಟ್ ಆಗಲಿವೆ. 15 ದಿನಗಳಿಗೊಮ್ಮೆ ಗ್ರಾಹಕರ ಕ್ರೆಡಿಟ್ ಹಿಸ್ಟರಿಯನ್ನು ಬ್ಯೂರೋಗಳು ಅಪ್ಡೇಟ್ ಮಾಡುತ್ತಿದ್ದವು. ಈಗ ವಾರಕ್ಕೊಮ್ಮೆ ಮಾಡಬೇಕು.
- ಆರ್ಬಿಐ ರಿಪೋ ದರ ಕಡಿಮೆಗೊಳಿಸಿರುವುದರಿಂದ ಹಲವು ಬ್ಯಾಂಕುಗಳು ಬಡ್ಡಿದರ ಕಡಿತಗೊಳಿಸಲು ಆರಂಭಿಸಿವೆ. ಸಾಲ ಪಡೆಯುವವರಿಗೆ ಬಡ್ಡಿ ಹೊರೆ ತಗ್ಗಲಿದೆ.
- ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡುವುದು ಕಡ್ಡಾಯ. ಲಿಂಕ್ ಆಗಿಲ್ಲದಿದ್ದರೆ, ಅಂಥವರಿಗೆ ಜನವರಿ 1ರಿಂದ ಹೆಚ್ಚಿನ ಬ್ಯಾಂಕಿಂಗ್ ಸೇವೆಗಳು ಸಿಗದೇ ಹೋಗಬಹುದು.
ಇದನ್ನೂ ಓದಿ: ಭಾರತದ ಜಿಡಿಪಿ ಲೆಕ್ಕಾಚಾರಕ್ಕೆ ಬೇಸ್ ಇಯರ್ 2011-12 ಅಲ್ಲ, 2022-23; ಇದರಿಂದೇನು ಪ್ರಯೋಜನ?
- ಸಿಮ್ ವೆರಿಫಿಕೇಶನ್ ಕಡ್ಡಾಯ ಮಾಡಲಾಗಿದೆ. ವಾಟ್ಸಾಪ್, ಟೆಲಿಗ್ರಾಮ್, ಸಿಗ್ನಲ್ ಇತ್ಯಾದಿ ಮೆಸೇಜಿಂಗ್ ಆ್ಯಪ್ಗಳು ತಮ್ಮ ಬಳಕೆದಾರರ ಸಿಮ್ಗಳನ್ನು ನಿಯಮಿತವಾಗಿ ವೆರಿಫೈ ಮಾಡಬೇಕು ಎಂದು ಸರ್ಕಾರ ನಿಯಮ ಹಾಕಿದೆ.
- ಆಸ್ಟ್ರೇಲಿಯಾ, ಮಲೇಷ್ಯಾ ಇತ್ಯಾದಿ ದೇಶಗಳಲ್ಲಿ ಇರುವ ರೀತಿಯಲ್ಲಿ ಭಾರತದಲ್ಲೂ 16 ವರ್ಷದೊಳಗಿನ ವಯಸ್ಸಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ನಿರ್ಬಂಧಗಳನ್ನು ಹಾಕಲು ಸರ್ಕಾರ ಯೋಜಿಸಿದೆ. ಹೊಸ ವರ್ಷದಲ್ಲಿ ಯಾವಾಗಲಾದರೂ ಈ ನಿಯಮ ಜಾರಿಗೆ ಬರಬಹುದು.
- ಡೆಲಿವರಿಗಳಿಗೆ ಪೆಟ್ರೋಲ್, ಡೀಸಲ್ ವಾಹನಗಳ ಬದಲು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಕಡ್ಡಾಯಗೊಳಿಸುವ ಕುರಿತು ವಿವಿಧ ರಾಜ್ಯಗಳು ಚಿಂತನೆ ನಡೆಸಿವೆ. ಮುಂದಿನ ವರ್ಷ ಕೆಲ ರಾಜ್ಯಗಳು ಇದನ್ನು ಜಾರಿಗೆ ತರಲೂಬಹುದು.
- ಏಳನೇ ವೇತನ ಆಯೋಗದ ಕಾರ್ಯಾವಧಿ ಡಿಸೆಂಬರ್ 31ಕ್ಕೆ ಮುಗಿಯುತ್ತದೆ. ಹೊಸ ವರ್ಷದಿಂದ ಎಂಟನೇ ವೇತನ ಆಯೋಗ ಜಾರಿಯಾಗಬಹುದು.
- ಉತ್ತರ ಪ್ರದೇಶದಂತಹ ಕೆಲ ರಾಜ್ಯಗಳು ರೈತರಿಗೆ ಯೂನಿಕ್ ಐಡಿ ಕಾರ್ಡ್ಗಳನ್ನು ನೀಡುತ್ತಿದೆ. ಪಿಎಂ ಕಿಸಾನ್ ಯೋಜನೆ ಹಣ ಪಡೆಯಲು ಈ ಐಡಿ ಕಡ್ಡಾಯ ಎನ್ನಲಾಗಿದೆ.
ಇದನ್ನೂ ಓದಿ: ಒಂದು ಸಂಸ್ಥೆ ಹೇಗೆ ಕಾರ್ಯನಿರ್ವಹಿಸಬೇಕು? ಕಾರ್ಪೊರೇಟ್ ಲೋಕಕ್ಕೆ ಮಾದರಿಯಾದ ಡಿಆರ್ಡಿಒ
- ಪಿಎಂ ಕಿಸಾನ್ ಬೆಳೆ ವಿಮೆ ಯೋಜನೆಯ ಕವರೇಜ್ ಅನ್ನು ಹೆಚ್ಚಿಸಲಾಗಿದೆ. ಕಾಡುಪ್ರಾಣಿಗಳ ದಾಳಿಯಿಂದ ಬೆಳೆ ಹಾನಿಯಾದರೂ ಪರಿಹಾರ ಸಿಗುತ್ತದೆ.
- ಎಲ್ಪಿಜಿ ಗ್ಯಾಸ್, ಎಟಿಎಫ್ ಇಂಧನ ಬೆಲೆಗಳು ಜನವರಿ 1ರಂದು ಪರಿಷ್ಕರಣೆ ಆಗುತ್ತವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




