AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ಸಂಸ್ಥೆ ಹೇಗೆ ಕಾರ್ಯನಿರ್ವಹಿಸಬೇಕು? ಕಾರ್ಪೊರೇಟ್ ಲೋಕಕ್ಕೆ ಮಾದರಿಯಾದ ಡಿಆರ್​ಡಿಒ

DRDO's secrets: ಭಾರತದ ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಆರ್ಗನೈಸೇಶನ್ ಲೆಕ್ಕವಿಲ್ಲದಷ್ಟು ಮಿಲಿಟರಿ ಟೆಕ್ನಾಲಜಿ, ಶಸ್ತ್ರಾಸ್ತ್ರಗಳನ್ನು ಆವಿಷ್ಕರಿಸಿದೆ. ಭಾರತಕ್ಕೆ ಆಮದು ವೆಚ್ಚವನ್ನು ಗಣನೀಯವಾಗಿ ತಗ್ಗಿಸಿದೆ. ಒಂದು ಮಾಹಿತಿ ಪ್ರಕಾರ 5 ವರ್ಷದಲ್ಲಿ ಅದು ಉಳಿಸಿದ ಹಣ 2.64 ಲಕ್ಷ ಕೋಟಿ ರೂ. ಸಂಶೋಧನೆ ಮತ್ತು ಅಭಿವೃದ್ಧಿಗೆ ಒತ್ತು ಕೊಟ್ಟರೆ ಎಷ್ಟು ಯಶಸ್ಸು ಗಳಿಸಬಹುದು ಎಂಬುದಕ್ಕೆ ಡಿಆರ್​​ಡಿಒ ನಿದರ್ಶನವಾಗಿದೆ.

ಒಂದು ಸಂಸ್ಥೆ ಹೇಗೆ ಕಾರ್ಯನಿರ್ವಹಿಸಬೇಕು? ಕಾರ್ಪೊರೇಟ್ ಲೋಕಕ್ಕೆ ಮಾದರಿಯಾದ ಡಿಆರ್​ಡಿಒ
ಡಿಆರ್​ಡಿಒ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 22, 2025 | 5:38 PM

Share

ಭಾರತದ ರಕ್ಷಣಾ ಇಲಾಖೆಯ ಆರ್ ಅಂಡ್ ಡಿ ಅಂಗವಾಗಿರುವ ಡಿಆರ್​ಡಿಒ (DRDO) ಐದು ವರ್ಷದಲ್ಲಿ ಭಾರತದ ವೆಚ್ಚವನ್ನು 2.64 ಲಕ್ಷ ಕೋಟಿ ರೂನಷ್ಟು ಉಳಿಸಿದೆ ಎನ್ನುವ ಒಂದು ಅಚ್ಚರಿಯ ಅಂಶ ಬೆಳಕಿಗೆ ಬಂದಿದೆ. ಸಂಸದೀಯ ಸಮಿತಿಯೊಂದು ಇತ್ತೀಚೆಗೆ ಈ ವಿಚಾರವನ್ನು ಬಹಿರಂಗಪಡಿಸಿದೆ. ಭಾರತದಲ್ಲಿ ದೇಶೀಯವಾಗಿ ರೂಪಿತವಾಗುತ್ತಿರುವ ಅನೇಕ ಶಸ್ತ್ರಾಸ್ತ್ರ ತಂತ್ರಜ್ಞಾನ ಹಾಗೂ ಮಿಲಿಟರಿ ಉತ್ಪನ್ನಗಳಲ್ಲಿ ಡಿಆರ್​ಡಿಒ ಹೆಸರು ಬಹುತೇಕ ಇದ್ದೇ ಇರುತ್ತದೆ. ಬಹಳ ಕ್ಷಮತೆ ಹಾಗೂ ಹೊಸತನಕ್ಕೆ ಉದಾಹರಣೆಯಾಗಿ ಡಿಆರ್​ಡಿಒ ಇದೆ.

ಆರ್ ಅಂಡ್ ಎಷ್ಟು ಮುಖ್ಯ ಎಂದು ತೋರಿಸಿಕೊಟ್ಟಿದೆ ಡಿಆರ್​ಡಿಒ

ಡಿಆರ್​ಡಿಒ ಅಥವಾ ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಆರ್ಗನೈಸೇಶನ್ ದೇಶೀಯವಾಗಿ ಮಿಲಿಟರಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ಡಿಆರ್​ಡಿಒ ಕಾರ್ಯಚಟುವಟಿಕೆ ತೀರಾ ಗರಿಗೆದರಿದೆ. ಈ ಹಿಂದೆ ಶಸ್ತ್ರಾಸ್ತ್ರ ತಯಾರಿಕೆಗೆ ಬೇಕಾದ ತಂತ್ರಜ್ಞಾನದ ಕೊರತೆ ಇತ್ತು. ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳದೇ ವಿಧಿ ಇರಲಿಲ್ಲ. ಆದರೆ, ಡಿಆರ್​ಡಿಒ ಅನೇಕ ತಂತ್ರಜ್ಞಾನಗಳನ್ನು ತಾನೇ ಸ್ವಂತವಾಗಿ ಆವಿಷ್ಕರಿಸಿದೆ. ಇದರ ಪರಿಣಾಮವಾಗಿ ಇಂದು ಹಲವಾರು ಶಸ್ತ್ರಾಸ್ತ್ರಗಳು ಭಾರತದಲ್ಲೇ ತಯಾರಾಗುತ್ತಿವೆ. ಇದರಿಂದ ಭಾರತಕ್ಕೆ ಶಸ್ತ್ರಾಸ್ತ್ರ ಆಮದು ವೆಚ್ಚ ಗಣನೀಯವಾಗಿ ತಗ್ಗಿದೆ.

ಹತ್ತು ಹದಿನೈದು ವರ್ಷಗಳ ಹಿಂದೆ ಭಾರತವು ಶಸ್ತ್ರಾಸ್​ತ್ರಗಳ ಆಮದು ಅತಿಹೆಚ್ಚು ಮಾಡುತ್ತಿತ್ತು. ಈಗ ವಿಶ್ವದ ಅತಿದೊಡ್ಡ ಮಿಲಿಟರಿ ರಫ್ತುದಾರ ದೇಶಗಳ ಸಾಲಿಗೆ ಸೇರ್ಪಡೆಯಾಗುತ್ತಿದೆ.

ಇದನ್ನೂ ಓದಿ: ನ್ಯೂಜಿಲೆಂಡ್ ಜೊತೆಗೂ ಟ್ರೇಡ್ ಡೀಲ್ ಮುಗಿಸಿದ ಭಾರತ; ಈ ವರ್ಷದಲ್ಲೇ ಭಾರತಕ್ಕಿದು 3ನೇ ಎಫ್​ಟಿಎ

ಡಿಆರ್​ಡಿಒ ಅಭಿವೃದ್ಧಿಪಡಿಸಿದ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳಿಗೆ ಲೆಕ್ಕ ಇಲ್ಲ. ತೇಜಸ್ ಎಲ್​ಸಿಎ, ಅಗ್ನಿ ಕ್ಷಿಪಣಿ, ಪೃಥ್ವಿ ಕ್ಷಿಪಣಿ, ಬ್ರಹ್ಮೋಸ್ ಕ್ಷಿಪಣಿ, ಆಕಾಶ್, ಅಸ್ತ್ರ ಕ್ಷಿಪಣಿಗಳು, ಪಿನಾಕಾ ರಾಕೆಟ್, ಆ್ಯಂಟಿ ಟ್ಯಾಂಕ್ ಸಿಸ್ಟಂ, ಹೈಪರ್​ಸಾನಿಕ್ ಕ್ಷಿಪಣಿ, ಹಲವು ರಾಡಾರ್ ಸಿಸ್ಟಂಗಳು, ಎಲೆಕ್ಟ್ರಾನಿಕ್ ವಾರ್​ಫೇರ್ ಟೆಕ್ನಾಲಜಿಗಳ ಆವಿಷ್ಕಾರದಲ್ಲಿ ಡಿಆರ್​ಡಿಒದ ರಿಸರ್ಚ್​ನ ಪಾತ್ರ ಬಹಳಷ್ಟಿದೆ.

ಡಿಆರ್​ಡಿಒ ಬಳಿ ಹಲವು ಇಂಟೆಲೆಕ್ಷುಯಲ್ ಪ್ರಾಪರ್ಟಿ ರೈಟ್, ಡೀಪ್ ಟೆಕ್​ಗಳು ಇವೆ. ಡಿಆರ್​ಡಿಒ ಸ್ಥಳೀಯವಾಗಿ ಎಂಎಸ್​ಎಂಇಗಳಿಂದ ಬಿಡಿಭಾಗಗಳನ್ನು ತಯಾರಿಸಿಕೊಂಡು ತರಿಸಿಕೊಳ್ಳುತ್ತದೆ. ಹೀಗಾಗಿ, ಸ್ಥಿರವಾದ ಮತ್ತು ಸುಲಭವಾದ ಸಪ್ಪೈ ಚೈನ್ ವ್ಯವಸ್ಥೆ ಇದೆ. ಸಣ್ಣ ಉದ್ದಿಮೆಗಳಿಗೆ ಅದು ತರಬೇತಿಯನ್ನೂ ನೀಡುತ್ತದೆ. ತಾನು ಆವಿಷ್ಕರಿಸಿದ ತಂತ್ರಜ್ಞಾನವನ್ನು ವಿವಿಧ ಉದ್ದಿಮೆಗಳಿಗೆ ಕೊಟ್ಟು ಆ ಮೂಲಕ ಉತ್ಪನ್ನಗಳ ತಯಾರಿಕೆಯ ಪ್ರಮಾಣ ಹೆಚ್ಚಾಗುವಂತೆ ಮಾಡುತ್ತದೆ. ಉದ್ಯಮ ವಲಯವೂ ಬೆಳೆಯುತ್ತದೆ.

ಇದನ್ನೂ ಓದಿ: ಬೆಂಗಳೂರಿನ ಐಫೋನ್ ಫ್ಯಾಕ್ಟರಿಯಲ್ಲಿ ಕ್ಷಿಪ್ರವೇಗದಲ್ಲಿ 30,000 ಉದ್ಯೋಗಿಗಳ ನೇಮಕ; ಭಾರತದಲ್ಲಿ ಸಿಕ್ಕಾಪಟ್ಟೆ ಆಗುತ್ತಿದೆ ಐಟಿ ಹೈರಿಂಗ್

ಕಾರ್ಪೊರೇಟ್ ಕಂಪನಿಗಳಿಗೆ ನಿದರ್ಶನ…

ಡಿಆರ್​ಡಿಒದ ಈ ಕಾರ್ಯವೈಖರಿಯು ಕಾರ್ಪೊರೇಟ್ ಕ್ಷೇತ್ರಕ್ಕೆ ಮಾದರಿಯಾಗಬಹುದು. ಹೆಚ್ಚಿನ ಕಾರ್ಪೊರೇಟ್ ಕಂಪನಿಗಳು ಆರ್ ಅಂಡ್ ಡಿಗೆ ಒತ್ತು ಕೊಡುತ್ತಿಲ್ಲ. ಇದರಿಂದ ಟೆಕ್ನಾಲಜಿ ಆಮದು ವೆಚ್ಚ ಹೆಚ್ಚುತ್ತದೆ. ಕಂಪನಿಗಳ ಅಂತಿಮ ಲಾಭದ ಮಾರ್ಜಿನ್ ಕಡಿಮೆ ಆಗುತ್ತದೆ. ಈ ಕಂಪನಿಗಳು ರಿಸರ್ಚ್​ಗೆ ಒಂದಷ್ಟು ವೆಚ್ಚ ಮಾಡಿದರೆ ಅದರಿಂದ ಉತ್ತಮ ತಂತ್ರಜ್ಞಾನ ಆವಿಷ್ಕರಿಸಿ ಜಾಗತಿಕವಾಗಿ ಪೈಪೋಟಿ ನಡೆಸಲು ಸಾಧ್ಯವಾಗುತ್ತದೆ ಎಂಬುದು ತಜ್ಞರ ಅನಿಸಿಕೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಅವಳಪ್ಪನೇ ಮುಸ್ಲಿಂ ಹುಡ್ಗಿ ಹಿಂದೆ ಬಿದ್ದಿದ್ದ, ಈಗ ತಪ್ಪಾಯ್ತಾ ಎಂದ ಯುವಕ
ಅವಳಪ್ಪನೇ ಮುಸ್ಲಿಂ ಹುಡ್ಗಿ ಹಿಂದೆ ಬಿದ್ದಿದ್ದ, ಈಗ ತಪ್ಪಾಯ್ತಾ ಎಂದ ಯುವಕ
ಬಿಗ್ ಬಾಸ್ ಗೆಲ್ಲೋದು ಯಾರು? ಗಿಲ್ಲಿ ಹೆಸರು ಹೇಳಿಲ್ಲ ಚೈತ್ರಾ
ಬಿಗ್ ಬಾಸ್ ಗೆಲ್ಲೋದು ಯಾರು? ಗಿಲ್ಲಿ ಹೆಸರು ಹೇಳಿಲ್ಲ ಚೈತ್ರಾ