AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಐಫೋನ್ ಫ್ಯಾಕ್ಟರಿಯಲ್ಲಿ ಕ್ಷಿಪ್ರವೇಗದಲ್ಲಿ 30,000 ಉದ್ಯೋಗಿಗಳ ನೇಮಕ; ಭಾರತದಲ್ಲಿ ಸಿಕ್ಕಾಪಟ್ಟೆ ಆಗುತ್ತಿದೆ ಐಟಿ ಹೈರಿಂಗ್

Foxconn's unit near Bengaluru hires 30,000 employees in 8-9 months: ಬೆಂಗಳೂರಿನ ದೇವನಹಳ್ಳಿಯಲ್ಲಿ ತೈವಾನ್ ಮೂಲದ ಫಾಕ್ಸ್​ಕಾನ್ ಸಂಸ್ಥೆ ನಿರ್ಮಿಸಿರುವ ಐಫೋನ್ ಅಸೆಂಬ್ಲಿ ಘಟಕದಲ್ಲಿ ಕ್ಷಿಪ್ರವಾಗಿ ನೇಮಕಾತಿಗಳಾಗಿವೆ. 300 ಎಕರೆಯ ವಿಶಾಲ ಫ್ಯಾಕ್ಟರಿಯಲ್ಲಿ 8-9 ತಿಂಗಳಲ್ಲೇ 30,000 ಮಂದಿಯನ್ನು ನೇಮಕ ಮಾಡಲಾಗಿದೆ. ಇದರಲ್ಲಿ ಶೇ. 80ರಷ್ಟ ಮಹಿಳೆಯರೇ ಆಗಿದ್ದು, ಹೆಚ್ಚಿನವರಿಗೆ ಇದು ಚೊಚ್ಚಲ ಕೆಲಸವಾಗಿದೆ.

ಬೆಂಗಳೂರಿನ ಐಫೋನ್ ಫ್ಯಾಕ್ಟರಿಯಲ್ಲಿ ಕ್ಷಿಪ್ರವೇಗದಲ್ಲಿ 30,000 ಉದ್ಯೋಗಿಗಳ ನೇಮಕ; ಭಾರತದಲ್ಲಿ ಸಿಕ್ಕಾಪಟ್ಟೆ ಆಗುತ್ತಿದೆ ಐಟಿ ಹೈರಿಂಗ್
ಫಾಕ್ಸ್​ಕಾನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 22, 2025 | 10:37 AM

Share

ಬೆಂಗಳೂರು, ಡಿಸೆಂಬರ್ 22: ದೇವನಹಳ್ಳಿ ಸಮೀಪ ಫಾಕ್ಸ್​ಕಾನ್ ಸಂಸ್ಥೆ ನಿರ್ಮಿಸಿರುವ ಐಫೋನ್ ಫ್ಯಾಕ್ಟರಿಯಲ್ಲಿ (Foxconn’s iPhone assembly unit) ಭಾರೀ ಪ್ರಮಾಣದಲ್ಲಿ ನೇಮಕಾತಿ ನಡೆಯುತ್ತಿದೆ. ವರದಿಗಳ ಪ್ರಕಾರ, ಕೇವಲ ಎಂಟು ತಿಂಗಳಲ್ಲಿ ಇಲ್ಲಿಗೆ ಬರೋಬ್ಬರಿ 30,000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಭಾರತದಲ್ಲಿ ಯಾವುದೇ ಸಂಸ್ಥೆಯು, ಅಥವಾ ಯಾವುದೇ ಫ್ಯಾಕ್ಟರಿಯೂ ಇಷ್ಟು ವೇಗದಲ್ಲಿ ಇಷ್ಟು ಪ್ರಮಾಣದಲ್ಲಿ ನೇಮಕಾತಿ ಮಾಡಿಕೊಂಡಿದ್ದೇ ಇಲ್ಲ.

ಐಫೋನ್ ಫ್ಯಾಕ್ಟರಿಯಲ್ಲಿ ಶೇ. 80 ಮಹಿಳೆಯರು

300 ಎಕರೆ ಜಾಗದಲ್ಲಿ ತೈವಾನ್ ಮೂಲದ ಫಾಕ್ಸ್​ಕಾನ್ ಕಂಪನಿ ನಿರ್ಮಿಸಿರುವ ವಿಶಾಲ ಫ್ಯಾಕ್ಟರಿಯಲ್ಲಿ ನೇಮಕವಾಗಿರವವರಲ್ಲಿ ಶೇ. 80ರಷ್ಟು ಮಂದಿ ಮಹಿಳೆಯರೇ ಆಗಿದ್ದಾರೆ. ಎಲ್ಲರೂ ಇನ್ನೂ ಕೂಡ ಎಂಟ್ರಿ ಏಜ್ ಲೆವೆಲ್​ನಲ್ಲಿದ್ದಾರೆ. ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ, ಐಫೋನ್ ಫ್ಯಾಕ್ಟರಿಗೆ ನೇಮಕವಾಗಿರುವವರಲ್ಲಿ ಹೆಚ್ಚಿನವರು ಕೇವಲ 19-24 ವಯೋಮಾನದವರಾಗಿದ್ದು, ಬಹುತೇಕ ಎಲ್ಲರಿಗೂ ಇದೇ ಮೊದಲ ಕೆಲಸವಾಗಿದೆಯಂತೆ.

ಪಿಯುಸಿ, ಡಿಪ್ಲೊಮಾ ಮಾಡಿರುವ ಯುವತಿಯರನ್ನು ಕೆಲಸಕ್ಕೆ ಸೇರಿಸಿಕೊಂಡು, ಆರು ತಿಂಗಳ ಕಾಲ ತರಬೇತಿ ಕೊಟ್ಟು ಬಳಿಕ ಐಫೋನ್ ಪ್ರೊಡಕ್ಷನ್ ಯುನಿಟ್​ಗಳಿಗೆ ಸೇರಿಸಿಕೊಳ್ಳಲಾಗುತ್ತಿದೆಯಂತೆ. ಉದ್ಯೋಗಿಗಳಿಗೆಂದೇ ಒಂದು ಟೌನ್​ಶಿಪ್ ಕೂಡ ನಿರ್ಮಾಣ ಮಾಡಲಾಗುತ್ತಿದೆ.

ಇದನ್ನೂ ಓದಿ: ಡಾವೋಸ್ ಸಭೆಗೆ ಭಾರತದಿಂದ ಪ್ರಬಲ ತಂಡ; 100ಕ್ಕೂ ಹೆಚ್ಚು ಉದ್ಯಮಿಗಳು, ಕೇಂದ್ರ ಸಚಿವರು, ಮುಖ್ಯಮಂತ್ರಿಗಳು ನಿಯೋಗದಲ್ಲಿ

ಭಾರತದಲ್ಲಿ ಇದು ಫಾಕ್ಸ್​ಕಾನ್​ನ ಅತಿದೊಡ್ಡ ಘಟಕ

2024ರ ಏಪ್ರಿಲ್-ಮೇ ತಿಂಗಳಲ್ಲೇ ಇಲ್ಲಿ ಐಫೋನ್-16 ಮಾಡಲ್ ಫೋನ್​ಗಳ ಅಸೆಂಬ್ಲಿಂಗ್ ಶುರುವಾಗಿತ್ತು. ಇದೀಗ ಇಲ್ಲಿ ಐಫೋನ್-17 ಪ್ರೋ ಮ್ಯಾಕ್ಸ್ ಮಾಡಲ್ ಫೋನ್​ಗಳ ಅಸೆಂಬ್ಲಿಂಗ್ ನಡೆಯುತ್ತಿದೆ. ಈ 300 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಘಟಕ 50,000 ಮಂದಿಗೆ ಕೆಲಸ ಮಾಡುವಷ್ಟು ವಿಶಾಲವಾಗಿದೆ. ತಮಿಳುನಾಡಿನಲ್ಲಿರುವ ಐಫೋನ್ ಫ್ಯಾಕ್ಟರಿಗಿಂತಲೂ ಇದು ಬೃಹತ್ತಾಗಿದೆ.

ಐಟಿ ಕ್ಷೇತ್ರದಲ್ಲಿ ಸಿಕ್ಕಾಪಟ್ಟೆ ಹೈರಿಂಗ್

ಭಾರತದಲ್ಲಿ ಐಟಿ ವೃತ್ತಿಪರರಿಗೆ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಈ ಕ್ಷೇತ್ರದಲ್ಲಿ ನೇಮಕಾತಿ ತೀವ್ರತರದಲ್ಲಿ ನಡೆಯುತ್ತಿದೆ. ಈ ವರ್ಷ (2025) 18 ಲಕ್ಷ ಐಟಿ ಹುದ್ದೆಗಳ ನೇಮಕಾತಿ ಆಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಬೇಡಿಕೆ ಶೇ. 16ರಷ್ಟು ಹೆಚ್ಚಿದೆ. ಆದರೆ, ಹೆಚ್ಚಿನ ನೇಮಕಾತಿಗಳು ಗ್ಲೋಬಲ್ ಕೇಪಬಿಲಿಟಿ ಸೆಂಟರ್​ಗಳಿಂದಲೇ ಆಗುತ್ತಿದೆ. ಇನ್ಫೋಸಿಸ್, ಟಿಸಿಎಸ್ ಇತ್ಯಾದಿ ಐಟಿ ಸರ್ವಿಸಸ್ ಕಂಪನಿಗಳಿಂದ ನೇಮಕಾತಿ ಮಂದವಾಗಿಯೇ ಇದೆ.

ಇದನ್ನೂ ಓದಿ: ಈ ವರ್ಷ ಸರ್ಕಾರಕ್ಕೆ ಸಿಕ್ಕಿದ ನಿವ್ವಳ ನೇರ ತೆರಿಗೆ ಸಂಗ್ರಹ 17 ಲಕ್ಷ ಕೋಟಿ ರೂ

ಉತ್ತರಪ್ರದೇಶದಲ್ಲಿ ಮುಂದಿನ ತಿಂಗಳೇ ಮೊದಲ ಸೆಮಿಕಂಡಕ್ಟರ್ ಘಟಕ

ಫಾಕ್ಸ್​ಕಾನ್ ಮತ್ತು ಎಚ್​ಸಿಎಲ್ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸಿರುವ ಸೆಮಿಕಂಡಕ್ಟರ್ ಘಟಕ ಮುಂದಿನ ತಿಂಗಳೇ (2026ರ ಜನವರಿ) ಲೋಕಾರ್ಪಣೆ ಆಗಬಹುದು. ಇದು ಉತ್ತರಪ್ರದೇಶ ರಾಜ್ಯಕ್ಕೆ ಸೇರಿದ, ಹಾಗೂ ದೆಹಲಿಗೆ ಸಮೀಪವೇ ಇರುವ ಗೌತಮ್ ಬುದ್ಧ ನಗರ್​ನ ಜೇವರ್ ಪ್ರದೇಶದ ಸೆಕ್ಟರ್ 28ರಲ್ಲಿ ನಿರ್ಮಾಣವಾಗಿದೆ. ಇಲ್ಲಿ ಡಿಸ್​ಪ್ಲೇ ಡ್ರೈವರ್ ಇಂಟಿಗ್ರೇಟೆಡ್ ಸರ್ಕ್ಯೂಟ್​ಗಳನ್ನು ತಯಾರಿಸಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ