AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿಎಂ ಉಜ್ವಲ ಯೋಜನೆ: ಆರೋಗ್ಯ, ಸಮಾನತೆ ಮತ್ತು ಶುದ್ಧ ವಾತಾವರಣ ಉಳಿಸುವ ಸ್ಕೀಮ್

PM Ujjwala Yojana and its benefits: ಪಿಎಂ ಉಜ್ವಲ ಯೋಜನೆ 2016ರಲ್ಲಿ ಆರಂಭಗೊಂಡಿದ್ದು ದೇಶದಲ್ಲಿ ಸ್ವಚ್ಛ ಇಂಧನ ತಲುಪಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಎನಿಸಿದೆ. ಕಟ್ಟಿಗೆ ಬಳಸಿ ಅಡುಗೆ ಮಾಡುವ ಬಡ ಮತ್ತು ಗ್ರಾಮೀಣ ಭಾಗದ ಜನರಿಗೆ ಸಬ್ಸಿಡಿ ದರದಲ್ಲಿ ಎಲ್​ಪಿಜಿ ಸಂಪರ್ಕ ನೀಡುತ್ತದೆ ಈ ಸ್ಕೀಮ್. ಎಲ್​ಪಿಜಿ ಬಳಕೆಯಿಂದ ಮನೆಯೊಳಗೆ ಶುದ್ಧ ಗಾಳಿ, ಜನರ ಆರೋಗ್ಯ, ದೇಶದ ಪರಿಸರವೂ ಉಳಿಯಲು ಸಾಧ್ಯವಾಗುತ್ತದೆ.

ಪಿಎಂ ಉಜ್ವಲ ಯೋಜನೆ: ಆರೋಗ್ಯ, ಸಮಾನತೆ ಮತ್ತು ಶುದ್ಧ ವಾತಾವರಣ ಉಳಿಸುವ ಸ್ಕೀಮ್
ಪಿಎಂ ಉಜ್ವಲ ಯೋಜನೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 24, 2025 | 8:44 PM

Share

ಕೇಂದ್ರ ಸರ್ಕಾರ ಬಹಳ ಮಹತ್ವಾಕಾಂಕ್ಷೆಯಿಂದ ಮತ್ತು ಮಹದ್ಗುರಿಯೊಂದಿಗೆ ಆರಂಭಿಸಿದ ಯೋಜನೆಗಳಲ್ಲಿ ಪಿಎಂ ಉಜ್ವಲ ಸ್ಕೀಮ್ (PM Ujjwala Yojana) ಒಂದು. ಮನೆಯಲ್ಲಿ ಶುದ್ಧ ಪರಿಸರ, ಸ್ವಚ್ಛ ಇಂಧನ ಮತ್ತು ದೇಶದಲ್ಲಿ ಲಿಂಗ ಸಮಾನತೆ ಈ ಮೂರೂ ಉದ್ದೇಶಗಳನ್ನು ಈಡೇರಿಸಲು ಈ ಯೋಜನೆ ಸಹಕಾರಿಯಾಗಿದೆ 2016ರಲ್ಲಿ ಆರಂಭವಾದ ಪಿಎಂ ಉಜ್ವಲ ಯೋಜನೆ ದೇಶಾದ್ಯಂತ ಬಡ ವರ್ಗದ ಜನರಿಗೆ ಸಬ್ಸಿಡಿ ದರದಲ್ಲಿ ಎಲ್​ಪಿಜಿ ಗ್ಯಾಸ್ ಕೊಡಲಾಗುತ್ತಿದೆ. ಯೋಜನೆ ಆರಂಭಗೊಂಡ ಏಳು ವರ್ಷದಲ್ಲಿ ಇದರಡಿ ಎಲ್​ಪಿಜಿ (LPG) ಕನೆಕ್ಷನ್ ಪಡೆದ ಮನೆಗಳ ಸಂಖ್ಯೆ 10 ಕೋಟಿ ಮೈಲಿಗಲ್ಲು ಮುಟ್ಟಿದೆ.

ಪಿಎಂ ಉಜ್ವಲ ಯೋಜನೆಯಿಂದಾಗಿ ದೇಶಾದ್ಯಂತ ಶೇ. 95ರಷ್ಟು ಮನೆಗಳಿಗೆ ಎಲ್​ಪಿಜಿ ಸಂಪರ್ಕ ಸಿಕ್ಕಂತಾಗಿದೆ. ಮತ್ತೊಂದು ಮಹತ್ವದ ಸಂಗತಿ ಎಂದರೆ, ಗ್ರಾಮೀಣ ಭಾಗದ ಮನೆಗಳಲ್ಲಿ ಸೌದೆ ಒಲೆ ಬದಲು ಎಲ್​ಪಿಜಿಯನ್ನು ಪ್ರಮುಖ ಇಂಧನವಾಗಿ ಬಳಸುತ್ತಿರುವವರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಲು ಪಿಎಂ ಉಜ್ವಲ ಯೋಜನೆ ಕಾರಣವಾಗಿದೆ.

ಇದನ್ನೂ ಓದಿ: Forex Reserves: ಮತ್ತೆ 700 ಬಿಲಿಯನ್ ಡಾಲರ್ ಗಡಿದಾಟಿದ ಭಾರತದ ಫಾರೆಕ್ಸ್ ರಿಸರ್ವ್ಸ್

ಅಭಿವೃದ್ಧಿಶೀಲ ದೇಶಗಳ ಮನೆಗಳಲ್ಲಿ ವಾಯು ಮಾಲಿನ್ಯದ ಸಮಸ್ಯೆ

ಭಾರತ, ಚೀನಾ, ಇಂಡೋನೇಷ್ಯಾ, ನೈಜೀರಿಯಾ ಮೊದಲಾದ ಕೆಳ ಮತ್ತು ಮಧ್ಯಮ ಆದಾಯ ದೇಶಗಳಲ್ಲಿ ಮನೆಗಳಲ್ಲಿ ವಾಯುಮಾಲಿನ್ಯ ಹೆಚ್ಚಿದೆ. ಕಲ್ಲಿದ್ದಲು, ಕಟ್ಟಿಗೆಯನ್ನು ಅಡುಗೆಗೆ ಬಳಸಲಾಗುವುದರಿಂದ ಮನೆಯೊಳಗೆ ಗಾಳಿಯ ಗುಣಮಟ್ಟ ಗಣನೀಯವಾಗಿ ಕಡಿಮೆ ಆಗುತ್ತದೆ. ಶ್ವಾಸಕೋಶ ಸಂಬಂಧಿತ ಸಂಸ್ಯೆಗಳು, ಹೃದಯ ಕಾಯಿಲೆಗಳು, ಕಣ್ಣಿನ ಸಮಸ್ಯೆ, ಸ್ಟ್ರೋಕ್ ಇತ್ಯಾದಿ ಆರೋಗ್ಯ ಸಮಸ್ಯೆಗಳು ಕಾಣಿಸುತ್ತವೆ.

ಅಡುಗೆಗೆ ಎಲ್​ಪಿಜಿ ಬಳಸುವುದರಿಂದ ಮನೆಯೊಳಗೆ ವಾಯು ಮಾಲಿನ್ಯ ನಿಯಂತ್ರಣಕ್ಕೆ ಬಂದು, ಶುದ್ಧ ಗಾಳಿ ಇರುವ ಪರಿಸರ ನಿರ್ಮಾಣವಾಗುತ್ತದೆ ಎಂಬುದು ಅನೇಕ ಸಂಶೋಧನೆಗಳಿಂದ ದೃಢಪಟ್ಟಿದೆ.

ಇದನ್ನೂ ಓದಿ: ಒತ್ತಡ ಹಾಕಿದರೆ ಭಾರತ ಬಗ್ಗಲ್ಲ: ಪಾಶ್ಚಿಮಾತ್ಯ ದೇಶಗಳಿಗೆ ಸಚಿವ ಪೀಯೂಶ್ ಗೋಯಲ್ ಪ್ರಬಲ ಸಂದೇಶ

ಸೌದೆ ಒಲೆಯಿಂದ ಅಡುಗೆ ಮಾಡಿದಾಗ ಪಿಎಂ 2.5 ಎನ್ನುವ ಮಾಲಿನ್ಯಕಾರಕ ವಸ್ತು ಗಾಳಿಗೆ ಸೇರುತ್ತದೆ. ಭಾರತದ ವಾತಾವರಣದಲ್ಲಿ ಇರುವ ಪಿಎಂ 2.5 ಕಣಗಳಲ್ಲಿ ಶೇ. 30ರಷ್ಟವನ್ನು ದಯಪಾಲಿಸಿರುವುದೇ ಈ ಸೌದೆ ಒಲೆಗಳು ಎಂದೆನ್ನಲಾಗಿದೆ. ಈ ಪಿಎಂ 2.5 ಪಾರ್ಟಿಕಲ್​ಗಳು ಆರೋಗ್ಯಕ್ಕೆ ಬಹಳ ಹಾನಿ ತರುತ್ತವೆ.

ಎಲ್ಲಾ ಮನೆಗಳಲ್ಲೂ ಎಲ್​ಪಿಜಿ ಬಳಸಿ ಅಡುಗೆ ಮಾಡಿದರೆ ಪಿಎಂ 2.5 ಕಣಗಳು ವಾತಾವರಣ ಸೇರುವುದು ಗಣನೀಯವಾಗಿ ಕಡಿಮೆ ಆಗುತ್ತದೆ. ಇದರಿಂದ ಗಾಳಿಯ ಶುದ್ಧತೆ ಹೆಚ್ಚುತ್ತದೆ. ಅನಾರೋಗ್ಯವಾಗುವ ಸಂಭವನೀಯತೆ ಕಡಿಮೆ ಆಗುತ್ತದೆ. 2030ರೊಳಗೆ ಸ್ವಚ್ಛ ಇಂಧನದ ಅವಕಾಶ ಎಲ್ಲರನ್ನೂ ತಲುಪಬೇಕೆನ್ನುವ ವಿಶ್ವ ಸಂಸ್ಥೆಯ ಗುರಿ ಈಡೇರಲೂ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪಿಎಂ ಉಜ್ವಲ ಯೋಜನೆ ಪ್ರಮುಖ ಎನಿಸುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಉತ್ತರಾಖಂಡದಲ್ಲಿ ಹಳಿ ತಪ್ಪಿದ ಉಜ್ಜಯಿನಿ ಎಕ್ಸ್​​ಪ್ರೆಸ್ ರೈಲು
ಉತ್ತರಾಖಂಡದಲ್ಲಿ ಹಳಿ ತಪ್ಪಿದ ಉಜ್ಜಯಿನಿ ಎಕ್ಸ್​​ಪ್ರೆಸ್ ರೈಲು
ಮಂಗಳೂರು: ಬಾವಿ ನೀರಿನಲ್ಲಿ ಡೀಸೆಲ್, ಸ್ಥಳೀಯರು ಹೇಳೋದೇನು ನೋಡಿ
ಮಂಗಳೂರು: ಬಾವಿ ನೀರಿನಲ್ಲಿ ಡೀಸೆಲ್, ಸ್ಥಳೀಯರು ಹೇಳೋದೇನು ನೋಡಿ
ಅಧಿಕ ಜೇಷ್ಠ ಮಾಸದಲ್ಲಿ ವಿಷ್ಣು ಸಹಸ್ರನಾಮ ಓದಲೇಬೇಕು!
ಅಧಿಕ ಜೇಷ್ಠ ಮಾಸದಲ್ಲಿ ವಿಷ್ಣು ಸಹಸ್ರನಾಮ ಓದಲೇಬೇಕು!
ಪಂಚ್ ಕೋತಿ ಇದ್ದ ಮೃಗಾಲಯಕ್ಕೆ ನುಗ್ಗಿದ್ದ ಇಬ್ಬರು ಅಮೆರಿಕನ್ನರ ಬಂಧನ
ಪಂಚ್ ಕೋತಿ ಇದ್ದ ಮೃಗಾಲಯಕ್ಕೆ ನುಗ್ಗಿದ್ದ ಇಬ್ಬರು ಅಮೆರಿಕನ್ನರ ಬಂಧನ
ಬೆಂಗಳೂರಿನಲ್ಲಿ ಭಾರೀ ಮಳೆ: ಲೇಔಟ್ ಒಳಗೆ ನುಗ್ಗಿದ ರಾಜಕಾಲುವೆ ಕೊಳಚೆ ನೀರು
ಬೆಂಗಳೂರಿನಲ್ಲಿ ಭಾರೀ ಮಳೆ: ಲೇಔಟ್ ಒಳಗೆ ನುಗ್ಗಿದ ರಾಜಕಾಲುವೆ ಕೊಳಚೆ ನೀರು
ಜೈಲಿಗೆ ಸ್ವತಃ ಡಿಜಿಪಿ ಭೇಟಿ ನೀಡಿದಾಗ ನಟ ದರ್ಶನ್ ಸಮಸ್ಯೆ ಹೇಳಿಕೊಂಡ್ರಾ?
ಜೈಲಿಗೆ ಸ್ವತಃ ಡಿಜಿಪಿ ಭೇಟಿ ನೀಡಿದಾಗ ನಟ ದರ್ಶನ್ ಸಮಸ್ಯೆ ಹೇಳಿಕೊಂಡ್ರಾ?
ದುಬಾರೆ ದುರಂತದ ಬೆನ್ನಲ್ಲೇ ಅಲರ್ಟ್: ಅರಣ್ಯ ಇಲಾಖೆ ಕೈಗೊಂಡ ಕ್ರಮಗಳೇನು?
ದುಬಾರೆ ದುರಂತದ ಬೆನ್ನಲ್ಲೇ ಅಲರ್ಟ್: ಅರಣ್ಯ ಇಲಾಖೆ ಕೈಗೊಂಡ ಕ್ರಮಗಳೇನು?
ಕುಕ್ಕೆ ಸುಬ್ರಹ್ಮಣ್ಯ ಮತ್ತೆ ನಂಬರ್‌ 1 ಶ್ರೀಮಂತ ದೇಗುಲ
ಕುಕ್ಕೆ ಸುಬ್ರಹ್ಮಣ್ಯ ಮತ್ತೆ ನಂಬರ್‌ 1 ಶ್ರೀಮಂತ ದೇಗುಲ
ಗಿನ್ನಿಸ್ ದಾಖಲೆ ಪುಟ ಸೇರಲಿದೆಯಾ ಕಾಂಗ್ರೆಸ್​​ ಸಾಧನಾ ಸಮಾವೇಶ?
ಗಿನ್ನಿಸ್ ದಾಖಲೆ ಪುಟ ಸೇರಲಿದೆಯಾ ಕಾಂಗ್ರೆಸ್​​ ಸಾಧನಾ ಸಮಾವೇಶ?
33ನೇ ವಯಸ್ಸಿಗೆ ದುರಂತ ಅಂತ್ಯ ಕಂಡ ಟ್ವಿಶಾ ಶರ್ಮಾ ಜೀವನ; ಸಾವಿಗೆ ಕಾರಣ ಏನು?
33ನೇ ವಯಸ್ಸಿಗೆ ದುರಂತ ಅಂತ್ಯ ಕಂಡ ಟ್ವಿಶಾ ಶರ್ಮಾ ಜೀವನ; ಸಾವಿಗೆ ಕಾರಣ ಏನು?