ಕ್ರೆಡಿಟ್ ಸ್ಕೋರ್ ಕಡಿಮೆಯಿದ್ರೂ ನೀವು ಬ್ಯಾಂಕ್‌ನಿಂದ ಹೀಗೆ ಸಾಲ ಪಡೆಯಿರಿ
ಬ್ಯಾಂಕ್ ಸಾಲ ನೀಡುವಾಗ ಮಾಸಿಕ ಆದಾಯ, ಕ್ರೆಡಿಟ್ ಸ್ಕೋರ್ ಹಾಗೂ ಸಾಲ ಮರುಪಾವತಿ ಸಾಮರ್ಥ್ಯ ಹೊಂದಿದ್ದಾರೆಯೋ ಎಂದು ನೋಡುತ್ತದೆ. ಆದರೆ ನೀವು ಕ್ರೆಡಿಟ್ ಸ್ಕೋರ್ ಇಲ್ಲದೇನೆ ಸಾಲ ಪಡೆಯಬಹುದು. ಉತ್ತಮ ಆದಾಯದ ಮೂಲ ಹೊಂದಿದ್ದರೆ ಹಾಗೂ ಸ್ಥಿರ ಠೇವಣಿ ಸೇರಿದಂತೆ ಇನ್ನಿತರ ಭದ್ರತೆಯನ್ನು ಬ್ಯಾಂಕಿಗೆ ನೀಡಿದರೆ ಸುಲಭವಾಗಿ ಸಾಲ ಮಂಜೂರು ಆಗುತ್ತದೆ.

ಮುಖ್ಯಾಂಶಗಳು
- ಆರ್ಥಿಕ ಸಮಸ್ಯೆ ಎದುರಾದಾಗ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುತ್ತೇವೆ
- ಸಿಬಿಲ್ ಸ್ಕೋರ್ 750 ಕ್ಕಿಂತ ಹೆಚ್ಚಿದ್ದರೆ ಬ್ಯಾಂಕ್ ಸಾಲವನ್ನು ಸುಲಭವಾಗಿ ನೀಡುತ್ತವೆ
- ಕ್ರೆಡಿಟ್ ಸ್ಕೋರ್ ಕಡಿಮೆಯಿದ್ರೂ ಬ್ಯಾಂಕ್‌ನಿಂದ ಸಾಲ ಪಡೆಯಬಹುದು
ಆರ್ಥಿಕ ಸಮಸ್ಯೆ ಎದುರಾದಾಗ ಬ್ಯಾಂಕ್ (Bank Loan) ಅಥವಾ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುತ್ತೇವೆ. ಆದರೆ ಸಾಲ ಪಡೆಯುವ ಮುಂಚೆ ಕಡಿಮೆ ಬಡ್ಡಿದರದಲ್ಲಿ ಎಲ್ಲಿ ಸಾಲ ಸಿಗುತ್ತದೆ ಎಂದು ನೋಡುತ್ತೇವೆ. ಅದೇ ರೀತಿ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆ ಕೂಡ ಸಾಲ ಪಡೆಯುವ ವ್ಯಕ್ತಿಯ ಸಿಬಿಲ್ ಸ್ಕೋರ್ (CIBIL Score) ಎಷ್ಟಿದೆ ಎಂದು ಪರಿಶೀಲಿಸುತ್ತದೆ. ಸಿಬಿಲ್ ಸ್ಕೋರ್ 750 ಕ್ಕಿಂತ ಹೆಚ್ಚಿದ್ದರೆ ಬ್ಯಾಂಕ್ ಸಾಲವನ್ನು ಸುಲಭವಾಗಿ ನೀಡುತ್ತವೆ. ಆದರೆ ಕ್ರೆಡಿಟ್ ಸ್ಕೋರ್ ಇಲ್ಲದೇನೆ ಸುಲಭವಾಗಿ ಸಾಲ ಪಡೆಯಬಹುದು. ಇದಕ್ಕೆ ನಿಮ್ಮ ಬಳಿ ಉತ್ತಮ ಆದಾಯವಿರಬೇಕು, ಜತೆಗೆ ಸ್ಥಿರ ಠೇವಣಿ, ಚಿನ್ನ ಅಡಮಾನ, ಆದಾಯ ಆಧಾರಿತ ಸಾಲ ಹಾಗೂ ಆಸ್ತಿ ದಾಖಲೆಗಳನ್ನು ಬ್ಯಾಂಕ್‌ನಲ್ಲಿ ಇಟ್ಟು ಸಾಲ ಪಡೆಯಬಹುದು.
ಕ್ರೆಡಿಟ್ ಸ್ಕೋರ್ ಕಡಿಮೆಯಿದ್ರೂ ಬ್ಯಾಂಕ್‌ನಲ್ಲಿ ಸಾಲ ಪಡೆಯುವುದು ಹೇಗೆ?
ಎಫ್‌ಡಿ ಮೇಲಿನ ಸಾಲ: ನಿಮ್ಮ ಹೆಸರಿನಲ್ಲಿರುವ ಫಿಕ್ಸೆಡ್ ಡೆಪಾಸಿಟ್ ಮೇಲೆ ಸಾಲ ಪಡೆಯಲು ಅವಕಾಶವಿದೆ. ಈ ಸಾಲಕ್ಕೆ ಯಾವುದೇ ಕ್ರೆಡಿಟ್ ಸ್ಕೋರ್ ಅವಶ್ಯಕತೆ ಇರುವುದಿಲ್ಲ.
ಆಸ್ತಿ ದಾಖಲೆ ಮೇಲಿನ ಸಾಲ: ಮನೆ ಅಥವಾ ಕೃಷಿ ಭೂಮಿಯ ದಾಖಲೆಗಳನ್ನು ಭದ್ರತೆಯಾಗಿಟ್ಟು ಬ್ಯಾಂಕಿನಿಂದ ಸಾಲ ಪಡೆಯಬಹುದು.
ಚಿನ್ನದ ಸಾಲ: ಚಿನ್ನದ ಆಭರಣಗಳನ್ನು ಅಡವಿಟ್ಟು ಸುಲಭವಾಗಿ ಸಾಲ ಪಡೆಯಬಹುದು. ಈ ಸಾಲಕ್ಕೆ ಯಾವುದೇ ಕ್ರೆಡಿಟ್ ಕಾರ್ಡ್ ಅವಶ್ಯಕತೆ ಇರುವುದಿಲ್ಲ.
ಆದಾಯದ ಮೇಲಿನ ಸಾಲ: ನಿಮ್ಮ ತಿಂಗಳ ಸಂಬಳದ ಆದಾಯದ ಮೇಲೆ ಸಾಲ ಪಡೆಯಲು ಅವಕಾಶವಿದೆ. ಇದಕ್ಕೆ ನಿಮ್ಮ ಸ್ಯಾಲರಿ ಸ್ಲಿಪ್, ಆರು ತಿಂಗಳ ಬ್ಯಾಂಕ್ ಸ್ಟೇಟ್‌ಮೆಂಟ್ ಅಥವಾ ಐಟಿಆರ್ ಬ್ಯಾಂಕ್‌ಗೆ ನೀಡುವುದು ಕಡ್ಡಾಯ.
ಖಾತರಿದಾರರು: ನೀವು ಅತ್ಯುತ್ತಮ ಕ್ರೆಡಿಟ್ ಸ್ಕೋರ್ ಹೊಂದಿರುವ ವ್ಯಕ್ತಿಯನ್ನು ಖಾತರಿದಾರರಾಗಿ ಸೇರಿಸಿ ಅದರ ಮುಖೇನ ಸಾಲ ಪಡೆಯಬಹುದು. ಬ್ಯಾಂಕ್ ಸಾಲ ನೀಡುವಾಗ ನಿಮ್ಮ ಕ್ರೆಡಿಟ್ ಸ್ಕೋರ್ ಬದಲು ಖಾತರಿದಾರರ ಕ್ರೆಡಿಟ್ ಸ್ಕೋರ್ ಪರಿಶೀಲಿಸುತ್ತವೆ.
ಇದನ್ನೂ ಓದಿ: ಒಬ್ಬ ವ್ಯಕ್ತಿ ತನ್ನ ಹೆಸರಿನಲ್ಲಿ ಎಷ್ಟು ಬ್ಯಾಂಕ್ ಅಕೌಂಟ್ ತೆರೆಯಲು ಅವಕಾಶವಿದೆ
ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)
ಪ್ರಶ್ನೆ: ಕ್ರೆಡಿಟ್ ಸ್ಕೋರ್ ಕಡಿಮೆಯಿದ್ರೂ ಬ್ಯಾಂಕ್‌ನಿಂದ ಸಾಲ ಪಡೆಯುವುದು ಹೇಗೆ?
ಉತ್ತರ: ಸ್ಥಿರ ಠೇವಣಿ, ಚಿನ್ನ ಅಡಮಾನ, ಆದಾಯ, ಆಸ್ತಿ ದಾಖಲೆಗಳನ್ನು ಬ್ಯಾಂಕ್‌ನಲ್ಲಿ ಇಟ್ಟು ಸಾಲ ಪಡೆಯಬಹುದು.
ಪ್ರಶ್ನೆ: ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗ್ಬೇಕು ಅಂತಾದ್ರೆ ಸಿಬಿಲ್ ಸ್ಕೋರ್ ಎಷ್ಟಿರಬೇಕು?
ಉತ್ತರ: ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗ್ಬೇಕು ಅಂದ್ರೆ ಸಿಬಿಲ್ ಸ್ಕೋರ್ 750 ಕ್ಕಿಂತ ಹೆಚ್ಚಿರಬೇಕು.
ಪ್ರಶ್ನೆ: ಬ್ಯಾಂಕ್ ಸಾಲ ಪಡೆಯಲು ಸಿಬಿಲ್ ಸ್ಕೋರ್ ಯಾಕೆ ಮುಖ್ಯ?
ಉತ್ತರ: ಬ್ಯಾಂಕ್‌ಗಳು ನಿಮಗೆ ಸಾಲ ಅಥವಾ ಕ್ರೆಡಿಟ್ ಕಾರ್ಡ್ ನೀಡಬೇಕೇ ಎಂಬುವುದನ್ನು ನಿರ್ಧರಿಸಲು ಸಿಬಿಲ್ ಸ್ಕೋರ್ ಮುಖ್ಯವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




