AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕಕ್ಕೆ ಓದಲು ಹೋದವರಲ್ಲಿ ಶೇ. 81 ಮಂದಿ ತಾಯ್ನಾಡಿಗೆ ಬರಲು ಪ್ಲಾನ್; ಏನು ಕಾರಣ?

Most Indian students studying abroad plans to comeback home after studies: ಆಕ್ಸ್​ಫರ್ಡ್ ಇಂಟರ್​ನ್ಯಾಷನಲ್​ನ 3ನೇ ಸ್ಟುಡೆಂಟ್ ಗ್ಲೋಬಲ್ ಮೊಬಿಲಿಟಿ ಇಂಡೆಕ್ಸ್​ನ ಸಮೀಕ್ಷೆ ಪ್ರಕಾರ, ವಿದೇಶಗಳಲ್ಲಿರುವ ಹೆಚ್ಚಿನ ಭಾರತೀಯ ವಿದ್ಯಾರ್ಥಿಗಳು ಓದು ಮುಗಿಸಿ ತವರಿಗೆ ಬರಲು ಪ್ಲಾನ್ ಮಾಡಿಕೊಂಡಿದ್ದಾರೆ. ಈ ಮೊದಲೆಲ್ಲಾ, ಭಾರತೀಯ ವಿದ್ಯಾರ್ಥಿಗಳು ವಿದೇಶಕ್ಕೆ ಓದಲು ಹೋಗಿ, ಅಲ್ಲಿಯೇ ಟ್ರೈನಿಂಗ್ ಮುಗಿಸಿ, ಕೆಲಸ ಗಿಟ್ಟಿಸಿ ಅಲ್ಲೇ ಸೆಟಲ್ ಆಗುವ ಪ್ಲಾನ್ ಹಾಕಿಕೊಳ್ಳುತ್ತಿದ್ದರು. ಈ ಬದಲಾವಣೆಗೆ ಏನು ಕಾರಣ?

ಅಮೆರಿಕಕ್ಕೆ ಓದಲು ಹೋದವರಲ್ಲಿ ಶೇ. 81 ಮಂದಿ ತಾಯ್ನಾಡಿಗೆ ಬರಲು ಪ್ಲಾನ್; ಏನು ಕಾರಣ?
ಹಾರ್ವರ್ಡ್ ವಿವಿ ಕ್ಯಾಂಪಸ್Image Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 10, 2026 | 6:09 PM

Share

ವಾಷಿಂಗ್ಟನ್, ಆಗಸ್ಟ್ 10: ವಿದೇಶಗಳಿಗೆ ವ್ಯಾಸಂಗಕ್ಕೆ ಹೋಗಿರುವ ಭಾರತೀಯ ವಿದ್ಯಾರ್ಥಿಗಳ ಆದ್ಯತೆಗಳಲ್ಲಿ ಭಾರೀ ಬದಲಾವಣೆ ಕಂಡು ಬಂದಿದೆ. ಇತ್ತೀಚಿನ ವರದಿಯೊಂದರ ಪ್ರಕಾರ, ವಿದೇಶಗಳಲ್ಲಿರುವ ಶೇ. 81ರಷ್ಟು ಭಾರತೀಯ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಮುಗಿದ ನಂತರ ಭಾರತಕ್ಕೇ ಮರಳಲು ನಿರ್ಧರಿಸಿದ್ದಾರೆ. ಆಕ್ಸ್​ಫರ್ಡ್ ಇಂಟರ್ನ್ಯಾಷನಲ್​ನ ಸ್ಟುಡೆಂಟ್ ಗ್ಲೋಬಲ್ ಮೊಬಿಲಿಟಿ ಇಂಡೆಕ್ಸ್ (Oxford International third Student Global Mobility Index) ಈ ಸಮೀಕ್ಷೆಯನ್ನು ನಡೆಸಿ ವರದಿ ಬಿಡುಗಡೆ ಮಾಡಿದೆ.

ಅಮೆರಿಕಕ್ಕೆ ಹೋಗಿ ಓದು ಮುಗಿಸಿದ ಬಳಿಕ ಒಂದೆರಡು ವರ್ಷ ಐಚ್ಛಿಕವಾದ ಪ್ರಾಕ್ಟಿಕಲ್ ಟ್ರೈನಿಂಗ್ (OPT) ಅವಕಾಶ ಬಳಸಿಕೊಂಡು, ಆ ಅವಧಿಯಲ್ಲಿ ಎಚ್1ಬಿ ವೀಸಾ ಗಿಟ್ಟಿಸಲು ಯತ್ನಿಸುವುದು, ಅದು ಯಶಸ್ವಿಯಾದಲ್ಲಿ ಕೆಲಸಕ್ಕೆ ಸೇರಿ ವೃತ್ತಿಜೀವನ ಆರಂಭಿಸುವುದು, ನಂತರ ಸಾಧ್ಯವಾದರೆ ಅಲ್ಲಿಯೇ ಸೆಟಲ್ ಆಗುವುದು, ಇವಿಷ್ಟೂ ಹೆಚ್ಚಿನ ಭಾರತೀಯ ವಿದ್ಯಾರ್ಥಿಗಳ ಪೂರ್ವಭಾವಿ ಪ್ಲಾನ್ ಆಗಿರುತ್ತದೆ. ಈಗ ಹೆಚ್ಚಿನ ಭಾರತೀಯ ಯುವಜನರು ಅಮೆರಿಕದಿಂದ ವಾಪಸ್ ಬರಲು ಹಾತೊರೆಯುತ್ತಿರುವುದು ಯಾಕೆ?

ಅಮೆರಿಕ (US) ಸರ್ಕಾರವು ವಿದೇಶಿ ವಿದ್ಯಾರ್ಥಿಗಳು ಮತ್ತು ಕೌಶಲಯುಕ್ತ ಉದ್ಯೋಗಿಗಳ ಮೇಲಿನ ವೀಸಾ ಹಾಗೂ ಇಮಿಗ್ರೇಷನ್ (ವಲಸೆ) ನಿಯಮಗಳನ್ನು ತೀವ್ರವಾಗಿ ಕಠಿಣಗೊಳಿಸಿರುವುದೇ ಈ ಮಹತ್ವದ ಬದಲಾವಣೆಗೆ ಪ್ರಮುಖ ಕಾರಣವಾಗಿದೆ ಎಂದು ಆಕ್ಸ್​ಫರ್ಡ್ ವರದಿಯು ಹೇಳಿದೆ. ಭಾರತೀಯ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ಹೆಚ್ಚಾಗಿ ಹೋಗುವುದು ಅಮೆರಿಕಕ್ಕೆ. ಹೀಗಾಗಿ, ಅಮೆರಿಕದಲ್ಲಿ ಬದಲಾಗುತ್ತಿರುವ ನೀತಿಗಳು ಭಾರತೀಯ ವಿದ್ಯಾರ್ಥಿಗಳ ಆದ್ಯತೆಗಳನ್ನು ಬದಲಿಸಿರಬಹುದು.

ಇದನ್ನೂ ಓದಿ: ಮಗಳ PPF ಹಣ ಹಿಂಪಡೆದ ತಂದೆ: ಬಡ್ಡಿ ಸಮೇತ ಮರಳಿಸಲು ಕೋರ್ಟ್ ಆದೇಶ; ಏನಿವೆ ಪಿಪಿಎಫ್ ನಿಯಮಗಳು?

‘ಆಕ್ಸ್‌ಫರ್ಡ್ ಇಂಟರ್‌ನ್ಯಾಷನಲ್’ ವರದಿಯ ಮುಖ್ಯಾಂಶಗಳು

ಆಕ್ಸ್‌ಫರ್ಡ್ ಇಂಟರ್‌ನ್ಯಾಷನಲ್ ಪ್ರಕಟಿಸಿರುವ 3ನೇ ‘ಸ್ಟೂಡೆಂಟ್ ಗ್ಲೋಬಲ್ ಮೊಬಿಲಿಟಿ ಇಂಡೆಕ್ಸ್’ (SGMI) ಸಮೀಕ್ಷೆಯು ಈ ಕೆಳಗಿನ ಅಂಶಗಳನ್ನು ಗಮನಿಸಿದೆ:

  • ಸ್ವದೇಶಕ್ಕೆ ವಾಪಸ್: ವಿದೇಶಗಳಲ್ಲಿ ಓದಲು ಬಯಸುವ ಪ್ರತಿ 5 ಭಾರತೀಯ ವಿದ್ಯಾರ್ಥಿಗಳಲ್ಲಿ 4 ಜನರು (ಶೇ. 81) ಶಿಕ್ಷಣ ಪೂರ್ಣಗೊಂಡ ಬಳಿಕ ಭಾರತಕ್ಕೆ ಮರಳುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
  • ಬದಲಾದ ಉದ್ದೇಶ: ಹಿಂದೆ ವಿದೇಶಿ ಶಿಕ್ಷಣ ಎಂದರೆ ಅಲ್ಲೇ ಖಾಯಂ ಆಗಿ ನೆಲೆಸುವ (Permanent Residency) ಉದ್ದೇಶವಿರುತ್ತಿತ್ತು. ಆದರೆ ಈಗ ಜಾಗತಿಕ ಅನುಭವ, ಕೌಶಲ ಮತ್ತು ವಿದೇಶಿ ಪದವಿ ಪಡೆಯುವುದಷ್ಟೇ ಮುಖ್ಯ ಗುರಿಯಾಗಿದೆ.
  • ಸ್ವತಂತ್ರ ನಿರ್ಧಾರ: ಶಿಕ್ಷಣಕ್ಕಾಗಿ ಅರ್ಜಿ ಸಲ್ಲಿಸುವವರಲ್ಲಿ ಸ್ವಯಂ ಪ್ರೇರಿತ ನಿರ್ಧಾರ ಕೈಗೊಳ್ಳುವವರ ಸಂಖ್ಯೆ ಶೇ. 29 ರಿಂದ ಶೇ. 49ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ: UPI ಮೇಲಿನ MDR; ಶೇಕಡಾವಾರು ಆಧಾರಿತವಾಗಿ ಶುಲ್ಕ ಬೇಡ, ಗರಿಷ್ಠ ಮಿತಿ ಇರಲಿ: ದೀಪಕ್ ಶೆಣೈ

ಅಮೆರಿಕದಲ್ಲಿ ಬದಲಾದ ಕಠಿಣ ನಿಯಮಗಳು

ಕಳೆದ ಕೆಲವು ತಿಂಗಳುಗಳಿಂದ ಅಮೆರಿಕ ಸರ್ಕಾರವು ಜಾರಿಗೆ ತಂದಿರುವ ಕಠಿಣ ನಿಯಮಗಳು ಭಾರತೀಯ ವಿದ್ಯಾರ್ಥಿಗಳ ಮೇಲಿನ ಸಾಂಪ್ರದಾಯಿಕ ‘ವ್ಯಾಸಂಗ-ಉದ್ಯೋಗ-ನೆಲೆಸುವಿಕೆ’ ಸರಣಿಯನ್ನು ಕಷ್ಟಕರವಾಗಿಸಿವೆ:

  • 4 ವರ್ಷಗಳ ಗರಿಷ್ಠ ಮಿತಿ: ದಶಕಗಳಿಂದ ಜಾರಿಯಲ್ಲಿದ್ದ “ಡ್ಯುರೇಷನ್ ಆಫ್ ಸ್ಟೇಟಸ್” ನಿಯಮವನ್ನು ರದ್ದುಗೊಳಿಸಲಾಗಿದ್ದು, ಇನ್ಮುಂದೆ ವಿದ್ಯಾರ್ಥಿಗಳು ಗರಿಷ್ಠ 4 ವರ್ಷ ಮಾತ್ರ ಅಮೆರಿಕದಲ್ಲಿ ಉಳಿಯಬಹುದು. ಕೋರ್ಸ್ ವಿಸ್ತರಿಸಬೇಕಾದರೆ ಅಧಿಕೃತ ಅನುಮತಿ ಪಡೆಯುವುದು ಕಡ್ಡಾಯ.
  • SEVIS ಮತ್ತು ವೀಸಾ ರದ್ದತಿ: ಯಾವುದೇ ಸ್ಪಷ್ಟ ಕಾರಣ ನೀಡದೆ ಸಾವಿರಾರು ವಿದ್ಯಾರ್ಥಿಗಳ ‘SEVIS’ (ವಿದ್ಯಾರ್ಥಿ ಮಾಹಿತಿ ವ್ಯವಸ್ಥೆ) ದಾಖಲೆಗಳನ್ನು ರದ್ದುಗೊಳಿಸಲಾಗಿದೆ. 2025-26ರಲ್ಲಿ ಸಾವಿರಾರು ವಿದ್ಯಾರ್ಥಿ ವೀಸಾಗಳನ್ನು ಹಿಂಪಡೆಯಲಾಗಿದೆ.
  • ಸೋಷಿಯಲ್ ಮೀಡಿಯಾ ತಪಾಸಣೆ: ವೀಸಾ ಅರ್ಜಿ ಸಲ್ಲಿಸುವಾಗ ವಿದ್ಯಾರ್ಥಿಗಳು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಬಹಿರಂಗಪಡಿಸುವುದು ಕಡ್ಡಾಯಗೊಳಿಸಲಾಗಿದೆ.
  • ವಿಶ್ವವಿದ್ಯಾಲಯಗಳಿಗೆ ಶೇ. 15 ಕ್ಯಾಪಿಂಗ್: ಯುಎಸ್ ವಿಶ್ವವಿದ್ಯಾಲಯಗಳಲ್ಲಿ ಒಟ್ಟು ವಿದೇಶಿ ವಿದ್ಯಾರ್ಥಿಗಳ ಮಿತಿ ಶೇ. 15 ಮತ್ತು ಯಾವುದೇ ಒಂದೇ ದೇಶದ ವಿದ್ಯಾರ್ಥಿಗಳು ಶೇ. 5 ಕ್ಕಿಂತ ಹೆಚ್ಚಿರಬಾರದು ಎಂಬ ನಿಯಮ ತರಲಾಗಿದೆ. ಇದು ದೊಡ್ಡ ಸಂಖ್ಯೆಯಲ್ಲಿ ತೆರಳುವ ಭಾರತೀಯರಿಗೆ ಹೊಡೆತ ನೀಡಿದೆ.
  • H-1B ವೀಸಾ ಮತ್ತು OPT ಅನಿಶ್ಚಿತತೆ: H-1B ವೀಸಾ ಅರ್ಜಿಗಳಿಗೆ ಕಠಿಣ ಶುಲ್ಕ ಮತ್ತು ಕೊಡುಕೊಳ್ಳುವಿಕೆ ನಿಯಮ ತರಲಾಗಿದ್ದು, ಕೋರ್ಸ್ ಮುಗಿದ ನಂತರ ಸಿಗುವ OPT (Optional Practical Training) ಕೆಲಸದ ಅವಧಿಯ ಮೇಲೆಯೂ ಕತ್ತಿ ತೂಗುತ್ತಿದೆ.

ಅಮೆರಿಕ ವಿಧಿಸಿರುವ ಈ ನಿರ್ಬಂಧಗಳಿಂದಾಗಿ ಭಾರತೀಯ ವಿದ್ಯಾರ್ಥಿಗಳಿಗೆ ಸಿಗುತ್ತಿದ್ದ F-1 ವೀಸಾಗಳ ಸಂಖ್ಯೆಯಲ್ಲಿ ಶೇಕಡಾ 60 ರಿಂದ 69 ರಷ್ಟು ಭಾರಿ ಕುಸಿತ ಕಂಡಿದೆ. ಅಮೆರಿಕದಲ್ಲಿ ಸದ್ಯ 3.72 ಲಕ್ಷಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳಿದ್ದು, ಹೊಸ ನಿಯಮಗಳಿಂದಾಗಿ ಉದ್ಯೋಗಾವಕಾಶಗಳು ಕ್ಷೀಣಿಸುತ್ತಿರುವುದರಿಂದ ಬಹುತೇಕ ವಿದ್ಯಾರ್ಥಿಗಳು ಭಾರತದಲ್ಲಿಯೇ ಉದ್ಯೋಗ ಕಂಡುಕೊಳ್ಳಲು ಮನಸ್ಸು ಮಾಡುತ್ತಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
KPSC ಹಗರಣ: ಅಕ್ರಮದ ಹಣದಲ್ಲಿ ಆರೋಪಿಗಳಿಂದ ಪ್ಲೈಟ್ ಟಿಕೆಟ್​ ಬುಕ್ಕಿಂಗ್
KPSC ಹಗರಣ: ಅಕ್ರಮದ ಹಣದಲ್ಲಿ ಆರೋಪಿಗಳಿಂದ ಪ್ಲೈಟ್ ಟಿಕೆಟ್​ ಬುಕ್ಕಿಂಗ್
ಜಂಬೂಸವಾರಿ: ಮಹೇಂದ್ರ ಆನೆಯನ್ನು ಕ್ಯಾಪ್ಟನ್ ರೇಸ್​ನಿಂದ ಹೊರಗಿಟ್ಟಿದ್ದೇಕೆ?
ಜಂಬೂಸವಾರಿ: ಮಹೇಂದ್ರ ಆನೆಯನ್ನು ಕ್ಯಾಪ್ಟನ್ ರೇಸ್​ನಿಂದ ಹೊರಗಿಟ್ಟಿದ್ದೇಕೆ?
ಮೈಸೂರು ದಸರಾ 2026: ಗಜಪಡೆಗೆ ಸಿಡಿಮದ್ದು ತರಬೇತಿ
ಮೈಸೂರು ದಸರಾ 2026: ಗಜಪಡೆಗೆ ಸಿಡಿಮದ್ದು ತರಬೇತಿ
ದಾವಣಗೆರೆ ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ಭ್ರೂಣ ಲಿಂಗ ಪತ್ತೆ ಶಂಕೆ
ದಾವಣಗೆರೆ ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ಭ್ರೂಣ ಲಿಂಗ ಪತ್ತೆ ಶಂಕೆ
ಧರೆಗುರುಳಿದ ಬೃಹತ್ ಮರ, ಹೊಯ್ಸಳ ಪೊಲೀಸ್ ಕಾರು ಜಸ್ಟ್ ಮಿಸ್
ಧರೆಗುರುಳಿದ ಬೃಹತ್ ಮರ, ಹೊಯ್ಸಳ ಪೊಲೀಸ್ ಕಾರು ಜಸ್ಟ್ ಮಿಸ್
ಸ್ಟಿಂಗ್ ಆಪರೇಷನ್​​: ಪೆನ್‌ಡ್ರೈವ್​ ಪ್ರದರ್ಶಿಸಿ ಗಣಿಗ ರವಿ ಸ್ಫೋಟಕ ಆರೋಪ
ಸ್ಟಿಂಗ್ ಆಪರೇಷನ್​​: ಪೆನ್‌ಡ್ರೈವ್​ ಪ್ರದರ್ಶಿಸಿ ಗಣಿಗ ರವಿ ಸ್ಫೋಟಕ ಆರೋಪ
ಪಿಜಿಸಿಇಟಿ ಕೌನ್ಸಿಲಿಂಗ್ ವಿಳಂಬ: ಕೆಇಎ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ!
ಪಿಜಿಸಿಇಟಿ ಕೌನ್ಸಿಲಿಂಗ್ ವಿಳಂಬ: ಕೆಇಎ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ!
ಗಾನವಿ ಕೊಟ್ಟ ಕೌಂಟರ್​​ಗೆ ಸೈಲೆಂಟ್ ಆದ ತಾಂಡವ್ ರಾಮ್
ಗಾನವಿ ಕೊಟ್ಟ ಕೌಂಟರ್​​ಗೆ ಸೈಲೆಂಟ್ ಆದ ತಾಂಡವ್ ರಾಮ್
ಬೆಂಗಳೂರಿನಲ್ಲಿ ಭಕ್ತರ ಗಮನ ಸೆಳೆಯುತ್ತಿದೆ ಮಂತ್ರಾಲಯದ ಮಾದರಿಯ ಗಣೇಶ ಮಂಟಪ!
ಬೆಂಗಳೂರಿನಲ್ಲಿ ಭಕ್ತರ ಗಮನ ಸೆಳೆಯುತ್ತಿದೆ ಮಂತ್ರಾಲಯದ ಮಾದರಿಯ ಗಣೇಶ ಮಂಟಪ!
ಸಂಕೇಶ್ವರ: ಟಿಪ್ಪರ್​ಗೆ KSRTC ಬಸ್ ಡಿಕ್ಕಿ, ಚಾಲಕ ಸಾವು, 12 ಮಂದಿಗೆ ಗಾಯ
ಸಂಕೇಶ್ವರ: ಟಿಪ್ಪರ್​ಗೆ KSRTC ಬಸ್ ಡಿಕ್ಕಿ, ಚಾಲಕ ಸಾವು, 12 ಮಂದಿಗೆ ಗಾಯ