AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಪ್ರಗತಿಯ ಸಂಕೇತಗಳು; 10 ವರ್ಷದಲ್ಲಿ ಹೂಡಿಕೆ, ಎಲ್​ಪಿಜಿ ಅನುಭೋಗದಲ್ಲಿ ಸಖತ್ ಹೆಚ್ಚಳ

India's growth story in since 2014: ಭಾರತದಲ್ಲಿ ಕಳೆದ 10 ವರ್ಷದಲ್ಲಿ ಪಿಎಂಎಸ್, ಎಐಎಫ್ ಒಳಗೊಂಡ ಪರ್ಯಾಯ ಹೂಡಿಕೆ ಉದ್ಯಮ 1.54 ಲಕ್ಷ ಕೋಟಿ ರೂನಿಂದ 23.43 ಲಕ್ಷ ಕೋಟಿ ರೂಗೆ ಏರಿದೆ. ಎಲ್​ಪಿಜಿ ಅನುಭೋಗವೂ ಕೂಡ 10 ವರ್ಷದಲ್ಲಿ 16 ಎಂಎಂಟಿಯಿಂದ 31 ಎಂಎಂಟಿಗೆ ಏರಿದೆ. ಬೆಳೆಯುತ್ತಿರುವ ಆರ್ಥಿಕತೆಗೆ ಈ ಸಂಕೇತಗಳು ಕನ್ನಡಿ ಹಿಡಿದಿವೆ.

ಭಾರತದ ಪ್ರಗತಿಯ ಸಂಕೇತಗಳು; 10 ವರ್ಷದಲ್ಲಿ ಹೂಡಿಕೆ, ಎಲ್​ಪಿಜಿ ಅನುಭೋಗದಲ್ಲಿ ಸಖತ್ ಹೆಚ್ಚಳ
ಭಾರತದ ಆರ್ಥಿಕತೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 01, 2025 | 7:48 PM

Share

ನವದೆಹಲಿ, ಡಿಸೆಂಬರ್ 1: ಭಾರತದ ಆರ್ಥಿಕತೆ (Indian Economy) ಪ್ರಬಲ ಹಾಗೂ ಸ್ಥಿರವಾಗಿ ಬೆಳವಣಿಗೆ ಹೊಂದುತ್ತಿದೆ. ಇದಕ್ಕೆ ಸಾಕ್ಷಿಯಾಗಿ ಹಲವು ಸೂಚಕಗಳನ್ನು ಗಮನಿಸಬಹುದು. ಪರ್ಯಾಯ ಹೂಡಿಕೆ ಇಕೋಸಿಸ್ಟಂ (Alternative investments ecosystem) ಸಮೃದ್ಧವಾಗಿ ಬೆಳೆಯುತ್ತಿರುವುದು ಒಂದು ಕುರುಹೆನಿಸಿದೆ. ಪರ್ಯಾಯ ಹೂಡಿಕೆಗಳೆನಿಸಿದ ಪೋರ್ಟ್​ಫೋಲಿಯೋ ಮ್ಯಾನೇಜ್ಮೆಂಟ್ ಸರ್ವಿಸಸ್ (ಪಿಎಂಎಸ್) ಮತ್ತು ಪರ್ಯಾಯ ಹೂಡಿಕೆ ನಿಧಿಗಳು (ಎಐಎಫ್) ಕಳೆದ 10 ವರ್ಷದಲ್ಲಿ ಶೇ. 31.24 ಸಿಎಜಿಆರ್​ನಲ್ಲಿ ಬೆಳೆಯುತ್ತಾ ಬಂದಿವೆ.

2015ರಲ್ಲಿ ಪರ್ಯಾಯ ಹೂಡಿಕೆಗಳು 1.54 ಲಕ್ಷ ಕೋಟಿ ರೂ ಇದ್ದವು. 2025ರಲ್ಲಿ ಅವು 23.43 ಲಕ್ಷ ಕೋಟಿ ರೂ ಆಗಿವೆ. ಈ ಪರ್ಯಾಯ ಹೂಡಿಕೆಗಳು ಬೆಳೆಯಲು ಏನು ಕಾರಣ? ತಜ್ಞರ ಪ್ರಕಾರ ಜಾಗತಿಕ ಸ್ಥೂಲ ಆರ್ಥಿಕತೆಯ ಅನಿಶ್ಚಿತ ಸ್ಥಿತಿಯು ಹೂಡಿಕೆದಾರರ ಚಿತ್ತ ಸಾಂಪ್ರದಾಯಿಕ ಈಕ್ವಿಟಿ ಮತ್ತು ಡೆಟ್ ಸ್ಥಳಗಳನ್ನು ಬಿಟ್ಟು ಬೇರೆಡೆ ಹಾಯಿಸುವಂತೆ ಆಗಿದೆ.

ಸ್ಟಾರ್ಟಪ್ ಸ್ಥಾಪಕರು, ವೃತ್ತಿಪರರು, ಹೊಸ ತಲೆಮಾರಿನ ಹೂಡಿಕೆದಾರರು ಹಾಗೂ ಕೆಳ ಸ್ತರದ ನಗರಗಳಲ್ಲಿನ ಹೂಡಿಕೆದಾರರು ಪರ್ಯಾಯ ಹೂಡಿಕೆಗಳಿಗೆ ಆದ್ಯತೆ ಕೊಡುತ್ತಿರುವ ಟ್ರೆಂಡ್ ಇದೆ. ಪಿಎಂಎಸ್ ಉದ್ಯಮ ಕಳೆದ 10 ವರ್ಷದಲ್ಲಿ 1.27 ಲಕ್ಷ ಕೋಟಿ ರೂನಿಂದ 8.37 ಲಕ್ಷ ಕೋಟಿ ರೂಗೆ ಬೆಳೆದಿದೆ. ಎಐಎಫ್ ಉದ್ಯಮವಂತೂ 10 ವರ್ಷ ಶೇ. 49.23 ಸಿಎಜಿಆರ್​ನಲ್ಲಿ ಬೆಳೆದಿದೆ. 10 ವರ್ಷದ ಹಿಂದೆ ಕೇವಲ 27,484 ಕೋಟಿ ರೂ ಹೂಡಿಕೆ ಕಂಡಿದ್ದ ಎಐಎಫ್ 2025ರಲ್ಲಿ 15.05 ಲಕ್ಷ ಕೋಟಿ ರೂ ಎಯುಎಂ ಹೊಂದಿದೆ.

ಇದನ್ನೂ ಓದಿ: ಜಿಎಸ್​ಟಿ ದರ ಕಡಿತದ ಪರಿಣಾಮ, ನವೆಂಬರ್​ನಲ್ಲಿ ತೆರಿಗೆ ಸಂಗ್ರಹ ಕುಂಠಿತ

ಎಲ್​ಪಿಜಿ ಬಳಕೆಯಲ್ಲಿ ಸಖತ್ ಹೆಚ್ಚಳ

ಬೆಳೆಯುತ್ತಿರುವ ಆರ್ಥಿಕತೆಯ ಸಂಕೇತಗಳಲ್ಲಿ ಇಂಧನ ಬಳಕೆಯೂ ಒಂದು. ಅಡುಗೆ ಅನಿಲದ ಬಳಕೆ ಕಳೆದ 10 ವರ್ಷದಲ್ಲಿ ಗಣನೀಯವಾಗಿ ಹೆಚ್ಚಿದೆ. 2004-05ರಲ್ಲಿ 10.2 ಎಂಎಂಟಿಯಷ್ಟು ಎಲ್​ಪಿಜಿ ಬಳಕೆ ಇತ್ತು. 2013-14ರಲ್ಲಿ ಅದು 16.3 ಎಂಎಂಟಿಗೆ ಏರಿತು. ಆ ಹತ್ತು ವರ್ಷದಲ್ಲಿ ಎಲ್​ಪಿಜಿ ಬಳಕೆ ಸುಮಾರು ಶೇ. 60ರಷ್ಟು ಹೆಚ್ಚಳವಾಗಿತ್ತು. 2024-25ರಲ್ಲಿ 31.3 ಎಂಎಂಟಿ ಎಲ್​ಪಿಜಿ ಬಳಕೆಯಾಗುತ್ತಿದೆ. ಅಂದರೆ, ಈ 10 ವರ್ಷದಲ್ಲಿ ಬಹುತೇಕ ಎರಡು ಪಟ್ಟು ಬಳಕೆ ಹೆಚ್ಚಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್