AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜನವರಿ 31ರಿಂದ ಗಿಚ್ಚಿ ಗಿಲಿ ಗಿಲಿ ಜೂನಿಯರ್ಸ್: ಈ ಬಾರಿ ಮಕ್ಕಳದ್ದೇ ಹವಾ

‘ಕಲರ್ಸ್‌ ಕನ್ನಡ’ ವಾಹಿನಿಯಲ್ಲಿ ಜನವರಿ 31ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ‘ಗಿಚ್ಚಿ ಗಿಲಿ ಗಿಲಿ ಜೂನಿಯರ್ಸ್’ ಶೋ ಪ್ರಸಾರ ಆಗಲಿದೆ. ಕುಟುಂಬದ ಹಿರಿಯರಿಂದ ಮನೆಯ ಪುಟಾಣಿ ಮಕ್ಕಳಿಗಳ ತನಕ ಎಲ್ಲರಿಗೂ ಈ ಶೋ ಇಷ್ಟ ಆಗಲಿದೆ ಎಂದು ವಾಹಿನಿ ಭರವಸೆ ಹೊಂದಿದೆ.

ಜನವರಿ 31ರಿಂದ ಗಿಚ್ಚಿ ಗಿಲಿ ಗಿಲಿ ಜೂನಿಯರ್ಸ್: ಈ ಬಾರಿ ಮಕ್ಕಳದ್ದೇ ಹವಾ
Sadhu Kokila, Shruthi, SrujanImage Credit source: Colors Kannada
ಮದನ್​ ಕುಮಾರ್​
|

Updated on: Jan 30, 2026 | 8:45 PM

Share

ಕನ್ನಡ ಕಿರುತೆರೆಯ ಪ್ರೇಕ್ಷಕರಿಗೆ ನಗೆಹಬ್ಬ ಸೃಷ್ಟಿಸಿದ್ದ ಕಲರ್ಸ್‌ ಕನ್ನಡದ ‘ಗಿಚ್ಚಿ ಗಿಲಿಗಿಲಿ’ (Gicchi Gili Gili) ಮೂರು ಸೀಸನ್‌ಗಳನ್ನು ಯಶಸ್ವಿಯಾಗಿ ಈಗಾಗಲೇ ಪೂರ್ಣಗೊಳಿಡಿದೆ. ಈಗ ಮಕ್ಕಳ ಸೈನ್ಯದೊಂದಿಗೆ ವಿಶೇಷ ಆವೃತ್ತಿಯೊಂದಿಗೆ ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗಿದೆ. ಇಡೀ ಫ್ಯಾಮಿಲಿ ಕುಳಿತು ನೋಡುವಂತಹ ಶೋ ಇದಾಗಿದೆ. ‘ಗಿಚ್ಚಿ ಗಿಲಿಗಿಲಿ ಜೂನಿಯರ್ಸ್’ (Gicchi Gili Gili Juniors) ಕಾರ್ಯಕ್ರಮ ಇದೇ ಶನಿವಾರದಿಂದ (ಜನವರಿ 31) ಶುರುವಾಗಲಿದೆ. ಈಗಾಗಲೇ ಪ್ರೋಮೋಗಳು ಗಮನ ಸೆಳೆದಿದೆ. 5ರಿಂದ 10 ವರ್ಷದ ಒಳಗಿನ ಮಕ್ಕಳು ಹಾಗೂ ಹಿರಿಯ ಹಾಸ್ಯ ಕಲಾವಿದರು ಜೊತೆಗೂಡಿ ನಗಿಸಲಿದ್ದಾರೆ.

ಮಕ್ಕಳ ಮುಗ್ಧತೆ ಹಾಗೂ ಹಿರಿಯ ಕಲಾವಿದರ ಸಮ್ಮಿಲನ ಈ ಬಾರಿ ಆಗಲಿದೆ. ಈ ಪುಟ್ಟ ಮಕ್ಕಳು ಇಲ್ಲಿ ಕೇವಲ ಸ್ಪರ್ಧಿಗಳಲ್ಲ, ಇವರು ವೃತ್ತಿಪರ ನಟರಲ್ಲದಿದ್ದರೂ ಸಹಜವಾದ ಹಾಸ್ಯ ಪ್ರಜ್ಞೆಯೊಂದಿಗೆ ಸ್ಕಿಟ್‌ಗಳಲ್ಲಿ ಮಿಂಚಲಿದ್ದಾರೆ. ಅನುಭವಿ ಹಾಸ್ಯ ಕಲಾವಿದರು ಇವರಿಗೆ ಮಂಟರ್ಸ್‌ ಆಗಿ ಸಾಥ್ ನೀಡಲಿದ್ದಾರೆ. ಮಕ್ಕಳ ದೃಷ್ಟಿಕೋನದಲ್ಲಿ ಪ್ರಪಂಚ ಹೇಗಿರುತ್ತದೆ ಎಂಬ ಕಥೆಗಳು ಮತ್ತು ನಗೆಯ ಸನ್ನಿವೇಶಗಳು ಇಲ್ಲಿ ಅನಾವರಣಗೊಳ್ಳಲಿವೆ.

ಒಬ್ಬ ಸಾಮಾನ್ಯ ಮಗು ನಟನೆಯ ಜಗತ್ತಿನಲ್ಲಿ ಹಾಸ್ಯ ಕಲಾವಿದನಾಗಿ ಹೇಗೆ ವಿಕಸನಗೊಳ್ಳುತ್ತದೆ ಎಂಬುದನ್ನು ಈ ಶೋ ಪ್ರತಿಬಿಂಬಿಸಲಿದೆ. ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ನೀಡುತ್ತ ಬರುತ್ತಿರುವ ಕಲರ್ಸ್‌ ಕನ್ನಡ ವಾಹಿನಿಯು ನನ್ನಮ್ಮ ಸೂಪರ್‌ ಸ್ಟಾರ್‌, ರಾಜ ರಾಣಿ, ಮಜಾ ಟಾಕೀಸ್‌ ರೀತಿಯ ಶೋಗಳನ್ನು ನೀಡಿದೆ. ಇದೀಗ ‘ಗಿಚ್ಚಿ ಗಿಲಿಗಿಲಿ ಜೂನಿಯರ್ಸ್‌’ ಕೂಡ ಸೇರ್ಪಡೆ ಆಗುತ್ತಿದೆ.

ಜನವರಿ 31ರಿಂದ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ‘ಕಲರ್ಸ್‌ ಕನ್ನಡ’ ವಾಹಿನಿಯಲ್ಲಿ ಈ ಶೋ ಪ್ರಸಾರ ಆಗಲಿದೆ. ಈ ಬಾರಿ ಕೂಡ ಸಾಧುಕೋಕಿಲ, ಸೃಜನ್‌ ಲೋಕೇಶ್‌ ಹಾಗೂ ಹಿರಿಯ ನಟಿ ಶ್ರುತಿ ಅವರು ತೀರ್ಪುಗಾರರಾಗಿ ಮುಂದುವರಿಯಲಿದ್ದಾರೆ. ಈ ಬಾರಿ ಅನುಪಮಾ ಗೌಡ ಅವರು ಈ ಶೋನ ನಿರೂಪಣೆ ಮಾಡಲಿದ್ದಾರೆ.

ಇದನ್ನೂ ಓದಿ: ಹೇಗಿದೆ ನೋಡಿ ‘ಗಿಚ್ಚಿ ಗಿಲಿಗಿಲಿ’ ಜೂನಿಯರ್ ಟೀಂ

ಆಡಿಷನ್ ಮೂಲಕ ಅತ್ಯಂತ ಚುರುಕಾದ ಮಕ್ಕಳನ್ನು ಶೋಗೆ ಆಯ್ಕೆ ಮಾಡಲಾಗಿದೆ. ‘ನಿನಗಾಗಿ’ ಸೀರಿಯಲ್​​ನಲ್ಲಿ ಕೃಷ್ಣನಾಗಿ ನಟಿಸಿ ಮನೆಮಾತಾಗಿದ್ದ 7 ವರ್ಷದ ಸಿರಿಸಿಂಚನ ಕೂಡ ಈ ತಂಡದಲ್ಲಿದ್ದಾರೆ. ಅಕ್ಷಯ್ ರವಿತೇಜ್ (ಚಿಕ್ಕಮಗಳೂರು), ಗೌಶಿಕ ಗೌಡ (ಶ್ರೀರಂಗಪಟ್ಟಣ), ಚಿರುಶ್ ಆದಿತ್ಯ (ಮಂಗಳೂರು), ಏಕಾoತ್ ಚಂದ್ರಪ್ಪ ಮಲಗುಂದ (ಹಾವೇರಿ), ಪಲ್ಲವಿ (ಅರಕಲಗೂಡು), ಸಿರಿಸಿಂಚನ (ಬೆಂಗಳೂರು), ಆತ್ಮಿ ಗೌಡ (ಪುತ್ತೂರು), ಪ್ರಗ್ಯಾ (ಮಂಗಳೂರು), ಪ್ರಗ್ಯ (ಮಂಗಳೂರು), ಅದ್ವಿಕಾ ಬಾಕಿಲ (ಪುತ್ತೂರು), ಮೋಹಕ್ ಗೌಡ (ಬೆಂಗಳೂರು), ವಿಹಾನ್ ಸೂರ್ಯ (ಮೈಸೂರು), ಮಾದೇಶ (ಹೊಳೆನರಸೀಪುರ) ಈ ಶೋನ ಹೈಲೈಟ್‌ ಆಗಿರುತ್ತಾರೆ.

ಜೂನಿಯರ್ ಹಾಸ್ಯ ಕಲಾವಿದರಿಗೆ ಸೂರ್ಯ ಕುಂದಾಪುರ, ರಾಘವೇಂದ್ರ, ಮಾನಸಾ, ಶಿವು, ಮಂಜು, ಚಂದ್ರಪ್ರಭ, ವಿನೋದ್ ಗೊಬ್ಬರಗಾಲ, ಬಸವರಾಜ್, ಸೂರಜ್, ಪ್ರಶಾಂತ್, ವಾಣಿ, ತುಕಾಲಿ ಸಂತೋಷ್ ಅವರಂತಹ ಹಾಸ್ಯಗಾರರು ಸಾಥ್ ನೀಡಲಿದ್ದಾರೆ. ‘ಗಿಚ್ಚಿ ಗಿಲಿಗಿಲಿ ಜೂನಿಯರ್ಸ್’ ಶೋನಲ್ಲಿ ಮಕ್ಕಳ ತರಲೆ, ತುಂಟಾಟ, ಅತಿ ಮುಗ್ಧತೆಯ ಈ ಹಾಸ್ಯ ಇರಲಿದೆ ಎಂದು ವಾಹಿನಿ ತಿಳಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!
ಹೇಗಿದೆ ನೋಡಿ ‘ಗಿಚ್ಚಿ ಗಿಲಿಗಿಲಿ’ ಜೂನಿಯರ್ ಟೀಂ
ಹೇಗಿದೆ ನೋಡಿ ‘ಗಿಚ್ಚಿ ಗಿಲಿಗಿಲಿ’ ಜೂನಿಯರ್ ಟೀಂ
3 ಮದುವೆಯಾಗಿ ಲಕ್ಷಾಂತರ ರೂ ಪಟಾಯಿಸಿದ ಮಹಿಳೆಯ ಮೋಸದಾಟ ಬಿಚ್ಚಿಟ್ಟ 2ನೇ ಗಂಡ!
3 ಮದುವೆಯಾಗಿ ಲಕ್ಷಾಂತರ ರೂ ಪಟಾಯಿಸಿದ ಮಹಿಳೆಯ ಮೋಸದಾಟ ಬಿಚ್ಚಿಟ್ಟ 2ನೇ ಗಂಡ!
ನದಿಗೆ ಬಿದ್ದ ಪ್ಯಾರಾಗ್ಲೈಡರ್​ಗಳು, ಹೇಗೋ ಅಪಾಯದಿಂದ ಪಾರು
ನದಿಗೆ ಬಿದ್ದ ಪ್ಯಾರಾಗ್ಲೈಡರ್​ಗಳು, ಹೇಗೋ ಅಪಾಯದಿಂದ ಪಾರು
ಲಂಚ ಪಡೆಯುತ್ತಾ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿ ಬಿದ್ದ ಇನ್ಸ್‌ಪೆಕ್ಟರ್!
ಲಂಚ ಪಡೆಯುತ್ತಾ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿ ಬಿದ್ದ ಇನ್ಸ್‌ಪೆಕ್ಟರ್!