AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಸ್​ಐಆರ್ ಒತ್ತಡದಿಂದ ಬಂಗಾಳದಲ್ಲಿ 150 ಜನ ಸಾವು; ಸುಪ್ರೀಂ ಕೋರ್ಟ್​ನಲ್ಲಿ ಮಮತಾ ಬ್ಯಾನರ್ಜಿ ವಾದ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ಮಧ್ಯಾಹ್ನ ತಮ್ಮ ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR)ಯನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ವಾದಿಸಲು ಭಾರತದ ಮುಖ್ಯ ನ್ಯಾಯಾಧೀಶರ (CJI) ಕೊಠಡಿಗೆ ಪ್ರವೇಶಿಸಿದರು. ಈ ವೇಳೆ ಸಿಎಂ ಮಮತಾ ಬ್ಯಾನರ್ಜಿ ಚುನಾವಣಾ ಆಯೋಗದ ಮೇಲೆ ಹರಿಹಾಯ್ದರು. ಎಸ್​ಐಆರ್​ ಒತ್ತಡದಿಂದ ಬಂಗಾಳದಲ್ಲಿ ಇದುವರೆಗೂ 150 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿದರು.

ಎಸ್​ಐಆರ್ ಒತ್ತಡದಿಂದ ಬಂಗಾಳದಲ್ಲಿ 150 ಜನ ಸಾವು; ಸುಪ್ರೀಂ ಕೋರ್ಟ್​ನಲ್ಲಿ ಮಮತಾ ಬ್ಯಾನರ್ಜಿ ವಾದ
Mamata Banerjee In Supreme CourtImage Credit source: PTI
ಸುಷ್ಮಾ ಚಕ್ರೆ
|

Updated on:Feb 04, 2026 | 5:11 PM

Share

ನವದೆಹಲಿ, ಫೆಬ್ರವರಿ 4: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಇಂದು ಸುಪ್ರೀಂ ಕೋರ್ಟ್​ನಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ವಾದ ಮಂಡಿಸಿದ್ದಾರೆ. ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ತಮ್ಮ ರಾಜ್ಯವನ್ನು ಗುರಿಯಾಗಿಸಿಕೊಂಡು ಉದ್ದೇಶಪೂರ್ವಕವಾಗಿ ಎಸ್​ಐಆರ್ ನೆಪದಲ್ಲಿ ಒತ್ತಡ ಹೇರಲಾಗುತ್ತಿದೆ ದೀದಿ ಹೇಳಿದ್ದಾರೆ. ಹೀಗೆ ಹಾಲಿ ಮುಖ್ಯಮಂತ್ರಿಯೊಬ್ಬರು ಸುಪ್ರೀಂ ಕೋರ್ಟ್‌ನಲ್ಲಿ (Supreme Court) ವಾದ ಮಂಡನೆ ಮಾಡಿದ ಅಪರೂಪದ ಘಟನೆ ಇಂದು ನಡೆಯಿತು. ಎಸ್​ಐಆರ್ ಪ್ರಕ್ರಿಯೆಯ ಒತ್ತಡದಿಂದಾಗಿ 150ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದ್ದಾರೆ.

“ನ್ಯಾಯವು ಮುಚ್ಚಿದ ಬಾಗಿಲುಗಳ ಹಿಂದೆ ಅಳುತ್ತಿದೆ” ಎಂದು ಸುಪ್ರೀಂ ಕೋರ್ಟ್‌ನಲ್ಲಿ ಬೇಸರ ಹೊರಹಾಕಿದ ಮಮತಾ ಬ್ಯಾನರ್ಜಿ ಸಿಜೆಐ ಸೂರ್ಯ ಕಾಂತ್ ಅವರ ಮುಂದೆ ತಮ್ಮ ಪ್ರಕರಣವನ್ನು ಮಂಡಿಸಲು 5 ನಿಮಿಷಗಳ ಸಮಯವನ್ನು ಕೋರಿದರು. ಅದಕ್ಕೆ ಸಿಜೆಐ ಒಪ್ಪಿಕೊಂಡು, ಪೀಠದ ಮುಂದೆ ಮಾತನಾಡಲು ಅವರಿಗೆ 15 ನಿಮಿಷಗಳ ಅವಕಾಶ ನೀಡಿದರು.

ಇದನ್ನೂ ಓದಿ: I-PAC ದಾಳಿ ಪ್ರಕರಣದಲ್ಲಿ ಸಿಎಂ ಮಮತಾ ಬ್ಯಾನರ್ಜಿಗೆ ಮುಖಭಂಗ; ಬಂಗಾಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ಭಾರತದ ಚುನಾವಣಾ ಆಯೋಗದ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ ಮಮತಾ ಬ್ಯಾನರ್ಜಿ, “ನಮಗೆ ಎಲ್ಲಿಯೂ ನ್ಯಾಯ ಸಿಗುತ್ತಿಲ್ಲ. ನಾನು ಚುನಾವಣಾ ಆಯೋಗಕ್ಕೆ 6 ಬಾರಿ ಪತ್ರ ಬರೆದಿದ್ದರೂ ಇನ್ನೂ ಯಾವುದೇ ಉತ್ತರ ಸಿಕ್ಕಿಲ್ಲ” ಎಂದು ವಾದಿಸಿದರು.

ಈಗಾಗಲೇ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದ್ದು, ಎಸ್‌ಐಆರ್ ನೋಟಿಸ್‌ಗಳನ್ನು ಕಳುಹಿಸುವಾಗ ಜಾಗರೂಕರಾಗಿರಲು ಸೂಚಿಸಿದೆ. “ನಿಮ್ಮ ಅಧಿಕಾರಿಗಳಿಗೆ ಸ್ವಲ್ಪ ಬುದ್ಧಿವಂತರಾಗಿರಲು ಹೇಳಿ” ಎಂದು ಮಮತಾ ಬ್ಯಾನರ್ಜಿ ಬರೆದ ಲಿಖಿತ ಅರ್ಜಿಯ ಮೇರೆಗೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್, ಪ್ರಸಿದ್ಧ ಬಂಗಾಳಿ ಕವಿ ಜಾಯ್ ಗೋಸ್ವಾಮಿ ಮತ್ತು ಟಿಎಂಸಿ ಸಂಸದ ದೀಪಕ್ ಅಧಿಕಾರಿ ಸೇರಿದಂತೆ ಪ್ರಮುಖ ವ್ಯಕ್ತಿಗಳಿಗೆ ಎಸ್‌ಐಆರ್ ನೋಟಿಸ್‌ಗಳನ್ನು ಕಳುಹಿಸಲಾಗಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಇದನ್ನೂ ಓದಿ: Video:ಸುಪ್ರೀಂನಲ್ಲಿ ಎಸ್​ಐಆರ್ ವಿರುದ್ಧ ತಾವೇ ಸಲ್ಲಿಸಿದ್ದ ಅರ್ಜಿಯ ಬಗ್ಗೆ ಖುದ್ದು ವಾದ ಮಾಡಲು ಬಂದ ಮಮತಾ ಬ್ಯಾನರ್ಜಿ

ಭಾರತೀಯ ಚುನಾವಣಾ ಆಯೋಗದೊಂದಿಗಿನ ಪಶ್ಚಿಮ ಬಂಗಾಳದ ಸರ್ಕಾರದ ಬಿಕ್ಕಟ್ಟಿನ ನಡುವೆ 3 ದಿನಗಳ ಹಿಂದೆ ರಾಷ್ಟ್ರ ರಾಜಧಾನಿ ದೆಹಲಿಗೆ ಆಗಮಿಸಿದ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಹಾಗೂ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳದಲ್ಲಿ SIR ಪ್ರಕ್ರಿಯೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಬಹು ಅರ್ಜಿಗಳ ವಿಚಾರಣೆ ನಡೆಸುತ್ತಿದ್ದ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಪಂಚೋಲಿ ಅವರನ್ನೊಳಗೊಂಡ ಪೀಠದ ಮುಂದೆ ತಮ್ಮ ಪ್ರಕರಣವನ್ನು ವಾದಿಸಿದರು.

ಈ ವಿಷಯದ ವಿಚಾರಣೆಯನ್ನು ಮುಂದೂಡಿದ ಸುಪ್ರೀಂ ಕೋರ್ಟ್, ಸಿಎಂ ಮಮತಾ ಬ್ಯಾನರ್ಜಿ ಅವರ ಮನವಿಗೆ ಪ್ರತಿಕ್ರಿಯೆಯಾಗಿ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿ ಫೆಬ್ರವರಿ 10ರೊಳಗೆ ಉತ್ತರ ಸಲ್ಲಿಸುವಂತೆ ನಿರ್ದೇಶಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:11 pm, Wed, 4 February 26

ಬೆಳಗಾವಿ: ಸಿಗರೇಟ್ ಹಣ ಕೇಳಿದ್ದಕ್ಕೆ ಬಿತ್ತು ಪಾನ್ ಶಾಪ್ ಮಾಲೀಕನ ಹೆಣ
ಬೆಳಗಾವಿ: ಸಿಗರೇಟ್ ಹಣ ಕೇಳಿದ್ದಕ್ಕೆ ಬಿತ್ತು ಪಾನ್ ಶಾಪ್ ಮಾಲೀಕನ ಹೆಣ
ಲವ್​​ ಹೆಸರಲ್ಲಿ ಮೋಸ ಮಾಡಿದವನ ಕಾಮುಕತೆ ಬಿಚ್ಚಿಟ್ಟ ಸಂತ್ರಸ್ತೆ
ಲವ್​​ ಹೆಸರಲ್ಲಿ ಮೋಸ ಮಾಡಿದವನ ಕಾಮುಕತೆ ಬಿಚ್ಚಿಟ್ಟ ಸಂತ್ರಸ್ತೆ
ಬಿಎಂಟಿಸಿ ಬಸ್ ಬಳಿಕ ವಿಕ್ಟೋರಿಯಾ ಆಸ್ಪತ್ರೆಯಲ್ಲೂ UPI ಸ್ಕ್ಯಾನರ್ ಸ್ಕ್ಯಾಮ್
ಬಿಎಂಟಿಸಿ ಬಸ್ ಬಳಿಕ ವಿಕ್ಟೋರಿಯಾ ಆಸ್ಪತ್ರೆಯಲ್ಲೂ UPI ಸ್ಕ್ಯಾನರ್ ಸ್ಕ್ಯಾಮ್
ಲಕ್ಕುಂಡಿಯ ಜೈನ ಬಸದಿಗಳಲ್ಲೂ ನಿಧಿ ಇದ್ಯಾ? ಸರ್ಪಗಳು ಕಾವಲು ಕಾಯ್ತಿದ್ಯಾ?
ಲಕ್ಕುಂಡಿಯ ಜೈನ ಬಸದಿಗಳಲ್ಲೂ ನಿಧಿ ಇದ್ಯಾ? ಸರ್ಪಗಳು ಕಾವಲು ಕಾಯ್ತಿದ್ಯಾ?
ಸದನದಲ್ಲಿ ವೈಯಕ್ತಿಕವಾಗಿ ಬೈದಾಡಿಕೊಂಡ ಶಾಸಕ ಶರಣು ಸಲಗಾರ್- ಶಿವಲಿಂಗೇಗೌಡ
ಸದನದಲ್ಲಿ ವೈಯಕ್ತಿಕವಾಗಿ ಬೈದಾಡಿಕೊಂಡ ಶಾಸಕ ಶರಣು ಸಲಗಾರ್- ಶಿವಲಿಂಗೇಗೌಡ
ಡ್ಯಾನ್ಸ್ ಬಳಿಕ ಪ್ರೀತಮ್ ಆಡಿದ ಮಾತಿಗೆ ಸುಸ್ತಾದ ಆ್ಯಂಕರ್ ಅನುಶ್ರೀ
ಡ್ಯಾನ್ಸ್ ಬಳಿಕ ಪ್ರೀತಮ್ ಆಡಿದ ಮಾತಿಗೆ ಸುಸ್ತಾದ ಆ್ಯಂಕರ್ ಅನುಶ್ರೀ
ಪತ್ನಿಯ ಚಿಕಿತ್ಸೆಗೆಂದು ಇಟ್ಟಿದ್ದ ಸಾಲದ ಹಣವನ್ನೇ ಹೊತ್ತೊಯ್ದ ಕದೀಮರು!
ಪತ್ನಿಯ ಚಿಕಿತ್ಸೆಗೆಂದು ಇಟ್ಟಿದ್ದ ಸಾಲದ ಹಣವನ್ನೇ ಹೊತ್ತೊಯ್ದ ಕದೀಮರು!
ಎಸ್​ಐಆರ್ ವಿರುದ್ಧದ ಅರ್ಜಿಯ ಬಗ್ಗೆ ಖುದ್ದು ವಾದ ಮಾಡಲು ಬಂದ ಮಮತಾ
ಎಸ್​ಐಆರ್ ವಿರುದ್ಧದ ಅರ್ಜಿಯ ಬಗ್ಗೆ ಖುದ್ದು ವಾದ ಮಾಡಲು ಬಂದ ಮಮತಾ
ಸಿದ್ದಾಪುರ ಕೊಲೆ ಪ್ರಕರಣ: ಕಮಲಾಕರ್ ಭಟ್ ಸೇರಿ ನಾಲ್ವರಿಗೆ ನ್ಯಾಯಾಂಗ ಬಂಧನ
ಸಿದ್ದಾಪುರ ಕೊಲೆ ಪ್ರಕರಣ: ಕಮಲಾಕರ್ ಭಟ್ ಸೇರಿ ನಾಲ್ವರಿಗೆ ನ್ಯಾಯಾಂಗ ಬಂಧನ
ನಿಮ್ಮ ಮಕ್ಕಳ ಕೈಹಿಡಿದು ರಸ್ತೆ ದಾಟಿಸಿ, ಇಲ್ಲವಾದ್ರೆ ಹೀಗೆ ಅಪಘಾತವಾಗಬಹುದು
ನಿಮ್ಮ ಮಕ್ಕಳ ಕೈಹಿಡಿದು ರಸ್ತೆ ದಾಟಿಸಿ, ಇಲ್ಲವಾದ್ರೆ ಹೀಗೆ ಅಪಘಾತವಾಗಬಹುದು