AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಕೆಲಸದಿಂದ ವಜಾಗೊಳಿಸಿದ್ದ ಮಾಜಿ ಉದ್ಯೋಗಿಯಿಂದಲೇ ಬಾಸ್‌ಗೆ ಬಂತು ಜಾಬ್ ಆಫರ್

ಟೈಮ್ ಹೇಗೆ ಬೇಕಾದ್ರೂ ಉಲ್ಟಾ ಹೊಡಿಯಬಹುದು. ಇದಕ್ಕೆ ಉದಾಹರಣೆಯಂತಿದೆ ಈ ಘಟನೆ. ಎರಡು ವರ್ಷಗಳ ಹಿಂದೆಯಷ್ಟೇ ತನ್ನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಯನ್ನು ಬಾಸ್ ವಜಾಗೊಳಿಸಿದ್ದರು. ಆದರೆ ಇದೀಗ ಅದೇ ಉದ್ಯೋಗಿಯು ಬಾಸ್ ಉದ್ಯೋಗದ ಆಫರ್ ನೀಡಿದ್ದಾರೆ. ಈ ಕುರಿತಾದ ರೆಡ್ಡಿಟ್ ಪೋಸ್ಟ್ ಸದ್ಯ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ಕೆಲಸದಿಂದ ವಜಾಗೊಳಿಸಿದ್ದ ಮಾಜಿ ಉದ್ಯೋಗಿಯಿಂದಲೇ ಬಾಸ್‌ಗೆ ಬಂತು ಜಾಬ್ ಆಫರ್
ಸಾಂದರ್ಭಿಕ ಚಿತ್ರImage Credit source: small business trends
ಸಾಯಿನಂದಾ
|

Updated on: Nov 15, 2026 | 4:46 PM

Share

ಕೈಯಲ್ಲೊಂದು ಉದ್ಯೋಗವಿದ್ರೆ (job) ಮರ್ಯಾದೆ. ಕೆಲಸದಿಂದ ತೆಗೆದು ಹಾಕಿದ್ರೆ ಅದರಿಂದ ಆಗುವ ನಷ್ಟ ಅಷ್ಟಿಷ್ಟಲ್ಲ.. ಇದೀಗ ಉದ್ಯೋಗಿಯೊಬ್ಬರು ತನ್ನನ್ನೂ ಕೆಲಸ ಹಾಕಿದ್ದ ಬಾಸ್ ಗೆ ಉದ್ಯೋಗದ ಆಫರ್ ನೀಡುವ ಮಟ್ಟಿಗೆ ಬೆಳೆದು ನಿಂತಿದ್ದಾರೆ. ಹೌದು, ಎರಡು ವರ್ಷಗಳ ಹಿಂದೆಯಷ್ಟೇ ತನ್ನನ್ನು ಕೆಲಸದಿಂದ ತೆಗೆದುಹಾಕಿದ್ದ ಬಾಸ್‌ಗೆ ಶೇ 20ರಷ್ಟು ಸಂಬಳ ಹೆಚ್ಚಳ ಜತೆಗೆ ಉತ್ತಮ ಟೈಮಿಂಗ್ಸ್ ಇರುವ ಜಾಬ್ ನೀಡಲು ಮುಂದಾಗಿದ್ದಾರೆ. ಉನ್ನತ ಸ್ಥಾನಕ್ಕೇರಿದ ವ್ಯಕ್ತಿ ಆಫರ್‌ ನೀಡಿದ್ದು, ಮಾಜಿ ಬಾಸ್‌ನ್ನು ಗೊಂದಲಕ್ಕೀಡು ಮಾಡಿದೆ. ಸದ್ಯ ಈ ರೆಡ್ಡಿಟ್ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ.

ಉದ್ಯೋಗಿ ಬಗ್ಗೆ ದ್ವೇಷವಿರಲಿಲ್ಲ, ನನ್ನ ಕರ್ತವ್ಯ ನಿಭಾಯಿಸಿದ್ದೆ

ಕೆರಿಯರ್ ಗೈಡೆನ್ಸ್ (Careerguidence) ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಉದ್ಯೋಗಿ ಪೋಸ್ಟ್ ಹಂಚಿಕೊಂಡಿದ್ದು, ಎರಡು ವರ್ಷಗಳ ಹಿಂದೆ ನಾನು ಕೆಲಸದಿಂದ ತೆಗೆದುಹಾಕಿದ್ದ ವ್ಯಕ್ತಿಯೇ ಇದೀಗ ನನಗೆ ಜಾಬ್ ಆಫರ್ ನೀಡಿದ್ದಾರೆ. ನನ್ನ ಜಾಗದಲ್ಲಿ ನೀವಿದ್ದರೆ ಈ ಕೆಲಸವನ್ನು ಒಪ್ಪಿಕೊಳ್ಳುತ್ತಿದ್ದಿರಾ? ಎಂಬ ಶೀರ್ಷಿಕೆ ನೀಡಲಾಗಿದೆ. ಈ ಪೋಸ್ಟ್ ನಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಗೋದಾಮಿನ ತಂಡವೊಂದರ ಮೇಲ್ವಿಚಾರಕರಾಗಿದ್ದೆ. ಆ ಟೀಮ್ ನಲ್ಲಿದ್ದ ಉದ್ಯೋಗಿ ಪದೇ ಪದೇ ಹಾಜರಾತಿ ಸಮಸ್ಯೆ ಉಂಟುಮಾಡುತ್ತಿದ್ದ ಕಾರಣ, ಹೆಚ್‌ಆರ್ ಕೆಲಸದಿಂದ ತೆಗೆದುಹಾಕಲು ನಿರ್ಧರಿಸಿದ್ದರು. ಮೇಲ್ವಿಚಾರಕರಾಗಿ ನಾನು ಉದ್ಯೋಗಿಗೆ ವಿಚಾರ ತಿಳಿಸಿದ್ದೆ. ನನಗೆ  ಉದ್ಯೋಗಿಯ ಬಗ್ಗೆ ಯಾವುದೇ ದ್ವೇಷವಿರಲಿಲ್ಲ. ಆದರೆ ನನ್ನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದೆ ಎಂದು ಹೇಳಿದ್ದಾರೆ.

ರೆಡ್ಡಿಟ್ ಪೋಸ್ಟ್ ಇಲ್ಲಿದೆ

Reddit Post

ನಾನೇ ವಜಾ ಮಾಡಿದ್ದ ಉದ್ಯೋಗಿ ಜಾಬ್ ಆಫರ್ ಕೊಟ್ಟ

ಇತ್ತೀಚೆಗಷ್ಟೇ ನಾನು ಉತ್ಪಾದನಾ ಕಂಪನಿಯೊಂದರಲ್ಲಿ ಆಪರೇಷನ್ಸ್ ವಿಭಾಗದ ಹುದ್ದೆಗಾಗಿ ಸಂದರ್ಶನಕ್ಕೆ ತೆರಳಿದ್ದೆ. ಇಂಟರ್ವ್ಯೂ ರೂಮ್ ಗೆ ಎಂಟ್ರಿ ಕೊಡುತ್ತಿದ್ದಂತೆ ಮೇಜಿನ ಮುಂದೆ ಕುಳಿತಿದ್ದ ವ್ಯಕ್ತಿ ಎರಡು ವರ್ಷಗಳ ಹಿಂದೆ ನಾನೇ ವಜಾ ಮಾಡಿದ್ದ ಉದ್ಯೋಗಿಯಾಗಿದ್ದು, ನನ್ನ ಬಗ್ಗೆ ಅವರಿಗೆ ಯಾವುದೇ ಅಸಮಾಧಾನವಾಗಲಿ, ದ್ವೇಷವಾಗಲಿ ಇರಲಿಲ್ಲ. ನನಗೆ ಒಳ್ಳೆಯ ಹುದ್ದೆಯ ಆಫರ್ ನೀಡಿದ್ದಾರೆ. ಈ ಜಾಬ್ ನಲ್ಲಿ ಕೆಲಸದಲ್ಲಿ ಈಗಿರುವ ವೇತನಕ್ಕಿಂತ ಶೇ. 20ರಷ್ಟು ಹೆಚ್ಚು ಮತ್ತು ಉತ್ತಮ ಕೆಲಸದ ಸಮಯವೂ ಇರಲಿದೆ ಎಂದು ಹೇಳಿದ್ದಾರೆ.

ಈ ಕೆಲ್ಸಕ್ಕೆ ಸೇರಿಕೊಳ್ಳುವ ಬಗ್ಗೆ ಗೊಂದಲದಲ್ಲಿದ್ದೇನೆ

ಅಂದಿನ ನನ್ನ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ನನ್ನನ್ನು ಜಾಬ್ ನಿಂದ ತೆಗೆದುಹಾಕುವಾಗ ನೀವು ತೋರಿದ ವೃತ್ತಿಪರತೆ, ಎಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸಿದ ರೀತಿಯನ್ನು ನಾನು ಗೌರವ ನೀಡುತ್ತೇನೆ ಎಂದು ಸಂದರ್ಶನಕ್ಕೆ ಹೋಗಿದ್ದ ಸಂದರ್ಭದಲ್ಲಿ ತಿಳಿಸಿದ್ದಾರೆ ಎಂದು ಇಲ್ಲಿ ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲದೇ, ಈ ಕೆಲಸಕ್ಕೆ ಸೇರಿಕೊಳ್ಳುವ ಬಗ್ಗೆ ನಾನು ಗೊಂದಲದಲ್ಲಿದ್ದೇನೆ. ಆದರೆ, ನನ್ನ ಪತ್ನಿಯೇ ನನ್ನನ್ನು ‘ಹುಚ್ಚ’ ಎನ್ನುತ್ತಿದ್ದಾಳೆ. ಆದರೆ ನನಗೆ ಕೆಲಸಕೊಡಲು ಸಿದ್ಧವಿರುವ ಮಾಜಿ ಉದ್ಯೋಗಿ ಹಳೆಯ ಘಟನೆಯನ್ನು ಮರೆತು ಬಿಟ್ಟಿದ್ದಾನಾ ಅಥವಾ ಆ ಘಟನೆ ನನಗೆ ಮುಜುಗರ ಪರಿಸ್ಥಿತಿ ಉಂಟು ಮಾಡುತ್ತದೆಯೋ ಎನ್ನುವ ಭಯ ಕಾಡುತ್ತಿದೆ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: ಕಾರ್ಪೊರೇಟ್ ಜಾಬ್ ಕಳ್ಕೊಂಡು ಪಾತ್ರೆ ತೊಳೆಯುವ ಕೆಲಸಕ್ಕೆ ಸೇರಿಕೊಂಡ ಯುವಕ

ಈ ರೆಡ್ಡಿಟ್ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನಿಮಗೆ ಆ ವ್ಯಕ್ತಿಯ ನಡವಳಿಕೆಯ ಬಗ್ಗೆ ನಂಬಿಕೆಯಿದ್ದರೆ ಜಾಬ್ ಆಫರ್ ನ್ನು ಒಪ್ಪಿಕೊಳ್ಳಿ ಎಂದಿದ್ದಾರೆ. ಇನ್ನೊಬ್ಬರು, ನಿಮ್ಮ ಮೇಲೆ ಸೇಡು ತೀರಿಸಿಕೊಳ್ಳಬೇಕೆಂದಿದ್ದರೆ ಇಷ್ಟು ಸಮಯ ಕಾಯಬೇಕಿರಲಿಲ್ಲ. ಪ್ರಬುದ್ಧತೆಯಿಂದ ಯೋಚಿಸಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
‘ಯಶಸ್ ನಯವಂಚಕ, ಚಿಲ್ಲರೆ ಬುದ್ಧಿ’: ಸುದೀಪ್ ಎದುರಲ್ಲೇ ಆರೋಪಗಳ ಸುರಿಮಳೆ
‘ಯಶಸ್ ನಯವಂಚಕ, ಚಿಲ್ಲರೆ ಬುದ್ಧಿ’: ಸುದೀಪ್ ಎದುರಲ್ಲೇ ಆರೋಪಗಳ ಸುರಿಮಳೆ
ಬಿರ್ಸಾ ಮುಂಡಾ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಪ್ರಧಾನಿ ಮೋದಿ
ಬಿರ್ಸಾ ಮುಂಡಾ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಪ್ರಧಾನಿ ಮೋದಿ
ಕಾಮುಕನ ವಿಕೃತಿಗೆ ಬೇಸತ್ತ ಹಾಸ್ಟೆಲ್ ವಿದ್ಯಾರ್ಥಿನಿಯರು
ಕಾಮುಕನ ವಿಕೃತಿಗೆ ಬೇಸತ್ತ ಹಾಸ್ಟೆಲ್ ವಿದ್ಯಾರ್ಥಿನಿಯರು
ಮೋದಿ ಬಂದ ರೋಡಿಗೆ ಮಾತ್ರ ಥಳಥಳ ಡಾಂಬರ್, ಉಳಿದ ರಸ್ತೆ ತುಂಬಾ ನೂರಾರು ಗುಂಡಿ
ಮೋದಿ ಬಂದ ರೋಡಿಗೆ ಮಾತ್ರ ಥಳಥಳ ಡಾಂಬರ್, ಉಳಿದ ರಸ್ತೆ ತುಂಬಾ ನೂರಾರು ಗುಂಡಿ
ಹೊಸ ಶರ್ಟ್ ಕತ್ತರಿಸಲು ಹಿಂದೇಟು:ಬನಿಯನ್‌ನಲ್ಲೇ KASಪರೀಕ್ಷೆ ಬರೆದ ಅಭ್ಯರ್ಥಿ
ಹೊಸ ಶರ್ಟ್ ಕತ್ತರಿಸಲು ಹಿಂದೇಟು:ಬನಿಯನ್‌ನಲ್ಲೇ KASಪರೀಕ್ಷೆ ಬರೆದ ಅಭ್ಯರ್ಥಿ
ಬಾಳೆಗೊನೆಯಲ್ಲಿ ಡ್ರಗ್ ಸಾಗಾಟ: ಪ್ರಗತಿಪರ ಯುವ ರೈತನ ಕರಾಳ ಮುಖ ಬಯಲು
ಬಾಳೆಗೊನೆಯಲ್ಲಿ ಡ್ರಗ್ ಸಾಗಾಟ: ಪ್ರಗತಿಪರ ಯುವ ರೈತನ ಕರಾಳ ಮುಖ ಬಯಲು
ಕಾಡಾನೆ ದಾಳಿಗೆ ಮಹಿಳೆ ಬಲಿ: ತೀವ್ರಗೊಂಡ ಚೌಡಹಳ್ಳಿ ಗ್ರಾಮಸ್ಥರ ಪ್ರತಿಭಟನೆ
ಕಾಡಾನೆ ದಾಳಿಗೆ ಮಹಿಳೆ ಬಲಿ: ತೀವ್ರಗೊಂಡ ಚೌಡಹಳ್ಳಿ ಗ್ರಾಮಸ್ಥರ ಪ್ರತಿಭಟನೆ
ಕೆಎಎಸ್ ಪರೀಕ್ಷೆ: ಅಕ್ರಮ ತಡೆಯಲು ಬೆಂಗಳೂರು ಕೇಂದ್ರಗಳಲ್ಲಿ ಬಿಗಿ ಭದ್ರತೆ
ಕೆಎಎಸ್ ಪರೀಕ್ಷೆ: ಅಕ್ರಮ ತಡೆಯಲು ಬೆಂಗಳೂರು ಕೇಂದ್ರಗಳಲ್ಲಿ ಬಿಗಿ ಭದ್ರತೆ
ಹಿರಿಯೂರು ಉಪಚುನಾವಣೆಗೆ NDA ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಗೊಂದಲ
ಹಿರಿಯೂರು ಉಪಚುನಾವಣೆಗೆ NDA ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಗೊಂದಲ
ಕೆಎಎಸ್ ಪರೀಕ್ಷೆಗೆ ವಿಎಓ ಹಾಲ್ ಟಿಕೆಟ್ ತಂದ ಮಹಿಳಾ ಅಭ್ಯರ್ಥಿ
ಕೆಎಎಸ್ ಪರೀಕ್ಷೆಗೆ ವಿಎಓ ಹಾಲ್ ಟಿಕೆಟ್ ತಂದ ಮಹಿಳಾ ಅಭ್ಯರ್ಥಿ