AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್​ಸ್ಟಾಗ್ರಾಂ ಪ್ರೇಯಸಿ ಜೊತೆ ಮದುವೆ ಫಿಕ್ಸ್; ಮಂಟಪಕ್ಕೆ ಬಂದ ವರನಿಗೆ ಶಾಕ್ ನೀಡಿದ ವಧು!

ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಾರಂಭವಾದ ಸ್ನೇಹವು ಯುವಕನೊಬ್ಬನಿಗೆ ಮದುವೆಯ ಕನಸು ಕಾಣುವಂತೆ ಮಾಡಿತು. ಆದರೆ, ಮದುವೆಯ ದಿನದಂದು ಆ ಕನಸುಗಳು ನನಸಾಗುವ ಮೊದಲೇ ಆತನ ಮದುವೆ ಮುರಿದುಬಿದ್ದಿತು. ಯುವಕ ಕುದುರೆಯ ಮೇಲೆ ಕುಳಿತು ಮದುವೆ ಮೆರವಣಿಗೆಯೊಂದಿಗೆ ಹೊರಟನು. ಆದರೆ ವಧು ಕೊನೆಯ ಕ್ಷಣದಲ್ಲಿ ಅವನಿಗೆ ಕೈಕೊಟ್ಟಳು. ಆತ ಇನ್‌ಸ್ಟಾಗ್ರಾಮ್‌ನಲ್ಲಿ ಆ ಯುವತಿಯನ್ನು ಭೇಟಿಯಾಗಿದ್ದ.

ಇನ್​ಸ್ಟಾಗ್ರಾಂ ಪ್ರೇಯಸಿ ಜೊತೆ ಮದುವೆ ಫಿಕ್ಸ್; ಮಂಟಪಕ್ಕೆ ಬಂದ ವರನಿಗೆ ಶಾಕ್ ನೀಡಿದ ವಧು!
Marriage
ಸುಷ್ಮಾ ಚಕ್ರೆ
|

Updated on: Dec 05, 2025 | 7:05 PM

Share

ನವದೆಹಲಿ, ಡಿಸೆಂಬರ್ 5: ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ಯುವಕನೊಬ್ಬ ಯುವತಿಯನ್ನು ಪ್ರೀತಿಸಲು ಆರಂಭಿಸಿದ. ಅವರಿಬ್ಬರೂ ಮದುವೆಯಾಗಲು ಕೂಡ ನಿರ್ಧರಿಸಿದ್ದರು. ದಿನಾಂಕವೂ ನಿಗದಿಯಾಗಿತ್ತು. ಮದುವೆಯ (Wedding) ಮುಂಚಿನ ಎಲ್ಲಾ ವಿಧಿವಿಧಾನಗಳು ಪೂರ್ಣಗೊಂಡವು. ಯುವಕನಿಗೆ ಅರಿಶಿನ ಶಾಸ್ತ್ರ ನಡೆಸಿ, ಆತನನ್ನು ಕುದುರೆಯ ಮೇಲೆ ಮದುವೆ ಮಂಟಪಕ್ಕೆ ಕರೆತರಲಾಗಿತ್ತು. ಆದರೆ ಮದುವೆಯ ದಿನವೇ ಆ ವಧು ಯುವಕನೊಂದಿಗಿನ ತನ್ನ ಸಂಬಂಧವನ್ನು ಕೊನೆಗೊಳಿಸಿದಳು.

ಮದುವೆ ಮಂಟಪದಲ್ಲಿ ಆ ವರ ಯುವತಿಗೆ ಫೋನ್ ಮಾಡುತ್ತಲೇ ಇದ್ದ. ಆದರೆ, ಅವಳು ಫೋನ್ ರಿಸೀವ್ ಮಾಡಲೇ ಇಲ್ಲ. ಇದರಿಂದಾಗಿ ಅವನು ಮದುವೆ ಮೆರವಣಿಗೆಯೊಂದಿಗೆ ವಾಪಾಸ್ ಬರಬೇಕಾಯಿತು. ಈ ಮೋಸದಿಂದಾಗಿ ಆತ ಆಘಾತಕ್ಕೊಳಗಾದನು. ಈ ವಿಷಯವು ಇಡೀ ಜಿಲ್ಲೆಯಲ್ಲಿ ಚರ್ಚೆಯ ವಿಷಯವಾಗಿದೆ.

ಇದನ್ನೂ ಓದಿ: Video: ಮದುವೆಯಲ್ಲಿ ರಸಗುಲ್ಲಾ ಸಿಗಲಿಲ್ಲವೆಂದು ಕುರ್ಚಿಗಳ ಮುರಿದು ವರನ ಕಡೆಯವರಿಂದ ರಾದ್ಧಾಂತ

ಉತ್ತರ ಪ್ರದೇಶದ ಸಹರಾನ್‌ಪುರದ ಬದ್ಗಾಂವ್ ಪ್ರದೇಶದ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಯುವಕನೊಬ್ಬ ಇನ್‌ಸ್ಟಾಗ್ರಾಮ್‌ನಲ್ಲಿ ಬರೇಲಿಯ ಹುಡುಗಿಯೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದ. ಕೆಲವೇ ದಿನಗಳಲ್ಲಿ ಅವರಿಬ್ಬರ ಸ್ನೇಹ ಪ್ರೀತಿಯಾಗಿ ಬದಲಾಯಿತು. ಡಿಸೆಂಬರ್ 2ರಂದು ಫೋನ್ ಮೂಲಕವೇ ಇಬ್ಬರ ಮದುವೆಯ ದಿನಾಂಕವನ್ನು ನಿಗದಿಪಡಿಸಲಾಯಿತು.

ಆ ಯುವಕನ ಕುಟುಂಬವು ಉತ್ಸಾಹದಿಂದ ಮದುವೆಗೆ ಸಿದ್ಧತೆ ನಡೆಸಿತು. ಆಹ್ವಾನ ಪತ್ರಿಕೆ ಬಂದ ಕೂಡಲೇ ಸಂಬಂಧಿಕರು ಮನೆಯಲ್ಲಿ ಜಮಾಯಿಸಿದರು. ಯುವಕನಿಗೆ ಅರಿಶಿನ ಮತ್ತು ಎಣ್ಣೆಯನ್ನು ಸಹ ಹಚ್ಚಲಾಯಿತು. ಯುವಕ ಪೇಟ ಕಟ್ಟುವ ಮೂಲಕ ವರನಾದನು. ಕುದುರೆಯಲ್ಲಿ ಅವರು ವಾದ್ಯವೃಂದದೊಂದಿಗೆ 350 ಕಿ.ಮೀ ದೂರದಲ್ಲಿರುವ ಮಂಟಪಕ್ಕೆ ಬಂದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ವರ, ಭುವನೇಶ್ವರದಲ್ಲಿ ವಧು: ಇಂಡಿಗೋ ವಿಮಾನದಿಂದ ಮದುವೆಗೆ ವಿಘ್ನದ ಆತಂಕ

ಆದರೆ, ಅಲ್ಲಿಗೆ ವಧು ಬರಲೇ ಇಲ್ಲ. ಅವನು ತನ್ನ ವಧುವಿಗೆ ಮದುವೆ ಮನೆಯಿಂದ ಕರೆ ಮಾಡಿದಾಗ, ಅವಳು ಫೋನ್ ಕಟ್ ಮಾಡಿದಳು. ನಂತರ ವಧುವಿನ ಫೋನ್ ಸ್ವಿಚ್ ಆಫ್ ಆಯಿತು. ಹಲವು ಗಂಟೆಗಳ ಕಾಲ ಕಾದರೂ ವರನಿಗೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಆದ್ದರಿಂದ ಅವನು ಮದುವೆ ಮೆರವಣಿಗೆಯೊಂದಿಗೆ ಹಿಂತಿರುಗಬೇಕಾಯಿತು.

5 ದಿನಗಳ ಹಿಂದೆ, ವರದಕ್ಷಿಣೆಯಾಗಿ ಕಾರು ಕೊಡಿಸುವುದಾಗಿ ಮಹಿಳೆ ನೀಡಿದ ಭರವಸೆಯ ಮೇರೆಗೆ, ಆ ಯುವಕ ತನ್ನ ಸ್ನೇಹಿತರೊಂದಿಗೆ ಸಹರಾನ್‌ಪುರದ ಶೋ ರೂಂಗೆ ಹೋಗಿದ್ದನು. ಅಲ್ಲಿ ಅವನು ಬ್ರೆಝಾ ಕಾರನ್ನು ಆರಿಸಿಕೊಂಡಿದ್ದ. ಕಾರು ಸಿಕ್ಕರೂ ಆತನಿಗೆ ವಧು ಸಿಗಲಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ