AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಮಾನ್‌ ಗಲ್ಫ್‌ನತ್ತ ಭಾರತದ 6ಕ್ಕೂ ಹೆಚ್ಚು ಯುದ್ಧನೌಕೆ ರವಾನೆ: ಕೇಂದ್ರದ ದಿಢೀರ್ ನಿರ್ಧಾರಕ್ಕೆ ಇಲ್ಲಿದೆ ಕಾರಣ

ಅಮೆರಿಕ, ಇಸ್ರೇಲ್‌ ಮತ್ತು ಇರಾನ್‌ ಯುದ್ಧ ಆರಂಭವಾಗಿ 20 ದಿನಗಳೇ ಆಗಿವೆ. ಯಾವ ದೇಶವೂ ಜಿದ್ದನ್ನು ಬಿಡುತ್ತಿಲ್ಲ. ಇದು ಕರ್ನಾಟಕದ ಹೋಟೆಲ್‌ ಉದ್ಯಮಕ್ಕೆ ಮರ್ಮಾಘಾತವನ್ನೇ ಕೊಟ್ಟಿದೆ. ಇದೀಗ ಗ್ಯಾಸ್‌ ಗಂಡಾಂತರ ತಪ್ಪಿಸಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಹೊರ್ಮುಜ್ ಮೂಲಕ ಭಾರತದತ್ತ ಬರುತ್ತಿರುವ ಎಲ್​ಪಿಜಿ, ತೈಲ ಹಡಗುಗಳ ರಕ್ಷಣೆಗಾಗಿ ಒಮಾನ್‌ ಗಲ್ಫ್‌ನತ್ತ ಭಾರತ 6ಕ್ಕೂ ಹೆಚ್ಚು ಯುದ್ಧನೌಕೆಗಳನ್ನು ರವಾನಿಸಿರುವ ಬಗ್ಗೆ ವರದಿಯಾಗಿದೆ.

ಒಮಾನ್‌ ಗಲ್ಫ್‌ನತ್ತ ಭಾರತದ 6ಕ್ಕೂ ಹೆಚ್ಚು ಯುದ್ಧನೌಕೆ ರವಾನೆ: ಕೇಂದ್ರದ ದಿಢೀರ್ ನಿರ್ಧಾರಕ್ಕೆ ಇಲ್ಲಿದೆ ಕಾರಣ
ಸಾಂದರ್ಭಿಕ ಚಿತ್ರImage Credit source: TV9 Network
ಗಣಪತಿ ಶರ್ಮಾ
|

Updated on: Mar 19, 2026 | 6:44 AM

Share

ನವದೆಹಲಿ, ಬೆಂಗಳೂರು, ಮಾರ್ಚ್ 19: ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಸೇನಾ ಸಂಘರ್ಷ (Iran-Israel Conflict) ಆರಂಭವಾಗಿ 20 ದಿನಗಳಾದರೂ ಉದ್ವಿಗ್ನತೆ ತಗ್ಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಈ ಯುದ್ಧದ ಪರಿಣಾಮ ಜಾಗತಿಕ ತೈಲ ಹಾಗೂ ಅನಿಲ ಸರಬರಾಜಿನ ಮೇಲೆ ಬೀರಿದ್ದು, ಅದರ ಪರಿಣಾಮವಾಗಿ ಕರ್ನಾಟಕದಲ್ಲೂ ಕಮರ್ಷಿಯಲ್ ಎಲ್‌ಪಿಜಿ (LPG) ಕೊರತೆ ಉಂಟಾಗಿ ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ. ಹೊರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದ್ದು, ನೂರಾರು ತೈಲ ಹಾಗೂ ಅನಿಲ ಹಡಗುಗಳು ಅಲ್ಲಿ ಸಿಲುಕಿಕೊಂಡಿವೆ. ಭಾರತದ 22ಕ್ಕೂ ಹೆಚ್ಚು ಹಡಗುಗಳು ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿ ಸಿಲುಕಿರುವುದಾಗಿ ಕೇಂದ್ರ ಸರ್ಕಾರದ ಶಿಪ್ಪಿಂಗ್ ಸಚಿವಾಲಯ ಮಾಹಿತಿ ನೀಡಿದೆ.

ಅವುಗಳಲ್ಲಿ 6 ಎಲ್‌ಪಿಜಿ ಹಡಗುಗಳು, 4 ಕಚ್ಚಾ ತೈಲ ಹಡಗುಗಳು, 3 ಕಂಟೇನರ್ ಹಡಗುಗಳು, 2 ಕಚ್ಚಾ ವಸ್ತು ಸಾಗಣೆ ಹಡಗುಗಳು, 1 ಎಲ್‌ಎನ್‌ಜಿ ಹಡಗು ಹಾಗೂ 1 ರಾಸಾಯನಿಕ ವಸ್ತು ಸಾಗಣೆ ಹಡಗು ಸೇರಿವೆ.

ಹೊರ್ಮುಜ್‌ನಲ್ಲಿ ಭಾರತದ ಹಡಗುಗಳು!

  • ಪರ್ಷಿಯನ್‌ ಗಲ್ಫ್‌ನಲ್ಲಿ – 22 ಹಡಗು
  • LPG ತುಂಬಿದ ಹಡಗುಗಳು – 6 ಹಡಗು
  • ಕಚ್ಚಾ ತೈಲ ತುಂಬಿದ ಹಡಗು – 4 ಹಡಗು
  • ಕಂಟೇನರ್‌ ಹಡಗುಗಳು – 3 ಹಡಗು
  • ಕಚ್ಚಾ ವಸ್ತುಗಳ ಸಾಗಿಸುವ ಹಡಗು – ಹಡಗು
  • LNG ತುಂಬಿದ ಹಡಗುಗಳು – 1 ಹಡಗು
  • ರಾಸಾಯನಿಕ ವಸ್ತುಗಳ ಹಡಗು – 1 ಹಡಗು

ಇದಕ್ಕೂ ನಡುವೆ, ಭಾರತಕ್ಕೆ ಅಗತ್ಯವಾದ ಅನಿಲ ಸರಬರಾಜು ಮುಂದುವರಿಸಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ‘ಶಿವಾಲಿಕ್’ ಮತ್ತು ‘ನಂದಾದೇವಿ’ ಹಡಗುಗಳು ಸೇರಿ ಸುಮಾರು 92 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿ ಭಾರತಕ್ಕೆ ತಲುಪಿಸಿವೆ. ‘ಜಗ್ ಲಾಡ್ಕಿ’ ಸೇರಿದಂತೆ ಇನ್ನೂ ಕೆಲವು ಹಡಗುಗಳು ಕಚ್ಚಾ ತೈಲವನ್ನು ಹೊತ್ತು ದೇಶ ತಲುಪಿವೆ.

ಮತ್ತಷ್ಟು ಹಡಗುಗಳನ್ನು ಸುರಕ್ಷಿತವಾಗಿ ಕರೆತರಲು ಭಾರತೀಯ ನೌಕಾಪಡೆ ಒಮಾನ್ ಗಲ್ಫ್ ಭಾಗದತ್ತ ಯುದ್ಧನೌಕೆಗಳನ್ನು ರವಾನಿಸಿದೆ ಎಂದು ವರದಿಯಾಗಿವೆ. ತೈಲ ಹಡಗುಗಳಿಗೆ ಎಸ್ಕಾರ್ಟ್ ನೀಡಲು 6ಕ್ಕೂ ಹೆಚ್ಚು ಯುದ್ಧನೌಕೆಗಳನ್ನು ನಿಯೋಜಿಸಲಾಗಿದೆ ಎಂದು ‘ಬ್ಲೂಮ್​ಬರ್ಗ್’ ಹಾಗೂ ಇತರೆ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆದರೆ, ಈ ಕುರಿತು ಕೇಂದ್ರ ಸರ್ಕಾರ ಅಧಿಕೃತ ದೃಢೀಕರಣ ನೀಡಿಲ್ಲ.

ಸಂಪೂರ್ಣ ಬಂದಾಗಿಲ್ಲ ಹೊರ್ಮುಜ್ ಜಲಸಂಧಿ!

ಏತನ್ಮಧ್ಯೆ, ಹೊರ್ಮುಜ್ ಜಲಸಂಧಿ ಸಂಪೂರ್ಣವಾಗಿ ಬಂದ್ ಆಗಿಲ್ಲ ಎಂದು ಹೇಳಲಾಗುತ್ತಿದೆ. ಇರಾನ್ ಪ್ರತಿ ಹಡಗಿನ ದಾಖಲೆಗಳನ್ನು ಪರಿಶೀಲಿಸಿ ಬಳಿಕವೇ ಸಾಗಲು ಅನುಮತಿ ನೀಡುತ್ತಿದೆ. ಅಮೆರಿಕಕ್ಕೆ ಸಂಬಂಧಿಸಿದ ಹಡಗುಗಳನ್ನು ಮಾತ್ರ ತಡೆಯಲಾಗುತ್ತಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಭಾರತ ಸೇರಿದಂತೆ ಹಲವು ದೇಶಗಳ ಹಡಗುಗಳನ್ನು ಪರಿಶೀಲನೆ ಬಳಿಕ ಬಿಡುಗಡೆ ಮಾಡಲಾಗಿದೆ.

ಗ್ಯಾಸ್ ಕೊರತೆ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ

ಇತ್ತ ದೇಶದಲ್ಲಿ ಗ್ಯಾಸ್ ಕೊರತೆ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು, ಎಲ್‌ಪಿಜಿ ಉತ್ಪಾದನೆಯನ್ನು ಶೇಕಡಾ 40ರಷ್ಟು ಹೆಚ್ಚಿಸಲಾಗಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ತಿಳಿಸಿದೆ. ಈಗಾಗಲೇ 15 ರಾಜ್ಯಗಳಲ್ಲಿ ಕಮರ್ಷಿಯಲ್ ಎಲ್‌ಪಿಜಿ ವಿತರಣೆ ಆರಂಭಗೊಂಡಿದ್ದು, ಸುಮಾರು 7,200 ಟನ್ ಅನಿಲವನ್ನು ಹೆಚ್ಚುವರಿಯಾಗಿ ಪೂರೈಸಲಾಗಿದೆ ಎಂದು ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಹೇಳಿದ್ದಾರೆ.

ಕರ್ನಾಟಕದಲ್ಲಿ ಗ್ಯಾಸ್ ಬಿಕ್ಕಟ್ಟು: ಪರಿಸ್ಥಿತಿ ಇನ್ನೂ ಗಂಭೀರ

ಆದರೆ ಕರ್ನಾಟಕದಲ್ಲಿ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ. ಕಳೆದ ಒಂದು ವಾರದಿಂದ ಕಮರ್ಷಿಯಲ್ ಗ್ಯಾಸ್ ಕೊರತೆಯಿಂದ ಅನೇಕ ಹೋಟೆಲ್‌ಗಳು ಬಾಗಿಲು ಮುಚ್ಚಿವೆ. ಬೆಂಗಳೂರಿನಲ್ಲಿಯೂ ಹಲವು ಪ್ರಸಿದ್ಧ ಹೋಟೆಲ್‌ಗಳು ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳಿಸಿವೆ. ಶೇಷಾದ್ರಿಪುರ, ವಿಜಯನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಹೋಟೆಲ್‌ಗಳು ಬಂದ್ ಆಗಿರುವುದು ಗಮನಾರ್ಹ.

ರಾಜ್ಯ ವಿಧಾನಸಭೆಯಲ್ಲಿಯೂ ಈ ವಿಚಾರ ಚರ್ಚೆಗೆ ಗ್ರಾಸವಾಗಿದ್ದು, ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ‘ಒಂದು ವಾರ ತಾಳ್ಮೆಯಿಂದ ಇರಬೇಕು’ ಎಂದು ಮನವಿ ಮಾಡಿದ್ದಾರೆ. ಸಿಲಿಂಡರ್ ಪೂರೈಕೆ ಸೀಮಿತವಾಗಿರುವುದರಿಂದ ಹೋಟೆಲ್ ಮಾಲೀಕರು ಸಂಕಷ್ಟದಲ್ಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಇನ್ನೊಂದೆಡೆ, ಬೆಂಗಳೂರಿನ ಶಾಸಕರ ಭವನದಲ್ಲಿಯೂ ಗ್ಯಾಸ್ ಸಮಸ್ಯೆ ತಟ್ಟಿದ್ದು, ಶಾಸಕರಿಗೆ ಆಹಾರ ಸಿಗದ ಸ್ಥಿತಿ ನಿರ್ಮಾಣವಾಗಿದೆ ಎಂಬ ಅಳಲು ಕೇಳಿಬಂದಿದೆ. ಶಿವಾಜಿನಗರ ಬಸ್ ನಿಲ್ದಾಣದ ಬಳಿ ಸಿಲಿಂಡರ್‌ಗಾಗಿ ನೂಕುನುಗ್ಗಲು ಉಂಟಾದ ಘಟನೆ ಕೂಡ ವರದಿಯಾಗಿದೆ.

ಇದನ್ನೂ ಓದಿ: LPG ಸಿಲಿಂಡರ್ ಬಿಕ್ಕಟ್ಟು: ಕಾಳಸಂತೆಯಲ್ಲಿ ಏಜೆನ್ಸಿಗಳು, ದಂಧೆಕೋರರ ಕಳ್ಳಾಟ, 15 ಸಾವಿರ ಸಿಲಿಂಡರ್ ಜಪ್ತಿ

ಒಟ್ಟಿನಲ್ಲಿ, ಮಧ್ಯಪ್ರಾಚ್ಯದ ಯುದ್ಧದ ಪರಿಣಾಮ ಕೇವಲ ಜಾಗತಿಕ ಮಟ್ಟದಲ್ಲೇ ಅಲ್ಲದೆ, ಕರ್ನಾಟಕದ ಸಾಮಾನ್ಯ ಜನಜೀವನ ಮತ್ತು ಹೋಟೆಲ್ ಉದ್ಯಮದ ಮೇಲೂ ಗಂಭೀರ ಪರಿಣಾಮ ಬೀರುತ್ತಿರುವುದು ಸ್ಪಷ್ಟವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
‘ಆಕಾಶ್’ ಚಿತ್ರೀಕರಣದ ನೆನಪುಗಳು: ವಿಡಿಯೋ ಹಂಚಿಕೊಂಡ ರಮ್ಯಾ
‘ಆಕಾಶ್’ ಚಿತ್ರೀಕರಣದ ನೆನಪುಗಳು: ವಿಡಿಯೋ ಹಂಚಿಕೊಂಡ ರಮ್ಯಾ
ಭಾರೀ ಮಳೆ ಗಾಳಿಗೆ ಧರೆಗುರುಳಿದ ಬೃಹತ್ ನೇಮ್ ಬೋರ್ಡ್ ಪಿಲ್ಲರ್
ಭಾರೀ ಮಳೆ ಗಾಳಿಗೆ ಧರೆಗುರುಳಿದ ಬೃಹತ್ ನೇಮ್ ಬೋರ್ಡ್ ಪಿಲ್ಲರ್
ಒಡೆದ ತುಂಗಭದ್ರಾ ಎಡದಂಡೆ ಕಾಲುವೆ, ಸಿಕ್ತು ಬೃಹತ್ ಗಾತ್ರದ​ ಮೀನು
ಒಡೆದ ತುಂಗಭದ್ರಾ ಎಡದಂಡೆ ಕಾಲುವೆ, ಸಿಕ್ತು ಬೃಹತ್ ಗಾತ್ರದ​ ಮೀನು
ಭಾವೈಕ್ಯತೆ ಸಾರಿದ ವಿನೋದ್ ರಾಜ್: ಮಸೀದಿಗಳಲ್ಲಿ ಹಣ್ಣು ವಿತರಣೆ: ವಿಡಿಯೋ
ಭಾವೈಕ್ಯತೆ ಸಾರಿದ ವಿನೋದ್ ರಾಜ್: ಮಸೀದಿಗಳಲ್ಲಿ ಹಣ್ಣು ವಿತರಣೆ: ವಿಡಿಯೋ
ಕಾಂಗ್ರೆಸ್​​​ ಹೈಕ,ಮಾಂಡ್​​​ಗೆ ಎಚ್ಚರಿಕೆ ನೀಡಿದ ಮುಸ್ಲಿಂ ಮುಖಂಡರು!
ಕಾಂಗ್ರೆಸ್​​​ ಹೈಕ,ಮಾಂಡ್​​​ಗೆ ಎಚ್ಚರಿಕೆ ನೀಡಿದ ಮುಸ್ಲಿಂ ಮುಖಂಡರು!
ಗಾಳಿ ಮಳೆಗೆ ಹಾರಿ ಹೋದ ಶಾಲಾ ಮೇಲ್ಚಾವಣಿ: ಮಕ್ಕಳು ಗ್ರೇಟ್​​ ಎಸ್ಕೇಪ್​​
ಗಾಳಿ ಮಳೆಗೆ ಹಾರಿ ಹೋದ ಶಾಲಾ ಮೇಲ್ಚಾವಣಿ: ಮಕ್ಕಳು ಗ್ರೇಟ್​​ ಎಸ್ಕೇಪ್​​
ಊರಿಗೆ ಹೋಗುವ ಧಾವಂತ: ಬಸ್ ಹತ್ತುವಾಗ ನೂಕುನುಗ್ಗಲಿನಲ್ಲಿ ಕೆಳಗೆಬಿದ್ದ ಮಹಿಳೆ
ಊರಿಗೆ ಹೋಗುವ ಧಾವಂತ: ಬಸ್ ಹತ್ತುವಾಗ ನೂಕುನುಗ್ಗಲಿನಲ್ಲಿ ಕೆಳಗೆಬಿದ್ದ ಮಹಿಳೆ
ಮುಗಿಯಿತು ‘ಲವ್ ಸೀಸನ್ಸ್’ ಸಿನಿಮಾ ಶೂಟಿಂಗ್; ಇಲ್ಲಿದೆ ಮೇಕಿಂಗ್ ವಿಡಿಯೋ
ಮುಗಿಯಿತು ‘ಲವ್ ಸೀಸನ್ಸ್’ ಸಿನಿಮಾ ಶೂಟಿಂಗ್; ಇಲ್ಲಿದೆ ಮೇಕಿಂಗ್ ವಿಡಿಯೋ
ಕೋಗಿಲು ನಿರಾಶ್ರಿತರಿಗೆ ಯುಗಾದಿ, ರಂಜಾನ್ ಗಿಫ್ಟ್: ಹಕ್ಕುಪತ್ರ ವಿತರಣೆ
ಕೋಗಿಲು ನಿರಾಶ್ರಿತರಿಗೆ ಯುಗಾದಿ, ರಂಜಾನ್ ಗಿಫ್ಟ್: ಹಕ್ಕುಪತ್ರ ವಿತರಣೆ
ಎಂಥಾ ಕಾಲ ಬಂತಪ್ಪ: ಪೊಲೀಸ್​​ ಭದ್ರತೆಯಲ್ಲಿ LPG ಸಿಲಿಂಡರ್​​ಗಳ ವಿತರಣೆ!
ಎಂಥಾ ಕಾಲ ಬಂತಪ್ಪ: ಪೊಲೀಸ್​​ ಭದ್ರತೆಯಲ್ಲಿ LPG ಸಿಲಿಂಡರ್​​ಗಳ ವಿತರಣೆ!