ಬೆಂಗಳೂರು ಮಳೆಗೆ ವಿಕ್ಟೋರಿಯಾ ರಸ್ತೆಯಲ್ಲಿ ಜಲತಾಂಡವ: ಕೆರೆಯಾಗಿ ಬದಲಾದ ರೀನಿಯಸ್ ಸ್ಟ್ರೀಟ್ ರೋಡ್
Bangalore Rain Video: ಧಾರಾಕಾರ ಮಳೆಯಿಂದಾಗಿ ಬೆಂಗಳೂರಿನ ವಿಕ್ಟೋರಿಯಾ ರಸ್ತೆ, ರೀನಿಯಸ್ ಸ್ಟ್ರೀಟ್ ಮತ್ತು ಸರ್ಜಾಪುರ ರಸ್ತೆಗಳು ಜಲಾವೃತಗೊಂಡಿವೆ. ರಸ್ತೆಗಳು ಕೆರೆಗಳಾಗಿ ಮಾರ್ಪಟ್ಟಿದ್ದು, ವಾಹನ ಸವಾರರು ತೀವ್ರ ಪರದಾಟ ನಡೆಸುತ್ತಿದ್ದಾರೆ. ದ್ವಿಚಕ್ರವಾಹನಗಳು ಕೆಟ್ಟು ನಿಂತು, ಸವಾರರು ಮನೆ ತಲುಪಲು ಹೆಣಗಾಡುತ್ತಿದ್ದಾರೆ. ಮೂರು ದಿನಗಳ ನಿರಂತರ ಮಳೆಯ ಮುನ್ಸೂಚನೆ ನಗರದ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುವ ಆತಂಕ ಮೂಡಿಸಿದೆ.
ಬೆಂಗಳೂರು, ಅಕ್ಟೋಬರ್ 11: ಬೆಂಗಳೂರು ನಗರದಲ್ಲಿ ಶುಕ್ರವಾರ ರಾತ್ರಿ ಇಡೀ ಸುರಿದ ಧಾರಾಕಾರ ಮಳೆಯಿಂದಾಗಿ ವಿಕ್ಟೋರಿಯಾ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ಹೆಚ್ಎಎಲ್ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ನದಿಯಂತೆ ನೀರು ಹರಿಯುತ್ತಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ರೀನಿಯಸ್ ಸ್ಟ್ರೀಟ್ ರೋಡ್ ಕೆರೆಯಂತೆ ಗೋಚರಿಸುತ್ತಿದೆ. ಸರ್ಜಾಪುರ ರಸ್ತೆ ಮತ್ತು ವಿಪ್ರೋ ಗೇಟ್ ಬಳಿಯೂ ಇದೇ ರೀತಿಯ ಅಧ್ವಾನ ಸೃಷ್ಟಿಯಾಗಿದೆ. ಮಳೆಯ ನೀರಿನಲ್ಲಿ ವಾಹನಗಳು ಕೆಟ್ಟು ನಿಂತಿದ್ದು, ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ಶುಕ್ರವಾರ ರಾತ್ರಿ ಮನೆಗೆ ತಲುಪಲು ಪರದಾಟ ನಡೆಸಿದ್ದಾರೆ. ಹಲವೆಡೆ ಚರಂಡಿಗಳು ತೆರೆದುಕೊಂಡಿದ್ದು, ಸವಾರರಿಗೆ ಅಪಾಯವನ್ನುಂಟು ಮಾಡುತ್ತಿವೆ. ಇದು ಕೇವಲ ಒಂದೆರಡು ರಸ್ತೆಗಳ ಕಥೆಯಲ್ಲ, ಬೆಂಗಳೂರಿನಾದ್ಯಂತ ಹಲವಾರು ಪ್ರದೇಶಗಳಲ್ಲಿ ಇದೇ ರೀತಿಯ ಅವ್ಯವಸ್ಥೆ ಸೃಷ್ಟಿಯಾಗಿದೆ. ಹವಾಮಾನ ಇಲಾಖೆ ಮೂರು ದಿನಗಳ ಮಳೆಯ ಮುನ್ಸೂಚನೆ ನೀಡಿದ್ದು, ನಾಗರಿಕರಲ್ಲಿ ಆತಂಕ ಮೂಡಿಸಿದೆ.
ದೆಹಲಿ ಸ್ಫೋಟ ನಡೆದಾಗ ಕಂಗಾಲಾಗಿ ಓಡಿದ ಜನರು; ಸಿಸಿಟಿವಿ ವಿಡಿಯೋ ವೈರಲ್
ಉತ್ತರ ಪ್ರದೇಶದ ಕಲ್ಲು ಗಣಿಗಾರಿಕೆ ವೇಳೆ ಭೂಕುಸಿತವಾಗಿ ಓರ್ವ ಸಾವು
ನಾಯಕತ್ವ ಬದಲಾವಣೆ ಬಗ್ಗೆ ನಂಗೇನೂ ಗೊತ್ತಿಲ್ಲ, ಸಿಎಂ ಹತ್ರನೇ ಕೇಳಿ; ಡಿಕೆಶಿ
ರಾಹುಲ್ ಗಾಂಧಿಗೆ ಧೈರ್ಯ ತುಂಬಿದ್ದೇನೆ; ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

