AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಪಾನ್‌ನಲ್ಲಿರುವ ಬೆಂಗಳೂರಿನ ಟೆಕ್ಕಿಗಳಿಗೆ ತಿಂಗಳಿಗೆ 17 ಲಕ್ಷ ರೂ. ಸಂಬಳ: ಸರ್ಕಾರಕ್ಕೆ 3 ಲಕ್ಷ ರೂ. ತೆರಿಗೆ ನೀಡಬೇಕು

ಯೂಟ್ಯೂಬರ್ ಡೋಲೇಶ್ ಜಪಾನ್‌ನಲ್ಲಿನ ಭಾರತೀಯ ಸಾಫ್ಟ್‌ವೇರ್ ಎಂಜಿನಿಯರ್‌ಗಳ ಸಂಬಳ ಮತ್ತು ಬೆಂಗಳೂರಿನ ಟೆಕ್ಕಿಗಳ ಆದಾಯವನ್ನು ಹೋಲಿಸುವ ವಿಡಿಯೋ ವೈರಲ್ ಆಗಿದೆ. ಜಪಾನ್‌ನಲ್ಲಿ ಹೆಚ್ಚಿನ ತೆರಿಗೆ ಮತ್ತು ಜೀವನ ವೆಚ್ಚದ ನಂತರ ಕೈಗೆ ಸಿಗುವ ಹಣ ಬೆಂಗಳೂರಿಗಿಂತ ಹೆಚ್ಚಲ್ಲ ಎಂಬ ಚರ್ಚೆ ಹುಟ್ಟಿಕೊಂಡಿದೆ. ಜಪಾನ್‌ನ ಕಠಿಣ ಕೆಲಸದ ಸಂಸ್ಕೃತಿ ಮತ್ತು ಜೀವನಶೈಲಿ ಎಲ್ಲರಿಗೂ ಒಗ್ಗುವುದಿಲ್ಲ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

ಜಪಾನ್‌ನಲ್ಲಿರುವ ಬೆಂಗಳೂರಿನ ಟೆಕ್ಕಿಗಳಿಗೆ ತಿಂಗಳಿಗೆ 17 ಲಕ್ಷ ರೂ. ಸಂಬಳ: ಸರ್ಕಾರಕ್ಕೆ 3 ಲಕ್ಷ ರೂ. ತೆರಿಗೆ ನೀಡಬೇಕು
ವೈರಲ್​​ ಪೋಸ್ಟ್
ಅಕ್ಷಯ್​ ಪಲ್ಲಮಜಲು​​
|

Updated on: Feb 25, 2026 | 11:18 AM

Share

ಯೂಟ್ಯೂಬ್​​​​​​ ಕಂಟೆಂಟ್​​​​ ಕ್ರಿಯೆಟರ್ ಒಬ್ಬರು ಜಪಾನ್​​ ಹಾಗೂ ಬೆಂಗಳೂರು ಸಂಬಳದ ಬಗ್ಗೆ ಹೊಲಿಕೆ ಮಾಡಿದ್ದಾರೆ. ಇದೀಗ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೀ ಭಾರೀ ವೈರಲ್​ ಆಗಿದೆ. ಜಪಾನ್‌ನಲ್ಲಿ ನೆಲೆಸಿರುವ ಭಾರತೀಯ ಸಾಫ್ಟ್‌ವೇರ್ ಎಂಜಿನಿಯರ್‌ಗಳ ಆರ್ಥಿಕ ಜೀವನದ ಕುರಿತು ಯೂಟ್ಯೂಬರ್ ಡೋಲೇಶ್ (Dolesh) ಹಂಚಿಕೊಂಡಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ. ಬೆಂಗಳೂರಿನ ಇಬ್ಬರು ಟೆಕ್ಕಿಗಳು ಜಪಾನ್‌ನ ವಾಸ್ತವ ಸ್ಥಿತಿಯನ್ನು ಈ ವಿಡಿಯೋದಲ್ಲಿ ಬಿಚ್ಚಿಟ್ಟಿದ್ದಾರೆ.

ಜಪಾನ್‌ನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ವೃತ್ತಿ ಆರಂಭಿಸುವವರಿಗೆ ವರ್ಷಕ್ಕೆ ಸುಮಾರು 3 ಮಿಲಿಯನ್ ಯೆನ್ (ಅಂದಾಜು 17 ಲಕ್ಷ ರೂ.) ಸಂಬಳ ಸಿಗುತ್ತದೆ. 2-3 ವರ್ಷಗಳ ಅನುಭವದ ನಂತರ ಇದು 4.5 ರಿಂದ 5 ಮಿಲಿಯನ್ ಯೆನ್ (ಅಂದಾಜು 28 – 30 ಲಕ್ಷ ರೂ.) ವರೆಗೆ ಏರಿಕೆಯಾಗಬಹುದು. ಬೆಂಗಳೂರಿನ ಟೆಕ್ಕಿಗಳು ವಿವರಿಸಿದಂತೆ, ಅವರು ಗಳಿಸುವ ವಾರ್ಷಿಕ ಆದಾಯದಲ್ಲಿ ಸುಮಾರು 3 ಲಕ್ಷ ರೂ.ನಷ್ಟು ಹಣವನ್ನು ತೆರಿಗೆ (Tax) ರೂಪದಲ್ಲಿಯೇ ಪಾವತಿಸಬೇಕಾಗುತ್ತದೆ. ಇದೀಗ ಈ ಹೇಳಿಕೆ ಭಾರತೀಯರಿಗೆ ಭಾರೀ ಅಚ್ಚರಿಗೊಳಿಸಿದೆ. ಮುಂಬೈ ಮೂಲದ ಡೋಲೇಶ್ ‘200Journeys’ ಹೆಸರಿನ ಚಾನೆಲ್ ನಡೆಸುತ್ತಿದ್ದು, ಪ್ರಪಂಚದಾದ್ಯಂತ ಪ್ರವಾಸ ಮಾಡಿ ಅಲ್ಲಿನ ಜೀವನ ಮತ್ತು ಹಣಕಾಸಿನ ವಿಚಾರಗಳ ಬಗ್ಗೆ ವಿಡಿಯೋಗಳನ್ನು ಮಾಡುತ್ತಾರೆ. ಇದೀಗ ಭಾರತೀಯರಿಗೆ ಜಪಾನ್​​ ಹಣಕಾಸಿನ ಹಾಗೂ ಅಲ್ಲಿ ಆರ್ಥಿಕ ವಿಚಾರದ ಬಗ್ಗೆ ಹೇಳಿದ್ದಾರೆ.

ಇದನ್ನೂ ಓದಿ: ‘ನೀವು ಮತ್ತು ಆ ಹುಡುಗಿ ಬೇರೆ ಬೇರೆ ಮಲಗಿ’: ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಕೆ ಹಾಕಿದ ಬಸ್ ಕಂಡಕ್ಟರ್

ಇಲ್ಲಿದೆ ನೋಡಿ ವಿಡಿಯೋ:

ಇನ್ನು ಈ ಬಗ್ಗೆ ನೆಟ್ಟಿಗರು ಸೋಶಿಯಲ್​​ ಮೀಡಿಯಾದಲ್ಲಿ ಕಮೆಂಟ್​ ಮಾಡಿದ್ದಾರೆ. “ಜಪಾನ್‌ನಲ್ಲಿ ಗಳಿಸಿ ಅಲ್ಲೇ ಖರ್ಚು ಮಾಡಬೇಕಾದಾಗ ಭಾರತೀಯ ರೂಪಾಯಿಗೆ ಕನ್ವರ್ಟ್ ಮಾಡಿ ನೋಡುವುದರಲ್ಲಿ ಅರ್ಥವಿಲ್ಲ. ಜಪಾನ್ ಭಾರತಕ್ಕಿಂತ ದುಬಾರಿ ದೇಶ,” ಎಂದು ಅನೇಕರು ವಾದಿಸಿದ್ದಾರೆ. ಜಪಾನ್‌ನ ಕಠಿಣ ಕೆಲಸದ ಸಂಸ್ಕೃತಿ (Work Culture) ಮತ್ತು ಅಲ್ಲಿನ ಜೀವನಶೈಲಿ ಎಲ್ಲರಿಗೂ ಒಗ್ಗುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಹೆಚ್ಚಿನ ತೆರಿಗೆ ಮತ್ತು ಜೀವನ ವೆಚ್ಚದ ನಂತರ ಕೈಗೆ ಉಳಿಯುವ ಹಣ ಭಾರತದ ಟಾಪ್ ಕಂಪನಿಗಳ ಸಂಬಳಕ್ಕಿಂತ ಹೆಚ್ಚೇನೂ ಅಲ್ಲ ಎಂಬುದು ಹಲವರ ವಾದಿಸಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More