‘ರಾಮಾಯಣದ ರಾವಣನ ಗರ್ಜನೆ ದೇವರಾಜ್ ಅವರದ್ದಲ್ಲ’; ಪ್ರಜ್ವಲ್ ಸ್ಪಷ್ಟನೆ
'ರಾಮಾಯಣ' ಸಿನಿಮಾದಲ್ಲಿ ರಾವಣನ ಧ್ವನಿ ನಟ ದೇವರಾಜ್ ಅವರದ್ದು ಎಂಬ ವದಂತಿಗೆ ನಟ ಪ್ರಜ್ವಲ್ ದೇವರಾಜ್ ತೆರೆ ಎಳೆದಿದ್ದಾರೆ. ಆ ಗಂಭೀರ ಗರ್ಜನೆ ಸ್ವತಃ ನಟ ಯಶ್ ಅವರ ಸ್ವಂತ ಧ್ವನಿಯಾಗಿದೆ. ಯಶ್ ಅವರ ಕಂಠಪವರ್ ಬಗ್ಗೆ ಹಿರಿಯ ನಟ ದೇವರಾಜ್ ಅವರ ಬಳಿ ಯಶ್ ಮಾತನಾಡಿದ್ದ ವಿಚಾರವನ್ನು ಪ್ರಜ್ವಲ್ ಹಂಚಿಕೊಂಡಿದ್ದಾರೆ.

ಮುಖ್ಯಾಂಶಗಳು
- ರಾಮಾಯಣದಲ್ಲಿ ರಾವಣನ ಗಂಭೀರ ಗರ್ಜನೆ
- ಹರಡಿದ ವದಂತಿಗೆ ಪ್ರಜ್ವಲ್ ದೇವರಾಜ್ ಸ್ಪಷ್ಟನೆ
- ಸೋಶಿಯಲ್ ಮೀಡಿಯಾ ಚರ್ಚೆಗೆ ಸಿಕ್ತು ಬ್ರೇಕ್
ಬಾಲಿವುಡ್‌ನ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದ ಟ್ರೇಲರ್‌ನಲ್ಲಿ ರಾವಣನ ಪಾತ್ರ ಗಮನ ಸೆಳೆದಿತ್ತು. ಯಶ್ ಅವರ ಗಂಭೀರ ಧ್ವನಿ ಕೇಳಿ ಅಭಿಮಾನಿಗಳು ಶಹಬಾಸ್ ಎಂದಿದ್ದರು. ಒಂದು ಕಡೆ ಕೇಳಿಬಂದ ರಾವಣನ ಗರ್ಜನೆ ರಾಕಿಂಗ್ ಸ್ಟಾರ್ ಯಶ್ ಅವರದ್ದಲ್ಲ, ಬದಲಾಗಿ ಸ್ಯಾಂಡಲ್‌ವುಡ್‌ನ ಪ್ರಸಿದ್ಧ ನಟ ದೇವರಾಜ್ ಅವರದ್ದು ಎಂಬ ವದಂತಿ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಡಿತ್ತು. ಇದೀಗ ಈ ಎಲ್ಲಾ ವದಂತಿಗಳಿಗೆ ನಟ ಪ್ರಜ್ವಲ್ ದೇವರಾಜ್ ಪೂರ್ಣವಿರಾಮ ಇಟ್ಟಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಪ್ರಜ್ವಲ್ ದೇವರಾಜ್, ಈ ವಿಚಾರವಾಗಿ ಸ್ಪಷ್ಟನೆ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದಿದ್ದಾರೆ. ‘ಈ ವದಂತಿ ಹರಿದಾಡುತ್ತಿದ್ದಂತೆ ನಟ ಯಶ್ ಅವರಿಗೆ ನಾನೇ ಕಾಲ್ ಮಾಡಿ ಮಾತನಾಡಿದೆ. ಆಗ ಅಪ್ಪ (ದೇವರಾಜ್) ಕೂಡ ಮಾತನಾಡಿದರು. ನಿಮ್ಮಂತಹ ಹಿರಿಯ ನಟರ ಗಂಭೀರ ಧ್ವನಿಗೆ ನನ್ನ ಧ್ವನಿಯನ್ನು ಹೋಲಿಸುತ್ತಿರುವುದು ನನಗೆ ನಿಜಕ್ಕೂ ಹೆಮ್ಮೆಯ ವಿಷಯ ಎಂದು ತಂದೆ ಬಳಿ ಯಶ್ ಹೇಳಿದರು’ ಎಂಬುದಾಗಿ ಮಾಹಿತಿ ನೀಡಿದ್ದಾರೆ ಪ್ರಜ್ವಲ್.
A few people were spreading that the Ravana voice in Ramayana was actor Devraj’s voice. But his son Prajwal Devaraj has now cleared the air it’s Yash’s own voice 🔥👑
Rumours can spread fast, but the truth speaks louder. 🎙️💥 Yash’s voice. Yash’s power. Ravana’s roar. 🦁🔥… pic.twitter.com/6UKnc1Usjs
— 𓆩♛ 𝙍𝙤𝙘𝙠𝙞𝙣𝙜 𝘼𝙨𝙝𝙪 ♛𓆪 (@Dudey212530) August 19, 2026
ಪ್ರಜ್ವಲ್ ಅವರ ಈ ಮಾತಿನ ಮೂಲಕ ಆ ಗಂಭೀರ ಧ್ವನಿ ಬೇರಾರದೂ ಅಲ್ಲ, ಸ್ವತಃ ಯಶ್ ಅವರದ್ದೇ ಎಂಬುದು ಸ್ಪಷ್ಟವಾಗಿದೆ. ತಮ್ಮದೇ ಆದ ನೈಸರ್ಗಿಕ ಹಾಗೂ ಗಂಭೀರ ಕಂಠದಿಂದ ರಾವಣನ ಪಾತ್ರಕ್ಕೆ ಯಶ್ ಜೀವ ತುಂಬಿದ್ದಾರೆ. ಯಶ್ ಅವರ ಈ ಕಂಠಪವರ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.
ಇದನ್ನೂ ಓದಿ: ವಿಶ್ವಾದ್ಯಂತ ಹವಾ ಸೃಷ್ಟಿಸಲು ‘ಟಾಕ್ಸಿಕ್’ ಇಂಗ್ಲಿಷ್ ಟ್ರೇಲರ್ ರಿಲೀಸ್: ವಿದೇಶದಲ್ಲೂ ಯಶ್ ಕ್ರೇಜ್
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ರಂದು ರಿಲೀಸ್ ಆಗಲಿದೆ. ಇನ್ನು, ‘ರಾಮಾಯಣ’ ಸಿನಿಮಾ ಈ ವರ್ಷ ದೀಪಾವಳಿಗೆ ತೆರೆಗೆ ಬರಲಿದೆ. ಎರಡೂ ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲುವು ಕಾಣುವ ನಿರೀಕ್ಷೆ ಇದೆ. ಯಶ್ ಅವರಿಗೆ 2026 ಅನ್ನೋದು ತುಂಬಾನೇ ವಿಶೇಷವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




