AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾವಣನ ಪಾತ್ರವನ್ನು ನನಗಿಂತ ಉತ್ತಮವಾಗಿ ಯಾರೂ ಅಭಿನಯಿಸಲು ಸಾಧ್ಯವಿಲ್ಲ’; ಯಶ್

ದೇಶದ ಜನಪ್ರಿಯ 'ಆಪ್ ಕಿ ಅದಾಲತ್' ಶೋಗೆ ಭೇಟಿ ನೀಡಿದ ಮೊದಲ ಕನ್ನಡಿಗ ಎಂಬ ಹೆಗ್ಗಳಿಕೆಗೆ ರಾಕಿಂಗ್ ಸ್ಟಾರ್ ಯಶ್ ಭಾಜನರಾಗಿದ್ದಾರೆ. ಈ ವೇದಿಕೆಯಲ್ಲಿ 'ರಾಮಾಯಣ' ಸಿನಿಮಾದಲ್ಲಿ ಶ್ರೀರಾಮನ ಬದಲು ರಾವಣನ ಪಾತ್ರವನ್ನೇ ಯಾಕೆ ಆಯ್ಕೆ ಮಾಡಿಕೊಂಡರು ಎಂಬ ಬಗ್ಗೆ ಯಶ್ ಖಡಕ್ ಸ್ಪಷ್ಟನೆ ನೀಡಿದ್ದಾರೆ.

‘ರಾವಣನ ಪಾತ್ರವನ್ನು ನನಗಿಂತ ಉತ್ತಮವಾಗಿ ಯಾರೂ ಅಭಿನಯಿಸಲು ಸಾಧ್ಯವಿಲ್ಲ’; ಯಶ್
ಯಶ್
ರಾಜೇಶ್ ದುಗ್ಗುಮನೆ
|

Updated on: Aug 15, 2026 | 9:08 AM

Share

ಮುಖ್ಯಾಂಶಗಳು

  • 'ಆಪ್ ಕಿ ಅದಾಲತ್' ಕಟಾಂಜನದಲ್ಲಿದ್ದ ಮೊದಲ ಕನ್ನಡಿಗ ಯಶ್
  • 'ರಾಮಾಯಣ'ದಲ್ಲಿ ಶ್ರೀರಾಮನಿಗಿಂತ ರಾವಣನ ಪಾತ್ರವೇ ಯಾಕೆ?
  • ರಜತ್ ಶರ್ಮಾ ಅಂಗಳದಲ್ಲಿ ರಾಕಿ ಭಾಯ್ ಮಾಸ್ ಉತ್ತರ!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದಲ್ಲಿ ಅವರು ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಇನ್ನು, ಅವರ ನಟನೆಯ ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ರಂದು ರಿಲೀಸ್ ಆಗುತ್ತಿದೆ. ಈ ವೇಳೆ ಅವರು ದೇಶದ ಅತ್ಯಂತ ಜನಪ್ರಿಯ ಟಿವಿ ಶೋ ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಈ ಮೂಲಕ ಶೋಗೆ ಬಂದ ಮೊದಲ ಕನ್ನಡದ ನಟ ಎಂಬ ಹೆಗ್ಗಳಿಕೆಗೆ ಯಶ್ ಪಾತ್ರರಾಗಿದ್ದಾರೆ. ಈ ಶೋನಲ್ಲಿ ಹಿರಿಯ ಪತ್ರಕರ್ತ ರಜತ್ ಶರ್ಮಾ ಅವರ ಖಡಕ್ ಪ್ರಶ್ನೆಗಳಿಗೆ ಉತ್ತರಿಸಿದ ಯಶ್ (Yash) , ಶ್ರೀರಾಮನ ಪಾತ್ರ ಮಾಡುವ ಬದಲು ರಾವಣನ ಪಾತ್ರವನ್ನೇ ಯಾಕೆ ಆಯ್ಕೆ ಮಾಡಿಕೊಂಡರು ಎಂಬ ಕುತೂಹಲಕ್ಕೆ ಸ್ಪಷ್ಟನೆ ನೀಡಿದ್ದಾರೆ.

‘ನೀವು ನಿರ್ಮಾಪಕರಾಗಿದ್ದೀರಿ. ರಾಮನ ಪಾತ್ರವನ್ನೆ ನೀವು ಆಯ್ಕೆ ಮಾಡಿಕೊಳ್ಳಬಹುದಿತ್ತಲ್ಲ’ ಎಂದು ರಜತ್ ಶರ್ಮ ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರಿಸದ ಅವರು, ‘ಶ್ರೀರಾಮನ ಒಳ್ಳೆಯತನ ಮತ್ತು ಮಹತ್ವವನ್ನು ಎತ್ತಿ ತೋರಿಸಬೇಕಾದರೆ ರಾವಣನ ಶಕ್ತಿ ಹಾಗೂ ಕೆಟ್ಟತನವೂ ಅಷ್ಟೇ ಪ್ರಬಲವಾಗಿರಬೇಕು’ ಎಂದು ಯಶ್ ವಿವರಿಸಿದ್ದಾರೆ.

‘ರಾಮಾಯಣದ ಕಥೆಯಲ್ಲಿ ರಾವಣನಿಗೆ ಸಾವು ಇಲ್ಲವೇ ಇಲ್ಲ, ಆತನ ಬಳಿ ಬ್ರಹ್ಮಾಂಡದ ವರಗಳ ಬಲವಿದೆ ಮತ್ತು ಯಾರಿಂದಲೂ ಸೋಲಿಸಲು ಸಾಧ್ಯವಿಲ್ಲ ಎನ್ನುವಂತಹ ಸನ್ನಿವೇಶ ಸೃಷ್ಟಿಯಾದಾಗ ಮಾತ್ರ, ಪ್ರಭು ಶ್ರೀರಾಮ ಆತನನ್ನು ಸಂಹರಿಸುವ ಕ್ಷಣಕ್ಕೆ ನಿಜವಾದ ಮಹತ್ವ ಮತ್ತು ರೋಮಾಂಚನ ಸಿಗುತ್ತದೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ‘ನಾನು ಆ ಹಾಡಲ್ಲಿ ಕಿಸ್ ಕೂಡ ಮಾಡಿಲ್ಲ, ಅದು ಅಶ್ಲೀಲವಲ್ಲ’; ‘ತಬಾಹಿ’ ಟೀಕೆಗೆ ಯಶ್ ಉತ್ತರ

ಈ ಸಿನಿಮಾದ ಸಹ-ನಿರ್ಮಾಪಕರೂ ಆಗಿರುವ ಯಶ್, ‘ಚಿತ್ರದಲ್ಲಿ ರಾವಣನ ಪಾತ್ರವನ್ನು ನನಗಿಂತ ಉತ್ತಮವಾಗಿ ಯಾರೂ ಅಭಿನಯಿಸಲು ಸಾಧ್ಯವಿಲ್ಲ ಎಂಬ ನಂಬಿಕೆ ನನಗಿದೆ. ನಾವು ನಮ್ಮ ಅಹಂ ಪಕ್ಕಕ್ಕಿಟ್ಟು ಇಡೀ ಸಿನಿಮಾದ ಒಳ್ಳೆಯತನಕ್ಕಾಗಿ ಹಾಗೂ ಶ್ರೀರಾಮನ ಪಾತ್ರದ ಪ್ರಭಾವ ಹೆಚ್ಚಿಸಲು ಈ ನಿರ್ಧಾರ ತಳೆದಿದ್ದೇವೆ’ ಎಂದು ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಹಿರಿಯ ನಟ ರಮೇಶ್ ಭಟ್ ಈಗ ಹೇಗಿದ್ದಾರೆ ನೋಡಿ
ಹಿರಿಯ ನಟ ರಮೇಶ್ ಭಟ್ ಈಗ ಹೇಗಿದ್ದಾರೆ ನೋಡಿ
ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧೀಜಿ ಸಮಾಧಿಗೆ ಪ್ರಧಾನಿ ಮೋದಿ ಪುಷ್ಪ ನಮನ
ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧೀಜಿ ಸಮಾಧಿಗೆ ಪ್ರಧಾನಿ ಮೋದಿ ಪುಷ್ಪ ನಮನ
Live: ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ
Live: ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ
ರಾಜ್ಯದಲ್ಲಿ ಗುಟ್ಕಾ, ಪಾನ್ ಮಸಾಲಾ ನಿಷೇಧ ನಿರ್ಧಾರ ನಮ್ಮದಲ್ಲ, FSSAI ಸೂಚನೆ
ರಾಜ್ಯದಲ್ಲಿ ಗುಟ್ಕಾ, ಪಾನ್ ಮಸಾಲಾ ನಿಷೇಧ ನಿರ್ಧಾರ ನಮ್ಮದಲ್ಲ, FSSAI ಸೂಚನೆ
ಇಂದು ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು ಶ್ರಾವಣ ಶನಿವಾರ
ಇಂದು ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು ಶ್ರಾವಣ ಶನಿವಾರ
ಇಷ್ಟು ಕೀಳು ಹೇಳಿಕೆ ನೀಡೋದಾ?; ರಾಹುಲ್ ವಿರುದ್ಧ ರಾಜನಾಥ್ ಸಿಂಗ್ ವಾಗ್ದಾಳಿ
ಇಷ್ಟು ಕೀಳು ಹೇಳಿಕೆ ನೀಡೋದಾ?; ರಾಹುಲ್ ವಿರುದ್ಧ ರಾಜನಾಥ್ ಸಿಂಗ್ ವಾಗ್ದಾಳಿ
ಚಿತ್ರದುರ್ಗದ ಮಂಕಿಮ್ಯಾನ್ ಜ್ಯೋತಿರಾಜ್​​ಗೆ ಮದುವೆ ಫಿಕ್ಸ್: ಹುಡುಗಿ ಯಾರು?
ಚಿತ್ರದುರ್ಗದ ಮಂಕಿಮ್ಯಾನ್ ಜ್ಯೋತಿರಾಜ್​​ಗೆ ಮದುವೆ ಫಿಕ್ಸ್: ಹುಡುಗಿ ಯಾರು?
ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಕೇಸ್: ಪೊಲೀಸರ ವಿರುದ್ಧದ ತನಿಖೆ ಕ್ಲೋಸ್
ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಕೇಸ್: ಪೊಲೀಸರ ವಿರುದ್ಧದ ತನಿಖೆ ಕ್ಲೋಸ್
ಭಯೋತ್ಪಾದಕರಿಗೆ ಆಪರೇಷನ್ ಸಿಂಧೂರ್ ಪ್ರಬಲ ಸಂದೇಶ ರವಾನಿಸಿದೆ; ರಾಷ್ಟ್ರಪತಿ
ಭಯೋತ್ಪಾದಕರಿಗೆ ಆಪರೇಷನ್ ಸಿಂಧೂರ್ ಪ್ರಬಲ ಸಂದೇಶ ರವಾನಿಸಿದೆ; ರಾಷ್ಟ್ರಪತಿ
'ಜಮ್ಮು ಕಾಶ್ಮೀರ, ಲಡಾಖ್​ ಭಾರತದ ಅವಿಭಾಜ್ಯ ಅಂಗ'; ವಿದೇಶಾಂಗ ಸಚಿವಾಲಯ
'ಜಮ್ಮು ಕಾಶ್ಮೀರ, ಲಡಾಖ್​ ಭಾರತದ ಅವಿಭಾಜ್ಯ ಅಂಗ'; ವಿದೇಶಾಂಗ ಸಚಿವಾಲಯ