AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪ್ಯಾರಡೈಸ್’ ಭರ್ಜರಿ ಗಳಿಕೆ; ನೆಗೆಟಿವ್ ರಿವ್ಯೂ ಮಧ್ಯೆಯೂ ಭಾರೀ ಕಲೆಕ್ಷನ್

ಭಾರಿ ಹೈಪ್ ಸೃಷ್ಟಿಸಿದ್ದ ‘ಪ್ಯಾರಡೈಸ್’ ಸಿನಿಮಾ ನೆಗೆಟಿವ್ ವಿಮರ್ಶೆಗಳ ಮಧ್ಯೆಯೂ ಮೊದಲ ದಿನ ವಿಶ್ವದಾದ್ಯಂತ 74.90 ಕೋಟಿ ಗ್ರೋಸ್ ಗಳಿಕೆ ಮಾಡಿದೆ. ಭಾರತದಲ್ಲೇ 34.65 ಕೋಟಿ ನೆಟ್ ಕಲೆಕ್ಷನ್ ಸಂಗ್ರಹವಾಗಿದ್ದರೂ, ಪ್ರೇಕ್ಷಕರಿಂದ ಸಿಗುತ್ತಿರುವ ಕಳಪೆ ಪ್ರತಿಕ್ರಿಯೆಯಿಂದಾಗಿ ಮುಂಬರುವ ದಿನಗಳಲ್ಲಿ ಬಾಕ್ಸ್ ಆಫೀಸ್ ಗಳಿಕೆ ಭಾರಿ ಪ್ರಮಾಣದಲ್ಲಿ ಕುಸಿಯುವ ನಿರೀಕ್ಷೆಯಿದೆ.

‘ಪ್ಯಾರಡೈಸ್’ ಭರ್ಜರಿ ಗಳಿಕೆ; ನೆಗೆಟಿವ್ ರಿವ್ಯೂ ಮಧ್ಯೆಯೂ ಭಾರೀ ಕಲೆಕ್ಷನ್
ಪ್ಯಾರಡೈಸ್ ಸಿನಿಮಾ Image Credit source: Paradise Movie
ರಾಜೇಶ್ ದುಗ್ಗುಮನೆ
|

Updated on:Sep 25, 2026 | 8:50 AM

Share

ಮುಖ್ಯಾಂಶಗಳು

  • ನೆಗೆಟಿವ್ ಟಾಕ್ ಮಧ್ಯೆಯೂ ಕಲೆಕ್ಷನ್ ಧಮಾಕಾ
  • ಮೊದಲ ದಿನ ‘ಪ್ಯಾರಡೈಸ್’ ಗಳಿಸಿದ್ದೆಷ್ಟು?
  • ಹೈಪ್‌ನಿಂದ ಬಾಕ್ಸ್ ಆಫೀಸ್‌ಗೆ ಸಿಕ್ಕಿತು ಭರ್ಜರಿ ಬೂಸ್ಟ್

‘ಪ್ಯಾರಡೈಸ್’ ಸಿನಿಮಾಗೆ ಮೊದಲ ದಿನದಿಂದಲೇ ತೀರಾ ನೆಗೆಟಿವ್ ವಿಮರ್ಶೆಗಳು ಹರಿದುಬರುತ್ತಿವೆ. ಭಾರಿ ಹೈಪ್‌ನಿಂದಾಗಿ ‘ಪ್ಯಾರಡೈಸ್’ ಸಿನಿಮಾ ಮೊದಲ ದಿನ ಬಾಕ್ಸ್ ಆಫೀಸ್‌ನಲ್ಲಿ ಬಂಪರ್ ಗಳಿಕೆ ಮಾಡಿದೆ. ಆದರೆ, ಚಿತ್ರಕ್ಕೆ ಸಿಗುತ್ತಿರುವ ಬ್ಯಾಡ್ ಟಾಕ್‌ನಿಂದಾಗಿ ಮುಂದಿನ ದಿನಗಳಲ್ಲಿ ಕಲೆಕ್ಷನ್ ಭಾರಿ ಪ್ರಮಾಣದಲ್ಲಿ ಕುಸಿಯುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.

ಹೈಪ್ ಕೊಟ್ಟ ಪುಶ್: ಮೊದಲ ದಿನದ ಗಳಿಕೆ ಎಷ್ಟು?

ಬಿಡುಗಡೆಗೂ ಮುನ್ನ ಸೃಷ್ಟಿಯಾಗಿದ್ದ ಅಪಾರ ನಿರೀಕ್ಷೆಯಿಂದಾಗಿ ‘ಪ್ಯಾರಡೈಸ್’ ಸಿನಿಮಾಗೆ ಆರಂಭಿಕ ದಿನದಂದು ಪ್ರೇಕ್ಷಕರು ಹರಿದುಬಂದಿದ್ದಾರೆ. ದೇಶಾದ್ಯಂತ ಒಟ್ಟು 9,732 ಪ್ರದರ್ಶನಗಳನ್ನು ಕಂಡಿರುವ ಈ ಸಿನಿಮಾ, ಭಾರತದಲ್ಲಿ ಮೊದಲ ದಿನ ₹34.65 ಕೋಟಿ ನೆಟ್ ಕಲೆಕ್ಷನ್ ಮಾಡಿದೆ. ಇದರೊಂದಿಗೆ ಭಾರತದಲ್ಲಿ ಚಿತ್ರದ ಒಟ್ಟು ಗ್ರಾಸ್ ಗಳಿಕೆ 54.90 ಕೋಟಿ ತಲುಪಿದ್ದರೆ, ಒಟ್ಟು ನೆಟ್ ಸಂಗ್ರಹ 46.25 ಕೋಟಿಗೆ ತಲುಪಿದೆ.

ವಿದೇಶಗಳಲ್ಲೂ ಭರ್ಜರಿ ಓಪನಿಂಗ್, ವಿಶ್ವದಾದ್ಯಂತ 74.90 ಕೋಟಿ

ಕೇವಲ ಭಾರತದಲ್ಲಷ್ಟೇ ಅಲ್ಲದೆ, ವಿದೇಶಗಳಲ್ಲೂ ಈ ಚಿತ್ರಕ್ಕೆ ಆರಂಭಿಕ ಹೈಪ್ ಲಾಭ ತಂದುಕೊಟ್ಟಿದೆ. ಓವರ್‌ಸೀಸ್ ಮಾರುಕಟ್ಟೆಯಲ್ಲಿ ಸಿನಿಮಾ 20.00 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ. ಇದರೊಂದಿಗೆ ‘ಪ್ಯಾರಡೈಸ್’ ಚಿತ್ರದ ಮೊದಲ ದಿನದ ವಿಶ್ವದಾದ್ಯಂತ ಒಟ್ಟು ಗ್ರಾಸ್ ಗಳಿಕೆ 74.90 ಕೋಟಿ ರೂಪಾಯಿ ದಾಟಿದೆ.

ಇದನ್ನೂ ಓದಿ: ‘ಪ್ಯಾರಡೈಸ್’ ವಿಮರ್ಶೆ; ಅಸ್ಮಿತೆಯ ಹೋರಾಟದಲ್ಲಿ ನರಕದ ಅನುಭವ

ಮುಂದೆ ಇದೆಯಾ ಭಾರಿ ಕುಸಿತ?

ಮೊದಲ ದಿನ ಅಡ್ವಾನ್ಸ್ ಬುಕಿಂಗ್ ಹಾಗೂ ಹೈಪ್‌ನಿಂದಾಗಿ ಚಿತ್ರ ಭರ್ಜರಿ ಆರಂಭ ಪಡೆದುಕೊಂಡಿದೆಯಾದರೂ, ಪ್ರೇಕ್ಷಕರು ಮತ್ತು ವಿಮರ್ಶಕರಿಂದ ತೀರಾ ಕಳಪೆ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾ ನೋಡಿದವರಿಂದ ನೆಗೆಟಿವ್ ಟಾಕ್ ಹರಡುತ್ತಿರುವುದರಿಂದ, ವಾರಾಂತ್ಯದ ನಂತರ ಬಾಕ್ಸ್ ಆಫೀಸ್‌ನಲ್ಲಿ ಚಿತ್ರದ ಕಲೆಕ್ಷನ್ ಭಾರಿ ಮಟ್ಟದಲ್ಲಿ ಡೌನ್ ಆಗುವ ಸಾಧ್ಯತೆ ದಟ್ಟವಾಗಿದೆ. ಮುಂಬರುವ ದಿನಗಳಲ್ಲಿ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಹೇಗೆ ನಿಲ್ಲಲಿದೆ ಎಂಬುದನ್ನು ಕಾದುನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:48 am, Fri, 25 September 26

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಮುಖ್ಯರಸ್ತೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಕ್ಲಿನಿಕ್‌ಗೆ 15 ಸಾವಿರ ರೂ.ದಂಡ
ಮುಖ್ಯರಸ್ತೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಕ್ಲಿನಿಕ್‌ಗೆ 15 ಸಾವಿರ ರೂ.ದಂಡ
ಹನಿಟ್ರ್ಯಾಪ್ ವಿಡಿಯೋ ಭೀತಿ: ಮಾಧ್ಯಮಗಳ ವಿರುದ್ಧ ಮಾಜಿ ಸಿಎಂ ನಿರ್ಬಂಧಕಾಜ್ಞೆ
ಹನಿಟ್ರ್ಯಾಪ್ ವಿಡಿಯೋ ಭೀತಿ: ಮಾಧ್ಯಮಗಳ ವಿರುದ್ಧ ಮಾಜಿ ಸಿಎಂ ನಿರ್ಬಂಧಕಾಜ್ಞೆ
ಸೌಜನ್ಯ ಪ್ರಕರಣ ಮರು ತನಿಖೆ ಬಗ್ಗೆ ಎಸ್​​ಐಟಿಯಿಂದ ಹೈವೋಲ್ಟೇಜ್ ಸಭೆ
ಸೌಜನ್ಯ ಪ್ರಕರಣ ಮರು ತನಿಖೆ ಬಗ್ಗೆ ಎಸ್​​ಐಟಿಯಿಂದ ಹೈವೋಲ್ಟೇಜ್ ಸಭೆ
ಗಗನ್ ಬಳಿ ಕ್ಷಮೆ ಕೇಳಿದ ಗಾನವಿ, ಇಬ್ಬರ ನಡುವೆ ಭಾವುಕ ಚರ್ಚೆ: ವಿಡಿಯೋ
ಗಗನ್ ಬಳಿ ಕ್ಷಮೆ ಕೇಳಿದ ಗಾನವಿ, ಇಬ್ಬರ ನಡುವೆ ಭಾವುಕ ಚರ್ಚೆ: ವಿಡಿಯೋ
ಸುದೀಪ್ ಅನ್ನೇ ಎಳೆದಾಡಲು ಅಭಿಮಾನಿಗಳು: ವಿಡಿಯೋ ನೋಡಿ
ಸುದೀಪ್ ಅನ್ನೇ ಎಳೆದಾಡಲು ಅಭಿಮಾನಿಗಳು: ವಿಡಿಯೋ ನೋಡಿ
ಗಮನಸೆಳೆದ ಮೈ ಹೋಮ್ ವ್ಯೋಮ: ಅಪಾರ್ಟ್​​​ಮೆಂಟ್​​ ಖರೀದಿಗೆ ಮುಗಿಬಿದ್ದ ಜನ
ಗಮನಸೆಳೆದ ಮೈ ಹೋಮ್ ವ್ಯೋಮ: ಅಪಾರ್ಟ್​​​ಮೆಂಟ್​​ ಖರೀದಿಗೆ ಮುಗಿಬಿದ್ದ ಜನ
ತುಮಕೂರು ಯುವ ದಸರಾ: ಮಕ್ಕಳ ಪ್ರತಿಭೆಗೆ ಅದ್ದೂರಿ ವೇದಿಕೆ
ತುಮಕೂರು ಯುವ ದಸರಾ: ಮಕ್ಕಳ ಪ್ರತಿಭೆಗೆ ಅದ್ದೂರಿ ವೇದಿಕೆ
ಹಾಸನಾಂಬೆ ಉತ್ಸವದಲ್ಲಿ ಕೋಟಿ ಕೋಟಿ ಅವ್ಯವಹಾರ ಆರೋಪ
ಹಾಸನಾಂಬೆ ಉತ್ಸವದಲ್ಲಿ ಕೋಟಿ ಕೋಟಿ ಅವ್ಯವಹಾರ ಆರೋಪ
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಹಿರಿಯ IPS ಅಧಿಕಾರಿ ಎಸ್.ರವಿ ರಾಜೀನಾಮೆ: ಕಾರಣ ಇಲ್ಲಿದೆ
ಹಿರಿಯ IPS ಅಧಿಕಾರಿ ಎಸ್.ರವಿ ರಾಜೀನಾಮೆ: ಕಾರಣ ಇಲ್ಲಿದೆ