AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ತಿ ಕೈತಪ್ಪುವ ಭೀತಿಯಿಂದ ತಂದೆಯನ್ನೇ ಮುಗಿಸಿದ ಮಗ: ಕಾನ್ಪುರದ ಉದ್ಯಮಿ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಕಾನ್ಪುರದ ಔಷಧ ಉದ್ಯಮಿ ವಿನೀತ್ ಮನೋಚಾ ಹತ್ಯೆ ಪ್ರಕರಣದಲ್ಲಿ ಆಘಾತಕಾರಿ ತಿರುವು ಸಿಕ್ಕಿದೆ. ಆಸ್ತಿ ಕೈತಪ್ಪುವ ಭೀತಿ ಹಾಗೂ ಸಾಲದ ಸುಳಿಗೆ ಸಿಲುಕಿದ್ದ ಮಗ ಸುಬ್ರತ್, ತಂದೆಯನ್ನು ಕೊಲ್ಲಲು 6 ಲಕ್ಷ ರೂ. ಸುಪಾರಿ ನೀಡಿದ್ದ. ಡಿಜಿಟಲ್ ಪುರಾವೆಗಳಿಂದ ಈ ಸತ್ಯ ಬಯಲಾಗಿದ್ದು, ಮಗನ ಸಂಚು, ಪತ್ನಿಯನ್ನು ಸಿಕ್ಕಿಹಾಕಿಸುವ ಪ್ರಯತ್ನ ವಿಫಲವಾಗಿದೆ. ಪೊಲೀಸರು ಆರೋಪಿ ಮಗನನ್ನು ಬಂಧಿಸಿದ್ದಾರೆ.

ಆಸ್ತಿ ಕೈತಪ್ಪುವ ಭೀತಿಯಿಂದ ತಂದೆಯನ್ನೇ ಮುಗಿಸಿದ ಮಗ: ಕಾನ್ಪುರದ ಉದ್ಯಮಿ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ವಿನೀತ್ Image Credit source: NDTV
ನಯನಾ ರಾಜೀವ್
|

Updated on: Sep 25, 2026 | 10:02 AM

Share

ಕಾನ್ಪುರ, ಸೆಪ್ಟೆಂಬರ್ 25: ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಔಷಧ ವ್ಯಾಪಾರಿ ವಿನೀತ್ ಮನೋಚಾ (60) ಅವರ ಬರ್ಬರ ಹತ್ಯೆ ಪ್ರಕರಣಕ್ಕೆ ದಿಢೀರ್ ತಿರುವು ಸಿಕ್ಕಿದ್ದು, ಸ್ವತಃ ಮಗನೇ ತಂದೆಯನ್ನು ಮುಗಿಸಲು 6 ಲಕ್ಷ ರೂ. ಸುಪಾರಿ ನೀಡಿರುವುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಆಸ್ತಿ ಬೇರೆ ಮಹಿಳೆಯ ಪಾಲಾಗಬಹುದೆಂಬ ಭಯ ಮತ್ತು ಸಾಲದ ಸುಳಿಗೆ ಸಿಲುಕಿದ್ದ ಮಗ ಸುಬ್ರತ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಸೆಪ್ಟೆಂಬರ್ 5 ರಂದು ಕಾನ್ಪುರದ ಇಂದಿರಾ ನಗರದಲ್ಲಿರುವ ಸ್ವಂತ ಫ್ಲಾಟ್‌ನಲ್ಲಿ ವಿನೀತ್ ಅವರ ಶವ ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಹತ್ಯೆ ನಡೆದ ದಿನ ಮಗ ಸುಬ್ರತ್ ತನ್ನ ಪತ್ನಿ ಶಾಲು ಜೊತೆ ಪಾರ್ಟಿಗೆ ಹೋಗಿ ತನಗೆ ಏನೂ ತಿಳಿಯದಂತೆ ನಾಟಕವಾಡಿದ್ದ. ಆರಂಭದಲ್ಲಿ ಪೊಲೀಸರು ವಿನೀತ್ ಅವರ ಸೊಸೆ ಶಾಲು ಹಾಗೂ ಮಾಜಿ ಉದ್ಯೋಗಿ ವಿಶಾಲ್ ಗೌತಮ್ ಮತ್ತು ಆತನ ಸಹಚರ ರಾಜ್‌ಕಿಶೋರ್‌ನನ್ನು ಬಂಧಿಸಿದ್ದರು. ಆದರೆ, ಕರೆ ದಾಖಲೆಗಳು (CDR) ಮತ್ತು ವೈಜ್ಞಾನಿಕ ಪುರಾವೆಗಳನ್ನು ಬೆನ್ನಟ್ಟಿದ ಪೊಲೀಸರಿಗೆ ಅಸಲಿ ಸೂತ್ರಧಾರ ಮಗನೇ ಎಂಬುದು ಖಚಿತವಾಯಿತು.

ಕೊಲೆಗೆ ಕಾರಣವೇನು?

ವಿಚಾರಣೆ ವೇಳೆ ಸುಬ್ರತ್ ತಪ್ಪೊಪ್ಪಿಕೊಂಡಿದ್ದು, ಆಘಾತಕಾರಿ ಮಾಹಿತಿ ಹೊರಹಾಕಿದ್ದಾನೆ. ತಂದೆಗೆ ಹಲವು ಮಹಿಳೆಯರೊಂದಿಗೆ ನಂಟು ಇದ್ದು, ಅವರು ಬೇರೊಬ್ಬ ಮಹಿಳೆಯೊಂದಿಗೆ ವಾಸಿಸಲು ಹೋಗಿ ಇಡೀ ಆಸ್ತಿಯನ್ನು ಆಕೆಯ ಹೆಸರಿಗೆ ಬರೆದುಕೊಡಬಹುದೆಂದು ಹೆದರಿದ್ದ. ತಂದೆ ತಿಂಗಳಿಗೆ 40,000 ರೂ. ಖರ್ಚಿಗೆ ಕೊಡುತ್ತಿದ್ದರೂ, ಸುಬ್ರತ್ ಮಾಡಿಕೊಂಡಿದ್ದ ಸಾಲದ ಇಎಂಐ (EMI) ಕಂತುಗಳೇ ತಿಂಗಳಿಗೆ 55 ಸಾವಿರ ರೂ. ಇತ್ತು. ಹೀಗಾಗಿ ತಂದೆಯನ್ನು ಮುಗಿಸಿ ಆಸ್ತಿ ಕಬಳಿಸಲು ನಿರ್ಧರಿಸಿದ್ದ.

ಮತ್ತಷ್ಟು ಓದಿ:

ಉತ್ತರ ಪ್ರದೇಶದಲ್ಲಿ ಭೀಕರ ಘಟನೆ; ಶಾಲಾ ಮಕ್ಕಳ ಕಣ್ಣೆದುರೇ ಶಿಕ್ಷಕಿಗೆ ಗುಂಡಿಕ್ಕಿ ಹತ್ಯೆ, ಆರೋಪಿಯೂ ಆತ್ಮಹತ್ಯೆ!

ಹೆಂಡತಿಯ ಮೇಲೆ ಗೂಬೆ ಕೂರಿಸಲು ಸಂಚು

ತನ್ನ ಮಾಜಿ ಉದ್ಯೋಗಿ ವಿಶಾಲ್‌ಗೆ 6 ಲಕ್ಷ ರೂ. ನೀಡುವುದಾಗಿ ಹೇಳಿ ತಂದೆಯ ಹತ್ಯೆಗೆ ಸುಪಾರಿ ಕೊಟ್ಟಿದ್ದ ಸುಬ್ರತ್, ಪೊಲೀಸರಿಗೆ ಸಿಕ್ಕಿಬಿದ್ದರೆ ತನ್ನ ಪತ್ನಿ ಶಾಲು ಅವರ ಹೆಸರನ್ನೇ ಹೇಳುವಂತೆ ತಾಕೀತು ಮಾಡಿದ್ದ. ಕೊಲೆಗೆ ಎರಡು ದಿನ ಮೊದಲು ಖರೀದಿಸಿದ್ದ ಹೊಸ ಸಿಮ್ ಕಾರ್ಡ್‌ನಿಂದ ವಿಶಾಲ್ ಮತ್ತು ಸುಬ್ರತ್ ನಡುವೆ 6 ಬಾರಿ ಕರೆಗಳು ಹೋಗಿದ್ದವು. ಇಬ್ಬರ ಮೊಬೈಲ್ ಲೊಕೇಶನ್‌ಗಳು ಮತ್ತು ಡಿಲೀಟ್ ಆಗಿದ್ದ ಚಾಟ್‌ಗಳನ್ನು ಸೈಬರ್ ಪೊಲೀಸರು ರಿಕವರ್ ಮಾಡಿದಾಗ ಸಂಚು ಪೂರ್ಣವಾಗಿ ಬಯಲಾಯಿತು ಎಂದು ಪೊಲೀಸ್ ಆಯುಕ್ತ ರಘುಬೀರ್ ಲಾಲ್ ತಿಳಿಸಿದ್ದಾರೆ.

ಪತ್ನಿಗೆ ಕ್ಲೀನ್ ಚಿಟ್ ಇಲ್ಲ: ಪತಿಯ ಸಂಚಿನಿಂದಾಗಿ ಆರಂಭದಲ್ಲೇ ಬಂಧನಕ್ಕೊಳಗಾಗಿದ್ದ ಪತ್ನಿ ಶಾಲು ಈ ಹತ್ಯೆಯಲ್ಲಿ ಪಾತ್ರವಿಲ್ಲ ಎಂದು ಹೇಳಿಕೊಂಡಿದ್ದರೂ, ಆಕೆಗೆ ಈ ಹತ್ಯೆಯ ಸಂಚು ಮೊದಲೇ ತಿಳಿದಿತ್ತೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಆಕೆಗೆ ಇನ್ನೂ ಕ್ಲೀನ್ ಚಿಟ್ ನೀಡಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಫೋರೆನ್ಸಿಕ್ ಮತ್ತು ಡಿಜಿಟಲ್ ಸಾಕ್ಷ್ಯ: ಆರೋಪಿಗಳು ಹತ್ಯೆಯನ್ನು ಸಹಜ ಸಾವು ಅಥವಾ ಆಕಸ್ಮಿಕವೆಂದು ಬಿಂಬಿಸಲು ಮೊದಲು ಯತ್ನಿಸಿದ್ದರು. ಆದರೆ ವಿಧಿವಿಜ್ಞಾನ ಪರೀಕ್ಷೆ ಮತ್ತು ಸಿಸಿಟಿವಿ ಕ್ಯಾಮೆರಾಗಳ ನಿಖರ ಪರಿಶೀಲನೆಯು ಕೃತ್ಯವನ್ನು ಬಯಲಿಗೆಳೆಯಲು ನೆರವಾಯಿತು.

ಕಾನೂನು ಕ್ರಮ: ಬಂಧಿತ ಸುಬ್ರತ್ ಮತ್ತು ಆತನ ಸಹಚರರ ವಿರುದ್ಧ ಐಪಿಸಿ/ಬಿಎನ್‌ಎಸ್‌ನ ಗಂಭೀರ ಕೊಲೆ (Murder) ಮತ್ತು ಸುಪಾರಿ ಹತ್ಯೆಯ ಪಿತೂರಿ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ವೀಕೆಂಡ್ ಎಪಿಸೋಡ್​ನಲ್ಲಿ ಮತ್ತಿಬ್ಬರು ಹೊರ ಹೋಗ್ತಾರೆ; ಬಿಗ್ ಬಾಸ್ ಸೂಚನೆ
ವೀಕೆಂಡ್ ಎಪಿಸೋಡ್​ನಲ್ಲಿ ಮತ್ತಿಬ್ಬರು ಹೊರ ಹೋಗ್ತಾರೆ; ಬಿಗ್ ಬಾಸ್ ಸೂಚನೆ
ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ನೀರಿನ ಸಂಗ್ರಹ ತೀವ್ರ ಕುಸಿತ
ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ನೀರಿನ ಸಂಗ್ರಹ ತೀವ್ರ ಕುಸಿತ
ವಿಶ್ವಸಂಸ್ಥೆಯಲ್ಲಿ ಹಫೀಜ್ ಸಯೀದ್ ಪ್ರಶ್ನೆಗೆ ಮುಖ ತಿರುಗಿಸಿದ ಪಾಕ್ ಪಿಎಂ
ವಿಶ್ವಸಂಸ್ಥೆಯಲ್ಲಿ ಹಫೀಜ್ ಸಯೀದ್ ಪ್ರಶ್ನೆಗೆ ಮುಖ ತಿರುಗಿಸಿದ ಪಾಕ್ ಪಿಎಂ
ಬಿಜೆಪಿ ನಾಯಕಿ ಮಾಧವಿ ಲತಾಗೆ ಬಾಗಲಕೋಟೆ ಪ್ರವೇಶಕ್ಕೆ ನಿರ್ಬಂಧ
ಬಿಜೆಪಿ ನಾಯಕಿ ಮಾಧವಿ ಲತಾಗೆ ಬಾಗಲಕೋಟೆ ಪ್ರವೇಶಕ್ಕೆ ನಿರ್ಬಂಧ
ಧಾರಾಕಾರ ಮಳೆಗೆ ನಡುಗಿದ ಸಿಕ್ಕಿಂ, ರಿಂಬಿ ಗ್ರಾಮದಲ್ಲಿ ಭೂಕುಸಿತ
ಧಾರಾಕಾರ ಮಳೆಗೆ ನಡುಗಿದ ಸಿಕ್ಕಿಂ, ರಿಂಬಿ ಗ್ರಾಮದಲ್ಲಿ ಭೂಕುಸಿತ
ಇಂದು ಅನಂತ ಪದ್ಮನಾಭ ವ್ರತ ಆಚರಣೆಯಿಂದ ಐಶ್ವರ್ಯ ಮತ್ತು ಯಶಸ್ಸು ಲಭ್ಯ
ಇಂದು ಅನಂತ ಪದ್ಮನಾಭ ವ್ರತ ಆಚರಣೆಯಿಂದ ಐಶ್ವರ್ಯ ಮತ್ತು ಯಶಸ್ಸು ಲಭ್ಯ
ಚಿತ್ರದುರ್ಗ ಎಸ್ಪಿ ವಿರುದ್ಧ ಶಾಸಕ ವೀರೇಂದ್ರ ಪಪ್ಪಿ ಕೆಂಡಾಮಂಡಲ
ಚಿತ್ರದುರ್ಗ ಎಸ್ಪಿ ವಿರುದ್ಧ ಶಾಸಕ ವೀರೇಂದ್ರ ಪಪ್ಪಿ ಕೆಂಡಾಮಂಡಲ
ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್
ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್
ಬರದಿಂದ ನಲುಗಿದ ರೈತರಿಗೆ ಗುಡ್ ನ್ಯೂಸ್:ಬರ ಪರಿಹಾರ ಘೋಷಿಸಿದ ಸರ್ಕಾರ
ಬರದಿಂದ ನಲುಗಿದ ರೈತರಿಗೆ ಗುಡ್ ನ್ಯೂಸ್:ಬರ ಪರಿಹಾರ ಘೋಷಿಸಿದ ಸರ್ಕಾರ
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಟ್ರಂಪ್ ದಂಪತಿಯಿಂದ ಅದ್ದೂರಿ ಸ್ವಾಗತ
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಟ್ರಂಪ್ ದಂಪತಿಯಿಂದ ಅದ್ದೂರಿ ಸ್ವಾಗತ