AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup 2026: ಇಟಲಿ ಮುಂದೆ ಯುಎಇ ಪಲ್ಟಿ!

T20 World Cup 2026: ಇಟಲಿ ಮುಂದೆ ಯುಎಇ ಪಲ್ಟಿ!

ಝಾಹಿರ್ ಯೂಸುಫ್
|

Updated on: Feb 07, 2026 | 11:54 AM

Share

T20 World Cup 2026: ಇಟಲಿ ತಂಡದ ಭರ್ಜರಿ ಗೆಲುವು ಇಂಗ್ಲೆಂಡ್, ವೆಸ್ಟ್ ಇಂಡೀಸ್, ನೇಪಾಳ ಮತ್ತು ಸ್ಕಾಟ್ಲೆಂಡ್ ತಂಡಳಿಗೆ ಮುನ್ನೆಚರಿಕೆ ಎನ್ನಬಹುದು. ಏಕೆಂದರೆ ಗ್ರೂಪ್-3 ನಲ್ಲಿ ಸ್ಥಾನ ಪಡೆದಿರುವ ಇಟಲಿ ಮೊದಲ ಸುತ್ತಿನಲ್ಲಿ ಈ ತಂಡಗಳ ವಿರುದ್ಧ ಕಣಕ್ಕಿಳಿಯಲಿದೆ. ಹೀಗಾಗಿ ಈ ತಂಡಗಳ ವಿರುದ್ಧ ಕೂಡ ಇಟಲಿ ಪಡೆಯಿಂದ ಭರ್ಜರಿ ಪ್ರದರ್ಶನ ನಿರೀಕ್ಷಿಸಬಹುದು.

ಟಿ20 ವಿಶ್ವಕಪ್​ನ 15ನೇ ಅಭ್ಯಾಸ ಪಂದ್ಯದಲ್ಲಿ ಇಟಲಿ ತಂಡವು ಭರ್ಜರಿ ಜಯ ಸಾಧಿಸಿದೆ. ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್​ನಲ್ಲಿ ಸ್ಥಾನ ಪಡೆದಿರುವ ಇಟಲಿ ತಂಡವು ಯುಎಇ ತಂಡವನ್ನು ಅಭ್ಯಾಸ ಪಂದ್ಯದಲ್ಲಿ ಮಕಾಡೆ ಮಲಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಎಇ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಇಟಲಿ ತಂಡದ ಪರ ಆಂಥೊನಿ ಮೊಸ್ಕಾ 22 ಎಸೆತಗಳಲ್ಲಿ 56 ರನ್ ಸಿಡಿಸಿದರು. ಈ ಅರ್ಧಶತಕದ ನೆರವಿನೊಂದಿಗೆ ಇಟಲಿ ತಂಡವು 20 ಓವರ್​ಗಳಲ್ಲಿ 193 ರನ್ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ಯುಎಇ ತಂಡ 18.2 ಓವರ್​ಗಳಲ್ಲಿ 81 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಇಟಲಿ ತಂಡವು 112 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಇಟಲಿ ಪಡೆ ಟಿ20 ವಿಶ್ವಕಪ್​ನ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸುವ ಸೂಚನೆ ನೀಡಿದ್ದಾರೆ.

ಇತ್ತ ಇಟಲಿ ತಂಡದ ಭರ್ಜರಿ ಗೆಲುವು ಇಂಗ್ಲೆಂಡ್, ವೆಸ್ಟ್ ಇಂಡೀಸ್, ನೇಪಾಳ ಮತ್ತು ಸ್ಕಾಟ್ಲೆಂಡ್ ತಂಡಳಿಗೆ ಮುನ್ನೆಚರಿಕೆ ಎನ್ನಬಹುದು. ಏಕೆಂದರೆ ಗ್ರೂಪ್-3 ನಲ್ಲಿ ಸ್ಥಾನ ಪಡೆದಿರುವ ಇಟಲಿ ಮೊದಲ ಸುತ್ತಿನಲ್ಲಿ ಈ ತಂಡಗಳ ವಿರುದ್ಧ ಕಣಕ್ಕಿಳಿಯಲಿದೆ. ಹೀಗಾಗಿ ಈ ತಂಡಗಳ ವಿರುದ್ಧ ಕೂಡ ಇಟಲಿ ಪಡೆಯಿಂದ ಭರ್ಜರಿ ಪ್ರದರ್ಶನ ನಿರೀಕ್ಷಿಸಬಹುದು.

Follow Us
Zahir Yusuf
Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More