AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

200 ಕ್ಕಿಂತ ಕಡಿಮೆ ಮೊತ್ತಕ್ಕೆ ಮುಂಬೈ ಮತ್ತು ಕರ್ನಾಟಕ ಆಲೌಟ್

Ranji 2026: ರಣಜಿ ಟೂರ್ನಿಯು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. 32 ತಂಡಗಳಿಂದ ಶುರುವಾದ ಈ ಟೂರ್ನಿಯಲ್ಲಿ ಇದೀಗ ಉಳಿದಿರುವುದು 8 ತಂಡಗಳು ಮಾತ್ರ. ಈ ತಂಡಗಳ ನಡುವೆ ಇದೀಗ ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆಯುತ್ತಿದೆ. ಈ ಮ್ಯಾಚ್​ಗಳಲ್ಲಿ ಗೆಲ್ಲುವ ತಂಡಗಳು ಸೆಮಿಫೈನಲ್​ಗೇರಲಿದೆ.

200 ಕ್ಕಿಂತ ಕಡಿಮೆ ಮೊತ್ತಕ್ಕೆ ಮುಂಬೈ ಮತ್ತು ಕರ್ನಾಟಕ ಆಲೌಟ್
Karnataka
ಝಾಹಿರ್ ಯೂಸುಫ್
|

Updated on:Feb 07, 2026 | 12:13 PM

Share

ರಣಜಿ ಟೂರ್ನಿಯ 4ನೇ ಕ್ವಾರ್ಟರ್ ಫೈನಲ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಕರ್ನಾಟಕ ಮತ್ತು ಮುಂಬೈ ತಂಡಗಳು ಅಲ್ಪ ಮೊತ್ತಕ್ಕೆ ಕುಸಿದಿದೆ. ಮುಂಬೈನ ಶರದ್ ಪವಾರ್ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ತಂಡದ ನಾಯಕ ಶಾರ್ದೂಲ್ ಠಾಕೂರ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡವು ಕೇವಲ 120 ರನ್​ಗಳಿಗೆ ಆಲೌಟ್ ಆಗಿದ್ದರು. ಕರ್ನಾಟಕ ಪರ ವಿಧ್ವತ್ ಕಾವರೇಪ್ಪ, ಪ್ರಸಿದ್ಧ್ ಕೃಷ್ಣ ಮತ್ತು ಶ್ರೇಯಸ್ ಗೋಪಾಲ್ ತಲಾ 3 ವಿಕೆಟ್ ಕಬಳಿಸಿ ಮಿಂಚಿದ್ದರು.

ಮುಂಬೈ ಕಲೆಹಾಕಿದ 120 ರನ್​ಗಳಿಗೆ ಪ್ರತ್ಯುತ್ತವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡ ಕೂಡ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕನಾಗಿ ಕಣಕ್ಕಿಳಿದ ಕೆಎಲ್ ರಾಹುಲ್ 28 ರನ್​ಗಳಿಸಿ ವಿಕೆಟ್ ಒಪ್ಪಿಸಿದ್ದರು. ಇದರ ಬೆನ್ನಲ್ಲೇ ನಾಯಕ ದೇವದತ್ ಪಡಿಕ್ಕಲ್ (17) ಕೂಡ ಔಟಾದರು.

ಆ ಬಳಿಕ ಬಂದ ಕರುಣ್ ನಾಯರ್ ಕಲೆಹಾಕಿದ್ದು ಕೇವಲ 4 ರನ್​ಗಳು ಮಾತ್ರ. ಇದರ ಬೆನ್ನಲ್ಲೇ ಸ್ಮರಣ್ ರವಿಚಂದ್ರನ್ ಹಾಗೂ ಶ್ರೇಯಸ್ ಗೋಪಾಲ್ ಸೊನ್ನೆ ಸುತ್ತುವ ಮೂಲಕ ವಿಕೆಟ್ ಒಪ್ಪಿಸಿದರು.

ಇದಾಗ್ಯೂ ಮತ್ತೊಂದೆಡೆ ಆರಂಭಿಕನಾಗಿ ಕಣಕ್ಕಿಳಿದ ಮಯಾಂಕ್ ಅಗರ್ವಾಲ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. ಎಚ್ಚರಿಕೆಯ ಬ್ಯಾಟಿಂಗ್​ನೊಂದಿಗೆ 134 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 14 ಫೋರ್​ಗಳೊಂದಿಗೆ 92 ರನ್ ಬಾರಿಸಿದರು.

ಶತಕಕ್ಕೆ ಇನ್ನೇನು 8 ರನ್ ಬೇಕಿದ್ದಾಗ ಮಯಾಂಕ್ ಅಗರ್ವಾಲ್ 8ನೇ ವಿಕೆಟ್​ ಆಗಿ ಔಟಾದರು. ಆ ಬಳಿಕ ಬಂದ ಶಿಖರ್ ಶೆಟ್ಟಿ (4) ಪ್ರಸಿದ್ಧ್ ಕೃಷ್ಣ (0) ಔಟಾಗುವುದರೊಂದಿಗೆ ಕರ್ನಾಟಕ ತಂಡವು 173 ರನ್​ಗಳಿಗೆ ಆಲೌಟ್ ಆಗಿದೆ.

ಕರ್ನಾಟಕ ತಂಡಕ್ಕೆ ಮುನ್ನಡೆ:

ಮೊದಲ ಇನಿಂಗ್ಸ್​ನಲ್ಲಿ 173 ರನ್​ಗಳಿಗೆ ಆಲೌಟ್ ಆದರೂ ಕರ್ನಾಟಕ ತಂಡ 53 ರನ್​ಗಳ ಮುನ್ನಡೆ ಪಡೆದುಕೊಂಡಿದೆ. ಅದರಂತೆ ಇದೀಗ ಮುಂಬೈ ತಂಡವು ದ್ವಿತೀಯ ಇನಿಂಗ್ಸ್ ಆರಂಭಿಸಲಿದ್ದು, 53 ರನ್​ಗಳ ಬಳಿಕ ಮುಂಬೈ ಸ್ಕೋರ್ ಶುರುವಾಗಲಿದೆ. ಹೀಗಾಗಿ ಮೊದಲ ಇನಿಂಗ್ಸ್​ನಲ್ಲಿ ಕರ್ನಾಟಕ ಬ್ಯಾಟರ್​ಗಳು ಕಳಪೆ ಪ್ರದರ್ಶನ ನೀಡಿದರೂ ಪಂದ್ಯದಲ್ಲಿ ಅಲ್ಪ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮುಂಬೈ ಪ್ಲೇಯಿಂಗ್ 11:  ಅಖಿಲ್ ಹೆರ್ವಾಡ್ಕರ್ , ಯಶಸ್ವಿ ಜೈಸ್ವಾಲ್ , ಮುಶೀರ್ ಖಾನ್ , ತುಷಾರ್ ದೇಶಪಾಂಡೆ , ಆಕಾಶ್ ಆನಂದ್ (ವಿಕೆಟ್ ಕೀಪರ್) , ಶಾರ್ದೂಲ್ ಠಾಕೂರ್ (ನಾಯಕ) , ಸೂರ್ಯಾಂಶ್ ಶೆಡ್ಗೆ , ಸಿದ್ಧೇಶ್ ಲಾಡ್ , ಶಮ್ಸ್ ಮುಲಾನಿ , ತನುಷ್ ಕೋಟ್ಯಾನ್ , ಮೋಹಿತ್ ಅವಸ್ಥಿ.

ಇದನ್ನೂ ಓದಿ: ಟಿ20 ವಿಶ್ವಕಪ್​ಗೆ ಮೂವರಿಲ್ಲ… ಆಸ್ಟ್ರೇಲಿಯಾಗೆ ಆಘಾತದ ಮೇಲೆ ಆಘಾತ

ಕರ್ನಾಟಕ ಪ್ಲೇಯಿಂಗ್ 11: ಕೆಎಲ್ ರಾಹುಲ್ , ಮಾಯಾಂಕ್ ಅಗರ್ವಾಲ್ , ಕರುಣ್ ನಾಯರ್ , ದೇವದತ್ತ್ ಪಡಿಕ್ಕಲ್ (ನಾಯಕ) , ಶ್ರೇಯಸ್ ಗೋಪಾಲ್ , ಸ್ಮರಣ್ ರವಿಚಂದ್ರನ್ , ಕೃತಿಕ್ ಕೃಷ್ಣ (ವಿಕೆಟ್ ಕೀಪರ್) ವಿದ್ಯಾಧರ ಪಾಟೀಲ್ , ಪ್ರಸಿದ್ಧ್ ಕೃಷ್ಣ , ಶಿಖರ್ ಶೆಟ್ಟಿ ,ವಿಧ್ವತ್ ಕಾವೇರಪ್ಪ.

Published On - 12:12 pm, Sat, 7 February 26

Follow Us
‘ಬಾಸ್’ ಸಿನಿಮಾ ನೋಡಿದ ದರ್ಶನ್ ಅಭಿಮಾನಿಗಳು ಹೀಗೆಂದರಂತೆ
‘ಬಾಸ್’ ಸಿನಿಮಾ ನೋಡಿದ ದರ್ಶನ್ ಅಭಿಮಾನಿಗಳು ಹೀಗೆಂದರಂತೆ
ಕೈ ಮುಖಂಡನ ಮೇಲೆ ಗುಂಡಿನ ದಾಳಿ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಕೈ ಮುಖಂಡನ ಮೇಲೆ ಗುಂಡಿನ ದಾಳಿ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ದೆಹಲಿಯಲ್ಲಿ ಭಾರೀ ಮಳೆ; ರಸ್ತೆಯಲ್ಲಿ ನಿಂತ ನೀರಲ್ಲಿ ಈಜಾಡಿದ ಮಕ್ಕಳು
ದೆಹಲಿಯಲ್ಲಿ ಭಾರೀ ಮಳೆ; ರಸ್ತೆಯಲ್ಲಿ ನಿಂತ ನೀರಲ್ಲಿ ಈಜಾಡಿದ ಮಕ್ಕಳು
5 ಸ್ಟಾರ್ ಹೋಟೆಲ್​​ಗಳಲ್ಲಿ ಕೊಳೆತ ತರಕಾರಿ, ಮಾಂಸ ಪತ್ತೆ: ಕಠಿಣ ಕ್ರಮ
5 ಸ್ಟಾರ್ ಹೋಟೆಲ್​​ಗಳಲ್ಲಿ ಕೊಳೆತ ತರಕಾರಿ, ಮಾಂಸ ಪತ್ತೆ: ಕಠಿಣ ಕ್ರಮ
ಕಬಿನಿ ನದಿ ಪಾತ್ರದಲ್ಲಿರುವ ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಸೂಚನೆ
ಕಬಿನಿ ನದಿ ಪಾತ್ರದಲ್ಲಿರುವ ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಸೂಚನೆ
ರಸ್ತೆ ಮಧ್ಯೆ ದೊಡ್ಡ ಕಂದಕ; ಇದು 'ನರಕದ ಹಾದಿ' ಎಂದು ನೆಟ್ಟಿಗರ ಆಕ್ರೋಶ
ರಸ್ತೆ ಮಧ್ಯೆ ದೊಡ್ಡ ಕಂದಕ; ಇದು 'ನರಕದ ಹಾದಿ' ಎಂದು ನೆಟ್ಟಿಗರ ಆಕ್ರೋಶ
ದುಬಾರೆ ದುರಂತಕ್ಕೆ 2.5 ತಿಂಗಳು: ಇಂದಿಗೂ ಜಾರಿಯಾಗದ ಎಸ್‌ಒಪಿ
ದುಬಾರೆ ದುರಂತಕ್ಕೆ 2.5 ತಿಂಗಳು: ಇಂದಿಗೂ ಜಾರಿಯಾಗದ ಎಸ್‌ಒಪಿ
ಸಂಪುಟ ವಿಸ್ತರಣೆ ಬೆನ್ನಲ್ಲೇ ಇದೀಗ ಖಾತೆ ಕ್ಯಾತೆ, ದಿಲ್ಲಿಯತ್ತ ಡಿಕೆಶಿ
ಸಂಪುಟ ವಿಸ್ತರಣೆ ಬೆನ್ನಲ್ಲೇ ಇದೀಗ ಖಾತೆ ಕ್ಯಾತೆ, ದಿಲ್ಲಿಯತ್ತ ಡಿಕೆಶಿ
ಕಾರ್ಕಳದಲ್ಲಿ ವಯನಾಡು ಮಾದರಿ ದುರಂತದ ಭೀತಿ: ಗುಡ್ಡಕುಸಿತದ ಆತಂಕದಲ್ಲಿ ಜನರು
ಕಾರ್ಕಳದಲ್ಲಿ ವಯನಾಡು ಮಾದರಿ ದುರಂತದ ಭೀತಿ: ಗುಡ್ಡಕುಸಿತದ ಆತಂಕದಲ್ಲಿ ಜನರು
ಬಸವರಾಜ ಹೊರಟ್ಟಿ ರಾಜೀನಾಮೆ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು?
ಬಸವರಾಜ ಹೊರಟ್ಟಿ ರಾಜೀನಾಮೆ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು?