AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ ಹವಾಮಾನ ವರದಿ: ರಾಜ್ಯದ ಹಲವೆಡೆ ಇಂದು ಗುಡುಗು ಸಹಿತ ಲಘು ಮಳೆ; 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​!

Karnataka Weather: ರಾಜ್ಯದ ಹಲವೆಡೆ ಇಂದು ಗುಡುಗು, ಸಿಡಿಲು ಅಬ್ಬರಿಸಲಿದ್ದು 11 ಜಿಲ್ಲೆಗಳಿಗೆ ಇಲಾಖೆ ಯೆಲ್ಲೋ ಅಲರ್ಟ್​ ನೀಡಿದೆ. ಬೆಂಗಳೂರಿನಲ್ಲಿ ಬೇಸಿಗೆ ತೀವ್ರಗೊಂಡಿದ್ದು, ತಾಪಮಾನ 39 ಡಿಗ್ರಿ ತಲುಪುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹೀಟ್ ಸ್ಟ್ರೋಕ್ ಭೀತಿ ಹಿನ್ನೆಲೆಯಲ್ಲಿ ಬೆಳಗ್ಗೆ 11ರಿಂದ ಸಂಜೆ 4ರವರೆಗೆ ಹೊರಗೆ ಹೋಗದಂತೆ ಸೂಚನೆ ನೀಡಲಾಗಿದೆ.

ಕರ್ನಾಟಕ ಹವಾಮಾನ ವರದಿ: ರಾಜ್ಯದ ಹಲವೆಡೆ ಇಂದು ಗುಡುಗು ಸಹಿತ ಲಘು ಮಳೆ; 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​!
ರಾಜ್ಯದ ಹಲವೆಡೆ ಇಂದು ಗುಡುಗು ಸಹಿತ ಲಘು ಮಳೆಯ ಸೂಚನೆ
ಭಾವನಾ ಹೆಗಡೆ
|

Updated on: Feb 25, 2026 | 8:02 AM

Share

ಬೆಂಗಳೂರು, ಫೆಬ್ರವರಿ 25: ರಾಜ್ಯದಲ್ಲಿ ಹಲವು ದಿನಗಳಿಂದ ತಾಪಮಾನ ಹೆಚ್ಚಿದ್ದು, ಕೆಲ ಕಡೆಗಳಲ್ಲಿ ಗುಡುಗು ಸಹಿತ (Weather Forecast) ಮಳೆಯಾಗಿರುವುದೂ ಕಂಡುಬಂದಿದೆ. ಇಂದೂ ಸಹ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಸಹಿತ ಲಘು ಮಳೆಯಾಗಲಿದ್ದು, ಬಿರುಗಾಳಿಯೂ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಈ ಹಿನ್ನೆಲೆ 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಸೂಚಿಸಲಾಗಿದೆ

ಬೀದರ್, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಸೂಚಿಸಲಾಗಿದೆ. ನಗರದಲ್ಲಿ ಮಾರ್ಚ್ ಎರಡನೇ ವಾರದ ಬಳಿಕ ಬಿಸಿಲಿನ ತೀವ್ರತೆ ಇನ್ನಷ್ಟು ಹೆಚ್ಚಲಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕೂಡ ಅಲರ್ಟ್ ಆಗಿದೆ. ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ಅನಗತ್ಯವಾಗಿ ಹೊರಗೆ ಹೋಗದಂತೆ ಸೂಚನೆ ನೀಡಲಾಗಿದೆ. ಹೀಟ್ ಸ್ಟ್ರೋಕ್ ಹಾಗೂ ಡಿಹೈಡ್ರೇಶನ್ ಅಪಾಯ ಇರುವುದರಿಂದ ವೃದ್ಧರು, ಗರ್ಭಿಣಿಯರು, ಮಕ್ಕಳು ಮತ್ತು ಹೃದಯ ಸಂಬಂಧಿ ಕಾಯಿಲೆ ಇರುವವರು ವಿಶೇಷ ಎಚ್ಚರಿಕೆ ವಹಿಸಬೇಕು.

ಹೆಚ್ಚಾಗಿ ನೀರು, ತಂಪು ಪಾನೀಯಗಳು ಹಾಗೂ ಹಣ್ಣುಗಳನ್ನು ಸೇವಿಸಿ ದೇಹದ ತಾಪಮಾನ ನಿಯಂತ್ರಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ, ಈ ವರ್ಷವೂ ಬೆಂಗಳೂರು ಮಂದಿಗೆ ಕಠಿಣ ಬೇಸಿಗೆ ಎದುರಾಗುವ ಸೂಚನೆಗಳಿವೆ.

ಎಲ್ಲೆಲ್ಲಿ ಮಳೆ?

ಉತ್ತರ ಒಳನಾಡಿನ ಯಾದಗಿರಿ, ರಾಯಚೂರು ಜಿಲ್ಲೆಗಳು ಸೇರಿದಂತೆ ದಕ್ಷಿಣದ ಹಾಸನ, ಕೊಡಗು, ಮೈಸೂರು, ಚಿಕ್ಕಮಗಳೂರಿನಲ್ಲಿ ಗುಡುಗು-ಸಿಡಿಲು ಸಹಿತ ತುಂತುರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಎಲ್ಲೆಲ್ಲಿ ಒಣ ಹವೆ?

ಕರಾವಳಿಯ ಜಿಲ್ಲೆಗಳಾದ ದಕ್ಷಿಣ ಕನ್ನಡ , ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದಕ್ಷಿಣ ಒಳನಾಡಿನ ಚಾಮರಾಜನಗರ, ಮಂಡ್ಯ, ಶಿವಮೊಗ್ಗ,ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಚಿತ್ರದುರ್ಗ, ದಾವಣಗೆರೆ ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಚಿಕ್ಕಪ್ಪ ಇದ್ದಾಗಿನ ಹುಟ್ಟುಹಬ್ಬ ಹೇಗಿತ್ತು? ನೆನಪಿಸಿಕೊಂಡ ವಿನಯ್-ಯುವ
ಚಿಕ್ಕಪ್ಪ ಇದ್ದಾಗಿನ ಹುಟ್ಟುಹಬ್ಬ ಹೇಗಿತ್ತು? ನೆನಪಿಸಿಕೊಂಡ ವಿನಯ್-ಯುವ
ಕರವೇ ಹೋರಾಟಕ್ಕೆ ಮಣಿದ ರೈಲ್ವೆ ಇಲಾಖೆ: ಮುಂಬಡ್ತಿ ಪರೀಕ್ಷೆ ಮುಂದೂಡಿಕೆ
ಕರವೇ ಹೋರಾಟಕ್ಕೆ ಮಣಿದ ರೈಲ್ವೆ ಇಲಾಖೆ: ಮುಂಬಡ್ತಿ ಪರೀಕ್ಷೆ ಮುಂದೂಡಿಕೆ
ಪುನೀತ್ ಸಮಾಧಿಗೆ ಪೂಜೆ ಮಾಡಿದ ಕುಟುಂಬಸ್ಥರು; ಅಪ್ಪುನ ನೆನಪಿಸಿಕೊಂಡ ಕುಟುಂಬ
ಪುನೀತ್ ಸಮಾಧಿಗೆ ಪೂಜೆ ಮಾಡಿದ ಕುಟುಂಬಸ್ಥರು; ಅಪ್ಪುನ ನೆನಪಿಸಿಕೊಂಡ ಕುಟುಂಬ
ಲೈಂಗಿಕ ಕಿರುಕುಳ ಆರೋಪ: ಮೂಡಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ಹೇಳಿದ್ದಿಷ್ಟು
ಲೈಂಗಿಕ ಕಿರುಕುಳ ಆರೋಪ: ಮೂಡಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ಹೇಳಿದ್ದಿಷ್ಟು
ಕನ್ನಡದಲ್ಲಿ ರೇಲ್ವೆ ಇಲಾಖೆ ಪರೀಕ್ಷೆ ಬರೆಯಲು ಅವಕಾಶ ಇಲ್ಲ
ಕನ್ನಡದಲ್ಲಿ ರೇಲ್ವೆ ಇಲಾಖೆ ಪರೀಕ್ಷೆ ಬರೆಯಲು ಅವಕಾಶ ಇಲ್ಲ
ಅಡುಗೆ ಮನೆಯಲ್ಲಿ ಹೆಡೆ ಎತ್ತಿ ಕುಳಿತಿದ್ದ ನಾಗಪ್ಪ!
ಅಡುಗೆ ಮನೆಯಲ್ಲಿ ಹೆಡೆ ಎತ್ತಿ ಕುಳಿತಿದ್ದ ನಾಗಪ್ಪ!
ಎಲ್​ಪಿಜಿ ಸಿಲಿಂಡರ್ ಸಮಸ್ಯೆ ಇದ್ರೂ ಇವರಿಗೆ ನೋ ಟೆನ್ಶನ್! ಯಾಕೆ ಗೊತ್ತೇ?
ಎಲ್​ಪಿಜಿ ಸಿಲಿಂಡರ್ ಸಮಸ್ಯೆ ಇದ್ರೂ ಇವರಿಗೆ ನೋ ಟೆನ್ಶನ್! ಯಾಕೆ ಗೊತ್ತೇ?
ಮಹಿಳೆ ಜತೆ ಅಕ್ರಮ ಸಂಬಂಧಕ್ಕಾಗಿ ತಡರಾತ್ರಿ ಕಂಪೌಂಡ್ ಹಾರಿದ್ದ ಪೊಲೀಸ್!
ಮಹಿಳೆ ಜತೆ ಅಕ್ರಮ ಸಂಬಂಧಕ್ಕಾಗಿ ತಡರಾತ್ರಿ ಕಂಪೌಂಡ್ ಹಾರಿದ್ದ ಪೊಲೀಸ್!
‘ವಿಜಯಲಕ್ಷ್ಮೀ ದರ್ಶನ್ಗೆ ಸಿನಿಮಾ ತೋರಿಸೋಕೆ ರೆಡಿ’; ‘ಬಾಸ್’ ನಿರ್ದೇಶಕ
‘ವಿಜಯಲಕ್ಷ್ಮೀ ದರ್ಶನ್ಗೆ ಸಿನಿಮಾ ತೋರಿಸೋಕೆ ರೆಡಿ’; ‘ಬಾಸ್’ ನಿರ್ದೇಶಕ
ಪೂಜೆ, ಪುನಸ್ಕಾರ ಮಾಡುವುದರಿಂದ ಕಷ್ಟಗಳು ನಿವಾರಣೆಯಾಗುತ್ತವಾ?
ಪೂಜೆ, ಪುನಸ್ಕಾರ ಮಾಡುವುದರಿಂದ ಕಷ್ಟಗಳು ನಿವಾರಣೆಯಾಗುತ್ತವಾ?